Published : Aug 27, 2026, 05:53 AM ISTUpdated : Aug 27, 2026, 10:13 PM IST

India Latest New Live: ಬ್ರಹ್ಮಪುತ್ರ ನದಿಗೆ ಚೀನಾದಿಂದ ವಿಶ್ವದ ಅತೀ ದೊಡ್ಡ ಡ್ಯಾಂ - ಈಶಾನ್ಯ ಭಾರತಕ್ಕೆ ನೇಪಾಳದಂತೆಯೇ ಜಲಸ್ಫೋಟದ ಎಚ್ಚರಿಕೆ!

ಸಾರಾಂಶ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ ರೀತಿಯಲ್ಲೇ ದೆಹಲಿಯ ಪಂಚತಾರಾ ಹೊಟೆಲ್‌ಗಳಾದ ಜೆಡಬ್ಲ್ಯೂ ಮ್ಯಾರಿಯಟ್ ಮತ್ತು ಅಂದಾಜ್‌ನಲ್ಲಿ ಕಳಪೆ ಆಹಾರ ಮತ್ತು ವ್ಯವಸ್ಥೆ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆಹಾರ ನಿಯಂತ್ರಕ ಎಫ್‌ಎಸ್‌ಎಸ್‌ಎಐ ನೋಟಿಸ್‌ ಜಾರಿ ಮಾಡಿದೆ. ಗಮನಿಸಬೇಕಾದ ಅಂಶವೆಂದರೆ, ಬ್ರಿಕ್ಸ್‌ ಸಭೆಗೆಂದು ಆಗಮಿಸುವ ವಿದೇಶಿ ಗಣ್ಯರು ಉಳಿದುಕೊಳ್ಳುವುದು ಈ ಎರಡು ಹೊಟೆಲ್‌ಗಳಲ್ಲಿ.

ಪರಿಶೀಲನೆ ವೇಳೆ ಈ ಎರಡೂ ಹೊಟೆಲ್‌ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಗಂಭೀರ ಕೊರತೆಗಳು ಕಂಡುಬಂದಿವೆ. ಕೀಟ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳದ ಕಾರಣ ಜಿರಳೆ, ನೊಣ, ಸೊಳ್ಳೆ, ಜೇಡದ ಬಲೆ ಇತ್ಯಾದಿಗಳು ಫ್ರೀಜರ್‌, ಹಿಟ್ಟು ರುಬ್ಬುವ ಸ್ಥಳದಲ್ಲಿ ಪತ್ತೆಯಾಗಿವೆ. ಪಾನೀಯಗಳನ್ನು ತುಂಬಿಸುವಲ್ಲಿ ಗುಟ್ಕಾ ಪ್ಯಾಕೆಟ್‌ಗಳು ಕಂಡುಬಂದಿವೆ. ಇನ್ನೊಂದೆಡೆ ಸರಿಯಾಗಿ ತೊಳೆಯದ ಪಾತ್ರೆಗಳು, ಕಲುಷಿತ ನೀರು, ಕೊಳೆಯುತ್ತಿರುವ ಟೊಮ್ಯಾಟೊ, ಬೂಸ್ಟ್‌ ಬಂದಿರುವ ಆ್ಯಪಲ್‌, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಒಂದೆಡೆ ಇಟ್ಟಿರುವುದು ಕೂಡ ಪತ್ತೆ ಆಗಿದೆ. ಪನೀರ್‌, ಖೋಯಾ, ಚನ್ನಾ ಮಸಾಲಾ, ಮೆಣಸಿನ ಪ್ಯಾಕೆಟ್‌ಗಳ ಮೇಲೆ ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಬರೆಯಲಾಗಿರಲಿಲ್ಲ. 87 ಕೆ.ಜಿ. ಅವಧಿ ಮುಗಿದ ಸಿಹಿತಿನಿಸು, ಕೇಕ್‌, ಬ್ರೆಡ್‌ ಕೂಡ ದೊರಕಿದೆ.

10:13 PM (IST) Aug 27

ಬ್ರಹ್ಮಪುತ್ರ ನದಿಗೆ ಚೀನಾದಿಂದ ವಿಶ್ವದ ಅತೀ ದೊಡ್ಡ ಡ್ಯಾಂ - ಈಶಾನ್ಯ ಭಾರತಕ್ಕೆ ನೇಪಾಳದಂತೆಯೇ ಜಲಸ್ಫೋಟದ ಎಚ್ಚರಿಕೆ!

ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸುತ್ತಿರುವ ಬೃಹತ್ ಮೆಡಾಗ್ ಅಣೆಕಟ್ಟು, ಭೂಕಂಪನ ಸೂಕ್ಷ್ಮ ವಲಯದಲ್ಲಿರುವುದರಿಂದ ಭಾರತಕ್ಕೆ 'ಜಲ ಬಾಂಬ್'ನಂತೆ ಅಪಾಯಕಾರಿಯಾಗಿದೆ. ಈ ಯೋಜನೆಯಿಂದ ದಿಢೀರ್ ಪ್ರವಾಹ ಮತ್ತು ನೀರಿನ ಕೊರತೆಯ ಭೀತಿ ಎದುರಾಗಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ಅಪ್ಪರ್ ಸಿಯಾಂಗ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.
Read Full Story

