ಭಾರತೀಯ ರೈಲು ಪ್ರಯಾಣಿಕರಿಗೆ ಮತ್ತೊಂದು ಕೊಡುಗೆ, ಟ್ರೈನ್‌ನಲ್ಲೇ ಎಟಿಎಂ ಸೌಲಭ್ಯ

Synopsis
ಭಾರತೀಯ ರೈಲ್ವೇ ಇದೀಗ ಪ್ರಯಾಣಿಕರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ.ನಗದು ಹಣ ಪಡೆಯಲು ಇನ್ನು ಎಟಿಎಂ ಹುಡುಕಿಕೊಂಡು ತೆರಳಬೇಕಿಲ್ಲ. ರೈಲಿನಲ್ಲೇ ಎಟಿಎಂ ಮಶಿನ್ ಇಡಲಾಗಿದೆ.
ಮುಂಬೈ(ಏ.16) ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದೆ. ಮೂಲಕ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ರೈಲು ನಿಲ್ದಾಣಗಳು ನವೀಕರಣಗೊಳ್ಳುತ್ತಿದೆ. ಟಿಕೆಟ್ ಬುಕಿಂಗ್, ರೈಲು ಸಮಯ ಸೇರಿದಂತೆ ಇತರ ಮಾಹಿತಿಗಳಿಗೆ ಸೇರಿದಂತೆ ಒಂದೇ ಆ್ಯಪ್ ಲಾಂಚ್ ಮಾಡಲಾಗಿದೆ. ಇದೀಗ ಭಾರತೀಯ ರೈಲ್ವೇ ಮತ್ತೊಂದು ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತಿದೆ. ಇದೀಗ ರೈಲು ಪ್ರಯಾಣಿಕರು ಎಟಿಎಂ ಮಶಿನ್ ಹುಡುಕಿಕೊಂಡು ಹೋಗಬೇಕಿಲ್ಲ. ನೀವು ಪ್ರಯಾಣಿಸುವ ರೈಲಿನಲ್ಲೇ ಎಟಿಎಂ ಮಶಿನ್ ಸೌಲಭ್ಯ ಒದಗಿಸಲಾಗಿದೆ.
ಟೈನ್ ಕೋಚ್‌ನಲ್ಲಿ ಎಟಿಎಂ
ಇದೇ ಮೊದಲ ಬಾರಿಗೆ ರೈಲಿನಲ್ಲಿ ಎಟಿಎಂ ಮಶಿನ್ ಅಳವಡಿಸಾಗಿದೆ. ಈ ಹೆಗ್ಗಳಿಕೆಗೆ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್ ರೈಲು ಪಾತ್ರವಾಗಿದೆ. ಮೊದಲ ಹಂತದಲ್ಲಿ ಪಂಚವಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಾತ್ರ ಈ ಎಟಿಎಂ ಮಶಿನ್ ಅಳವಡಿಸಲಾಗಿದೆ. ಇದೀಗ ಪ್ರಯಾಣಿಕರು ರೈಲು ಪ್ರಯಾಣದಲ್ಲೇ ಎಟಿಎಂ ಮೂಲಕ ನಗದು ಹಣ ಪಡೆಯಲು ಸಾಧ್ಯವಾಗುತ್ತಿದೆ. ಪಂಚವಟಿ ಎಕ್ಸ್‌ಪ್ರೆಸ್ ರೈಲಿನ ಏರ್ ಕಂಡೀಷನ್ ಕೋಚ್‌ನಲ್ಲಿ ಈ ಎಟಿಎಂ ಮಶೀನ್ ಅಳಪಡಿಸಲಾಗಿದೆ.
ಪಂಬನ್ ಸೇತುವೆ ಮೂಲಕ ರಾಮೇಶ್ವರಂಗೆ ಪ್ರಯಾಣಿಸುವ ಪ್ಲಾನ್ ಇದೆಯಾ? ಇಲ್ಲಿಗೆ ಟ್ರೈನ್ ಲಿಸ್ಟ್
ರೈಲು ಸಾಗುತ್ತಿರುವಾಗಲೂ ಹಣ ಡ್ರಾ
ಸದ್ಯ ಪ್ರಯೋಗಿಕವಾಗಿ ಮುಂಬೈ-ಮನ್ಮಾಡ್ ಪಂಚವಟಿ ರೈಲಿನಲ್ಲಿ ಅಳವಡಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ ಹಂತ ಹಂತವಾಗಿ ಪ್ರಮುಖ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ರೈಲಿನಲ್ಲಿ ಅಳವಡಿಸಿರುವ ಎಟಿಎಂ ಮಶಿನ್‌ನಲ್ಲಿ ಹಣ ಪಡೆಯಲು ರೈಲು ನಿಲ್ದಾಣದಲ್ಲಿ ನಿಂತಿರಬೇಕು ಎಂದಿಲ್ಲ. ರೈಲು ವೇಗವಾಗಿ ಸಾಗುತ್ತಿರುವಾಗಲೂ ಈ ಎಟಿಎಂ ಮಶಿನ್ ಮೂಲಕ ಹಣ ವಿಥ್‌ಡ್ರಾ ಮಾಡಬಹುದು.
ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಭಾರತೀಯ ರೈಲ್ವೇ ಜಂಟಿಯಾಗಿ ಈ ಸೇವೆಯನ್ನು ಪ್ರಯಾಣಿಕರಿಗೆ ನೀಡಿದೆ. ಹಲವು ಸಂದರ್ಭಗಳಲ್ಲಿ ರೈಲು ಕೇವಲ 5 ನಿಮಿಷ ನಿಲುಗಡೆ ಇದ್ದಾಗ, ಎಕ್ಸ್‌ಪ್ರೆಸ್ ರೈಲಿನಲ್ಲಿರುವ ಪ್ರಯಾಣಿಕರು ನಿಲ್ದಾಣದಲ್ಲಿ ಎಟಿಎಂಗೆ ತೆರಳಿ ನಗದು ಡ್ರಾ ಮಾಡಿ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ವೇಳೆ ಹಲವು ಬಾರಿ ರೈಲು ಚಲಿಸಿದಾಗ ಅಪಾಯಾಕಾರಿ ರೈಲು ಹತ್ತುವ ಪ್ರಯತ್ನಗಳನ್ನು ಮಾಡಿದ್ದಾರೆ. ಇದೀಗ ಎಕ್ಸ್‌ಪ್ರೆಸ್ ರೈಲಿನಲ್ಲೇ ಈ ಸೌಲಭ್ಯ ಒದಗಿಸುವ ಮೂಲಕ ಪ್ರಯಾಣಿಕರು ಹಣ ಡ್ರಾ ಮಾಡಲು ನಿಲ್ದಾಣ ಬರುವ ವರೆಗೆ ಕಾಯಬೇಕಿಲ್ಲ, ಜೊತೆಗೆ ರೈಲು ಇಳಿದು ಹತ್ತುವ ಸಾಹಸವನ್ನು ಮಾಡಬೇಕಿಲ್ಲ.
ಮುಂಬೈ-ಮನ್ಮಾಡ್ ರೈಲಿನ ಇಗಪುರಿ ಹಾಗೂ ಕಸಾರ ನಡುವೆ ನೆಟ್‌ವರ್ಕ್ ಸಮಸ್ಯಗಳಿವೆ. ಈ ಮದ್ಯದಲ್ಲಿ ರೈಲು ಸುರಂಗ ಮಾರ್ಗದ ಮೂಲಕ ಸಾಗಲಿದೆ. ಈ ವೇಳೆ ಎಟಿಎಂ ಮೂಲಕ ಹಣ ಡ್ರಾ ಮಾಡಲು ಸಾಧ್ಯವಾಗುದಿಲ್ಲ. ನೆಟ್‌ವರ್ಕ್ ಸಮಸ್ಯೆಯಿಂದ ತಾಂತ್ರಿಕ ಸಮಸ್ಸೆ ಎದುರಾಗಲಿದೆ. ಇದನ್ನು ಹೊರತುಪಡಿಸಿದರೆ ಪಂಚವಟಿ ಎಕ್ಸ್‌ಪ್ರೆಸ್ ಪ್ರಯಾಣದ ಅವಧಿಯಲ್ಲಿ ಹಣ ಡ್ರಾ ಮಾಡಲು ಇನ್ಯಾವುದೇ ಅಡೆ ತಡೆಗಳಿಲ್ಲ.
ರೈಲಿನಲ್ಲಿ ಎಟಿಎಂ ಅಳವಡಿಸಿರುವ ಕಾರಣ ಪ್ರಯಾಣಿಕರಿಗೆ ಅನುಕೂಲವಾಗಿದೆ.ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಡಿವಿಶನಲ್ ಮ್ಯಾನೇಜರ್ ಇಟಿ ಪಾಂಡೆ ಹೇಳಿದ್ದಾರೆ. ಹಲವರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಸದ್ಯ ಹೆಚ್ಚಿನ ಪ್ರಯಾಣಿಕರಿಗೆ ಈ ಸೇವೆ ಕುರಿತು ಅರಿವಿಲ್ಲ. ಹೀಗಾಗಿ ಹಲವರು ರೈಲು ಹತ್ತುವಾಗ ಅಗತ್ಯಕ್ಕೆ ಬೇಕಾದಷ್ಟು ನಗದು ಹಣ ಮೊದಲೇ ಡ್ರಾ ಮಾಡಿಕೊಂಡಿದ್ದರು. ಆದರೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪಾಂಡೆ ಹೇಳಿದ್ದಾರೆ.
ರೈಲ್ವೆ ಇಲಾಖೆ ಜೊತೆ ಸೇರಿ ಈ ಬ್ಯುಸಿನೆಸ್ ಶುರು ಮಾಡಿ