ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಇಂಡೋಗೋ ವಿಮಾನ ಸೇವೆ ವ್ಯತ್ಯಯದಿಂದ ಭಾರಿ ಟೀಕೆ ಎದುರಿಸಿದ್ದ ಸಿಇಒ ಇದೀಗ ರಿಸೈನ್ ಮಾಡಿದ್ದಾರೆ. 

ನವದೆಹಲಿ (ಮಾ.10) ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಕಂಪನಿ ಈ ವಿಷಯವನ್ನು ಖಚಿತಪಡಿಸಿದ್ದು, ರಾಯಿಟರ್ಸ್ ಈ ಬಗ್ಗೆ ವರದಿ ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ ಇಂಡಿಗೋ ಸಂಸ್ಥೆ ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕಾರ್ಯಾಚರಣೆ ಬಿಕ್ಕಟ್ಟನ್ನು ಎದುರಿಸಿತ್ತು. ಆ ಸಮಯದಲ್ಲಿ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾಗಿ, ಸಾವಿರಾರು ಪ್ರಯಾಣಿಕರು ಏರ್‌ಪೋರ್ಟ್‌ಗಳಲ್ಲೇ ಸಿಲುಕಿ ಪರದಾಡಿದ್ದರು. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸರ್ಕಾರದ ಗಮನವನ್ನೂ ಸೆಳೆದು, ಕಂಪನಿಯ ಕಾರ್ಯವೈಖರಿಯ ಮೇಲೆ ಒತ್ತಡ ಹೆಚ್ಚಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಸಿಇಒ ರಾಜೀನಾಮೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ರಾಹುಲ್ ಭಾಟಿಯಾಗೆ ಹೊಣೆ

ಪೀಟರ್ ಎಲ್ಬರ್ಸ್ ದಿಢೀರ್ ರಾಜೀನಾಮೆಯಿಂದ ತೆರವಾದ ಸಿಇಒ ಸ್ಥಾನಕ್ಕೆ ಮಧ್ಯಂತರ ಸಿಇಒ ಆಗಿ ರಾಹುಲ್ ಭಾಟಿಯಾ ನೇಮಕಗೊಂಡಿದ್ದಾರೆ. ಸದ್ಯ ಇಂಡಿಗೋ ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಹುಲ್ ಭಾಟಿಯಾಗೆ ಜವಾಬ್ದಾರಿ ನೀಡಲಾಗಿದೆ.

ವೈಯುಕ್ತಿಕ ಕಾರಣ ನೀಡಿ ಪೀಟರ್ ರಾಜೀನಾಮೆ

ಪೀಟರ್ ಎಲ್ಬರ್ಸ್ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇಂಡಿಗೋ ಬೋರ್ಡ್ ಈ ರಾಜೀನಾಮೆಯನ್ನು ಅಂಗೀಕರಿಸಿದೆ. 202ರಲ್ಲಿ ಇಂಡಿಗೋ ಸಂಸ್ಥೆಯ ಸಿಇಒ ಒಗಿ ಪೀಟರ್ ಜವಾಬ್ದಾರಿ ವಹಿಸಿಕೊಂಡಿದ್ದರು. ಪೀಟರ್ ಸೇವೆಗೆ ಇಂಡಿಗೋ ಧನ್ಯವಾದ ಹೇಳಿದೆ.