ಐದು ವರ್ಷದ ಮಗು ಪದೇ ಪದೆ ನೆಗಡಿ ಸಮಸ್ಯೆ ಎದುರಿಸುತ್ತಿತ್ತು. ಪೋಷಕರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯ ಕೊಟ್ಟ ಚಿಕಿತ್ಸೆ ಮಾತ್ರ ಇಂಡಿಯನ್ ಜುಗಾಡ್‌ನ್ನೇ ಮೀರಿಸುವಂತಿದೆ. ಈ ವೈದ್ಯನ ಚಿಕಿತ್ಸೆ ವಿಡಿಯೋ ನೋಡಿ ಹಲವರು ಶಾಕ್ ಆಗಿದ್ದಾರೆ. 

ಲಖನೌ(ಏ.16) ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು ಸಾಮಾನ್ಯ. ಹಾಗಂತ ನಿರ್ಲಕ್ಷಿಸುವುದು ಸರಿಯಲ್ಲ. ಸೂಕ್ತ ಚಿಕಿತ್ಸೆ ಕೊಡಿಸಬೇಕು. ಹೀಗೆ ಎಷ್ಟು ದಿನ ಆದರೂ 5 ವರ್ಷ ಬಾಲಕನ ಶೀತ ಕಡಿಮೆಯಾಗುತ್ತಿಲ್ಲ ಎಂದು ಪೋಷಕರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರ ಬಳಿಕ ಮಗನ ನಗೆಡಿ ಪದೇ ಪದೆ ಮರುಕಳಿಸುತ್ತಿದೆ. ಎದೆಯಲ್ಲಿ ಕಫ ಇದೆ. ಸೂಕ್ತ ಔಷಧ ನೀಡುವಂತೆ ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ಬಾರಿ ವೈದ್ಯರು ಔಷಧಿಗಳ ಜೊತೆ ಬಿಸಿ ನೀರು ಕುಡಿಯಿರಿ ಸೇರಿದಂತೆ ಕೆಲ ಮನೆಯಲ್ಲಿ ಸಿಗುವ ಶುಂಠಿ ಸೇರಿದಂತೆ ಇತರ ಔಷಧಿಯುಕ್ತ ಆಹಾರ ಸೇವನೆಗೂ ಸೂಚಿಸುತ್ತಾರೆ. ಆದರೆ ಈ ಸರ್ಕಾರಿ ವೈದ್ಯನ ಸ್ಟೈಲ್ ಡಿಫ್ರೆಂಟ್. ಈತ ಇಂಡಿಯನ್ ಜುಗಾಡ್‌ಗೆ ಫಾದರ್. ಕಾರಣ ನೇರವಾಗಿ 5 ವರ್ಷದ ಬಾಲಕನ ತುಟಿಗೆ ಸಿಗರೇಟು ಕೊಟ್ಟು ಫುಲ್ ಎಳೆಯಲು ಹೇಳಿದ್ದಾನೆ. 5 ವರ್ಷದ ಬಾಲಕನಿಗೆ ಸಿಗರೇಟ್ ಹಚ್ಚಿಕೊಟ್ಟಿದ್ದಾನೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.

ಶೀತ-ನೆಗಡಿಗೆ ಸಿಗರೇಟು ಮದ್ದು ಕೊಟ್ಟ ವೈದ್ಯ
ಉತ್ತರ ಪ್ರದೇಶಧ ಜಲೌನ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಆಸ್ಪತ್ರೆಯ ವೈದ್ಯ ಸುರೇಶ್ ಚಂದ್ರ. ಹಳ್ಳಿ ಕಟ್ಟೆ ಮೇಲೆ ಕುಳಿತು ಹಲವರು ನೀಡುವ ಔಷಧಿ ಸಲಹೆಗಳೇ ಈ ಸುರೇಶ್ ಚಂದ್ರನ ಟ್ರೀಟ್‌ಮೆಂಟ್. ಪೋಷಕರು ಮಗುವಿನ ಶೀತ-ನೆಗಡಿ ಒಮ್ಮೆ ಕಡಿಮೆಯಾಗಲಿ. ಪ್ರತಿ ಬಾರಿ ಮಾತ್ರೆ, ಔಷಧಿ ಸೇವಿಸುವಂತಾಗಬಾರದು ಅನ್ನೋದು ಉದ್ದೇಶ. ಹೀಗಾಗಿ ವೈದ್ಯರ ಬಳಿ ಕರೆತಂದಿದ್ದಾರೆ. ತಪಾಸಣೆ ಮಾಡಬೇಕಿದ್ದ ಈ ವೈದ್ಯ ಸುರೇಶ್ ಚಂದ್ರ ಪವಾಡ ಸೃಷ್ಟಿಸಲು ಹೋಗಿದ್ದಾನೆ. ಜೇಬಿನಿಂದ ಸಿಗರೇಟು, ಲೈಟರ್ ತೆಗೆದು 5 ವರ್ಷದ ಬಾಲಕನಿಗೆ ನೀಡಿದ್ದಾನೆ. ಹೀಗೆ ಎಳೆಯಬೇಕು ಅನ್ನೋದು ಹೇಳಿಕೊಟ್ಟಿದ್ದಾನೆ.

