Published : Apr 16, 2025, 06:28 AM ISTUpdated : Apr 16, 2025, 11:57 PM IST

Karnataka News Live 16th April : ₹451ಕ್ಕೆ 50ಜಿಬಿ ಡೇಟಾ, ಐಪಿಎಲ್ ಉಚಿತ, ಆಫರ್ ಯಾವುದು?

ಸಾರಾಂಶ

ನವದೆಹಲಿ: ಕೇಂದ್ರ ಸರ್ಕಾರದ ಮಾರ್ಚ್ ತಿಂಗಳ ಹಣದುಬ್ಬರ ವರದಿ ಬಿಡುಗಡೆ  ಮಾಡಿದೆ. ಮಾರ್ಚ್‌ ತಿಂಗಳ ಚಿಲ್ಲರೆ ಹಣದುಬ್ಬರ ಸೂಚ್ಯಂಕ ಪ್ರಕಟವಾಗಿದ್ದು, ಶೇ.3.34ರಷ್ಟು ದಾಖಲಾಗುವ ಮೂಲಕ ದೇಶದ ಹಣದುಬ್ಬರ 6 ವರ್ಷದಲ್ಲಿ ಕನಿಷ್ಠಕ್ಕೆ ಇಳಿದಿದೆ. ಆದರೆ ಬೇಸರದ ವಿಚಾರವೆಂದರೆ ಕರ್ನಾಟಕದ ಹಣದುಬ್ಬರ ಶೇ.4.44ರಷ್ಟು ದಾಖಲಾಗಿದ್ದು, ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ ಹಾಗೂ ರಾಜ್ಯವು ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ಕೇರಳ ಮೊದಲ ಸ್ಥಾನದಲ್ಲಿದ್ದರೆ, ಗೋವಾ 2ನೇ ಸ್ಥಾನದಲ್ಲಿದೆ. ಇಳಿದಿದೆ. 

Karnataka News Live 16th April : ₹451ಕ್ಕೆ 50ಜಿಬಿ ಡೇಟಾ, ಐಪಿಎಲ್ ಉಚಿತ, ಆಫರ್ ಯಾವುದು?

11:57 PM (IST) Apr 16

₹451ಕ್ಕೆ 50ಜಿಬಿ ಡೇಟಾ, ಐಪಿಎಲ್ ಉಚಿತ, ಆಫರ್ ಯಾವುದು?

ಏರ್‌ಟೆಲ್ ತನ್ನ ₹451 ಯೋಜನೆಯಲ್ಲಿ IPL 2025 ಕ್ಕೆ 50GB ಡೇಟಾ, 90 ದಿನಗಳ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ನೀಡುತ್ತಿದೆ. ಈ ಯೋಜನೆಯ ವಿಶೇಷತೆ ಏನು? ಇಲ್ಲಿದೆ ನೋಡಿ ವಿವರ..,

ಪೂರ್ತಿ ಓದಿ

11:41 PM (IST) Apr 16

17 ವೈದ್ಯರು ಕಂಡುಹಿಡಿಯಲಾಗದ ನಿಗೂಢ ರೋಗ ಪತ್ತೆಹಚ್ಚಿದ ಚಾಟ್ ಜಿಪಿಟಿ!

ನಾಲ್ಕು ವರ್ಷದ ಮಗುವಿನ ಅಪರೂಪದ ಕಾಯಿಲೆಯನ್ನು 17 ವೈದ್ಯರು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ, ಚಾಟ್ ಜಿಪಿಟಿ ಮೂಲಕ ತಾಯಿಗೆ ಉತ್ತರ ಸಿಕ್ಕಿತು. ಎಐ ತಂತ್ರಜ್ಞಾನವು 'ಟೆಥರ್ಡ್ ಕಾರ್ಡ್ ಸಿಂಡ್ರೋಮ್' ಎಂಬ ರೋಗವನ್ನು ಸೂಚಿಸಿತು, ನಂತರ ವೈದ್ಯರು ದೃಢಪಡಿಸಿದರು.

ಪೂರ್ತಿ ಓದಿ

11:08 PM (IST) Apr 16

ಏ.18ರಿಂದ ಗ್ಲೋಬಲ್ ಪ್ರವಾಸಿ ಕಬಡ್ಡಿ ಲೀಗ್ , ಇಲ್ಲಿದೆ ಪಂದ್ಯ ಪ್ರಸಾರ, ವೇಳಾಪಟ್ಟಿ ವಿವರ

ಏಪ್ರಿಲ್ 18 ರಿಂದ ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್ ಆರಂಭಗೊಳ್ಳುತ್ತಿದೆ. ಈ ಪಂದ್ಯದಲ್ಲಿ ಎಲ್ಲಿ ಪ್ರಸಾರಗೊಳ್ಳಲಿದೆ? ಪಂದ್ಯ ಸಮಯ, ದಿನಾಂಕ ಸೇರಿದಂತೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.  
 

