ಸಿಎಂ ಸಚಿವಾಲಯದ ೩೩ ಗುತ್ತಿಗೆ ನೇಮಕಗಳಲ್ಲಿ ೨೯ ಮಂದಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಮೈಸೂರಿನವರು. ಉಳಿದ ೩೦ ಜಿಲ್ಲೆಗಳಿಂದ ಕೇವಲ ನಾಲ್ವರು ಮಾತ್ರ ಆಯ್ಕೆಯಾಗಿದ್ದಾರೆ. ಸ್ವಜನಪಕ್ಷಪಾತದ ಈ ನಡೆಗೆ ಟೀಕೆ ವ್ಯಕ್ತವಾಗಿದ್ದು, ಸಮಾನತೆಯ ಪರ ಮಾತನಾಡುವ ಸಿದ್ದರಾಮಯ್ಯನವರ ದ್ವಂದ್ವ ನೀತಿಯೆಂದು ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.
ಬೆಂಗಳೂರು (ಏ.16): ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುವುದಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವುದಕ್ಕೆ ನೇಮಕಗೊಂಡ 33 ಸಿಬ್ಬಂದಿಯ ಪೈಕಿ 29 ಮಂದಿ ಮೈಸೂರು ಜಿಲ್ಲೆಯವರಾಗಿದ್ದಾರೆ. ಉಳಿದ ನಾಲ್ವರು ಮಾತ್ರ ಬಾಕಿ 30 ಜಿಲ್ಲೆಗಳನ್ನು ಪ್ರತಿನಿಧಿಸುವವರಾಗಿದ್ದಾರೆ.
ಹೌದು ರಾಜ್ಯ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದವರು ಹೇಗೆ ತಮ್ಮ ಅಧಿಕಾರವನ್ನು ಬಳಸಿಕೊಂಡು ಸ್ವಕ್ಷೇತ್ರದವರಿಗೆ ಅನುಕೂಲ ಮಾಡಿಕೊಟ್ಟು, ಉಳಿದ ಜಿಲ್ಲೆಗಳ ಜನರನ್ನು ಹತ್ತಿಕ್ಕುತ್ತಾರೆ ಎಂಬುದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರನ್ನೇ ನೋಡಿ ಕಲಿತುಕೊಳ್ಳಬೇಕು. ಈವರೆಗೆ ಯಾವ ಸಿಎಂ ಕೂಡ ಇಂತಹ ಕೆಲಸ ಮಾಡಿರಬಾರದು, ಮುಂದಿನ ದಿನಗಳಲ್ಲಿ ಸಿಎಂ ಆಗುವವರು ಕೂಡ ನಾಚಿಕೆ ಪಟ್ಟುಕೊಂಡು ಇಂತಹ ಕೆಲಸ ಮಾಡುವುದಕ್ಕೆ ಆಗಬಾರದು ಅಂತಹ ಕೆಲಸವನ್ನು ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದ ಭಾಗದ ಕಲಬುರಗಿಯಲ್ಲಿ ಉದ್ಯೋಗ ಮೇಳ ಏರ್ಪಡಿಸಿ ಖಾಸಗಿ ಕಂಪನಿಗಳಲ್ಲಿ ಸೇಲ್ಸ್ ಮ್ಯಾನ್, ಲಿಂಕ್ ವರ್ಕರ್, ಸೇಲ್ಸ್ ಏಜೆಂಟ್, ಫೈನಾನ್ಸ್ ಕಂಪನಿಗಳು ಸೇರಿ ಇತರೆ ಹಣ ವಸೂಲಿ ಮಾಡುವ ಏಜೆಂಟ್ ಕೆಲಸಕ್ಕೆ ಕಳುಹಿಸುತ್ತಾರೆ. ಇಲ್ಲಿ ಕೊಡುವ ಸಂಬಳ 20 ರಿಂದ 30 ಸಾವಿರ ರೂ. ದಾಟುವುದಿಲ್ಲ. ಆದರೆ, ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತಮ್ಮ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜನರಿಗೆ ಮಾತ್ರ ಸರ್ಕಾರದಲ್ಲಿ ಗುತ್ತಿಗೆ ನೌಕರಿಯನ್ನು ಕೊಡಿಸಿದ್ದಾರೆ. ಇವರೆಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದರೂ ಇವರಿಗೆ ಸಿ ಗ್ರೂಪ್ ಸಹಾಯಕ ಹುದ್ದೆಗೆ 49 ಸಾವಿರ ರೂ. ವೇತನ, ಗ್ರೂಪ್ ಸಿ ಕಿರಿಯ ಸಹಾಯಕ ಹುದ್ದೆಗೆ 34,100 ರೂ. ಹಾಗೂ ಡಿ ಗ್ರೂಪ್ ಹುದ್ದೆಗೆ 27 ಸಾವಿರ ರೂ. ಸಂಬಳವನ್ನು ಕೊಡಲಾಗುತ್ತದೆ.