ಚಾಕು, ಕಾಂಡೋಮ್‌: ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಸಿಕ್ಕ ವಸ್ತುಗಳ ನೋಡಿ ಶಿಕ್ಷಕರೇ ಶಾಕ್

ಕಫ ಕರಗಿ ಹೋಗಲಿದೆ ಎಂದ ವೈದ್ಯ
ಇಷ್ಟಕ್ಕೇ ಸುರೇಶ್ ಚಂದ್ರನ ಲೀಲೆ ಮುಗಿದಿಲ್ಲ. ಮಗುವಿನ ಬಾಯಿಗೆ ಸಿಗರೇಟು ಇಟ್ಟು, ಲೈಟರ್ ಮೂಲಕ ಹಚ್ಚಿಕೊಟ್ಟಿದ್ದಾನೆ. ಬಳಿಕ ಸುದೀರ್ಘವಾಗಿ ಸಿಗರೇಟು ಎಳೆಯುವಂತೆ ಸೂಚಿಸಿದ್ದಾರೆ. 5 ವರ್ಷದ ಬಾಲಕನಿಗೆ ಸಿಗರೇಟು ಎಳೆಯಲು ಆಗದೇ ಇತ್ತ ಬಿಡಲು ಆಗದೆ ಒಂದಷ್ಟು ಪ್ರಯತ್ನ ಮಾಡಿದೆ. ಇದರ ಜೊತೆಗ ಈ ಸುರೇಶ್ ಚಂದ್ರ ಮಾರ್ಗದರ್ಶನವನ್ನು ನೀಡಿದ್ದಾನೆ. ಹೀಗೆ ಸಿಗರೇಟು ಎಳೆಯುವುದರಿಂದ ಎದೆ ಬೆಚ್ಚಗಾಗಲಿದೆ. ಕಫ ಕರಗಿ ಹೋಗಲಿದೆ. ಶೀತ ಮಾಯವಾಗಲಿದೆ ಎಂದಿದ್ದಾನೆ. 

Scroll to load tweet…

ತನಿಖೆಗೆ ಆದೇಶ
ಮಗುವಿನ ಶೀತ -ನಗಡಿ ಸರಿಪಡಿಸಲು ವೈದ್ಯ ಸಿಗರೇಟು ನೀಡಿದ ಘಟನೆಯನ್ನು ಮೊಬೈಲ್ ಮೂಲಕ ಸೆರೆ ಹಿಡಿಯಲಾಗಿದೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಆಕ್ರೋಶಗಳು ಹೆಚ್ಚಾಗ ತೊಡಗಿದೆ. ಈ ವಿಡಿಯೋ ಜಿಲ್ಲೆಯ ವೈದ್ಯಕೀಯ ಅಧಿಕಾರಿಗಿಗೂ ತಲುಪಿದೆ. ಈ ವಿಡಿಯೋ ನೋಡಿ ಅಧಿಕಾರಿಯೂ ದಂಗಾಗಿದ್ದಾರೆ. ತಕ್ಷಣವೇ ವೈದ್ಯ ಸುರೇಶ್ ಚಂದ್ರ ಅವರನ್ನು ಬೇರೇಡೆಗೆ ವರ್ಗಾವಣೆ ಮಾಡಿದ್ದಾರೆ. ಇದೀಗ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ. 

ಪ್ರಕರಣನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದೀಗ ಸುರೇಶ್ ಚಂದ್ರ ಇದೇ ರೀತಿ ಅದೆಷ್ಟು ಮಂದಿಗೆ ಸಿಗರೇಟು ಚಟ ಹಿಡಿಸಿದ್ದಾನೆ ಅನ್ನೋ ಆತಂಕ ಶುರುವಾಗಿದೆ. ಪ್ರಕರಣದ ಕುರಿತು ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ. ಇದು ಗಂಭೀರ ಪ್ರಕರಣವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ವೈದ್ಯಾದಿಕಾರಿ ನರೇಂದ್ರ ದೇವ್ ಶರ್ಮಾ ಹೇಳಿದ್ದಾರೆ. ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಕಾರಿನಲ್ಲಿ ಸಿಗರೇಟ್ ಸೇದಿದರೆ ದಂಡ ಬೀಳುತ್ತಾ? 2025ರ ಹೊಸ ಸಂಚಾರಿ ನಿಯಮಗಳ ಪ್ರಕಾರ ದಂಡ, ಶಿಕ್ಷೆಯ ವಿವರ..!