ಪೂರ್ತಿ ಓದಿ

10:56 PM (IST) Apr 16

ದಕ್ಷಿಣ ಭಾರತದಲ್ಲಿ ನನ್ನ ಹೆಸರಿನ ದೇವಸ್ಥಾನ ಬೇಕು ಎಂದ ಬಾಲಿವುಡ್ ನಟಿ

ಬಾಲಿವುಡ್ ನಟಿ ನನಗೆ ದಕ್ಷಿಣ ಭಾರತದಲ್ಲಿ ತಮ್ಮ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದಲ್ಲಿ ಈಗಾಗಲೇ ತಮ್ಮ ಹೆಸರಿನ ದೇವಸ್ಥಾನವಿದೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪೂರ್ತಿ ಓದಿ

10:44 PM (IST) Apr 16

ಭಾರವಾದ ಮನಸ್ಸಿನಿಂದ ಕೈಮುಗಿದು ಮನವಿ ಮಾಡಿದ ಮಹಾಕುಂಭ ಬೆಡಗಿ ಮೊನಾಲಿಸಾ

ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾ ತೀವ್ರ ನೋಂದುಕೊಂಡಿದ್ದಾರೆ. ಇದೀಗ ಕೈಮುಗಿದು ಎಲ್ಲರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಭಾರವಾದ ಮನಸ್ಸಿನಿಂದ ಮೊನಾಲಿಸಾ ಮಾಡಿದ ಮನವಿ ಏನು?

ಪೂರ್ತಿ ಓದಿ

10:09 PM (IST) Apr 16

ಈಗ ಸಲ್ಲಿಕೆಯಾಗಿರೋದು ಜಾತಿ ಗಣತಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಈಚೆಗೆ ಕ್ಯಾಬಿನೆಟ್‌ಗೆ ಸಲ್ಲಿಕೆಯಾಗಿದ್ದು ಜಾತಿ ಗಣತಿ ಅಲ್ಲವೇ ಅಲ್ಲ, ಅದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯಾಗಿದೆ, ಜಾತಿ ಗಣತಿ ಎಂದು ವಿಷಯದ ಚರ್ಚೆ ಸಾಗಿದೆ. ಇದಕ್ಕೆ ನಾನು ಏನನ್ನೂ ಹೇಳೋದಿಲ್ಲವೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಪೂರ್ತಿ ಓದಿ

10:01 PM (IST) Apr 16

ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಲು ಸಂಕಲ್ಪ: ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಜನವಿರೋಧಿ ಕಾಂಗ್ರೆಸ್‌ ಸರ್ಕಾರ ಐವತ್ತು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. 

ಪೂರ್ತಿ ಓದಿ

10:00 PM (IST) Apr 16

ಸಿಎಂ ಸಚಿವಾಲಯ ಸರ್ಕಾರಿ ಕೆಲಸಕ್ಕೆ ಮೈಸೂರಿನವರಿಗೆ ಮಾತ್ರ ನೌಕರಿ!

ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 33 ಸಿಬ್ಬಂದಿಯಲ್ಲಿ 29 ಮಂದಿ ಮೈಸೂರು ಜಿಲ್ಲೆಯವರಾಗಿದ್ದಾರೆ. ಉಳಿದ ನಾಲ್ವರು ಮಾತ್ರ ಬಾಕಿ 30 ಜಿಲ್ಲೆಗಳನ್ನು ಪ್ರತಿನಿಧಿಸುತ್ತಾರೆ, ಇದು ಸ್ವಜನಪಕ್ಷಪಾತದ ಆರೋಪಕ್ಕೆ ಎಡೆಮಾಡಿಕೊಟ್ಟಿದೆ.

ಪೂರ್ತಿ ಓದಿ

09:49 PM (IST) Apr 16

12 ಲಕ್ಷ ಗರಿಗರಿ ನೋಟು ಗುಳುಂ ಮಾಡಿ ಪ್ರಾಣ ಬಿಟ್ಟ ಇಲಿ!

ಮನುಷ್ಯರು ಹಣವನ್ನು ಗುಳುಂ ಮಾಡುವುದು ಮಾಡುವುದು. ಆದರೆ ಇಲ್ಲೊಂದು ಇಲಿ 12 ಲಕ್ಷ ಮೌಲ್ಯದ ನೋಟು ನುಂಗಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಏನಿದು ಘಟನೆ?
 

ಪೂರ್ತಿ ಓದಿ

09:24 PM (IST) Apr 16

ಐದು ವರ್ಷದ ಮಗುವಿನ ನೆಗಡಿಗೆ ವೈದ್ಯ ಕೊಟ್ಟ ಚಿಕಿತ್ಸೆ ವಿಡಿಯೋ ನೋಡಿ ಭಾರತವೇ ಶಾಕ್

ಐದು ವರ್ಷದ ಮಗು ಪದೇ ಪದೆ ನೆಗಡಿ ಸಮಸ್ಯೆ ಎದುರಿಸುತ್ತಿತ್ತು. ಪೋಷಕರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯ ಕೊಟ್ಟ ಚಿಕಿತ್ಸೆ ಮಾತ್ರ ಇಂಡಿಯನ್ ಜುಗಾಡ್‌ನ್ನೇ ಮೀರಿಸುವಂತಿದೆ. ಈ ವೈದ್ಯನ ಚಿಕಿತ್ಸೆ ವಿಡಿಯೋ ನೋಡಿ ಹಲವರು ಶಾಕ್ ಆಗಿದ್ದಾರೆ.
 