ಇದನ್ನೂ ಓದಿ: UPSC 2 ವರ್ಷ ತಯಾರಿಗೆ 100 ಪೆನ್ನುಗಳು- ಟೆಕ್ಕಿ ಆದಿತಿಯ ಕಥೆ ವೈರಲ್
ಸಿಎಂ ಸಚಿವಾಲಯದಲ್ಲಿ ಕೆಲಸ ಮಾಡುವುದಕ್ಕೆ ಮೈಸೂರು ಜಿಲ್ಲೆಯ ಜನರನ್ನು ಬಿಟ್ಟರೆ ಬೇರೆ 30 ಜಿಲ್ಲೆಗಳ ಜನರು ಅರ್ಹತೆಯನ್ನೇ ಪಡೆದಿಲ್ಲವೇ ಎಂಬ ಅನುಮಾನಗಳು ಕೂಡ ಎದುರಾಗುತ್ತಿವೆ. ನಾನು ಅಹಿಂದ ಎಂದು ಸಮಾನತೆ ಹರಿಕಾರರಂತೆ ಬಿಂಬಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಹೊರತುಪಡಿಸಿ, ಉಳಿದ ಜಿಲ್ಲೆಗಳ ಜನರನ್ನು ಹೇಗೆ ಹಿಂದಕ್ಕೆ ತಳ್ಳುತ್ತಾರೆ ಎಂಬುದನ್ನು ಇದನ್ನು ನೋಡಿಯೇ ಇತರರು ಕಲಿತುಕೊಳ್ಳಬೇಕು. ಈಗಾಗಲೇ ಮೈಸೂರಿನಲ್ಲಿ ಮುಡಾ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪದಲ್ಲಿ ಕೋರ್ಟ್‌ಗೆ ಅಲೆದಾಡುತ್ತಿದ್ದರೂ, ಸ್ವಾರ್ಥ ಎಂಬುದು ಇನ್ನೂ ಬಿಟ್ಟು ಹೋಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಂ ಸಚಿವಾಲಯಕ್ಕೆ ನೇಮಕವಾದ 33 ಸಿಬ್ಬಂದಿಯಲ್ಲಿ 29 ಮಂದಿ ಮೈಸೂರು, ಟಿ.ನರಸಿಪುರ, ನಂಜನಗೂಡು ತಾಲೂಕಿನ ಜನರಾಗಿದ್ದಾರೆ. ಅಂದರೆ, ವರುಣಾ ಕ್ಷೇತ್ರದ ಸುತ್ತಮುತ್ತಲಿನ 29 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ಸಿಎಂ ಸಚಿವಾಲಯಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಇತರ 30 ಜಿಲ್ಲೆಗಳ ಪೈಕಿ ಬೆಂಗಳೂರಿನ 3 ಹಾಗೂ ಹಾವೇರಿ ಜಿಲ್ಲೆಯ ಒಬ್ಬರನ್ನು ಗುತ್ತಿಗೆ ಕೆಲಸಕ್ಕೆ ನೇಮಕ ಮಾಡಲಾಗಿದೆ. ಇದೇನು ಸರ್ಕಾರಿ ಸೇವೆಯೋ ಅಥವಾ ಪಕ್ಷಕ್ಕಾಗಿ ದುಡಿದವರಿಗೆ ನೀಡುವ ಭಕ್ಷೀಸೋ ಒಂದೂ ತಿಳಿಯುತ್ತಿಲ್ಲ.
ಇದನ್ನೂ ಓದಿ: ಬಿಬಿಎಂಪಿ ಹವಾಮಾನ ಕ್ರಿಯಾಕೋಶ ಫೆಲೋಶಿಪ್‌ಗೆ ಅರ್ಜಿ ಆಹ್ವಾನ!
ಆದೇಶದಲ್ಲಿ ಏನಿದೆ?
ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿನ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆದುರಾಗಿ ಸಿಬ್ಬಂದಿಗಳನ್ನು ನೇಮಿಸುವಂತೆ ಸಿಎಂ ಉಪ ಕಾರ್ಯದರ್ಶಿ (ಆಡಳಿತ) ಟಿಪ್ಪಣಿಗಳಲ್ಲಿ ಕೋರಲಾಗಿದ್ದು, ಸರ್ಕಾರದ ಆದೇಶದಗಳನ್ವಯ ಮಂಜೂರಾಗಿರುವ 200 ಗ್ರೂಪ್-ಸಿ ಹಾಗೂ 71 ಗ್ರೂಪ್-ಡಿ ಹುದ್ದೆಗಳ ಪೈಕಿ ಖಾಲಿಯಿರುವ ಹುದ್ದೆಗಳಿಗೆದುರಾಗಿ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಸರ್ಕಾರವು ತೀರ್ಮಾನಿಸಿ ಆದೇಶಿಸಲಾಗಿದೆ.
ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆದುರಾಗಿ ನಿಗದಿಪಡಿಸಿರುವ ಹುದ್ದೆ ಮತ್ತು ಸಂಚಿತ ವೇತನದಲ್ಲಿ ಏ.16ರಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ, 1977ರ ನಿಯಮ 15(1)(ಬಿ) (iii)ರ ಪ್ರಕಾರ, ಗುತ್ತಿಗೆ ಆಧಾರದ ಮೇಲೆ 02 ತಿಂಗಳ ಒಳಗಾಗಿ ಸದರಿಯವರು ಶೈಕ್ಷಣಿಕ ದಾಖಲೆಗಳು / ಅಂಕಪಟ್ಟಿಗಳ ನೈಜತೆಯ ಬಗ್ಗೆ ಸಂಬಂಧಪಟ್ಟ ಮಂಡಳಿ, ವಿಶ್ವವಿದ್ಯಾಲಯದ ದೃಢೀಕರಣ ಪ್ರಮಾಣ ಪತ್ರವನ್ನು ಸಲ್ಲಿಸುವ ಷರತ್ತಿಗೆ ಒಳಪಟ್ಟು, ಇದರೊಂದಿಗಿರುವ ಗುತ್ತಿಗೆ ನೇಮಕಾತಿಯ ಷರತ್ತು ಮತ್ತು ನಿಬಂಧನೆಗಳನ್ವಯ ಮಾನ್ಯ ಮುಖ್ಯಮಂತ್ರಿಯವರ ಪದಾವಧಿಯವರಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.
ಆದೇಶ ಪ್ರತಿ:
