ಸಮುದ್ರಶಾಸ್ತ್ರದ ಪ್ರಕಾರ, ಮೃದು, ದುಂಡಗಿನ ಹಿಮ್ಮಡಿ, ನೆಲ ಮುಟ್ಟುವ ಚಿಕ್ಕ ಬೆರಳುಗಳು, ಪಾದದಡಿ ಕಮಲ/ಛತ್ರಿ ಚಿಹ್ನೆ, ಉದ್ದನೆಯ ಅನಾಮಿಕ ಬೆರಳುಳ್ಳ ಹುಡುಗಿಯರು ಅದೃಷ್ಟವಂತರು. ಇವರನ್ನು ಮದುವೆಯಾದರೆ ಗಂಡನಿಗೆ ಐಶ್ವರ್ಯ, ರಾಜಕೀಯ ಯಶಸ್ಸು, ಸುಖ ದೊರೆಯುತ್ತದೆ ಎಂಬ ನಂಬಿಕೆಯಿದೆ. ಆದರೆ ಇದು ಕೇವಲ ಜ್ಯೋತಿಷ್ಯ ಮಾಹಿತಿ.
ಹಿಂದೂ ಸಂಪ್ರದಾಯದಲ್ಲಿ ಮದುವೆಯಾಗುವ ಹುಡುಗ ಸಾಮಾನ್ಯವಾಗಿ ಹೆಣ್ಣು ನೋಡುವ ಶಾಸ್ತ್ರವನ್ನು ಮಾಡುತ್ತಾರೆ. ಹೀಗೆ ಹೆಣ್ಣು ನೋಡಲು ಹೋದಾಗ ಮಹಿಳೆಯರು ಮದುವೆಯಾಗುವ ಹುಡುಗಿಯ ಪಾದ, ಕಾಲಿನ ಬೆರಳು ಮತ್ತು ನಡಿಗೆಯನ್ನು ನೋಡುತ್ತಾರೆ. ಇದರಲ್ಲಿ ಹುಡುಗಿಯ ಕಾಲ್ಗುಣ ಹೇಗಿದೆ ಎಂಬುದನ್ನು ತೀರ್ಮಾನಿಸುತ್ತಾರೆ.
ಸಮುದ್ರ ಶಾಸ್ತ್ರದ ಪ್ರಕಾರ, ಅದೃಷ್ಟವಂತ ಹುಡುಗಿಯರ ಪಾದಗಳಲ್ಲಿ ಹಲವು ವಿಶೇಷ ಚಿಹ್ನೆಗಳಿರುತ್ತವೆ. ಅದು ಈ ಹುಡುಗಿ ಅದೃಷ್ಟವಂತಳು ಎಂದು ಸೂಚಿಸುತ್ತದೆ. ಈ ಹುಡುಗಿಯರನ್ನು ಮದುವೆಯಾದವರ ಅದೃಷ್ಟ ಕೂಡ ಥಟ್ಟನೆ ಬದಲಾಗುತ್ತದೆ. ಈ ಅದೃಷ್ಟವಂತ ಹುಡುಗಿಯರು ತಮ್ಮ ಜೀವನದ ಎಲ್ಲಾ ಸುಖಗಳನ್ನು ಅನುಭವಿಸುತ್ತಾರೆ ಮತ್ತು ಅವರ ವೈವಾಹಿಕ ಜೀವನ ಕೂಡ ಸುಖಮಯ ಮತ್ತು ಆರಾಮದಾಯಕವಾಗಿರುತ್ತದೆ. ಇವರನ್ನು ಮದುವೆಯಾಗುವ ಹುಡುಗರಿಗೆ ರಾಜಸುಖವೂ ದೊರೆಯುತ್ತದೆ. ಇಂತಹ ಕೆಲವು ಶುಭ ಚಿಹ್ನೆಗಳು ಇರುವ ಹುಡುಗಿಯರನ್ನು ಹೇಗೆ ಹುಡುಕಬೇಕು ಎಂಬುದನ್ನು ಇಲ್ಲಿ ತಿಳಿಯಿರಿ…
ಅದೃಷ್ಟವಂತ ಹುಡುಗಿಯರ ಪಾದ ಮತ್ತು ಬೆರಳುಗಳು:
ಸಮುದ್ರ ಶಾಸ್ತ್ರದ ಪ್ರಕಾರ, ಯಾವ ಹುಡುಗಿಯ ಪಾದದ ಹಿಮ್ಮಡಿ ಮೃದು, ದುಂಡಗಿನ ಮತ್ತು ಆಕರ್ಷಕವಾಗಿದೆಯೋ ಅವಳು ತುಂಬಾ ಅದೃಷ್ಟವಂತಳು. ಆಕೆಯ ಗಂಡನಿಗೆ ಎಲ್ಲಾ ರೀತಿಯ ಸುಖಗಳು ದೊರೆಯುತ್ತವೆ. ಅಲ್ಲದೆ, ನಡೆಯುವಾಗ ಯಾವ ಹುಡುಗಿಯ ಪಾದದ ಚಿಕ್ಕ ಬೆರಳು ಮತ್ತು ಅದರ ಪಕ್ಕದ ಬೆರಳು ನೆಲವನ್ನು ಮುಟ್ಟುತ್ತದೆಯೋ ಆಕೆಯ ಬಳಿ ಸಾಕಷ್ಟು ಆಸ್ತಿ ಇರುತ್ತದೆ, ಅದರ ಲಾಭ ಆಕೆಯ ಗಂಡನಿಗೂ ಸಿಗುತ್ತದೆ.
ಇದನ್ನೂ ಓದಿ: ಹಾರ್ಡ್ ವರ್ಕ್ ಮಾಡೋ ಗಂಡಸರಿಗೆ ಗಟ್ಟಿಮುಟ್ಟಾದ 5 ಗ್ರಾಂ ಚಿನ್ನದ ಉಂಗುರ
ಪಾದದ ಅಡಿಭಾಗದಲ್ಲಿರುವ ವಿಶೇಷ ಚಿಹ್ನೆ:
ಯಾವ ಹುಡುಗಿಯ ಪಾದದ ಅಡಿಭಾಗದಲ್ಲಿ ಕಮಲ ಅಥವಾ ಛತ್ರಿಯ ಚಿಹ್ನೆ ಇರುತ್ತದೆಯೋ ಆಕೆಯ ಗಂಡನಿಗೆ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು. ಯಾವ ಹುಡುಗಿಯ ಪಾದದ ಅಡಿಭಾಗದ ಮೆತ್ತನೆಯ ಭಾಗದಲ್ಲಿ ಯಾವುದೇ ರೇಖೆ ಪಾದದ ಬೆರಳುಗಳ ಕಡೆಗೆ ಮೇಲಕ್ಕೆ ಹೋಗುತ್ತಿದೆಯೋ ಅವಳು ತನ್ನ ಗಂಡನಿಗೆ ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ.
ಇವು ಕೂಡ ಅದೃಷ್ಟವಂತ ಹುಡುಗಿಯರ ಲಕ್ಷಣಗಳು:
ಯಾವ ಹುಡುಗಿಯ ಪಾದದ ಅನಾಮಿಕ (ಚಿಕ್ಕ ಬೆರಳಿನ ಪಕ್ಕದ ಬೆರಳು) ಉದ್ದ, ಹೆಬ್ಬೆರಳು ಮತ್ತು ಅದರ ಪಕ್ಕದ ಬೆರಳಿಗಿಂತ ಚಿಕ್ಕದಾಗಿದೆಯೋ ಆಕೆಗೆ ತನ್ನ ಜೀವನದ ಎಲ್ಲಾ ಸುಖಗಳು ದೊರೆಯುತ್ತವೆ. ಇಂತಹ ಹುಡುಗಿಯರು ಬಡ ಕುಟುಂಬದಲ್ಲಿ ಹುಟ್ಟಿದರೂ, ಅವರ ಮದುವೆ ದೊಡ್ಡ ಮನೆತನದಲ್ಲಿ ಆಗುತ್ತದೆ. ಮದುವೆಯ ನಂತರ ಆಕೆಯ ಗಂಡನ ಅದೃಷ್ಟವೂ ಬದಲಾಗುತ್ತದೆ. ಇಂತಹ ಹುಡುಗಿಯರು ತಮ್ಮ ಕುಟುಂಬದೊಂದಿಗೆ ಸುಖವಾಗಿ ಜೀವಿಸುತ್ತಾರೆ.