09:37 PM (IST) Aug 27

ಝೀ ಗ್ರೂಪ್ ಸುಭಾಷ್ ಚಂದ್ರ ದಿವಾಳಿತನ ಕೇಸ್ - ₹22000 ಕೋಟಿ ಸಾಲಕ್ಕೆ ಕೇವಲ ₹6.5 ಕೋಟಿ ಮರುಪಾವತಿ! NCLT ವಿವಾದಿತ ಆದೇಶ

ಝೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ, ₹22,000 ಕೋಟಿಗೂ ಅಧಿಕ ಸಾಲಕ್ಕೆ ಪ್ರತಿಯಾಗಿ ಕೇವಲ ₹6.5 ಕೋಟಿ ಪಾವತಿಸುವ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಅನುಮೋದನೆ ನೀಡಿದೆ. ಈ ಯೋಜನೆಯಡಿ ಸಾಲದಾತರು ಶೇ. 99.97ರಷ್ಟು ನಷ್ಟ ಅನುಭವಿಸಲಿದ್ದು, ಸಾಲದಾತರ 'ವಾಣಿಜ್ಯ ಬುದ್ಧಿವಂತಿಕೆ' ಮತ್ತು ಚಂದ್ರರ ಆಸ್ತಿ ಮೌಲ್ಯದ ಕೊರತೆಯನ್ನು ಆಧರಿಸಿ ನ್ಯಾಯಮಂಡಳಿ ಈ ತೀರ್ಪು ನೀಡಿದೆ.

Read Full Story

09:35 PM (IST) Aug 27

ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ನಟನೀಗ ಅಪಾರ್ಟ್‌ಮೆಂಟ್ ವಾಚ್‌ಮ್ಯಾನ್ - ಸಾವಿ ಸಿಧು ಕಹಿ ಕಥೆ

ಸಾವಿ ಸಿಧು ಅವರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವೈಯಕ್ತಿಕ ನಷ್ಟಗಳು, ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಂಕಷ್ಟದ ಬಳಿಕ ಅವರು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ ಕಥೆ ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

Read Full Story

09:02 PM (IST) Aug 27

WTC Points Table - ತಲೆ ಕೆಳಗಾದ ಟೀಂ ಇಂಡಿಯಾ ಲೆಕ್ಕಾಚಾರ; ಫೈನಲ್ ಕನಸು ನನಸಿಗೆ ದಾರಿ ಯಾವುದು?

ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದೆ. ಇದು ಟೀಂ ಇಂಡಿಯಾಗೆ ದೊಡ್ಡ ಆಘಾತ ತಂದಿದೆ. WTC ಫೈನಲ್ ಎದುರು ನೋಡ್ತಿದ್ದ ಭಾರತ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

Read Full Story

08:59 PM (IST) Aug 27

ರೈಲ್ವೆ ಆವರಣದಲ್ಲಿ ಬಯಲು ಶೌಚ, ಉಗುಳುವುದು, ಗಲೀಜು ಮಾಡಿದರೆ ಇನ್ಮುಂದೆ ದಂಡ ಡಬಲ್‌, ಕೋರ್ಟ್ ಮೆಟ್ಟಿಲೇರುವುದು ಕೂಡ ಕಡ್ಡಾಯ!

ಭಾರತೀಯ ರೈಲ್ವೆಯು ರೈಲ್ವೆ ನಿಲ್ದಾಣ, ರೈಲು ಮತ್ತು ಆವರಣದಲ್ಲಿ ನೈರ್ಮಲ್ಯ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ತಿದ್ದುಪಡಿಯ ಪ್ರಕಾರ, ಗಲೀಜು ಮಾಡುವುದು, ಉಗುಳುವುದು ಸೇರಿದಂತೆ ಹಲವು ಕೃತ್ಯಗಳಿಗೆ ವಿಧಿಸುವ ದಂಡವನ್ನು ₹500 ರಿಂದ ₹1000 ಕ್ಕೆ ಹೆಚ್ಚಿಸಲಾಗಿದೆ.

Read Full Story

08:45 PM (IST) Aug 27

ಇಂದು ಟೆಸ್ಟ್ ಕ್ರಿಕೆಟ್ ಗೆದ್ದಿದೆ - ಪಂದ್ಯ ಡ್ರಾ ಬೆನ್ನಲ್ಲೇ ಗಿಲ್ ಭಾವುಕ; WTC ಫೈನಲ್ ಹಿನ್ನಡೆ ಬಗ್ಗೆ ಹೇಳಿದ್ದೇನು?

ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಸನಿಹ ಬಂದು ಡ್ರಾ ಮಾಡಿಕೊಂಡಿದ್ದಕ್ಕೆ ಭಾರತೀಯ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಟೀಮ್ ಇಂಡಿಯಾ ನಾಯಕ ಗಿಲ್ ಮಾತ್ರ ಪಂದ್ಯದ ಫಲಿತಾಂಶವನ್ನು ಸಕಾರಾತ್ಮಕವಾಗಿ ನೋಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು ಅಂತಿಮವಾಗಿ ಇಂದು ಟೆಸ್ಟ್ ಕ್ರಿಕೆಟ್ ಗೆದ್ದಿದೆ ಎಂದು ಬಣ್ಣಿಸಿದ್ದಾರೆ.

Read Full Story

08:02 PM (IST) Aug 27

ಲಿಂಬೆ ಹಣ್ಣು ಕತ್ತರಿಸಿ ಮಳೆ ನಿಲ್ಲಿಸಿದ ಸಂಸದ? ಮತ್ತೊಮ್ಮೆ ಕಟ್​ ಮಾಡಿ ಸಕ್ಕರೆ ಬೆಲೆ ಇಳಿಸಲು ಡಿಮಾಂಡ್​

ಛತ್ತೀಸ್‌ಗಢದ ಬಿಜೆಪಿ ಸಂಸದ ಭೋಜರಾಜ್ ನಾಗ್ ಅವರು, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಿಂಬೆಹಣ್ಣು ಕತ್ತರಿಸಿ ಮಳೆಯನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ತೀವ್ರ ಟ್ರೋಲ್‌ಗೆ ಒಳಗಾಗಿದ್ದಾರೆ ಮತ್ತು ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ.
Read Full Story

07:28 PM (IST) Aug 27

ಅದಾನಿ-ಅಂಬಾನಿ ನಡುವೆ ರೇಸ್ - ₹2.73 ಲಕ್ಷ ಕೋಟಿ ಪ್ಲಾನ್, ಅಲ್ಯೂಮಿನಿಯಂ ತಯಾರಿಸಲು ರಿಲಯನ್ಸ್ ಬಿಗ್ ಸ್ಕೆಚ್!

ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಲ್ಯೂಮಿನಿಯಂ ಉತ್ಪಾದನಾ ರಂಗಕ್ಕೆ ಪ್ರವೇಶಿಸಲು ಗಂಭೀರ ಚಿಂತನೆ ನಡೆಸಿದೆ. ತನ್ನ ಕಲ್ಲಿದ್ದಲು ಅನಿಲೀಕರಣ ಯೋಜನೆಯಿಂದ ಉತ್ಪತ್ತಿಯಾಗುವ ಇಂಧನವನ್ನು ಬಳಸಿ ಲೋಹ ಸಂಸ್ಕರಣೆ ಮಾಡುವ ಮೂಲಕ, ಅದಾನಿ ಮತ್ತು ವೇದಾಂತದಂತಹ ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ.
Read Full Story

07:28 PM (IST) Aug 27

ಕಾಕ್ರೋಚ್‌ ಜನತಾ ಪಾರ್ಟಿ ಚುನಾವಣೆಗೆ ನಿಂತರೆ ಎಷ್ಟು ಸೀಟು ಗೆಲ್ಲಬಹುದು? MOTN ಸಮೀಕ್ಷೆಯಲ್ಲಿ ಸಿಕ್ತು ಉತ್ತರ

ನೀಟ್ ಪ್ರತಿಭಟನೆಯಿಂದ ಗಮನ ಸೆಳೆದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ರಾಜಕೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಹೆಚ್ಚಿನ ಜನ ಬೆಂಬಲಿಸುವುದಿಲ್ಲ ಎಂದು 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ ತಿಳಿಸಿದೆ.

Read Full Story

07:10 PM (IST) Aug 27

MOTN Survey - ಇಂದೇ ಲೋಕಸಭೆ ಚುನಾವಣೆ ನಡೆದರೆ ಮತ್ತೆ ಮೋದಿಯೇ ಪ್ರಧಾನಿ, 326 ಸೀಟು ಗೆಲ್ಲಲಿದೆ NDA

ಇಂಡಿಯಾ ಟುಡೇ ಮತ್ತು ಸಿ-ವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 326 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಗಳಿಸಲಿದೆ. ಆದಾಗ್ಯೂ, ಕಳೆದ ಜನವರಿ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ 26 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

Read Full Story

06:37 PM (IST) Aug 27

ಭಾರತದ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಟೆಸ್ಟ್ ವೇಗದ ಬೌಲರ್ ಆಯ್ಕೆ ಮಾಡಿದ ಪೂಜಾರ..! ಇಬ್ಬರು ಪ್ರಮುಖ ಮ್ಯಾಚ್‌ ವಿನ್ನರ್‌ಗಿಲ್ಲ ಸ್ಥಾನ

ಭಾರತದ ಮಾಜಿ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ, ತಮ್ಮ ಸಾರ್ವಕಾಲಿಕ ಶ್ರೇಷ್ಠ ಐವರು ಭಾರತೀಯ ವೇಗದ ಬೌಲರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಕಪಿಲ್ ದೇವ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದು, ಮೊಹಮ್ಮದ್ ಸಿರಾಜ್ ಮತ್ತು ಶಮಿಗೆ ಸ್ಥಾನ ಸಿಕ್ಕಿಲ್ಲ. ಜೊತೆಗೆ, ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯ ಫಲಿತಾಂಶದ ವಿವರಗಳೂ ಇವೆ.
Read Full Story

06:28 PM (IST) Aug 27

ಮಾಜಿ ಕೇಂದ್ರ ಸಚಿವರ ಸೊಸೆ ನೇಪಾಳ ಪ್ರವಾಹದಲ್ಲಿ ನಾಪತ್ತೆ, ಜೊತೆಯಲ್ಲಿದ್ದ 31 ಯಾತ್ರಿಕರೂ ಮಿಸ್ಸಿಂಗ್

ಮಾಜಿ ಕೇಂದ್ರ ರೈಲ್ವೈ ಸಚಿವ ಮುಕುಲ್ ರಾಯ್ ಸೊಸೆ ನೇಪಾಳ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೈಲಾಸ ಹಾಗೂ ಮಾನಸ ಸರೋವರ ಯಾತ್ರೆಯಲ್ಲಿದ್ದ ಮುಕುಲ್ ರಾಯ್ ಸೊಸೆ ಕುರಿತು ಯಾವುದೇ ಸುಳಿವು ಪತ್ತೆಯಾಗಿಲ್ಲ.

