ಮಗು ಮಾಡಿಕೊಳ್ಳಿ ಎಂದು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟ ಕಂಪೆನಿ ಇದು! ಈ ತಿಂಗಳಿನಿಂದಲೇ ಅನ್ವಯ!

Synopsis
ವಾರದಲ್ಲಿ ಎಷ್ಟೋ ಜನರು ಎರಡು ವೀಕ್‌ಆಫ್ ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಲ್ಲೊಂದು ಕಂಪೆನಿಯು ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟಿದೆ.
ಜಗತ್ತಿನಲ್ಲಿರುವ ಎಲ್ಲ ಉದ್ಯೋಗಿಗಳಿಗೂ ಕೂಡ, ವಾರದಲ್ಲಿ ಮೂರು ದಿನ ವೀಕ್‌ಆಫ್ ಸಿಗೋದು ನಿಜಕ್ಕೂ ಒಂದು ರೀತಿಯ ಕನಸಿದ್ದಂತೆ. ಈಗ ಜಪಾನ್‌ಮಾತ್ರ ವಾರದಲ್ಲಿ 3 ದಿನ ವೀಕ್‌ಆಫ್‌ಕೊಡಲು ನಿರ್ಧಾರ ಮಾಡಿದೆ. ಕೊರೊನಾ ನಂತರದಲ್ಲಿ ವರ್ಕ್‌ಕಲ್ಚರ್‌ತುಂಬ ಬದಲಾಗುತ್ತಿದೆ. ಕೆಲವು ಕಂಪೆನಿಗಳು ಶಾಶ್ವತ ವರ್ಕ್‌ಫ್ರಂ ಹೋಮ್‌ಕೊಟ್ಟರೆ, ಇನ್ನೂ ಕೆಲವು ಕಂಪೆನಿಗಳು ವಾರದಲ್ಲಿ ಮೂರು ದಿನ ವರ್ಕ್‌ಫ್ರಂ ಹೋಮ್, ಇನ್ನು ಎರಡು ದಿನ ಕೆಲಸ ಎಂದು ಹೇಳಿದೆ. ಆದರೆ ಎಷ್ಟೋ ಕಂಪೆನಿಗಳು, ಕೆಲಸ ಮಾಡುವವರು ನಿಜಕ್ಕೂ ಆರೋಗ್ಯಕರ ಕೆಲಸ ಹೇಗಿರಬೇಕು ಎಂದು ಆಲೋಚಿಸಬೇಕಿದೆ.
ಕೆಲಸದಲ್ಲಿ ತೃಪ್ತಿ ಸಿಗುತ್ತದೆ!
100-80-100 ಆಧಾರದಲ್ಲಿ ಈ ಕೆಲಸ ನಡೆಯವುದು. ಅಂದರೆ ಇಲ್ಲಿ ಕೆಲಸಗಾರರು 100% ಸಂಬಳ ಪಡೆಯುತ್ತಾರೆ, 80% ಟೈಮ್‌ನಲ್ಲಿ 100% ಪ್ರಯತ್ನ ಹಾಕಿ ಮಾಡುತ್ತಾರೆ. ಇದನ್ನು 4 day week global ಎನ್ನಲಾಗುತ್ತಿದೆ. 2023ರಲ್ಲಿ ಈ ಬಗ್ಗೆ ಜರ್ಮನಿಯಲ್ಲಿ ಒಂದು ಅಭಿಯಾನ ಸೃಷ್ಟಿಯಾಗಿತ್ತು. ಸ್ಪೇನ್ ಪೋರ್ಚುಗಲ್ ಅಮೆರಿಕದಲ್ಲಿ ಇದೆಲ್ಲವೂ ಯಶಸ್ಸು ಪಡೆದಿದೆ. ಐಸ್‌ಲ್ಯಾಂಡ್, ಡೆನ್ಮಾರ್ಕ್ಮ ನೆದರ್‌ಲ್ಯಾಂಡ್ ಮುಂತಾದ ದೇಶಗಳು ಇದನ್ನು ಫಾಲೋ ಮಾಡಲು ನಿರ್ಧಾರ ಮಾಡಿವೆ. ಇದರಿಂದ ಮಾನಸಿಕ ಆರೋಗ್ಯ ಚೆನ್ನಾಗಿ ಆಗುತ್ತದೆ, ಇನ್ನು ಕೆಲಸದಲ್ಲಿಯೂ ತೃಪ್ತಿ ಸಿಗುವುದು. ಅಷ್ಟೇ ಅಲ್ಲದೆ ಕೆಲಸ ಜಾಸ್ತಿ ಆಗುವುದು.
ನಾಯಿ ಬಟ್ಟೆ ಖರೀದಿಗೆ ಜಪಾನ್, ಕೊರಿಯಾಕ್ಕೆ ಹೋಗ್ತಾಳೆ ಮಹಿಳೆ : ಉಡುಪು ಇಡಲು 24 ದಶಲಕ್ಷ ಬೆಲೆಯ ಕಪಾಟು
ಮಕ್ಕಳ ಆರೈಕೆ ಮಾಡಲು..!