ಪೂರ್ತಿ ಓದಿ

08:48 PM (IST) Apr 16

ಗರ್ಭಿಣಿ ಮಿಕ್ಸರ್ ಗ್ರೈಂಡರ್ ಬಳಸಿದರೆ ಹೊಟ್ಟೆಯೊಳಗೆ ಮಗು ಹೆದರುತ್ತಾ?

ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ವೈದ್ಯರು ಉತ್ತರಿಸಿದ್ದಾರೆ. ಮಿಕ್ಸರ್ ಶಬ್ದವು ಗರ್ಭದೊಳಗಿನ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ತ್ರೀರೋಗ ತಜ್ಞರು ತಿಳಿಸಿದ್ದಾರೆ. ಗರ್ಭಾಶಯದೊಳಗಿನ ಆಮ್ನಿಯೋಟಿಕ್ ದ್ರವವು ಮಗುವನ್ನು ರಕ್ಷಿಸುತ್ತದೆ.

ಪೂರ್ತಿ ಓದಿ

08:36 PM (IST) Apr 16

ಮೊಬೈಲ್​ ನಂಬರ್​ನ ಕೊನೆ ಸಂಖ್ಯೆಯಿಂದ ನಿಮ್ಮ ಗುಟ್ಟು ರಟ್ಟು! ಇಲ್ಲಿದೆ ನೋಡಿ ಡಿಟೇಲ್ಸ್​

ನಿಮ್ಮ ಮೊಬೈಲ್​ ನಂಬರ್​ನ ಕೊನೆಯ ಸಂಖ್ಯೆ ನಿಮ್ಮ ವ್ಯಕ್ತಿತ್ವ ಹೇಳುತ್ತದೆ ಎನ್ನುವುದು ಗೊತ್ತೆ? ಹಾಗಿದ್ದರೆ 0-9 ಯಾವ ನಂಬರ್​ ಇದ್ದರೆ ಏನು ಎನ್ನುವುದನ್ನು ಇಲ್ಲಿ ನೀಡಲಾಗಿದೆ ನೋಡಿ...
 

ಪೂರ್ತಿ ಓದಿ

08:31 PM (IST) Apr 16

ರಹಸ್ಯ ಬ್ಯಾಂಕಾಕ್ ಟ್ರಿಪ್ ಪತ್ನಿಗೆ ಗೊತ್ತಾಗದಂತೆ ಮಾಡಲು ಹೋಗಿ ಜಗತ್ತಿಗೆ ತಿಳಿಸಿಬಿಟ್ಟ ಗಂಡ

ಪತ್ನಿಗೆಗೆ ಗೊತ್ತಾಗದಂತೆ ರಹಸ್ಯವಾಗಿ ಬ್ಯಾಂಕಾಕ್ ಟ್ರಿಪ್ ಮುಗಿಸಿ ತವರಿಗೆ ಬಂದ ಗಂಡ ಒಂದು ಪ್ಲಾನ್ ಮಾಡಿದ್ದಾನೆ.  ತನ್ನ ಟ್ರಿಪ್ ಯಾವುದೇ ಕಾರಣಕ್ಕೂ ಪತ್ನಿಗೆ ತಿಳಿಯಬಾರದು ಎಂದು ತೀರಾ ಮುತುವರ್ಜಿ ವಹಿಸಿದ್ದ. ಆದರೆ ಗಂಡ ಮಾಡಿದ ಯಡವಟ್ಟಿನಿಂದ ಇದೀಗ ಪತ್ನಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ರಟ್ಟಾಗಿದೆ.
 

ಪೂರ್ತಿ ಓದಿ

07:40 PM (IST) Apr 16

ಮದುವೆಗೆ ಮುನ್ನ ಅದೃಷ್ಟವಂತ ಹುಡುಗಿಯ ಪಾದ, ಕಾಲ್ಬೆರಳು ನೋಡಿ!

ಸಮುದ್ರಶಾಸ್ತ್ರದ ಪ್ರಕಾರ, ಅದೃಷ್ಟವಂತ ಹುಡುಗಿಯರ ಪಾದಗಳಲ್ಲಿ ವಿಶೇಷ ಚಿಹ್ನೆಗಳಿರುತ್ತವೆ. ಈ ಚಿಹ್ನೆಗಳು ಅವರ ಮತ್ತು ಅವರ ಗಂಡಂದಿರ ಭವಿಷ್ಯದ ಬಗ್ಗೆ ಸೂಚಿಸುತ್ತವೆ, ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ತರುತ್ತವೆ.