Read Full Story

06:03 PM (IST) Aug 27

ಉದಯಪುರದ ಐಷಾರಾಮಿ ಒಬೆರಾಯ್ ಉದಯವಿಲಾಸ್ ಹೋಟೆಲ್‌ನಲ್ಲಿ ತಂಗಿ ₹5.74 ಲಕ್ಷ ಬಿಲ್ ಕಟ್ಟದೆ  ಹೋದ ಕುಟುಂಬ! ಕಾರಣವೇನು?

ಉದಯಪುರದ 'ದಿ ಒಬೆರಾಯ್ ಉದಯವಿಲಾಸ್' ಪಂಚತಾರಾ ಹೋಟೆಲ್‌ನಲ್ಲಿ 10 ದಿನ ತಂಗಿದ್ದ ಕುಟುಂಬವೊಂದು, ₹5.74 ಲಕ್ಷ ಬಿಲ್ ಪಾವತಿಸದೆ ವಂಚಿಸಿದೆ. ಟ್ರಾವೆಲ್ ಏಜೆನ್ಸಿ ಬಿಲ್ ಪಾವತಿಸುತ್ತದೆ ಎಂದು ಹೇಳಿ ಪರಾರಿಯಾದ ದೆಹಲಿ ಮೂಲದ ಅನುರಾಗ್ ಯಾದವ್ ವಿರುದ್ಧ ಹೋಟೆಲ್ ಆಡಳಿತ ಮಂಡಳಿ ಪೊಲೀಸ್ ದೂರು ದಾಖಲಿಸಿದೆ.
Read Full Story

06:01 PM (IST) Aug 27

ಬೆಚ್ಚಿಬೀಳಿಸೋ ಘಟನೆ.. ಮನೆಗೆ ನುಗ್ಗಿ 21 ವರ್ಷದ ಮಾಡೆಲ್‌ನ ಚುಚ್ಚಿ ಚುಚ್ಚಿ ಜೀವ ತೆಗೆದ ಜಿಮ್ ಟ್ರೈನರ್‍‌

ಖ್ಯಾತ ಮಾಡೆಲ್ ಮನೆಗೆ ನುಗ್ಗಿದ ಜಿಮ್ ಟ್ರೈನರ್ ಒಬ್ಬ, ಆಕೆ ಮೇಲೆ ಮನಬಂದಂತೆ ಚಾಕುವಿನಿಂದ ದಾಳಿ ನಡೆಸಿ ಜೀವ ತೆಗೆದು ಪರಾರಿ ಆಗಿದ್ದಾನೆ. ಬೆನ್ನಲ್ಲೇ ಮೃತ ಮಾಡೆಲ್‌ನ ಸ್ನೇಹಿತ ನೀಡಿದ ಹೇಳಿಕೆ ಬೆಚ್ಚಿ ಬೀಳಿಸುವಂತಿದೆ..

Read Full Story

05:34 PM (IST) Aug 27

Irumudi Controversy - ‘ಕಂಡಲ್ಲಿ ಹೊಡೆಯುತ್ತೇವೆ’ - ರವಿತೇಜ ಇರುಮುಡಿ ವಿರುದ್ಧ ಶಿಕ್ಷಕರ ಆಕ್ರೋಶ

ಮಾಸ್ ಮಹಾರಾಜ ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ನಡುವೆಯೇ ವಿವಾದಕ್ಕೆ ಸಿಲುಕಿದೆ. ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆಂಧ್ರಪ್ರದೇಶದ APTF ಹಾಗೂ UTF ಶಿಕ್ಷಕರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

Read Full Story

05:04 PM (IST) Aug 27

ಸಿಜೆಐ ಸೂರ್ಯಕಾಂತ್‌, ಬಿಸಿಐ ಅಧ್ಯಕ್ಷ ಭಾಗವಹಿಸುವಿಕೆಗೆ ವಿರೋಧ; ಬೆಂಗಳೂರಿನ NLSIU 34ನೇ ವಾರ್ಷಿಕ ಘಟಿಕೋತ್ಸವ ರದ್ದು

ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ' (NLSIU) ತನ್ನ 34ನೇ ವಾರ್ಷಿಕ ಘಟಿಕೋತ್ಸವವನ್ನು ರದ್ದುಗೊಳಿಸಿದೆ. ಸಿಜೆಐ ಸೂರ್ಯ ಕಾಂತ್ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

Read Full Story

05:02 PM (IST) Aug 27

ಜಿಯೋ, ಏರ್‌ಟೆಲ್‌ಗೆ ಟಕ್ಕರ್, BSNL ಹಾಗೂ ವೊಡಾಫೋನ್ ಐಡಿಯಾ ಮಹತ್ವದ ನೆಟ್‌ವರ್ಕ್ ಒಪ್ಪಂದ!

ವೊಡಾಫೋನ್ ಐಡಿಯಾ (Vi) ಮತ್ತು BSNL ತಮ್ಮ ನೆಟ್‌ವರ್ಕ್ ಜಾಲವನ್ನು ಹಂಚಿಕೊಳ್ಳಲು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಮೂಲಕ, ನಗರ ಪ್ರದೇಶಗಳಲ್ಲಿ BSNL ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 'ವಿ' ಬಳಕೆದಾರರಿಗೆ ಉತ್ತಮ ಸಂಪರ್ಕ ಲಭಿಸಲಿದ್ದು, ಎರಡೂ ಕಂಪನಿಗಳು ತಮ್ಮ ವೆಚ್ಚವನ್ನು ಕಡಿತಗೊಳಿಸಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಜ್ಜಾಗಿವೆ.
Read Full Story

04:39 PM (IST) Aug 27

200ಕ್ಕೂ ಹೆಚ್ಚು ವರ್ಷ ಭಾರತವನ್ನಾಳಿದ ಬ್ರಿಟಿಷರಿಗೆ ಈ ರಾಜ್ಯ ಮಾತ್ರ ಸಿಗಲೇ ಇಲ್ಲ! ಯಾವುದು ಗೊತ್ತಾ?

