ಮದ್ವೆಯಾದವರನ್ನೇ ಮದ್ವೆಯಾಗಿ, ಇಲ್ಲ ಪಬ್ಲಿಕ್‌ ಪ್ರಾಪರ್ಟಿ ಆಗಿ: ಯುವತಿಯರಿಗೆ ಇಸ್ಲಾಮಿಸ್ಟ್‌ ಝಾಕೀರ್‌ ಸಲಹೆ

ವಿವಾದಿತ ಇಸ್ಲಾಮಿಕ್ ಪ್ರಚಾರಕ ಜಾಕೀರ್ ನೈಕ್ ಅವಿವಾಹಿತ ಯುವತಿಯರು ವಿವಾಹಿತ ಪುರುಷರನ್ನು ಮದುವೆಯಾಗಬೇಕು ಅಥವಾ 'ಸಾರ್ವಜನಿಕ ಸ್ವತ್ತು' ಆಗಬೇಕು ಎಂಬ ಹೇಳಿಕೆ ನೀಡಿ ಮತ್ತೆ ತೀವ್ರ ವಿವಾದಕ್ಕೆ ಗುರಿಯಾಗಿದ್ದಾನೆ.

Zakir Naik's Advice to Women: Marry a Married Man or Be Public property

ಕರಾಚಿ: ವಿವಾದಿತ ಇಸ್ಲಾಮಿಕ್ ಪ್ರಚಾರಕ ಜಾಕೀರ್ ನೈಕ್‌ (Islamic Preacher Zakir Hussain) ಮದುವೆಯಾಗದ ಯುವತಿಯರಿಗೆ ನೀಡಿದ ಸಲಹೆಯೊಂದು ಈಗ ತೀವ್ರ ವಿವಾದ ಸೃಷ್ಟಿಸಿದೆ. ಅವಿವಾಹಿತ ಯುವತಿಯರು ಪತ್ನಿ ಇರುವ ವಿವಾಹಿತರನ್ನು ಮದುವೆಯಾಗಿ ಅಥವಾ ಸಾರ್ವಜನಿಕ ಸ್ವತ್ತಾಗಿ ಎಂದು ಜಾಕೀರ್ ಸಲಹೆ ನೀಡಿದ್ದು, ಈತನ ಈ ವಿವಾದಿತ ಸಲಹೆಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿ ಅವಿವಾಹಿತ ಮಹಿಳೆಯರಿಗೆ ಈತ ಈ ಸಲಹೆ ನೀಡಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮೂಲಭೂತವಾದಿ ಇಸ್ಲಾಮಿಕ್ ಪ್ರಚಾರಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಅವಿವಾಹಿತ ಮಹಿಳೆಯನ್ನು ಸಮಾಜ ಗೌರವಿಸುವುದಿಲ್ಲ, ಹೀಗಾಗಿ ಒಂದು ವೇಳೆ ನಿಮಗೆ ಅವಿವಾಹಿತ ಯುವಕ ಮದುವೆಯಾಗಲು ಸಿಗದಿದ್ದಲ್ಲಿ ಸಮಾಜದಲ್ಲಿ ಗೌರವಯುತವಾಗಿ ಬಾಳಲು ವಿವಾಹಿತನನ್ನೇ ಮದುವೆಯಾಗಿ ಅಥವಾ ಸಾರ್ವಜನಿಕ ಸ್ವತ್ತಾಗಲು ಹಿಂದೇಟು ಹಾಕಬೇಡಿ, ಎಂದು ಅವಿವಾಹಿತೆಯರಿಗೆ ಎಚ್ಚರಿಸಿದ್ದು, ಈತನ ಈ ಹೇಳಿಕೆ ವಿವಾದ ಸೃಷ್ಟಿಸಿದೆ.

ವಕ್ಫ್ ತಿದ್ದುಪಡಿ ಮಸೂದೆ: ಝಾಕಿರ್ ನಾಯ್ಕ್ ಪಿತೂರಿಯಲ್ಲಿ ಸಿಲುಕಿದ ಭಾರತೀಯ ಮುಸ್ಲಿಮರು!

ಅವಿವಾಹಿತ ಮಹಿಳೆಯರನ್ನೂ ಯಾರೂ, ಎಂದಿಗೂ ಗೌರವಿಸುವುದಿಲ್ಲ, ಹೀಗಾಗಿ ಅವರಿಗೆ ಎರಡು ಆಯ್ಕೆಗಳಿವೆ. ಒಂದು ಆಕೆ ಈಗಾಗಲೇ ಪತ್ನಿ ಇರುವನನ್ನೇ ಮದುವೆಯಾಗುವುದು ಅಥವಾ ಬಜಾರಿ ಹೆಂಗಸು ಆಗುವುದು (bazaari aurat), ಆಕೆ ಮುಂದೆ ಸಾರ್ವಜನಿಕ ಆಸ್ತಿಯಾಗುತ್ತಾಳೆ. ಇದಕ್ಕಿಂತ ಒಳ್ಳೆಯ ಪದ ನನಗೆ ತಿಳಿದಿಲ್ಲ, ಈ ಚಿತ್ರಣವನ್ನು ನಾನು ಅವಿವಾಹಿತೆಯರಿಗೆ ವಿವರಿಸಿದರೆ, ಅವರಲ್ಲಿ ಗೌರವಯುತವಾಗಿ ಬದುಕುವ ಯಾವುದೇ ಮಹಿಳೆಯಾದರೂ ಮೊದಲ ಆಯ್ಕೆಯನ್ನು ಆಯ್ದುಕೊಳ್ಳುತ್ತಾಳೆ, ಎಂದು ಝಾಕೀರ್‌ ನೈಕ್ ಹೇಳಿದ್ದಾನೆ. 

