Asianet Suvarna News Asianet Suvarna News

'ಯೋಗ್ಯ' ಸೊಸೆಯ ಹುಡುಕಾಟದಲ್ಲಿ ಜಾಕಿರ್ ನಾಯ್ಕ್: ಇಂತಹ ಹುಡುಗಿ ಸಿಗಲ್ಲ ಎಂದ ನೆಟ್ಟಿಗರು!

* ವಿದೇಶಕ್ಕೆ ಪರಾರಿಯಾಗಿರುವ ಮುಸ್ಲಿಂ ಧರ್ಮಗುರು ಜಾಕಿರ್ ನಾಯ್ಕ್ ಹೊಸ ಪೋಸ್ಟ್‌

* ಮಗನಿಗಾಗಿ ವಧುವಿನ ಅನ್ವೇಷಣೆ ಆರಂಭಿಸಿದ ನಾಯ್ಕ್

* ಷರತ್ತು ಕಂಡು ಹುಡುಗಿ ಸಿಗೋದು ಡೌಟ್‌ ಎಂದ ನೆಟ್ಟಿಗರು

Zakir Naik Posts Facebook Advertisement Seeking Bride For His son pod
Author
Bangalore, First Published Sep 26, 2021, 5:25 PM IST
  • Facebook
  • Twitter
  • Whatsapp

ಮಲೇಷ್ಯಾ(ಸೆ.26): ಭಾರತದಲ್ಲಿ ಧಾರ್ಮಿಕ ಸಾಮರಸ್ಯ ಹಾಳುಗೆಡಹುವ ಆರೋಪ ಎದುರಿಸುತ್ತಿರುವ, ವಿದೇಶಕ್ಕೆ ಪರಾರಿಯಾಗಿರುವ ಮುಸ್ಲಿಂ ಧರ್ಮಗುರು ಜಾಕಿರ್ ನಾಯ್ಕ್(Zakir Naik) ತನ್ನ ಮಗ ಫರೀಕ್ ಮದುವೆ ಮಾಡುವ ಸಿದ್ಧತೆ ಆರಂಭಿಸಿದ್ದಾರೆ. ಹೀಗಿರುವಾಗ ತನ್ನ ಸೊಸೆಯಾಗುವವಳಿಗೆ ಜಾಕಿರ್ ಅನೇಕ ಷರತ್ತುಗಳನ್ನಿಟ್ಟಿದ್ದಾರೆ. 

ಹೌದು ಜಾಕಿರ್ ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌(Facebook Post) ಒಂದನ್ನು ಮಾಡಿದ್ದು, ತಾನು ತನ್ನ ಮಗನಿಗಾಗಿ 'ಧಾರ್ಮಿಕ ಮುಸ್ಲಿ ಯುವತಿ'ಯನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಆ ಯವತಿ ಚರಿತ್ರಹೀನಳಾಗಿರಬಾರದು ಎಂಬುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. 

ಈ ಬಗ್ಗೆ ಬರೆದುಕೊಂಡಿರುವ ಜಾಕಿರ್ ಹುಸೇನ್ 'ನಾನು ನನ್ನ ಮಗ ಫರೀಕ್‌ಗಾಗಿ ಹೆಂಡತಿಯನ್ನು ಹುಡುಕುತ್ತಿದ್ದೇನೆ. ಆಕೆ ಓರ್ವ ಧಾರ್ಮಿಕ ಮುಸ್ಲಿಂ ಯುವತಿಯಾಗಿದ್ದು, ಉತ್ತಮ ನಡವಳಿಕೆ ಇದ್ದು, ಚರಿತ್ರಹೀನಳಾಗಿರಬಾರದು. ಈ ಮೂಲಕ ಆಕೆ ನನ್ನ ಮಗನ ಶಕ್ತಿಯಾಗಿರಬೇಕು. ಒಂದು ವೇಳೆ ನೀವು ಅಂತಹ ಯುವತಿಯ ತಂದೆ ಅಥವಾ ಸಂಬಮಧಿಕರಾಗಿದ್ದರೆ ಸಂಪೂರ್ಣ ಮಾಹಿತಿಯೊಂದಿಗೆ ಈ ಪೋಸ್ಟ್‌ಗೆ ಉತ್ತರಿಸಿ' ಎಂದಿದ್ದಾರೆ. ಇದರೊಂದಿಗೆ ಜಾಕಿರ್ ತನ್ನ ಮಗ ಹಾಗೂ ಕುಟುಂಬದ ಇತರ ಅಗತ್ಯ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಜಾಕಿರ್ ನಾಯ್ಕ್ ಸೊಸೆಯಾಗಲು ಈ ಷರತ್ತು