ಇತ್ತೀಚೆಗಷ್ಟೇ ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇನ್ನೂರಕ್ಕೂ ಅಧಿಕ ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟೀಷರಿಗೆ ಈ ಒಂದು ರಾಜ್ಯ ಅವರ ಆಡಳಿತಕ್ಕೆ ಒಳಪಡಲೇಯಿಲ್ಲ. ಯಾವುದದು ರಾಜ್ಯ ನೋಡೋಣ ಬನ್ನಿ.

Read Full Story

04:19 PM (IST) Aug 27

ನ್ಯೂಯಾರ್ಕ್‌ನ 'ಬಂಗ್ಲೋ'ಗೆ ಅಂಬಾನಿ ಕುಟುಂಬ ಭೇಟಿ, ರಾಧಿಕಾ ಮರ್ಚೆಂಟ್ ಕಟ್ಟಿದ ರಾಖಿಗೆ ಚೆಫ್ ವಿಕಾಸ್ ಖನ್ನಾ ಭಾವುಕ!

ನ್ಯೂಯಾರ್ಕ್‌ನಲ್ಲಿರುವ ಬಾಣಸಿಗ ವಿಕಾಸ್ ಖನ್ನಾ ಅವರ 'ಬಂಗ್ಲೋ' ರೆಸ್ಟೋರೆಂಟ್‌ಗೆ ಮುಕೇಶ್ ಅಂಬಾನಿ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ರಾಧಿಕಾ ಮರ್ಚೆಂಟ್ ಅವರು ಖನ್ನಾ ಅವರ ಕೈಗೆ ಜಿಲೇಬಿ ಆಕಾರದ ರಾಖಿ ಕಟ್ಟಿದ್ದು, ಈ ಭಾವನಾತ್ಮಕ ಕ್ಷಣದಿಂದ ಖನ್ನಾ ಭಾವುಕರಾದರು. ಅಲ್ಲದೆ, ಅನಂತ್ ಅಂಬಾನಿಯವರ 'ವಂತಾರಾ' ಯೋಜನೆಯನ್ನು ಶ್ಲಾಘಿಸಿದರು.
Read Full Story

04:02 PM (IST) Aug 27

22 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ರೂಪಾಯಿ ಸೆಟ್ಲ್‌ಮೆಂಟ್‌ ಒಪ್ಪಿದ NCLT, ಬಚಾವ್‌ ಆದ ಉದ್ಯಮಿ!

ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ ಕೇವಲ 6.5 ಕೋಟಿ ರೂ. ಪಾವತಿಸುವ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ (NCLT) ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಸಾಲದಾತರಿಗೆ 99.97% ನಷ್ಟವಾಗಲಿದೆ.

Read Full Story

03:33 PM (IST) Aug 27

ನೇಪಾಳ ದುರಂತ - ಆಕೆ ಹೊರಟೋದ್ಲು! ಕೈ ಹಿಡಿಯಲೆತ್ನಿಸಿದೆ ಕಣ್ಣೆದುರೇ ಮಣ್ಣಿನಡಿ ಪತ್ನಿ ಹೋದ್ಲು, ವೃದ್ಧನ ಕಣ್ಣೀರ ಕಥೆ!

ನೇಪಾಳದ ರಸುವಾ ಜಿಲ್ಲೆಯಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಮಣ್ಣು ಕುಸಿತಕ್ಕೆ 160ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ದುರಂತದಲ್ಲಿ ಕನ್ನಡಿಗರು ಸೇರಿದಂತೆ ನೂರಾರು ಭಾರತೀಯರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸರ್ಕಾರವು ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ತೆರೆದಿದೆ.
Read Full Story

02:58 PM (IST) Aug 27

ಸಂದೀಪ್ ರೆಡ್ಡಿ ವಂಗಾ - ʼಸ್ಪಿರಿಟ್ʼಗಿಂತ ರಾಜಮೌಳಿಯ ʼವಾರಣಾಸಿʼ ದೊಡ್ಡ ಚಿತ್ರ.. ಸನ್ನೆ ಮಾಡಿದ್ಯಾಕೆ ಈ ನಿರ್ದೇಶಕರು?

ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ತಮ್ಮ ಸಹೋದರ ಪ್ರಣಯ್ ರೆಡ್ಡಿ ವಂಗಾ ನಿರ್ಮಿಸಿರುವ 'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ಸ್ವಾಭಾವಿಕವಾಗಿ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾ 'ಸ್ಪಿರಿಟ್' (Spirit) ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು.