ಜಾಕೀರ್‌ ಹೇಳಿಕೆಯನ್ನು ಅನೇಕರು ತೀವ್ರವಾಗಿ ವಿರೋಧಿಸಿದ್ದಾರೆ. ಈತನ ಹೇಳಿಕೆ ಮಹಿಳೆಯರ ಹಕ್ಕು ಹಾಗೂ ಗೌರವಕ್ಕೆ ಚ್ಯುತಿ ತರಲಿದೆ, ಎಂದು ಕಿಡಿಕಾರಿದ್ದು ಪಾಕಿಸ್ತಾನವೂ ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಯನ್ನು ಬೆಂಬಲಿಸುತ್ತಿರುವುದನ್ನೂ ಜನರು ವಿರೋಧಿಸುತ್ತಿದ್ದಾರೆ. 

ಸಮಾಜದಲ್ಲಿ ಗೌರವ ಸಿಗಬೇಕಾದರೆ ಮಹಿಳೆ ಮದುವೆಯಾಗಲೇ ಬೇಕು. ಅದು 2ನೇ ಹೆಂಡತಿಯಾಗಿಯಾದರೂ ಪರವಾಗಿಲ್ಲ,  ಏಕೆಂದರೆ ಮಹಿಳೆಯ ಮೌಲ್ಯ ಆಕೆಯ ವಿವಾಹ ಸ್ಥಾನಮಾನದಿಂದ ನಿರ್ಧಾರವಾಗುತ್ತದೆ. ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗೆ ವೇದಿಕೆ ನೀಡಿರುವುದಕ್ಕೆ ಪಾಕಿಸ್ತಾನಕ್ಕೆ ಧನ್ಯವಾದ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಇಸ್ಲಾಮಿಸ್ಟ್‌ ಝಾಕೀರ್‌ ಸ್ತ್ರೀದ್ವೇಷಿಯಾಗಿದ್ದಾನೆ. ಈ ಮೂಲಕ ಪಾಕಿಸ್ತಾನದ ಮನಸ್ಥಿತಿಯನ್ನು ತೆರೆದು ತೋರಿಸಿದ್ದಾನೆ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ. 

'ಯೋಗ್ಯ' ಸೊಸೆಯ ಹುಡುಕಾಟದಲ್ಲಿ ಜಾಕಿರ್ ನಾಯ್ಕ್: ಇಂತಹ ಹುಡುಗಿ ಸಿಗಲ್ಲ ಎಂದ ನೆಟ್ಟಿಗರು!

ಇಂತಹ ಇಸ್ಲಾಮಿಸ್ಟ್ ನಾಯಕನಿಗೆ ಭಾರತದಲ್ಲಿ ನಿಷೇಧವಿದೆ. ದ್ವೇಷಪೂರಿತ ಭಾಷಣದ ಕಾರಣದಿಂದಲೇ ಆತನ ವಿರುದ್ಧ ದೇಶದಲ್ಲಿ ಪ್ರಕರಣಗಳಿವೆ. ಮುಂಬೈ ಮೂಲದ ಈತನಿಗೆ ಪಾಕಿಸ್ತಾನ ಆಶ್ರಯ ನೀಡಿರುವುದು ಮಾತ್ರ ವಿಪರ್ಯಾಸವೇ ಸರಿ. ಅಲ್ಲದೇ ಇಂತಹ ಆತನ ವಿವಾದಾತ್ಮಕ ಅಭಿಪ್ರಾಯಗಳನ್ನು ಭಾರತದಲ್ಲಿ ಹರಡುವುದಕ್ಕೆ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆತ ಭಾರತಕ್ಕೆ ಝಾಕೀರ್ ಪ್ರವೇಷ ನಿಷೇಧಿಸಲಾಗಿದೆ. ಪ್ರಸ್ತುತ ಮಲೇಷ್ಯಾದಲ್ಲಿರುವ ಝಾಕೀರ್‌ ನೈಕ್ ಕಳೆದೊಂದು ತಿಂಗಳ ಕಾಲ ಪಾಕಿಸ್ತಾನದಲ್ಲಿ ಕಳೆದಿದ್ದ. 


 

Latest Videos
Follow Us:
Download App:
  • android
  • ios