ಪೂರ್ತಿ ಓದಿ

07:32 PM (IST) Apr 16

ರೀಲ್ಸ್ ವಿಡಿಯೋಗೆ ಗಂಗಾ ನದಿಗೆ ಇಳಿದು ಫೋಟೋ ಆಗಿ ಗೋಡೆ ಸೇರಿಕೊಂಡ ಯುವತಿ, ದೃಶ್ಯ ಸೆರೆ

ರೀಲ್ಸ್ ಮಾಡಲು ಯುವತಿ ಗಂಗಾ ನದಿಗೆ ಇಳಿದಿದ್ದಾಳೆ. ವಿಡಿಯೋ ಚೆನ್ನಾಗಿ, ಎಲ್ಲರೂ ಈ ಸಾಹಸಕ್ಕೆ ಕಮೆಂಟ್ ಮಾಡಬೇಕು ಎಂದುಕೊಂಡ ಯುವತಿ ಅಪಾಯದ ಗೆರೆ ದಾಟಿದ್ದಾಳೆ ಅಷ್ಟೇ.  ರೀಲ್ಸ್ ಪೋಸ್ಟ್ ಆಗಿದೆ, ಆದರೆ ಎಲ್ಲರೂ ಒಂ ಶಾಂತಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
 

ಪೂರ್ತಿ ಓದಿ

06:43 PM (IST) Apr 16

ಫಾರೂಖ್ ಅಬ್ದುಲ್ಲಾ ಅಸಲಿಯತ್ತು ಬಹಿರಂಗಪಡಿಸಿದ RAW ಮಾಜಿ ಮುಖ್ಯಸ್ಥ, ಆರ್ಟಿಕಲ್ 370 ರಹಸ್ಯ ಘಟನೆ

ಫಾರೂಖ್ ಅಬ್ದುಲ್ಲಾ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜಮ್ಮ ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡುವ ಕೇಂದ್ರದ ನಿರ್ಧಾರವನ್ನು ಅಬ್ದುಲ್ಲಾ ರಹಸ್ಯವಾಗಿ ಬೆಂಬಲಿಸಿ, ಬಹಿರಂಗವಾಗಿ ವಿರೋಧಿಸಿದ್ದರು ಎಂದು ಭಾರತದ R&AW ಮಾಜಿ ಮುಖ್ಯಸ್ಥ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಪೂರ್ತಿ ಓದಿ

06:26 PM (IST) Apr 16

ಕುಂಬಾರನಿಗೆ 13 ಕೋಟಿಯ ಟ್ಯಾಕ್ಸ್‌ ನೋಟಿಸ್‌ ಕಳಿಸಿದ ಐಟಿ ಇಲಾಖೆ, ಕಾರಣವೇನು ಗೊತ್ತಾ?

ರಾಜಸ್ಥಾನದ ಬುಂಡಿ ಜಿಲ್ಲೆಯ ಕುಂಬಾರನಿಗೆ ಆದಾಯ ತೆರಿಗೆ ಇಲಾಖೆ ₹13 ಕೋಟಿ ಠೇವಣಿ ಇಡುವಂತೆ ನೋಟಿಸ್ ನೀಡಿದೆ. ತನ್ನ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಯುವಕ ಆರೋಪಿಸಿದ್ದಾನೆ.

ಪೂರ್ತಿ ಓದಿ

06:01 PM (IST) Apr 16

4 ನಿಮಿಷ ಬಾಹ್ಯಾಕಾಶ ಪ್ರಯಾಣ ಮಾಡಬೇಕಾ? ಜಸ್ಟ್‌ 1.28 ಕೋಟಿ ಕೊಟ್ರೆ ಸಾಕು!

ಬ್ಲೂ ಆರಿಜಿನ್ ತನ್ನ ನ್ಯೂ ಶೆಪರ್ಡ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಆರು ಸಿಬ್ಬಂದಿಗಳನ್ನು ಕಾರ್ಮನ್ ಲೈನ್‌ಗೆ ಕರೆದೊಯ್ದಿತು. ಈ ಆರು ಜನರು ಭೂಮಿ ಮತ್ತು ಬಾಹ್ಯಾಕಾಶದ ನಡುವಿನ ರೇಖೆಯಲ್ಲಿ ತಮ್ಮ ಜೀವನವನ್ನೇ ಬದಲಾಯಿಸುವಂಥ ನೋಟಗಳನ್ನು ಕಂಡಿದ್ದಾರೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

06:00 PM (IST) Apr 16

ಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್

ಡೋನಾಲ್ಡ್ ನೀತಿಗಳಿಂದ ಇದೀಗ ಚೀನಾ ಕೆರಳಿ ಕೆಂಡವಾಗಿದೆ. ಇದರ ಪರಿಣಾಮ ಇದೀಗ ಭಾರತದ ಜೊತೆ ಆತ್ಮೀಯವಾಗಲು ಬಯಸಿದೆ. ಟ್ರಂಪ್ ಬೆದರಿಕ ಬಳಿಕ ಚೀನಾ ಬರೋಬ್ಬರಿ 85,000 ಭಾರತೀಯರಿಗೆ ವೀಸಾ ನೀಡಿ ದಾಖಲೆ ಬರೆದಿದೆ.

ಪೂರ್ತಿ ಓದಿ

05:57 PM (IST) Apr 16

UPSC 2 ವರ್ಷ ತಯಾರಿಗೆ 100 ಪೆನ್ನುಗಳು- ಟೆಕ್ಕಿ ಆದಿತಿಯ ಕಥೆ ವೈರಲ್

ಒಬ್ಬ ಟೆಕ್ಕಿ ಯುವತಿ ಯುಪಿಎಸ್‌ಸಿ ಪರೀಕ್ಷೆಗೆ 2 ವರ್ಷಗಳ ಕಾಲ ಅಭ್ಯಾಸ ಮಾಡಿದ್ದರೂ ಯಶಸ್ವಿಯಾಗಲಿಲ್ಲ. ಆಕೆ ಬಳಸಿದ 100ಕ್ಕೂ ಹೆಚ್ಚು ಪೆನ್ನುಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಯುಪಿಎಸ್‌ಸಿ ಪರೀಕ್ಷೆಯ ಕಠಿಣತೆಗೆ ಸಾಕ್ಷಿಯಾಗಿದೆ.

ಪೂರ್ತಿ ಓದಿ

05:49 PM (IST) Apr 16

ಅದ್ದೂರಿ ಪ್ರೈವೇಟ್‌ ಜೆಟ್‌ನಲ್ಲಿ 45 ತಂಡ ದೇಶ ಸಂಚಾರ: ಫೋಟೋ ವೈರಲ್‌!

ಸ್ಟೈಲಿಶ್‌ ಪ್ರೈವೇಟ್‌ ಜೆಟ್‌ ಮುಂದೆ ನಿರ್ದೇಶಕ ಅರ್ಜುನ್‌ ಜನ್ಯಾ, ನಾಯಕ ನಟರಾದ ಶಿವರಾಜ್‌ಕುಮಾರ್‌, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ, ಗೀತಾ ಶಿವರಾಜ್‌ಕುಮಾರ್‌, ನಿರೂಪಕಿ ಅನುಶ್ರೀ ನಿಂತಿರುವ ಫೋಟೋ ಇದೀಗ ವೈರಲ್‌ ಆಗಿದ್ದು, ಕನ್ನಡ ಪ್ರೇಕ್ಷಕರು ರಮೇಶ್‌ ರೆಡ್ಡಿಯವರಿಗೆ ಶುಭ ಕೋರಿದ್ದಾರೆ. 

ಪೂರ್ತಿ ಓದಿ

05:23 PM (IST) Apr 16

'ಗಾಲ್ಫ್‌ ಸೆಟ್‌, ಮನೆ, ಕರೆಂಟ್‌ ಬಿಲ್‌ ಕಟ್ಟಲು ಕಂಪನಿ ಹಣ ಬಳಕೆ..' Gensol ಮೇಲೆ ಸೆಬಿ ಪ್ರಹಾರ!

ಜೆನ್ಸೋಲ್ ಎಂಜಿನಿಯರಿಂಗ್ ಲಿಮಿಟೆಡ್‌ನಲ್ಲಿ ₹975 ಕೋಟಿ ಹಗರಣ ಬಯಲಾಗಿದ್ದು, ಸೆಬಿ ಕಂಪನಿ ಮತ್ತು ಅದರ ಪ್ರಮೋಟರ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಪ್ರಮೋಟರ್‌ಗಳು ವೈಯಕ್ತಿಕ ಐಷಾರಾಮಿಗಳಿಗೆ ಕಂಪನಿಯ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ.

ಪೂರ್ತಿ ಓದಿ

05:14 PM (IST) Apr 16

ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅಂತ ಪ್ರೂವ್ ಆಗೋಯ್ತು; ವಿಡಿಯೋ ವೈರಲ್!

ಪ್ರವಾಸಿ ತಾಣದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರು ಮತ್ತು ಯುವತಿಯರ ನಡುವೆ ಜಗಳ ನಡೆದಿದ್ದು, ಯುವತಿಯರು ಯುವಕರನ್ನು ಬೆಲ್ಟ್‌ನಿಂದ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದಿದ್ದಾರೆ.

ಪೂರ್ತಿ ಓದಿ

05:12 PM (IST) Apr 16

ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದರ ಜೀವನಾಧಾರಿತ 'ವೀರ ಸಂನ್ಯಾಸಿಯ ಆತ್ಮ ಗೀತೆ' ಪ್ರದರ್ಶನ: ಯಾವಾಗ?

ಪರಮ್ ಕಲ್ಚರ್ ವತಿಯಿಂದ 'ವೀರ ಸಂನ್ಯಾಸಿಯ ಆತ್ಮ ಗೀತೆ ಸ್ವಾಮಿ ' ವಿವೇಕಾನಂದರ ಜೀವನ, ಕೃತಿ ಆಧಾರಿತ ಅತ್ಯದ್ಭುತ ಮಲ್ಟಿಮೀಡಿಯಾ ಪ್ರದರ್ಶನವನ್ನು ಏಪ್ರಿಲ್‌ 25 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ. 