Read Full Story

02:31 PM (IST) Aug 27

Highest Paying Jobs - ಐಟಿ ಕೆಲಸ ಬಿಟ್ಟುಬಿಡಿ! ಬೆಂಗಳೂರಿನಲ್ಲಿ ‘ದೊಡ್ಡ ಸಂಪಾದನೆ’ ಮಾಡೋ 5 ಕೆಲಸಗಳಿವು

ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಅವರು ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳದ 'ಕೆಲಸ'ಗಳ ತಮಾಷೆಯ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಪಿಜಿ ಮಾಲೀಕರು, ರಿಯಲ್ ಎಸ್ಟೇಟ್ ಬ್ರೋಕರ್‌ಗಳು ಮತ್ತು ವಾಟರ್ ಟ್ಯಾಂಕರ್ ಮಾಲೀಕರು ಹೇಗೆ ಸುಲಭವಾಗಿ ಹಣ ಗಳಿಸುತ್ತಾರೆ ಎಂಬುದನ್ನು ವಿವರಿಸುವ ಈ ಪೋಸ್ಟ್, ನಗರದ ದುಬಾರಿ ಜೀವನ ವೆಚ್ಚದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

01:47 PM (IST) Aug 27

ನೇಪಾಳ ಪ್ರವಾಹ ಸಂತ್ರಸ್ತರಿಗೆ ಮಿಡಿದ ನಟ ಸೋನು ಸೂದ್, ಆಹಾರ, ಆಶ್ರಯ ಸೇರಿ ಸಂಪೂರ್ಣ ನೆರವು

ನೇಪಾಳ ಪ್ರವಾಹ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟ ಸೋನು ಸೂದ್ ಸಂತ್ರಸ್ತರಿಗೆ ನೆರವು ಘೋಷಿಸಿದ್ದಾರೆ. ನೀವು ಏಕಾಂಗಿಯಲ್ಲ, ನಿಮ್ಮ ಜೊತೆ ನಾವಿದ್ದೇವೆ ಎಂದು ಎಲ್ಲಾ ರೀತಿ ನೆರವಿನ ಭರವಸೆ ನೀಡಿದ್ದಾರೆ.

Read Full Story

01:37 PM (IST) Aug 27

ಧೋನಿಗೆ 3300 ಕೋಟಿ ಮೌಲ್ಯದ ಶೇರು ಕೊಡುತ್ತಾ CSK? ಇದನ್ನೆಲ್ಲಾ ನಂಬೋಕೆ ಆಗುತ್ತಾ? ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿ ಮಾತು

ಎಂ.ಎಸ್. ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ನಡುವೆ ಷೇರುಗಳ ವಿಚಾರವಾಗಿ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹಬ್ಬಿವೆ. ಧೋನಿ ಕೇಳಿದ ಷೇರು ಪಾಲು ಮತ್ತು ಸಿಎಸ್‌ಕೆ ನೀಡಿದ ಆಫರ್‌ಗೆ ಒಮ್ಮತ ಮೂಡದ ಕಾರಣ ಮಾತುಕತೆ ಮುರಿದುಬಿದ್ದಿದೆ ಎನ್ನಲಾಗಿದ್ದು, ಈ ಸುದ್ದಿಯನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕಟ್ಟುಕಥೆ ಎಂದು ತಳ್ಳಿಹಾಕಿದ್ದಾರೆ.
Read Full Story

01:25 PM (IST) Aug 27

ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡಿದರೆ ಎಷ್ಟು ಆದಾಯ ಸಿಗುತ್ತೆ? ಪೆಟ್ರೋಲ್ ಬಂಕ್ ಆರಂಭಿಸುವುದು ಲಾಭನಾ?

ಪೆಟ್ರೋಲ್ ಬಂಕ್ ಡೀಲರ್‌ಗೆ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟ ಮಾಡಿದರೆ ಎಷ್ಟು ಹಣ ಸಿಗುತ್ತದೆ? ಡೀಲರ್ ಕಮಿಷನ್, ಬಂಕ್ ನಿರ್ವಹಣೆ ವೆಚ್ಚ ಮತ್ತು ಇತರ ಎಲ್ಲಾ ಹೂಡಿಕೆ ಸೇರಿ ಎಷ್ಟು ಲಾಭ ಸಿಗುತ್ತೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

Read Full Story

01:16 PM (IST) Aug 27

ಆಸೀಸ್ ಎದುರಿನ ಸರಣಿಗೆ ಭಾರತ ಅಂಡರ್-19 ತಂಡ ಪ್ರಕಟ - ಏಕಕಾಲದಲ್ಲಿ ಇಬ್ಬರು ದಿಗ್ಗಜ ಕ್ರಿಕೆಟಿಗರ ಮಕ್ಕಳ ಎಂಟ್ರಿ..!

ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್, ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಅನ್ವಯ್ ಈ ಹಿಂದೆ ಶ್ರೀಲಂಕಾ ಪ್ರವಾಸದಲ್ಲಿ ಮಿಂಚಿದ್ದರೆ, ಆರ್ಯವೀರ್‌ಗೆ ಇದು ಮೊದಲ ಆಯ್ಕೆಯಾಗಿದೆ.
Read Full Story

12:08 PM (IST) Aug 27

ವಿಚಿತ್ರ ಆದರೂ ಸತ್ಯ! ಮಾಲೀಕ ಯಾರೆಂದು ತಿಳಿಯಲು ಎಮ್ಮೆಗೆ DNA ಪರೀಕ್ಷೆ, ಪೊಲೀಸರ ಐಡಿಯಾ ವರ್ಕ್ ಆಗುತ್ತಾ?

ಎಮ್ಮೆಯೊಂದರ ಮಾಲೀಕತ್ವಕ್ಕಾಗಿ ಇಬ್ಬರ ನಡುವೆ ವಿವಾದ ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ಎಮ್ಮೆಗೆ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ತಾಯಿಯ ಜೀನ್ಸ್‌ನೊಂದಿಗೆ ಹೋಲಿಕೆ ಮಾಡಿ ನಿಜವಾದ ಮಾಲೀಕರನ್ನು ಪತ್ತೆಹಚ್ಚಲಿದ್ದಾರೆ.

