ಸೆಬಿ ಜೆನ್ಸೋಲ್ ಇಂಜಿನಿಯರಿಂಗ್ ಮೇಲೆ ದಾಳಿ ನಡೆಸಿ, ಷೇರು ವಿಭಜನೆಗೆ ತಡೆ ನೀಡಿದೆ. ಜಗ್ಗಿ ಸಹೋದರರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಲಾಗಿದೆ. ಕಂಪನಿ ನಿಧಿ ದುರುಪಯೋಗದ ತನಿಖೆಗೆ ಫಾರೆನ್ಸಿಕ್ ಆಡಿಟರ್ ನೇಮಕವಾಗಿದೆ. ವೈಯಕ್ತಿಕ ಐಷಾರಾಮಿಗಳಿಗೆ ₹97 ಕೋಟಿ ಸೇರಿದಂತೆ ಕೋಟ್ಯಂತರ ರೂಪಾಯಿ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ.

ಮುಂಬೈ (ಏ.16): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಸೆಬಿ, ಜೆನ್ಸೋಲ್‌ ಇಂಜಿನಿಯರಿಂಗ್‌ ಲಿಮಿಟೆಡ್‌ ಕಂಪನಿ ಮೇಲೆ ಪ್ರಹಾರ ಮಾಡಿದೆ. ಅದರೊಂದಿಗೆ ಕಂಪನಿಯ ಷೇರು ವಿಭಜನೆ ನಿರ್ಧಾರಕ್ಕೆ ತಾತ್ಕಾಲಿಕ ತಡೆಯನ್ನೂ ನೀಡಿದೆ. ಬಹಳ ಮುಖ್ಯವಾಗಿ ಜೆನ್ಸೋಲ್‌ ಕಂಪನಿಯ ಅನ್ಮೋಲ್ ಸಿಂಗ್ ಜಗ್ಗಿ ಮತ್ತು ಪುನೀತ್ ಸಿಂಗ್ ಜಗ್ಗಿ ಸಹೋದರರನ್ನು ಲಿಸ್ಟೆಡ್‌ ಕಂಪನಿಗಳ ನಿರ್ದೇಶಕ ಸ್ಥಾನಗಳಿಂದ ವಜಾ ಮಾಡಿದೆ.

ಜೆನ್ಸೋಲ್‌ ಕಂಪನಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಫಾರೆನ್ಸಿಕ್‌ ಆಡಿಟರ್‌ಅನ್ನೂ ಸೆಬಿ ನೇಮಕ ಮಾಡಿದೆ. ಜೆನ್ಸೋಲ್‌ ಕಂಪನಿಯ ನಿಧಿಯ ಗಂಭೀರ ದುರುಪಯೋಗ ಮಾಡಿದ್ದಕ್ಕಾಗಿ ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿ ಜೆನ್ಸೋಲ್ ಎಂಜಿನಿಯರಿಂಗ್ ಲಿಮಿಟೆಡ್ ಮತ್ತು ಅದರ ಉನ್ನತ ಮುಖ್ಯಸ್ಥರನ್ನು ಭಾರೀ ಪ್ರಮಾಣದಲ್ಲಿ ತರಾಟೆಗೆ ತೆಗೆದುಕೊಂಡಿದೆ.

ಇತ್ತೀಚಿನ ವರದಿಯ ಪ್ರಕಾರ, ಕಂಪನಿಯ ಪ್ರಮೋಟರ್‌ಗಳಾದ ಅನ್ಮೋಲ್ ಸಿಂಗ್ ಜಗ್ಗಿ ಮತ್ತು ಪುನೀತ್ ಸಿಂಗ್ ಜಗ್ಗಿ ಅವರು ತಮ್ಮ ವೈಯಕ್ತಿಕ ಜೀವನಶೈಲಿಗಾಗಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಜೆನ್ಸೋಲ್ ಎಂಜಿನಿಯರಿಂಗ್ ಲಿಮಿಟೆಡ್‌ನ ಪ್ರಮೋಟರ್‌ಗಳು ಕೋಟ್ಯಂತರ ಕಂಪನಿ ನಿಧಿಯನ್ನು ಬೇರೆಡೆಗೆ ತಿರುಗಿಸಿ, ಪಟ್ಟಿ ಮಾಡಲಾದ ಕಂಪನಿಯನ್ನು ಸ್ವಾಮ್ಯದ ಕಂಪನಿಯಂತೆ ಪರಿಗಣಿಸಿದ್ದಾರೆ ಎಂದು ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಮಂಗಳವಾರ ತಿಳಿಸಿದೆ.
ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಲು ಸುಮಾರು ₹975 ಕೋಟಿ ಸಾಲದ ಹಣವನ್ನು ಜೆನ್ಸೋಲ್ ಪಡೆದುಕೊಂಡಿತ್ತು. ಆದರೆ, ಈ ಹಣವನ್ನು ಬೇೆಡೆಗೆ ತಿರುಗಿಸಲಾಗಿದೆ ಎಂದು ಸೆಬಿ ತಿಳಿಸಿದೆ.