ಪೂರ್ತಿ ಓದಿ

05:12 PM (IST) Apr 16

ಆಫೀಸ್ ಚೇರ್ ಸರಿಯಾಗಿಡುವ ತಲೆಬಿಸಿ ಇಲ್ಲ, ನಿಸಾನ್ ತಂದಿದೆ ಚಪ್ಪಾಳೆ ತಟ್ಟಿದರೆ ಜಾಗ ಸೇರಿಕೊಳ್ಳೋ ಕುರ್ಚಿ

ನಿಸಾನ್ ಹೊಸ ಚೇರ್ ಬಿಡುಗಡೆ ಮಾಡಿದೆ. ಇದು ಇಂಟಲಿಜೆಂಟ್ ಪಾರ್ಕಿಂಗ್ ಚೇರ್. ನೀವು ಎದ್ದು ಹೋಗುವಾಗ ಚೇರ್ ಸರಿಮಾಡಬೇಕಿಲ್ಲ. ಒಂದೇ ಒಂದು ಚಪ್ಪಾಳೆ ತಟ್ಟಿದರೆ ಸಾಕು, ಎಲ್ಲಾ ಚೇರ್ ತನ್ನ ತನ್ನ ಸ್ಥಾನದಲ್ಲಿ ಬಂದು ನಿಲ್ಲಲಿದೆ.

ಪೂರ್ತಿ ಓದಿ

05:01 PM (IST) Apr 16

ಆ ಹೀರೋ ಎಲ್ಲರ ಮುಂದೆ ಆ ಪ್ರಶ್ನೆ ಕೇಳಿದಾಗ ತಲೆ ಎತ್ತೋಕಾಗದಷ್ಟು ಮುಜುಗರ ಆಯ್ತು: ಖ್ಯಾತ ನಟಿ

ಖ್ಯಾತ ನಟಿಯೋರ್ವರು ಸಿನಿಮಾ ಸೆಟ್‌ನಲ್ಲಿ ಹೀರೋನಿಂದ ಆದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಡ್ರಗ್ಸ್‌ ತಗೊಂಡ ಹೀರೋ ಅನುಚಿತವಾಗಿ ವರ್ತಿಸಿದ ಎಂದು ವಿನ್ಸಿ ಹೇಳಿದ್ದಾರೆ. 
 

ಪೂರ್ತಿ ಓದಿ

04:32 PM (IST) Apr 16

Bhagyalakhmi Serial: ಅದೊಂದು ವಿಷ್ಯವನ್ನೇ ನೋಡಿ ನೋಡಿ ರೋಸಿ ಹೋದ ವೀಕ್ಷಕರು!

Bhagyalakshmi Kannada Serial Today Episode: ʼಭಾಗ್ಯಲಕ್ಷ್ಮೀʼ ಧಾರಾವಾಹಿ ವೀಕ್ಷಕರಿಗೆ ಒಂದು ವಿಷಯ ಬೇಸರ ತರಿಸಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. 
 

ಪೂರ್ತಿ ಓದಿ

04:25 PM (IST) Apr 16

ಮಚ್ಚು ಹಿಡಿದು ರೀಲ್ಸ್‌ ಪ್ರಕರಣ: Apple ತಿಂದು ಬರಲು ರಜತ್‌ನ ಮತ್ತೆ ಪರಪ್ಪನ ಅಗ್ರಹಾರಕ್ಕೆ ಕಳಿಸಿದ ಕೋರ್ಟ್‌!

ಮಚ್ಚು ಹಿಡಿದು ರೀಲ್ಸ್‌ ಪ್ರಕರಣದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ರಜತ್‌ ಕಿಶನ್‌ಗೆ ನೀಡಿದ್ದ ಷರತ್ತುಬದ್ಧ ಜಾಮೀನು ರದ್ದಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪೂರ್ತಿ ಓದಿ

04:25 PM (IST) Apr 16

32PM ಎಐ ಡ್ಯುಯಲ್ ಕ್ಯಾಮೆರಾ, ದಿನವಿಡಿ ಚಾರ್ಜ್ ನಿಲ್ಲುವ ರೆಡ್‌ಮಿ ಎ5 ಫೋನ್ ಲಾಂಚ್

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಒಳಗೊಂಡ ಕ್ಯಾಮೆರಾ, ಎಷ್ಟೇ ಬಳಸಿದರೂ ದಿನವಿಡಿ ಚಾರ್ಜ್ ಇರುವ ಜೊತೆಗೆ ಹಲವು ವಿಶೇಷತೆಗಳ ಸ್ಮಾರ್ಟ್‌ಫೋನ್ ರೆಡ್‌ಮಿ ಎ5 ಬಿಡುಗಡೆಯಾಗಿದೆ. ಇದರ ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ.

