ಪತ್ನಿಗೆಗೆ ಗೊತ್ತಾಗದಂತೆ ರಹಸ್ಯವಾಗಿ ಬ್ಯಾಂಕಾಕ್ ಟ್ರಿಪ್ ಮುಗಿಸಿ ತವರಿಗೆ ಬಂದ ಗಂಡ ಒಂದು ಪ್ಲಾನ್ ಮಾಡಿದ್ದಾನೆ.  ತನ್ನ ಟ್ರಿಪ್ ಯಾವುದೇ ಕಾರಣಕ್ಕೂ ಪತ್ನಿಗೆ ತಿಳಿಯಬಾರದು ಎಂದು ತೀರಾ ಮುತುವರ್ಜಿ ವಹಿಸಿದ್ದ. ಆದರೆ ಗಂಡ ಮಾಡಿದ ಯಡವಟ್ಟಿನಿಂದ ಇದೀಗ ಪತ್ನಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ರಟ್ಟಾಗಿದೆ. 

ಪುಣೆ(ಏ.16) ಕಚೇರಿ ಕೆಲಸಕ್ಕಾಗಿ ಮಂಬೈಗೆ ತೆರಳಬೇಕು, ಹೆಡ್ ಆಫೀಸ್‌ಗೆ ಹೋಗಬೇಕು. ಹೀಗೆ ಹಲವು ಕಾರಣಗಳನ್ನು ಹೇಳಿ ಗಂಡ ಮನೆಯಿಂದ ಬ್ಯಾಗ್ ಪ್ಯಾಕ್ ಮಾಡಿ ತೆರಳಿದ್ದಾನೆ. ಆದರೆ ಈತ ನೇರವಾಗಿ ಹೋಗಿದ್ದ ಬ್ಯಾಂಕಾಕ್ ಟ್ರಿಪ್. 51 ವರ್ಷದ ಈತ ಪತ್ನಿಗೆ ಹೇಳದೆ ಯಾರದ್ದೋ ಜೊತೆ ಬ್ಯಾಂಕಾಕ್ ಟ್ರಿಪ್ ಮಾಡಿದ್ದಾನೆ. ಒಂದು ವಾರಕ್ಕೂ ಹೆಚ್ಚು ಕಾಲ ಬ್ಯಾಂಕಾಕ್ ಸುಂದರ ಪ್ರವಾಸಿ ತಾಣ, ಹೊಟೆಲ್‌ನಲ್ಲಿ ಕಳೆದ ಗಂಡ, ಬಳಿಕ ಮುಂಬೈಗೆ ಮರಳಿದ್ದಾನೆ.ಆದರೆ ತಾನು ಬ್ಯಾಂಕಾಕ್ ಪ್ರವಾಸ ಮಾಡಿರುವ ಮಾಹಿತಿ ಪತ್ನಿಗೆ ತಿಳಿಯಬಾರದು ಅನ್ನೋದು ಕಾರಣ ಅತೀ ಬುದ್ದಿವಂತಿಕೆ ಉಪಯೋಗಿಸಿದ್ದಾನೆ. ಏನೇ ಪರಿಶೀಲಿಸಿದರೂ ಬ್ಯಾಂಕಾಕ್ ಪ್ರವಾಸ ಗೊತ್ತಾಗಲೇಬಾರದು ಅನ್ನೋದು ಗಂಡನ ಪ್ರಯತ್ನವಾಗಿತ್ತು. ಆದರೆ ಈತನ ಅತೀ ಬುದ್ಧಿವಂತಿಕೆಯಿಂದ ಇದೀಗ ಪತ್ನಿಗೆ ಮಾತ್ರವಲ್ಲ, ಈತನ ಕುಟುಂಬ್ಥರು, ಇಡೀ ದೇಶಕ್ಕೆ ಗೊತ್ತಾಗಿದೆ.

ಬ್ಯಾಂಕಾಕ್‌ನಲ್ಲಿ ಜೊತೆಯಾದ ಯುವತಿ
ಪುಣೆ ಮೂಲದ 51 ವರ್ಷದ ವಿಕೆ ಭಲೆರಾವ್ ಪತ್ನಿಗೆ ತಿಳಿಯದಂತೆ ಬ್ಯಾಂಕಾಕ್ ಪ್ರವಾಸ ಮಾಡಿದ್ದಾನೆ. 7ದಿನಗಳಿಗೂ ಹೆಚ್ಚು ಕಾಲ ಬ್ಯಾಂಕ್‌ಕಾಕ್‌ನಲ್ಲಿ ಕಾಲ ಕಳೆದಿದ್ದಾನೆ. ಮೂಲಗಳ ಪ್ರಕಾರ ಭಲೆರಾವ್‌ಗೆ ಬ್ಯಾಂಕಾಕ್‌ನಲ್ಲಿ ಯುವತಿಯೊಬ್ಬಳು ಜೊತೆಯಾಗಿದ್ದಳು ಅನ್ನೋದು ವರದಿಯಾಗಿದೆ. ಅದೇ ಏನೇ ಇರಲಿ, ಭಲೇರಾವ್ ಒಂದು ವಾರ ಬ್ಯಾಂಕಾಕ್‌ನಲ್ಲಿ ಕಾಲ ಕಳೆದಿದ್ದಾನೆ.