₹200 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಕಾರು ವ್ಯಾಪಾರಿಯ ಮೂಲಕ ಕಳುಹಿಸಲಾಗಿದೆ, ಅದು ಪ್ರಮೋಟರ್‌ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಕೊನೆಗೊಂಡಿತು.

ಪ್ರತಿದಿನ ಲೋವರ್‌ ಸರ್ಕ್ಯೂಟ್‌, 1100 ರಿಂದ 180 ರೂಪಾಯಿಗೆ ಇಳಿದ ಷೇರು, ಹೂಡಿಕೆ ಮಾಡಿದವರು ಕಂಗಾಲು!

ಪ್ರಮೋಟರ್‌ಗಳು ಸಾರ್ವಜನಿಕ ಕಂಪನಿಯನ್ನು ತಮ್ಮ 'ಪರ್ಸ್‌' ರೀತಿ ನಡೆಸಿಕೊಂಡಿದ್ದಾರೆ ಎಂದು ನಿಯಂತ್ರಕರು ಹೇಳಿದ್ದಾರೆ, ಇದು ಆರ್ಥಿಕ ಶಿಸ್ತು ಮತ್ತು ನಿಯಂತ್ರಣದ ಸಂಪೂರ್ಣ ಕೊರತೆಯನ್ನು ತೋರಿಸುತ್ತದೆ. ಸೆಬಿಯ ಕ್ರಮವು ಸಾರ್ವಜನಿಕ ನಿಧಿಗಳು ಜವಾಬ್ದಾರಿಯೊಂದಿಗೆ ಬರುತ್ತವೆ ಎಂಬುದನ್ನು ನೆನಪಿಸುತ್ತದೆ, ವಿಶೇಷವಾಗಿ ಪಟ್ಟಿಮಾಡಿದ ಕಂಪನಿಗಳು ಮತ್ತು ಹೂಡಿಕೆದಾರರ ಹಣದಿಂದ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಇದು ಅಗತ್ಯವಾಗಿರುತ್ತದೆ.

ಈಗ 10 ಗ್ರಾಮ್‌ ಚಿನ್ನಕ್ಕೆ 94,000, ಹಾಲಿ ವರ್ಷ 106 ದಿನದಲ್ಲಿ 18,327 ರೂಪಾಯಿ ಏರಿಕೆ!

ಇನ್ನೂ ಅಚ್ಚರಿ ಎನಿಸುವ ಅಂಶವೇನು?

  • ಭಾರತದ ಅತ್ಯಂತ ದುಬಾರಿ ವಿಳಾಸಗಳಲ್ಲಿ ಒಂದಾದ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್ ದಿ ಕ್ಯಾಮೆಲಿಯಾಸ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಲು ಅನ್ಮೋಲ್ ಸಿಂಗ್ ಜಗ್ಗಿ ₹97 ಕೋಟಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
  • ಅವರು ಒಂದು ಅಲಂಕಾರಿಕ ಗಾಲ್ಫ್ ಸೆಟ್‌ಗಾಗಿ ₹26 ಲಕ್ಷ ಖರ್ಚು ಮಾಡಿದ್ದಾರೆ.
  • ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಇನ್ನೂ ₹9.95 ಲಕ್ಷ ಕಂಪನಿಯ ಹಣವನ್ನು ಬಳಸಲಾಗಿದೆ.
  • ವೈಯಕ್ತಿಕ ವಸ್ತುಗಳಿಗೆ ಕಂಪನಿಯ ಒಟ್ಟು ₹2.58 ಕೋಟಿ ಖರ್ಚು ಮಾಡಲಾಗಿದೆ ಎಂದು ಸೆಬಿ ಹೇಳಿದೆ.