Read Full Story

11:55 AM (IST) Aug 27

W,W,W,W,W,W,W,W - ಖಾತೆಯನ್ನೇ ತೆರೆಯದ ​8 ಬ್ಯಾಟರ್ಸ್‌ ! ಕೇವಲ 35 ರನ್‌ಗಳಿಗೆ ಇಡೀ ತಂಡವೇ ಆಲೌಟ್..!

2026ರ ಮಹಿಳಾ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ, ಟರ್ಕಿ ತಂಡವು ಆಸ್ಟ್ರಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಟರ್ಕಿಯ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರಿಯಾ ತಂಡವು ಕೇವಲ 35 ರನ್‌ಗಳಿಗೆ ಸರ್ವಪತನ ಕಂಡಿತು, ಇದರಲ್ಲಿ ಎಂಟು ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. ಈ ಸುಲಭ ಗುರಿಯನ್ನು ಟರ್ಕಿ ತಂಡವು 5.3 ಓವರ್‌ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು.
Read Full Story

11:52 AM (IST) Aug 27

ನೇಪಾಳ ಪ್ರವಾಹದಲ್ಲಿ ಕೈಲಾಸ ಯಾತ್ರೆಯಲ್ಲಿದ್ದ ಹಲವರು ನಾಪತ್ತೆ, ನಟಿ ಮಾನಸಿ ಅಪಾಯದಿಂದ ಪಾರು

ನೇಪಾಳ ಪ್ರವಾಹದಲ್ಲಿ ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆಯಾಗಿದ್ದಾರೆ. ಮಾನಸ ಸರೋವರ ಯಾತ್ರೆ ವೇಳೆ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್ ನಟಿ ಮಾನಸಿ ಅಪಾಯದಿಂದ ಪಾರಾಗಿದ್ದಾರೆ.

Read Full Story

10:51 AM (IST) Aug 27

ಸೂಪರ್ ಸ್ಟಾರ್ ರಜನಿಕಾಂತ್ 'ಬೆಂಚ್‌ಮೇಟ್', ಸೀನಿಯರ್ ನಟ, ನಿರ್ಮಾಪಕ ಇನ್ನಿಲ್ಲ

ಹಿರಿಯ ನಟ ಮತ್ತು ನಿರ್ಮಾಪಕ ಜಿವಿ ನಾರಾಯಣ ರಾವು (73) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಯವರ ಆಪ್ತ ಸ್ನೇಹಿತರಾಗಿದ್ದ ಇವರು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಹಪಾಠಿಯಾಗಿದ್ದು, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

Read Full Story

10:36 AM (IST) Aug 27

ಜೋಸ್ ಬಟ್ಲರ್ ವಿಶ್ವ ದಾಖಲೆ ಮುರಿದು ಮತ್ತೆ ನಂ.1 ಸ್ಥಾನಕ್ಕೇರಿದ ಕೀರನ್ ಪೊಲ್ಲಾರ್ಡ್..! ಟಿ20 ಕ್ರಿಕೆಟ್‌ನಲ್ಲಿ ದೈತ್ಯ ಕ್ರಿಕೆಟಿಗ ಅಗ್ರಸ್ಥಾನಕ್ಕೆ ಲಗ್ಗೆ

ವೆಸ್ಟ್‌ ಇಂಡೀಸ್ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್, ಜೋಸ್ ಬಟ್ಲರ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 65 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ, ಪೊಲ್ಲಾರ್ಡ್ 14,921 ರನ್‌ಗಳೊಂದಿಗೆ ಈ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
Read Full Story

10:24 AM (IST) Aug 27

ವಿವಾದಕ್ಕೆ ಸಿಲುಕಿದ ರವಿತೇಜ ನಟನೆಯ ಇರುಮುಡಿ ಸಿನಿಮಾ; ಶಿಕ್ಷಕರಿಂದ ತೀವ್ರ ಆಕ್ಷೇಪ

ರವಿತೇಜ ನಟನೆಯ 'ಇರುಮುಡಿ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ್ದರೂ, ಈಗ ವಿವಾದಕ್ಕೆ ಸಿಲುಕಿದೆ. ಚಿತ್ರದ ಬಗ್ಗೆ ಆಂಧ್ರಪ್ರದೇಶ ಶಿಕ್ಷಕರ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಶಿವ ನಿರ್ವಾಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

09:49 AM (IST) Aug 27

ICC Test Rankings - ನಂಬರ್ ಒನ್ ಪಟ್ಟ ಕಳೆದುಕೊಂಡ ಬುಮ್ರಾ; 15 ವರ್ಷಗಳ ವೃತ್ತಿಜೀವನದಲ್ಲೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ ಆಸೀಸ್ ವೇಗಿ

ಐಸಿಸಿ ಟೆಸ್ಟ್ ಬೌಲರ್‌ಗಳ ರಾಂಕಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ನಂಬರ್ 1 ಸ್ಥಾನವನ್ನು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್‌ಗೆ ಬಿಟ್ಟುಕೊಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಭರ್ಜರಿ ಪ್ರದರ್ಶನದಿಂದ ಸ್ಟಾರ್ಕ್ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ, ರಿಷಭ್ ಪಂತ್ ಆರು ಸ್ಥಾನಗಳ ಜಿಗಿತ ಕಂಡು ಟಾಪ್ 10ರೊಳಗೆ ಪ್ರವೇಶಿಸಿದ್ದಾರೆ.
Read Full Story

09:14 AM (IST) Aug 27

ಪ್ರತಿದಿನ ಸೂರ್ಯಕಾಂತಿ ಬೀಜ ತಿಂತೀರಾ? ಹಾಗಿದ್ರೆ ಎಷ್ಟು ತಿನ್ನಬೇಕು? ಇದರ ಲಾಭಗಳ ಬಗ್ಗೆ ಮೊದಲು ತಿಳ್ಕೊಳ್ಳಿ!