ಹಕ್ಕುತ್ಯಾಗ:
ಈ ಲೇಖನದಲ್ಲಿರುವ ಮಾಹಿತಿಯನ್ನು ಜ್ಯೋತಿಷಿಗಳು ತಿಳಿಸಿದ್ದಾರೆ. ನಾವು ಕೇವಲ ಈ ಮಾಹಿತಿಯನ್ನು ನಿಮಗೆ ತಲುಪಿಸುವ ಮಾಧ್ಯಮ. ಬಳಕೆದಾರರು ಈ ಮಾಹಿತಿಯನ್ನು ಕೇವಲ ಮಾಹಿತಿ ಎಂದು ಪರಿಗಣಿಸಬೇಕು.
ಇದನ್ನೂ ಓದಿ: ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅಂತ ಪ್ರೂವ್ ಆಗೋಯ್ತು; ವಿಡಿಯೋ ವೈರಲ್!
ಕಾಲ್ಗುಣವೆಂಬ ನಂಬಿಕೆ:
ಆಧುನಿಕ ಯುಗದಲ್ಲಿ ಜೀವನ ಮಾಡುತ್ತಿರುವ ಇತ್ತೀಚಿನ ಯುವಜನರು ಹಿಂದಿನ ಶಾಸ್ತ್ರ, ಸಂಪ್ರದಾಯಗಳನ್ನು ನೊಡದೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ದಾಂಪತ್ಯ ಜೀವನದಲ್ಲು ಹೆಚ್ಚು ಹೊಂದಾಣಿಕೆಯಿಮದ ರಲು ಸಾಧ್ಯವಾಗದೇ ಡಿವೋರ್ಸ್ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಗಾಂಧರ್ವ ವಿವಾಹ ಅಥವಾ ಪ್ರೇಮ ವಿವಾಹ ಮಾಡಿಕೊಳ್ಳುವವರೂ ಕೂಡ ಇದನ್ನೆಲ್ಲಾ ನೊಡುವುದಿಲ್ಲ. ಮದುವೆಯಾದ ನಂತರ ಹಲವು ಸಂಕಷ್ಟಗಳಿಗೆ ಸಿಲುಕುತ್ತಾರೆ. ಇನ್ನು ಕೆಲವರು ಪ್ರೇಮ ವಿವಾಹ ಮಾಡಿಕೊಂಡವರು ಯುವತಿಯ ಕಾಲ್ಗುಣದಿಂದ ಗಂಡ ಭಾರೀ ಉತ್ತುಂಗಕ್ಕೆ ಏರುತ್ತಾನೆ. ಆದರೆ, ಹಿಂದಿನ ಜನರು ಮದುವೆಯಾದ ಕೂಡಲೇ ಮನೆಯಲ್ಲಿ ನಡೆಯುವ ಎಲ್ಲ ಶುಭ-ಅಶುಭ ಕಾರ್ಯಗಳಿಗೂ ಮದುವೆಯಾದ ನವ ವಿವಾಹಿತೆಯ ಕಾಲ್ಗುಣ ಎಂದು ಹೇಳುತ್ತಿದ್ದರು. ಇದೀಗ ಕಾಲ್ಗುಣ ಎಂಬುದನ್ನು ಬಹುತೇಕರು ನಂಬುವುದಿಲ್ಲ.