ಪೂರ್ತಿ ಓದಿ

03:51 PM (IST) Apr 16

ಇಸ್ರೇಲ್ ಜೊತೆ ನಂಟಿಗೆ ಆಕ್ರೋಶ: ಪಾಕಿಸ್ತಾನದಲ್ಲಿ ಕೆಎಫ್‌ಸಿ ಕಚೇರಿಗೆ ನುಗ್ಗಿ ದಾಳಿ

ಗಾಜಾದ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಕೆಲ ಪ್ಯಾಲೇಸ್ತೀನ್ ಬೆಂಬಲಿಗರು KFC ಶಾಪ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

03:49 PM (IST) Apr 16

ಭಾರತೀಯ ರೈಲು ಪ್ರಯಾಣಿಕರಿಗೆ ಮತ್ತೊಂದು ಕೊಡುಗೆ, ಟ್ರೈನ್‌ನಲ್ಲೇ ಎಟಿಎಂ ಸೌಲಭ್ಯ

ಭಾರತೀಯ ರೈಲ್ವೇ ಇದೀಗ ಪ್ರಯಾಣಿಕರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ.ನಗದು ಹಣ ಪಡೆಯಲು ಇನ್ನು ಎಟಿಎಂ ಹುಡುಕಿಕೊಂಡು ತೆರಳಬೇಕಿಲ್ಲ. ರೈಲಿನಲ್ಲೇ ಎಟಿಎಂ ಮಶಿನ್ ಇಡಲಾಗಿದೆ. 

ಪೂರ್ತಿ ಓದಿ

03:45 PM (IST) Apr 16

'ಸ್ಲಮ್‌ನಲ್ಲಿದ್ದ ನನ್ನನ್ನು ಸುಪ್ರೀಂ ಕೋರ್ಟ್‌ಗೆ ತಂದಿದ್ದು ಅಂಬೇಡ್ಕರ್‌ ಸಂವಿಧಾನ..' ಜಸ್ಟೀಸ್‌ ಬಿಆರ್‌ ಗವಾಯಿ ಮಾತು ವೈರಲ್‌!

ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಭೂಷಣ್‌ ರಾಮಕೃಷ್ಣ ಗವಾಯಿ ನೇಮಕಗೊಳ್ಳಲಿದ್ದಾರೆ. ಅಂಬೇಡ್ಕರ್ ಜಯಂತಿಯಂದು ಅವರು ತಮ್ಮ ಯಶಸ್ಸಿಗೆ ಅಂಬೇಡ್ಕರ್‌ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಸಂವಿಧಾನ ಮತ್ತು ಮೀಸಲಾತಿಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.

ಪೂರ್ತಿ ಓದಿ

03:41 PM (IST) Apr 16

ಮಗು ಮಾಡಿಕೊಳ್ಳಿ ಎಂದು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟ ಕಂಪೆನಿ ಇದು! ಈ ತಿಂಗಳಿನಿಂದಲೇ ಅನ್ವಯ!

ವಾರದಲ್ಲಿ ಎಷ್ಟೋ ಜನರು ಎರಡು ವೀಕ್‌ಆಫ್‌ ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಲ್ಲೊಂದು ಕಂಪೆನಿಯು ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟಿದೆ. 

ಪೂರ್ತಿ ಓದಿ

02:59 PM (IST) Apr 16

RCB ಫ್ಯಾನ್ಸ್ ಅಂದ್ರೆ ಕಡಿಮೆನಾ? ಬೆಂಗಳೂರು ತಂಡದ ಬಗ್ಗೆ ಜಿತೇಶ್ ಶರ್ಮಾ ಅಚ್ಚರಿ ಹೇಳಿಕೆ!

ಆರ್‌ಸಿಬಿ ತಂಡ ಸೇರಿದ ಬಳಿಕ ತನಗೆ ಸರಿಯಾದ ಪರಿಚಯ ಸಿಕ್ಕಿದೆ ಎಂದು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಹೇಳಿದ್ದಾರೆ. ಟೀಂ ಇಂಡಿಯಾ ಪರ ಆಡಿದ್ದಕ್ಕಿಂತ ಆರ್‌ಸಿಬಿ ಪರ ಆಡುವಾಗಲೇ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಈ ಬಾರಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಲು ಶ್ರಮಿಸುತ್ತಿದೆ.

ಪೂರ್ತಿ ಓದಿ

02:54 PM (IST) Apr 16

Breaking: ಜಸ್ಟೀಸ್‌ ಬಿಆರ್‌ ಗವಾಯಿ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ!

ಹಾಲಿ ಸಿಜೆಐ ಆಗಿರುವ ಸಂಜೀವ್‌ ಖನ್ನಾ, ತಮ್ಮ ಉತ್ತರಾಧಿಕಾರಿಯಾಗಿ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಬಿಆರ್‌ ಗವಾಯಿ ಅವರನ್ನು ಶಿಫಾರಸು ಮಾಡಿದ್ದಾರೆ.