ಬಾದಾಮಿ, ಗೋಡಂಬಿಯಂತಹ ನಟ್ಸ್ ತರಹನೇ ಸೂರ್ಯಕಾಂತಿ ಬೀಜಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿದಿನ ಸೂರ್ಯಕಾಂತಿ ಬೀಜವನ್ನು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Read Full Story

08:53 AM (IST) Aug 27

ಅವರು ಪ್ರೀತಿಸಿದ್ದು ನನ್ನ ಬಳಿಯಲ್ಲಿದ್ದ ಹಣ - ಬದುಕಿನ ಕರಾಳ ಸತ್ಯ ಹೇಳಿದ ನಟಿ ಶಕೀಲಾ

ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಲೆ ಸೃಷ್ಟಿಸಿದ್ದ ನಟಿ ಶಕೀಲಾ, ತಮ್ಮ ಕೋಟ್ಯಂತರ ರೂಪಾಯಿ ಸಂಪಾದನೆಯನ್ನು ಸ್ವಂತ ಅಕ್ಕನೇ ಕಸಿದುಕೊಂಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Read Full Story

08:48 AM (IST) Aug 27

ಯಶಸ್ವಿ ಜೈಸ್ವಾಲ್ ಟಾಪ್-10ನಿಂದ ಔಟ್, ರಿಷಭ್‌ ಪಂತ್‌ಗೆ ಭರ್ಜರಿ ಬಡ್ತಿ; ಕನ್ನಡಿಗ ಪಡಿಕ್ಕಲ್‌ಗೆ ಬಂಪರ್

ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ರಿಷಭ್ ಪಂತ್, ಶುಭ್‌ಮನ್ ಗಿಲ್‌ರನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿನ ಉತ್ತಮ ಪ್ರದರ್ಶನದಿಂದ ಪಂತ್ ಆರು ಸ್ಥಾನಗಳ ಜಿಗಿತ ಕಂಡರೆ, ಕಳಪೆ ಫಾರ್ಮ್‌ನಿಂದ ಯಶಸ್ವಿ ಜೈಸ್ವಾಲ್ ಟಾಪ್ 10ರಿಂದ ಹೊರಬಿದ್ದಿದ್ದಾರೆ.
Read Full Story

07:44 AM (IST) Aug 27

ಕೊಲಂಬೊ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವಿನ ನಿರೀಕ್ಷೆ - ಫಾಲೋಆನ್ ಬಳಿಕವೂ ಸಂಕಷ್ಟದಲ್ಲಿ ಲಂಕಾ

ಭಾರತದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟಾದ ಶ್ರೀಲಂಕಾ ಫಾಲೋ-ಆನ್‌ಗೆ ತುತ್ತಾಯಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಹೋರಾಟ ನಡೆಸಿದರೂ, ನಾಲ್ಕನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದು, ಅಂತಿಮ ದಿನದಂದು ಭಾರತ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
Read Full Story

07:44 AM (IST) Aug 27

ನೇಪಾಳದ ಭೋಟೆ ಕೋಶಿ ನದಿ ಜಲಪ್ರಳಯಕ್ಕೆ 157 ಬಲಿ, 133 ಭಾರತೀಯರು ನಾಪತ್ತೆಯಾದವರ ಸಂಖ್ಯೆ 750ಕ್ಕೆ ಏರಿಕೆ!

ಟಿಬೆಟ್‌ನಿಂದ ಹರಿಯುವ ಭೋಟೆ ಕೋಶಿ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದ ನೇಪಾಳ ತತ್ತರಿಸಿದೆ. ಈ ದುರಂತದಲ್ಲಿ 157ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 133 ಭಾರತೀಯರು ಸೇರಿದಂತೆ 750 ಮಂದಿ ನಾಪತ್ತೆಯಾಗಿದ್ದಾರೆ. ಸಂಕಷ್ಟದಲ್ಲಿರುವ ನೇಪಾಳಕ್ಕೆ ಭಾರತವು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ ನೆರವಿನ ಹಸ್ತ ಚಾಚಿದೆ.
Read Full Story

07:43 AM (IST) Aug 27

Finance - ಸೆಪ್ಟೆಂಬರ್ 1 ರಿಂದ ಹೊಸ ನಿಯಮಗಳು - ಬದಲಾಗಲಿದೆ ನಿಮ್ಮ ಹಣಕಾಸು ಜಗತ್ತು!

ಸೆಪ್ಟೆಂಬರ್ 1 ರಿಂದ ಬ್ಯಾಂಕಿಂಗ್, ಎಲ್‌ಪಿಜಿ ಗ್ಯಾಸ್ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದೈನಂದಿನ ಖರ್ಚು ಮತ್ತು ಉಳಿತಾಯದ ಮೇಲೆ ನೇರ ಪರಿಣಾಮ ಬೀರಲಿವೆ.

Read Full Story

More Trending News