ಜಪಾನ್‌ನಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬಿಕ್ಕಟ್ಟಿನಿಂದಾಗಿ, ಟೋಕಿಯೊ ನಗರವು ಸರ್ಕಾರಿ ಉದ್ಯೋಗಿಗಳಿಗೆ ನಾಲ್ಕು ದಿನಗಳ ಕೆಲಸದ ವಾರವನ್ನು ಪರಿಚಯಿಸಿದೆ, ಇದು ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ. ಇದರಿಂದ ಲೈಫ್ ಬ್ಯಾಲೆನ್ಸ್ ಆಗುವುದು, ದೇಶದಲ್ಲಿ ಕ್ಷೀಣಿಸುತ್ತಿರುವ ಜನನ ಪ್ರಮಾಣವನ್ನು ಪರಿಹರಿಸಲು ಈ ಕ್ರಮ ಕೈಗೊಂಡಿದೆ. ಹೊಸದಾಗಿ ಬಂದಿರೋ ಶಿಶುಪಾಲನಾ ಭಾಗಶಃ ರಜೆ ನೀತಿಯಿಂದಾಗಿ ಕೆಲಸ ಮಾಡುವ ಪೋಷಕರು ತಮ್ಮ ಕೆಲಸದ ದಿನದಲ್ಲಿ ಎರಡು ಗಂಟೆಗಳಷ್ಟು ಕಡಿಮೆ ಮಾಡಲು ಸಹಾಯ ಮಾಡುವುದು. ಇದರಿಂದ ಆರಾಮಾಗಿ ಮಕ್ಕಳ ಆರೈಕೆ ಮಾಡಬಹುದು.
ಜನಸಂಖ್ಯೆ ಉಳಿಯಬೇಕು!
ಇದರಿಂದಾಗಿ ಮಹಿಳೆಯರು ವೃತ್ತಿ, ಕುಟುಂಬವನ್ನು ಆರಾಮಾಗಿ ನೋಡಿಕೊಳ್ಳಬಹುದು. ಜಪಾನ್ ತನ್ನ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ, ರಾಷ್ಟ್ರೀಯ ಫಲವತ್ತತೆ ದರವು ಕೇವಲ 1.2 ಇದಗದು, ಟೋಕಿಯೊದಲ್ಲಿ ಇನ್ನೂ ಕಡಿಮೆ 0.99 ಇದೆ. ಜಪಾನಿನ ಮಹಿಳೆಯರು ಪುರುಷರಿಗಿಂತ ಐದು ಪಟ್ಟು ಹೆಚ್ಚು ಮನೆಕೆಲಸಗಳನ್ನು ನಿರ್ವಹಿಸುತ್ತಾರೆ. ಇದರಿಂದ ನಾಲ್ಕು ದಿನಗಳ ವೀಕ್‌ಆಫ್‌ನಿಂದ ಪುರುಷರು ಮನೆಯಲ್ಲಿ ಹೆಚ್ಚಿನ ಕೆಲಸ ಮಾಡಿದಂತಾಗಿ, ಮಹಿಳೆಯರಿಗೆ ಸಹಾಯ ಮಾಡಬಹುದು. ಜೂಲಿಯಾ ಹಾಬ್ಸ್‌ಬಾಮ್‌ರಂತಹ ತಜ್ಞರು, "ಈ ನೀತಿಗಳು ಎಲ್ಲರಿಗೂ ಸರಿಹೊಂದುವುದಿಲ್ಲ, ಒಂದೊಂದು ಕೆಲಸ ಒಂದೊಂದು ರೀತಿ ಇರುತ್ತದೆ, ಈ ನೀತಿಗಳು ಸಾಂಸ್ಕೃತಿಕ ಮಾನದಂಡಗಳಿಗೆ ಅನುಗುಣವಾಗಿರಬೇಕು" ಎಂದು ಒತ್ತಿ ಹೇಳುತ್ತಾರೆ.
ಮದುವೆಯಾಗದೆ ಸಿಂಗಲ್ಲಾಗಿರೋ ಪುರುಷರಿಗೆ ಪ್ರವೇಶ ನಿಷೇಧಿಸಿದ ಮೃಗಾಲಯ! ಕಾರಣವೇನು?
ಕೆಲಸ ಮುಗಿದ್ಮೇಲೆ ಮೆಸೇಜ್ ಬರಲ್ಲ!