ಪೂರ್ತಿ ಓದಿ

02:41 PM (IST) Apr 16

ಇನ್‌ಫ್ಲೂಯೆನ್ಸರ್ ನಕಲಿ ನಗ್ನ ಫೋಟೋ ಸೃಷ್ಟಿ, ವಿಡಿಯೋ ಮೂಲಕ ಅಳಲು ತೋಡಿಕೊಂಡ ಭವಿಕಾ

ಫ್ಯಾಶನ್ ಇನ್‌ಫ್ಲೂಯೆನ್ಸರ್ ಭವಿಕಾ ಫೋಟೋ, ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಿಂದ ಡೌನ್ಲೋಡ್ ಮಾಡಿ ಎಐ ಮೂಲಕ ಅಶ್ಲೀಲ ಚಿತ್ರ ಸೃಷ್ಟಿಸಿ ಹರಿಬಿಡಲಾಗಿದೆ. ಘಟನೆ ಕುರಿತು ವಿಡಿಯೋ ಮೂಲಕ ಫ್ಯಾಶನ್ ಇನ್‌ಫ್ಲೂಯೆನ್ಸರ್ ಅಳಲು ತೋಡಿಕೊಂಡಿದ್ದಾರೆ. 
 

ಪೂರ್ತಿ ಓದಿ

02:40 PM (IST) Apr 16

ಮದುವೆಯಾದ 8 ವರ್ಷದ ಬಳಿಕ, 46ನೇ ವಯಸ್ಸಿನಲ್ಲಿ ತಂದೆಯಾದ ಟೀಮ್‌ ಇಮಡಿಯಾ ವಿಶ್ವಕಪ್‌ ಹೀರೋ!

ವಿಶ್ವಕಪ್‌ ವಿಜೇತ ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ಘಾಟ್ಗೆ 8 ವರ್ಷಗಳ ದಾಂಪತ್ಯದ ನಂತರ ಮಗುವನ್ನು ಸ್ವಾಗತಿಸಿದ್ದಾರೆ. ಫತೇಸಿನ್ ಖಾನ್ ಎಂದು ಮಗುವಿಗೆ ನಾಮಕರಣ ಮಾಡಿದ್ದಾರೆ. ಸಾಗರಿಕಾ ಅವರು ಜಹೀರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಎಂಬುದನ್ನು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಪೂರ್ತಿ ಓದಿ

02:09 PM (IST) Apr 16

ಅಂಗಡಿಯ ಬೀಗ ಒಡೆದು ಕೇರಳಿಗರನ್ನು ಒಗ್ಗೂಡಿಸಿತು ಈ ಗುಬ್ಬಿ! ಅಬ್ಬಾ ಎನ್ನೋ ಘಟನೆ ಇದು

ಗುಬ್ಬಿಯೊಂದು ಕೇರಳದ ಜನರನ್ನು ಒಗ್ಗೂಡಿಸುವ ಮೂಲಕ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಸಾರಿದೆ. ಖುದ್ದು ನ್ಯಾಯಾಧೀಶರೇ ಹೈಕೋರ್ಟ್ ಸಲಹೆ ಕೇಳುವಂತೆ ಮಾಡಿದೆ ಈ ಗುಬ್ಬಿ!
 

ಪೂರ್ತಿ ಓದಿ

01:59 PM (IST) Apr 16

ಹಿಂದೂ-ಮುಸ್ಲಿಂ ಸಂಘರ್ಷ ನಡೆಯಲು ಬಿಡೋಲ್ಲ: ಮುರ್ಷಿದಾಬಾದ್ ಹಿಂಸಾಚಾರಕ್ಕೆ ಬಿಜೆಪಿ ಕಾರಣ ಎಂದ ಮಮತಾ!

ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಗೆ ಸಂಬಂಧಿಸಿದ ಹಿಂಸಾಚಾರಕ್ಕೆ ಬಿಜೆಪಿಯನ್ನು ದೂಷಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಹಿಂದೂ-ಮುಸ್ಲಿಂ ಉದ್ವಿಗ್ನತೆ ಹರಡಲು ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪ.

ಪೂರ್ತಿ ಓದಿ

01:38 PM (IST) Apr 16

Breaking: ಪೋಷಕರಿಗೆ ಗುಡ್‌ನ್ಯೂಸ್‌ ನೀಡಿದ ರಾಜ್ಯ ಸರ್ಕಾರ, 1ನೇ ತರಗತಿ ಮಕ್ಕಳ ದಾಖಲಾತಿ ವಯೋಮಿತಿ ಸಡಿಲ!

ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ 5 ವರ್ಷ 6 ತಿಂಗಳ ಮಕ್ಕಳಿಗೆ 1 ನೇ ತರಗತಿಗೆ ದಾಖಲಾತಿಗೆ ಅವಕಾಶ ನೀಡಿದೆ. SEP ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಯೋಮಿತಿ ಗೊಂದಲಕ್ಕೆ ತೆರೆ ಬಿದ್ದಿದೆ.

ಪೂರ್ತಿ ಓದಿ

More Trending News