ಆ ಹೀರೋ ಎಲ್ಲರ ಮುಂದೆ ಆ ಪ್ರಶ್ನೆ ಕೇಳಿದಾಗ ತಲೆ ಎತ್ತೋಕಾಗದಷ್ಟು ಮುಜುಗರ ಆಯ್ತು: ಖ್ಯಾತ ನಟಿ

Synopsis
ಖ್ಯಾತ ನಟಿಯೋರ್ವರು ಸಿನಿಮಾ ಸೆಟ್‌ನಲ್ಲಿ ಹೀರೋನಿಂದ ಆದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಡ್ರಗ್ಸ್ ತಗೊಂಡ ಹೀರೋ ಅನುಚಿತವಾಗಿ ವರ್ತಿಸಿದ ಎಂದು ವಿನ್ಸಿ ಹೇಳಿದ್ದಾರೆ.
ಡ್ರಗ್ಸ್ ಬಳಕೆದಾರರ ಜೊತೆ ನಟಿಸಲ್ಲ ಅಂತ ಹೇಳಿದ್ದ ಖ್ಯಾತ ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ವಿಡಿಯೋ ವೈರಲ್ ಆಗಿತ್ತು. ಈಗ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ವಿನ್ಸಿ ಅವರು ಇದರ ಹಿಂದಿನ ಕಾರಣ ಏನು ಎಂದು ರಿವೀಲ್ ಮಾಡಿದ್ದಾರೆ. ಒಂದು ಸಿನಿಮಾ ಸೆಟ್‌ನಲ್ಲಿ ಹೀರೋ ಡ್ರಗ್ಸ್ ತಗೊಂಡು ಗಲಾಟೆ ಮಾಡ್ತಿದ್ರು ಅಂತ ವಿನ್ಸಿ ಹೇಳಿದ್ದಾರೆ.
ವಿನ್ಸಿ ವಿಡಿಯೋದಲ್ಲಿ ಹೇಳಿದ್ದೇನು?
“ಕಲವು ದಿನ ಹಿಂದೆ ನಾನು ಡ್ರಗ್ಸ್ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ಒಂದು ಹೇಳಿಕೆ ಕೊಟ್ಟಿದ್ದೆ. ನನಗೆ ಗೊತ್ತಿರೋ ಡ್ರಗ್ಸ್ ಬಳಕೆದಾರರ ಜೊತೆ ನಾನು ಸಿನಿಮಾ ಮಾಡಲ್ಲ ಅಂತ. ಅದು ಪತ್ರಿಕೆಗಳಲ್ಲಿ ಬಂತು. ಆ ವಿಷಯದ ಬಗ್ಗೆ ಕೆಲವು ಕಾಮೆಂಟ್‌ಗಳು ಬಂದಿದ್ದಕ್ಕೆ ನಾನು ಈ ವಿಷಯವನ್ನು ಮತ್ತೆ ಸ್ಪಷ್ಟಪಡಿಸಬೇಕು ಎನಿಸ್ತಿದೆ. ನಾನು ಒಂದು ಸಿನಿಮಾದಲ್ಲಿ ನಟಿಸುವಾಗ, ಆ ಸಿನಿಮಾದ ಹೀರೋ ಡ್ರಗ್ಸ್ ತಗೊಳ್ತಿದ್ದ. ಅವರು ನನ್ನನ್ನೂ, ಬೇರೆಯವರನ್ನೂ ತುಂಬ ಡಿಸ್ಟರ್ಬ್ ಮಾಡ್ತಿದ್ರು. ನಾನು ಡ್ರೆಸ್ ಸರಿ ಮಾಡ್ಕೊಳ್ಳೋಕೆ ಹೋಗುವಾಗ, ಜೊತೆಗೆ ಬರಬೇಕಾ ಅಂತ ಕೇಳ್ತಿದ್ರು. ಒಂದು ಸೀನ್ ಮಾಡುವಾಗ ಮೇಜಿನ ಮೇಲೆ ಬಿಳಿ ಪೌಡರ್ ಉಗುಳಿದ್ರು” ಎಂದು ವಿನ್ಸಿ ಹೇಳಿದ್ದಾರೆ.
ನಟಿಯನ್ನು ಮಂಚಕ್ಕೆ ಕರೆದ ನಿರ್ದೇಶಕ; ಭಯದಿಂದ ನಿದ್ರೆ ಮಾತ್ರೆ ಸೇವಿಸಿದ ಸ್ಟಾರ್ ನಟಿ!
ಕ್ಷಮೆ ಕೇಳಿದ್ರು!