2022 ರಲ್ಲಿ ಕೊರೊನಾ ನಂತರದಲ್ಲಿ ಕಾರ್ಮಿಕ ಒಪ್ಪಂದದ ಭಾಗವಾಗಿ ನಾಲ್ಕು ದಿನಗಳ ಕೆಲಸದ ವಾರವನ್ನು ಕಾನೂನಾಗಿ ಅಂಗೀಕರಿಸಿದ ಮೊದಲ ಯುರೋಪಿಯನ್ ರಾಷ್ಟ್ರ ಬೆಲ್ಜಿಯಂ. ನೌಕರರು ಈಗ ತಮ್ಮ 40 ಗಂಟೆಗಳ ವಾರದ ಕೆಲಸವನ್ನು ನಾಲ್ಕು ದಿನಗಳಲ್ಲಿ ಮುಗಿಸಬಹುದು. ಇಲ್ಲಿ ವೇತನ ಕಟ್ ಆಗೋದಿಲ್ಲ. ಇದನ್ನು "Right To Disconnect" ಎಂದು ಹೇಳಲಾಗಿದೆ. ದೊಡ್ಡ ಕಂಪನಿಗಳಲ್ಲಿನ ಕಾರ್ಮಿಕರಿಗೆ ಕೆಲಸದ ಸಮಯದ ನಂತರ ಏನಾದರೂ ಮೆಸೇಜ್ ಬರೋದಿದ್ರೆ ಅದು ನಿಲ್ಲುವುದು ಎಂದು ಭಾವಿಸಲಾಗಿದೆ. ಇದರಿಂದ ಕೆಲಸ ಬೇಗ, ನೀಟ್ ಆಗಿ ಆಗುವುದು, ಮಾನಸಿಕ ಆರೋಗ್ಯ ಕೂಡ ಚೆನ್ನಾಗಿ ಇರುವುದು ಎಂದು ಭಾವಿಸಲಾಗಿದೆ.
ಜರ್ಮನಿಯಲ್ಲಿ 41 ಕಂಪೆನಿಗಳು ಈ ಸೂತ್ರವನ್ನು ಪಾಲಿಸುತ್ತಿವೆ. ಅವರಲ್ಲಿ 73% ಜನರು ಈ ಹೋಸ ನೀತಿ ಪಾಲಿಸಲು ಪ್ಲ್ಯಾನ್ ಮಾಡಲು ರೆಡಿಯಾಗುತ್ತಿವೆ. ಜರ್ಮನಿಯಲ್ಲಿ ವಾರದಲ್ಲಿ 34 ಗಂಟೆ ಮಾತ್ರ ಕೆಲಸ ಮಾಡಬೇಕು. ವಿಶ್ವದಲ್ಲಿ ಇಷ್ಟು ಕಡಿಮೆ ಕೆಲಸ ಮಾಡುವ ದೇಶ ಅಂದ್ರೆ ಇದೇ. ಕಡಿಮೆ ಸಮಯ ಕೆಲಸ ಮಾಡೋದರಿಂದ ಕೆಲಸ ಕಮ್ಮಿ ಆಗೋದಿಲ್ಲ, ಬದಲಾಗಿ ಸ್ಮಾರ್ಟ್‌ಆಗಿ ಕೆಲಸ ಮಾಡಬಹುದು.
GDP ಹೆಚ್ಚಾಗಿದೆ!
ಸಾರ್ವಜನಿಕ ವಲಯದ ಉದ್ಯೋಗಿಗಳು ತಮ್ಮ ಕೆಲಸದ ಸಮಯವನ್ನು ವಾರಕ್ಕೆ 40 ರಿಂದ 35-36 ಕ್ಕೆ ಇಳಿಸಿದರು, ವೇತನ ಕಡಿತ ಮಾಡೋದಿಲ್ಲ. 2022ರ ಹೊತ್ತಿಗೆ, ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು ಕಡಿಮೆ ಸಮಯದಲ್ಲಿ ಕೆಲಸ ಮಾಡಲು ಆರಂಭಿಸಿದರು. ಇದರಿಂದ ಕಾರ್ಮಿಕರ ಯೋಗಕ್ಷೇಮ ಗಮನಾರ್ಹವಾಗಿ ಸುಧಾರಿಸಿತು, ದೇಶದ ಆರ್ಥಿಕತೆಗೆ ತೊಂದರೆ ಆಗಲಿಲ್ಲ. ಇದಕ್ಕೆ ವಿರುದ್ಧವಾಗಿ, 4.1% ನಷ್ಟು ಆರೋಗ್ಯಕರ GDP ಬೆಳವಣಿಗೆ ಆಯ್ತು. ಡೆನ್ಮಾರ್ಕ್‌ನಲ್ಲಿ ವಾರದಲ್ಲಿ 37 ಗಂಟೆಗಳ ಕಾಲ ಕೆಲಸ ಮಾಡಬೇಕು. ಇಲ್ಲಿ ಕೆಲಸ ಮಾಡುವ ವಾತಾವರಣ ತುಂಬ ಚೆನ್ನಾಗಿದೆ. 2020ರ ನೀತಿ ಪ್ರಕಾರ ಉದ್ಯೋಗಿಗಳು ಐದು ವಾರಗಳ ಕಾಲ ಸಂಬಳಸಹಿತ ರಜೆ ಪಡೆಯಬಹುದು.