ಪಕ್ಕದ ಮನೆ ವ್ಯಕ್ತಿ ಜೊತೆ ಪತ್ನಿ ಮಂಚದಲ್ಲಿರುವಾಗ ಪತಿ ಎಂಟ್ರಿ, ಚಕ್ಕಂದ ಆಡಿದವನಿಗೆ ಇದೀಗ ಅದೇ ಇಲ್ಲ

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾದಿತ್ತು ಶಾಕ್
ಬ್ಯಾಂಕಾಕ್‌ನಿಂದ ನೇರವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಕೆ ಭಲೇರಾವ್‌ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರಣ ಈತನ ಪಾಸ್‌ಪೋರ್ಟ್. ವಿಕೆ ಭಲೆಬಾರ್ ಪಾಸ್‌ಪೋರ್ಟ್, ವೀಸಾ ಎಲ್ಲವೂ ಕಾನೂನು ಬದ್ಧವಾಗಿದೆ. ಆದರೆ ವಿಕೆ ಭಲೇರಾವ್ ತನ್ನ ಬ್ಯಾಂಕಾಕ್ ಟ್ರಿಪ್ ಪತ್ನಿಗೆ ತಿಳಿಯಬಾರದು, ಪತ್ನಿ ಪಾಸ್‌ಪೋರ್ಟ್ ನೋಡಿದರೆ ಬ್ಯಾಂಕಾಕ್ ಇಮಿಗ್ರೇಶನ್ ಅಧಿಕಾರಿಗಳ ಸಹಿ, ಸೀಲ್ ಕಾಣಿಸಬಾರದು. ಇದಕ್ಕಾಗಿ ಬ್ಯಾಂಕಾಕ್ ಇಮಿಗ್ರೇಶನ್ ಸಹಿ ಸೀಲ್ ಇದ್ದ ಪುಟಗಳನ್ನೇ ಹರಿದಿದ್ದಾನೆ. ತಾನು ಬ್ಯಾಂಕಾಕ್ ತೆರಳಿದ್ದೇನೆ ಅನ್ನೋದಕ್ಕೆ ಸುಲಭವಾಗಿ ಸಿಗುತ್ತಿದ ಪಾಸ್‌ಪೋರ್ಟ್ ಸಾಕ್ಷ್ಯವನ್ನೇ ಭಲೇರಾವ್ ಹರಿಯುವ ಮೂಲಕ ನಾಶ ಮಾಡಿದ್ದಾನೆ.

ಹಲವು ಪುಟಗಳು ಮಾಯ
ಮುಂಬೈ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ಪಾಸ್‌ಪೋರ್ಟ್ ಪರೀಶಿಲಿಸಿದಾಗ 17-18, 21-16 ಪುಟಗಳು ಮಾಯವಾಗಿತ್ತು. ಅನುಮಾನಗೊಂಡ ಅಧಿಕಾರಿಗಳು ವಿಕೆ ಭಲೇರಾವ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಒಂದಷ್ಟು ಕತೆ ಹೇಳಿದ ವಿಕೆ ಭಲೇ ರಾವ್, ಬಳಿಕ ಸತ್ಯ ಒಪ್ಪಿಕೊಂಡಿದ್ದಾನೆ. ಪುಟಗಳನ್ನು ತಾನು ಹರಿದಿರುವುದಾಗಿ ಹೇಳಿದ್ದಾನೆ. ಪತ್ನಿಗೆ ತನ್ನ ಬ್ಯಾಂಕಾಕ್ ಟ್ರಿಪ್ ಗೊತ್ತಾಗದಂತೆ ಮಾಡಲು ಹರಿದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ವಿಕೆ ಭಲೇರಾವ್‌ನ ಬಂಧಿಸಿದ್ದಾರೆ. 

ಪಾಸ್‌ಪೋರ್ಟ್ ಕಾಯ್ದಿ 1967
ಪಾಸ್‌ಪೋರ್ಟ್ ಕಾಯ್ದೆ 1967ರ ಪ್ರಕಾರ ಪಾಸ್‌ಪೋರ್ಟ್‌ನ್ನು ತಿದ್ದುವುದು,ಹರಿಯುವುದು, ಅಥವಾ ಉದ್ದೇಶಪೂರ್ವಕವಾಗಿ ವಿರೂಪಗೊಳಿಸುವುದು ಗಂಭೀರ ಅಪರಾಧವಾಗಿದೆ. ನಿಯಮ ಉಲ್ಲಂಘಿಸಿದರೆ 2 ವರ್ಷಗಳ ಕಾಲು ಜೈಲು ಶಿಕ್ಷೆ, 5000 ರೂಪಾಯಿ ದಂಡ ಅಥವಾ ಎರಡೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಪತ್ನಿಯ ನೆಚ್ಚಿನ ಕಾರ್ ಖರೀದಿಸಿ ಬಿಕ್ಕಿ ಬಿಕ್ಕಿ ಅತ್ತ ಪತಿ! ಗಂಡನೆಂದ್ರೆ ಹೀಗಿರಬೇಕೆಂದ ಲೇಡೀಸ್!