ರೀಲ್ಸ್ ಮಾಡಲು ಯುವತಿ ಗಂಗಾ ನದಿಗೆ ಇಳಿದಿದ್ದಾಳೆ. ವಿಡಿಯೋ ಚೆನ್ನಾಗಿ, ಎಲ್ಲರೂ ಈ ಸಾಹಸಕ್ಕೆ ಕಮೆಂಟ್ ಮಾಡಬೇಕು ಎಂದುಕೊಂಡ ಯುವತಿ ಅಪಾಯದ ಗೆರೆ ದಾಟಿದ್ದಾಳೆ ಅಷ್ಟೇ.  ರೀಲ್ಸ್ ಪೋಸ್ಟ್ ಆಗಿದೆ, ಆದರೆ ಎಲ್ಲರೂ ಒಂ ಶಾಂತಿ ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಉತ್ಕರ್ಷಿ(ಏ.16) ರೀಲ್ಸ್ ಹುಚ್ಚಾಟ ಈಗಾಗಲೇ ಹಲವರಿಗೆ ಆಪತ್ತು ತಂದಿದೆ. ಆದರೂ ಅಪಾಯಾಕಾರಿ ರೀಲ್ಸ್ ಮಾಡುವ ಸಂಖ್ಯೆ ಕಡಿಮೆ ಏನಿಲ್ಲ. ಕೆಲ ಪ್ರಕರಣಗಳು ಬೆಳಕಿಗೆ ಬರುತ್ತದೆ, ಅದೆಷ್ಟೋ ಪ್ರಕರಣ ಹಾಗೇ ಮುಚ್ಚಿ ಹೋಗುತ್ತಿದೆ. ಇದೀಗ ರೀಲ್ಸ್ ಹುಚ್ಚಾಟದಿಂ ದುರಂತ ಒಂದು ನಡೆದು ಹೋಗಿದೆ. ರೀಲ್ಸ್ ವಿಡಿಯೋ ಚೆನ್ನಾಗಿ ಬರಬೇಕು. ಅಬ್ಬಾ ಧೈರ್ಯ ಮೆಚ್ಚಿಕೊಳ್ಳಬೇಕು ಅನ್ನೋ ರೀತಿ, ವಿಡಿಯೋ ಇರಬೇಕು ಎಂದು ಅಪಾಯದ ಗೆರೆ ದಾಟಿ ಗಂಗಾ ನದಿಗೆ ಇಳಿದಿದ್ದಾಳೆ. ಆದರೆ ಕಾಲು ಜಾರಿದೆ. ವಿಡಿಯೋ ರೆಕಾರ್ಡ್ ಆಗುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋದ ಘಟನೆ ಗಂಗಾ ನದಿಯ ಮಣಿಕರ್ಣಿಕಾ ಘಾಟ್ ತೀರದಲ್ಲಿ ನಡೆದಿದೆ.

ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋದ ಯುವತಿ
ಇಬ್ಬರು ಸಹೋದರಿಯರು ಗಂಗಾ ನದಿಯ ಮಣಿಕರ್ಣಿಕಾ ಘಾಟ್‌ಗೆ ತೆರಳಿದ್ದಾರೆ. ದೇವಸ್ಥಾನ ಭೇಟಿ, ಪೂಜೆ ಮಾಡಿದರೂ ರೀಲ್ಸ್ ಹುಚ್ಚು ಬಿಡಬೇಕಲ್ಲ. ಗಂಗಾ ನದಿಯ ತಟದಲ್ಲಿರುವಾಗ ಗಂಗಾ ನದಿ ಜೊತೆ ರೀಲ್ಸ್ ಬೇಡ್ವೆೇ ಎಂದು ಯುವತಿ ಸಾಹಸದ ರೀಲ್ಸ್ ವಿಡಿಯೋ ಮಾಡಲು ಮುಂದಾಗಿದ್ದಳೆ. ಸಹೋದರಿ ಬಳಿಕ ಮೊಬೈಲ್ ನೀಡಿ ಶೂಟ್ ಮಾಡುವಂತೆ ಸೂಚಿಸಿದ್ದಾಳೆ. ಬಳಿಕ ಗಂಗಾ ನದಿ ತಟದಲ್ಲಿನ ತಡೆ ಗೋಡೆಯನ್ನು ದಾಟಿ ನೀರಿಗೆ ಇಳಿದಿದ್ದಾಳೆ. 