“ಸಿನಿಮಾ ಸೆಟ್‌ನಲ್ಲಿ ಡ್ರಗ್ಸ್ ತಗೊಳ್ಳೋದು ಕ್ಲಿಯರ್ ಆಗಿತ್ತು. ಪರ್ಸನಲ್ ಲೈಫ್‌ನಲ್ಲಿ ತಗೊಳ್ಳೋದೋ ಬೇಡವೋ ಅನ್ನೋದು ಅವರ ವಿಷಯ. ಆದ್ರೆ ಸೆಟ್‌ನಲ್ಲಿ ತಗೊಂಡು ಬೇರೆಯವರಿಗೆ ತೊಂದರೆ ಕೊಡೋದು ಸರಿಯಲ್ಲ. ಅದಕ್ಕೆ ಅಂಥವರ ಜೊತೆ ನಟಿಸಲ್ಲ ಅಂತ ತೀರ್ಮಾನ ಮಾಡಿದೆ. ಆ ಸೆಟ್‌ನಲ್ಲಿ ಹೀಗೆ ಆಗ್ತಿದೆ ಅಂತ ಎಲ್ಲರಿಗೂ ಗೊತ್ತು. ಡೈರೆಕ್ಟರ್ ಆ ನಟನ ಜೊತೆ ಮಾತಾಡಿದ್ರು. ಅವರು ಹೀರೋ ಆಗಿದ್ದರಿಂದ ಸಿನಿಮಾ ಫಿನಿಶ್ ಮಾಡೋಕೆ ಎಲ್ಲರೂ ಕಷ್ಟಪಡ್ತಿದ್ರು. ನನ್ನ ಹತ್ರ ಕ್ಷಮೆ ಕೂಡ ಕೇಳಿದ್ರು. ಅದು ಒಳ್ಳೆ ಸಿನಿಮಾ. ಆದ್ರೆ ಆ ವ್ಯಕ್ತಿಯಿಂದ ಆದ ಅನುಭವ ಚೆನ್ನಾಗಿರಲಿಲ್ಲ. ಅದಕ್ಕೆ ಈ ಹೇಳಿಕೆ ಕೊಟ್ಟೆ” ಎಂದು ವಿನ್ಸಿ ಹೇಳಿದ್ದಾರೆ.
“ಕಮೆಂಟ್ ಬಾಕ್ಸ್‌ನಲ್ಲಿ ನನ್ನನ್ನ ಸಪೋರ್ಟ್ ಮಾಡಿದವರಿಗೆ ಥ್ಯಾಂಕ್ಸ್. ಆದ್ರೆ ಸಿನಿಮಾ ಸಿಗದ್ದಕ್ಕೆ ಹೀಗೆ ಹೇಳ್ತಿದ್ದೀಯಾ, ನಿನಗೆ ಸಿನಿಮಾ ಇಲ್ವಾ ಅಂತ ಹೇಳೋರಿಗೆ ಒಂದೇ ಮಾತು. ನನಗೆ ಸಿನಿಮಾ ಇಲ್ಲ ಅಂದ್ರೆ ಇಲ್ಲ ಅಂತ ಹೇಳ್ತೀನಿ. ಮೊದಲು ಇಂಟರ್‌ವ್ಯೂನಲ್ಲಿ ಹೇಳಿದ್ದೀನಿ. ನಟನೆ, ಸಿನಿಮಾ ಇಷ್ಟ. ಆದ್ರೆ ಸಿನಿಮಾ ಲೈಫ್‌ನ ಒಂದು ಭಾಗ ಅಷ್ಟೇ” ಎಂದು ವಿನ್ಸಿ ಹೇಳಿದ್ದಾರೆ.
ಕಾಮೆಂಟ್ ಮಾಡೋರಿಗೆ ಬುದ್ಧಿ ಇರಬೇಕು!
“ಸೂಪರ್‌ಸ್ಟಾರ್ ಆಗಿರಲಿ, ಸಾಮಾನ್ಯರಾಗಿರಲಿ, ಒಂದು ನಿಲುವು ತಗೊಂಡ್ರೆ ಅದು ನಿಲುವೇ. ಆ ತಿಳುವಳಿಕೆ ಕಮೆಂಟ್ ಮಾಡೋರಿಗೆ ಇರಬೇಕು. ನನಗೆ ವಿರುದ್ಧ ಕಮೆಂಟ್ ಮಾಡುವಾಗ ನೀವು ಪರೋಕ್ಷವಾಗಿ ಡ್ರಗ್ಸ್ ಬಳಕೆಗೆ ಸಪೋರ್ಟ್ ಮಾಡ್ತಿದ್ದೀರಾ. ಇವರಿಗೆ ಇನ್ನೂ ಸಿನಿಮಾ ಇದೆ. ಇವರನ್ನ ಇಟ್ಕೊಂಡು ಸಿನಿಮಾ ಮಾಡೋರಿದ್ದಾರೆ. ಇವರಿಗೆ ಇದೆಲ್ಲಾ ಮಜಾ. ನನ್ನ ಲೈಫ್‌ನಲ್ಲಿ ಮನಸ್ಸಿಗೂ, ಆರೋಗ್ಯಕ್ಕೂ ತೊಂದರೆ ಕೊಡೋ ಯಾವ ಡ್ರಗ್ಸ್ ಇರಲ್ಲ” ಅಂತ ವಿನ್ಸಿ ಹೇಳಿದ್ದಾರೆ.
ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಬಗ್ಗೆ ಬಾಯ್ಬಿಟ್ಟ ನಟಿ ವಿನ್ಸಿ ಆಲೋಷಿಯಸ್‌ಗೆ ನಟಿ ಶ್ರುತಿ ರಜನಿಕಾಂತ್ ಬೆಂಬಲ ಸೂಚಿಸಿದ್ದಾರೆ. ಡ್ರಗ್ಸ್ ಬಳಸುವವರ ಜೊತೆ ನಟಿಸಲ್ಲ ಅಂದಿದ್ದಕ್ಕೆ ವಿನ್ಸಿಗೆ ಆನ್‌ಲೈನ್‌ನಲ್ಲಿ ಟ್ರೋಲ್ ಮಾಡಿದ್ದನ್ನ ಶ್ರುತಿ ಖಂಡಿಸಿದ್ದಾರೆ. “ವಿನ್ಸಿ ತುಂಬಾ ಟ್ಯಾಲೆಂಟೆಡ್ ನಟಿ, ನಾನು ಅವರ ಫ್ಯಾನ್. ಸಿನಿಮಾದಲ್ಲಿ ವಿನ್ಸಿಗೆ ಚಾನ್ಸ್ ಸಿಗ್ತಿಲ್ಲ ಅಂದ್ರೆ ಅದ್ಯಾಕೆ ಅಂತ ಜನ ಯೋಚ್ನೆ ಮಾಡಬೇಕು ಅಂತ ಶ್ರುತಿ ಹೇಳಿದ್ದಾರೆ. ವಿನ್ಸಿಗೆ ಆದಂಥ ಅನುಭವ ನನಗೂ ಆಗಿದೆ” ಅಂತ ಶ್ರುತಿ ಹೇಳಿದ್ದಾರೆ.
ನಟಿಯನ್ನು ಮಂಚಕ್ಕೆ ಕರೆದ ನಿರ್ದೇಶಕ; ಭಯದಿಂದ ನಿದ್ರೆ ಮಾತ್ರೆ ಸೇವಿಸಿದ ಸ್ಟಾರ್ ನಟಿ!
“ಡ್ರಗ್ಸ್ ಬಳಕೆ ಅನ್ನೋದು ವೈಯಕ್ತಿಕ ವಿಷಯ ಆಗಿರಬಹುದು, ಆದ್ರೆ ಪಬ್ಲಿಕ್‌ನಲ್ಲಿ ಇದು ಸರಿಯಲ್ಲ ಅಂತ ಶ್ರುತಿ ಹೇಳಿದ್ದಾರೆ. ಸಿನಿಮಾದಲ್ಲಿ ದೊಡ್ಡ ಪೊಸಿಷನ್‌ನಲ್ಲಿ ಇರೋ ಒಬ್ಬ ನಟ ನನ್ನ ಜೊತೆ ಚೆನ್ನಾಗಿ ನಡ್ಕೊಂಡಿಲ್ಲ, ನಾನು ಆ ಸೆಟ್‌ನಿಂದ ಹೊರಬಂದೆ” ಅಂತ ಶ್ರುತಿ ಹೇಳಿದ್ದಾರೆ. “ಮೊದಲು ಎಲ್ಲಾ ಸಿನಿಮಾ ನೋಡ್ತಿದ್ದೆ, ಈಗ ಕೆಲವರ ಸಿನಿಮಾ ನೋಡಲ್ಲ. ಅದಕ್ಕೆ ಕಾರಣಗಳಿವೆ. ಕೆಲವು ದೂರದಿಂದ ನೋಡೋಕೆ ಚೆಂದ. ಹತ್ತಿರ ಬಂದ್ರೆ ಅದರ ತಪ್ಪುಗಳು ಗೊತ್ತಾಗುತ್ತೆ. ವಿನ್ಸಿ ವಿಡಿಯೋದ ಕೆಳಗೆ ಜನ ಕಮೆಂಟ್ ಮಾಡ್ತಿದ್ದಾರೆ, ಹೀಗೆ ಜನ ಮುಂದೆ ಬರಬೇಕು ಅಂತ. ಒಬ್ಬರು ಬಂದ್ರೆ ಸಾಲದು, ಎಲ್ಲರೂ ಬರಬೇಕು. ಕೆಲವು ಆರ್ಟಿಸ್ಟ್‌ಗಳನ್ನ ನೋಡಲ್ಲ ಅಂದ್ರೆ ಅದಕ್ಕೆ ಕಾರಣಗಳಿವೆ. ಮಿನುಗುವುದೆಲ್ಲಾ ಚಿನ್ನ ಅಲ್ಲ ಅನ್ನೋ ಹಾಗೆ ಇದೆ” ಅಂತ ಶ್ರುತಿ ಹೇಳಿದ್ದಾರೆ.