ಕದ್ದೋಗಿ ತಿಂಗಳಾದ್ರು ಗೊತ್ತೆ ಇಲ್ಲ: ಕೆಲಸದಾಕೆಯ ಯೂಟ್ಯೂಬ್‌ ರೀಲ್ಸ್‌ನಿಂದ ಸಿಕ್ತು ದೊಡ್ಡ ಸುಳಿವು

ಇತ್ತ ಈ ಎಲ್ಲಾ ಘಟನೆಗಳು ವಿಡಿಯೋ ರೆಕಾರ್ಡ್ ಆಗುತ್ತಿದೆ. ಅಪಾಯಕಾರಿ ಎಂದು ಗೊತ್ತಿದ್ದರೂ ನೀರಿಗೆ ಇಳಿದಿದ್ದಾಳೆ. ಬಳಿಕ ಒಂದೆರೆಡು ಹೆಜ್ಜೆ ನೀರಿನಲ್ಲಿ ಮುಂದೆ ಸಾಗಿದ್ದಾಳೆ. ಕಾರಣ ವಿಡಿಯೋದಲ್ಲಿ ತಾನು ಗಂಗಾ ನದಿಯ ಮಧ್ಯದಲ್ಲಿ ನಿಂತುಕೊಂಡಿರುವಂತೆ ಭಾಸವಾಗಬೇಕು ಅನ್ನೋದು ಆಕೆಯ ಆಸೆಯಾಗಿತ್ತು. ಇದು ರೀಲ್ಸ್ ವಿಡಿಯೋ ಥೀಮ್ ಆಗಿತ್ತು. ಬಳಿಕ ಸ್ಲೋ ಮೋಶನ್‌ನಲ್ಲಿ ವಿಡಿಯೋ ತೆಗದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಲೈಕ್ಸ್ ಎಷ್ಟಿದೆ, ಕಮೆಂಟ್ ಏನು ಬಂದಿದೆ ನೋಡು ತವಕ ಹೆಚ್ಚಾಗಿದೆ. ಆದರೆ ಗಂಗಾ ನದಿಯಲ್ಲಿ ಒಂದೆರೆಡು ಹೆಜ್ಜೆ ಮುಂದೆ ಹೋಗಿ ಕ್ಯಾಮೆರಾಗೆ ಫೋಸ್ ನೀಡುತ್ತಿದ್ದಂತೆ ಕಾಲು ಜಾರಿದೆ. ನೀರಿನ ರಭಸ ಹೆಚ್ಚಾಗಿತ್ತು. ಯುವತಿ ಕೊಚ್ಚಿ ಹೋಗಿದ್ದಾಳೆ.

ನೆರವಿಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ
ಗಂಗಾ ತೀರದಲ್ಲಿ ಇದ್ದ ಇತರ ಕೆಲವರು ನೆರವಿಗೆ ಧಾವಿಸಿದ್ದಾರೆ. ಆದರೆ ನೀರಿನ ರಭಸದಿಂದ ಯುವತಿ ಕೊಚ್ಚಿ ಹೋಗಿದ್ದಾಳೆ. ತಕ್ಷಣವೇ ಯವತಿ ಸಹೋದರಿ ಕಿರುಚಿಕೊಂಡಿದ್ದಾಳೆ. ಸಿಬ್ಬಂದಿಗಳು ಆಗಮಿಸಿದ್ದಾರೆ. ಶೋಧ ಕಾರ್ಯ ಆರಂಭಗೊಂಡಿದೆ. ಆದರೆ ಯುವತಿ ಪತ್ತೆಯಾಗಿಲ್ಲ. ಇದೀಗ ಜಿಲ್ಲಾಡಳಿತ ಯುವತಿಯ ಹುಡುಕಾಟ ನಡೆಸುತ್ತಿದೆ. 

Scroll to load tweet…

ಯುವವಿ ಸಹೋದರಿ ಕಣ್ಣೀರಿಡುತ್ತಿದ್ದಾರೆ. ಕುಟುಂಬಸ್ಥರು ಆಗಮಿಸಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಾಗಿದೆ. ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಯುವತಿಯ ಕೊನೆಯ ಕ್ಷಣಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೀಲ್ಸ್ ವಿಡಿಯೋ ಮಾಡಲು ಹೋದು ಯುವತಿಯ ಪತ್ತೆ ಇಲ್ಲ. ರೀಲ್ಸ್ ವಿಡಿಯೋಗಾಗಿ ಅಪಾಯ ಲೆಕ್ಕಿಸಿದೆ, ಅಪಾಯದ ಮಟ್ಟ ಮೀರಿ ವಿಡಿಯೋ ಮಾಡುವುದು ಜೀವಕ್ಕೆ ಕುತ್ತು ತರಲಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.