ಪ್ರಸ್ತುತ ಮಲೇಷ್ಯಾದಲ್ಲಿರುವ ಜಾಕಿರ್ ನಾಯ್ಕ್ ಸೊಸೆಯಾಗಲಿರುವ ಯುವತಿಗೆ ಕೆಲ ಷರತ್ತುಗಳನ್ನೊಡ್ಡಿದ್ದಾರೆ. ಕುರಾನ್‌ನಲ್ಲಿರುವಂತೆ ಆಕೆ ಇಸ್ಲಾಂ ಪಾಲಿಸಬೇಕು, ಇದು ಅತೀ ಅಗತ್ಯ. ಧಾರ್ಮಿಕಳಾಗಿರಬೇಕು ಹಾಗೂ ಯಾವುದೇ ಕಳಂಕಗಳಿರಬಾರದು. ಇಸ್ಲಾಂ ಶಿಕ್ಷಣ ಪ್ರಸಾರ ಮಾಡುವವಳಾಗಿರಬೇಕು. ಐಷಾರಾಮಿ ಜೀವನವನ್ನು ಬದಿಗಿಟ್ಟು, ಸಾಮಾನ್ಯ ಬದುಕಿಗೂ ಒಗ್ಗಿಕೊಳ್ಳಬೇಕು. ಇಂಗ್ಲೀಷ್ ಮಾತನಾಡುವುದು ಅತೀ ಅಗತ್ಯ ಹಾಗೂ ಮಲೇಷ್ಯಾದಲ್ಲಿ ನೆಲೆಸಲು ಸಿದ್ಧಳಿರಬೇಕು. ಇದೆಲ್ಲಕ್ಕೂ ಮಿಗಿಲಾಗಿ ಯುವತಿ ಯಾವುದಾದರೂ ಇಸ್ಲಾಂ ಸಂಘಟನೆಯಲ್ಲಿ ಸಕ್ರಿಯಳಾಗಿರಬೇಕು ಎಂದಿದ್ದಾರೆ.

ಈ ಷರತ್ತುಗಳನ್ನು ಒಪ್ಪಿ, ಸಂಬಂಧಕ್ಕೆ ಸಿದ್ಧರಿರುವವರು ತಮ್ಮ ಪ್ರೊಫೈಲ್‌ಗಳನ್ನು ಕಳುಹಿಸಲು ಜಾಕಿರ್ ಮನವಿ ಮಾಡಿದ್ದಾರೆ. ಇನ್ನು ಈ ಪೋಸ್ಟ್‌ ಜೊತೆ ತನ್ನ ಮಗನ ಮಾಹಿತಿ ಸೇರ್ ಮಾಡಿಕೊಂಡಿರುವ ಧರ್ಮಗುರು ಜಾಕಿರ್, ಮಗನ ಫೋಟೋ ಮಾತ್ರ ಹಂಚಿಕೊಂಡಿಲ್ಲ. ಜಾಕಿರ್‌ರವರ ಈ ಪೋಸ್ಟ್‌ಗೆ ವಿಭಿನ್ನ ಕಾಮೆಂಟ್‌ಗಳು ಬರಲಾರಂಭಿಸಿವೆ,. ಈ ಷರತ್ತುಗಳನ್ನು ನೋಡಿ, ಅನೇಕ ಮಹಿಳೆಯರೇ ಜಾಕಿರ್‌ರನ್ನು ಟ್ರೋಲ್ ಮಾಡಲಾರಮಭಿಸಿದ್ದಾರೆ. ಮಿಲಿ ಮಾರ್ಟೋಜಾ ಹೆಸರಿನ ಬಳಕೆದಾರರೊಬ್ಬರು 'ನನಗೆ ತಿಳಿದಿದೆ ಯುವತಿಯರು, ಯುವಕನೊಂದಿಗೆ ಮದುವೆಯಾಗುತ್ತಾರೆ. ಆದರೆ ತನಗೆ ಹುಡುಗಿ ಹುಡುಕಲು ತಂದೆಯ ಮೇಲೆ ಅವಲಂಭಿತನಾಗಿರುವ ಹುಡುಗನೊಂದಿಗೆ ಮದುವೆಯಾಗಲು ಯಾರೂ ಬಯಸುವುದಿಲ್ಲ' ಎಂದಿದ್ದಾರೆ.

ವಿಶ್ವದಲ್ಲಿ ಎಲ್ಲಿಯೂ ಸಿಗದ ಯುವತಿಯ ಹುಡುಕುತ್ತಿದ್ದೀರಿ

ಉಗ್ಬಾದ್‌ ನೂರ್ ಸನಾಲೆ ಹೆಸರಿನ ಬಳಕೆದಾರರೊಬ್ಬರು ಈ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದು, ನೀವು ಬಹಳಷ್ಟು ಬೆಡಿಕೆ ಇರುವ ಸಂಸ್ಕೃತಿಯ ಪ್ರಸಾರ ಮಾಡುತ್ತಿದ್ದೀರಿ. ವಿಶ್ವದಲ್ಲಿ ಇಲ್ಲದ ಪರ್ಫೆಕ್ಟ್‌ ಯುವತಿಯ ಹುಡುಕಾಟದಲ್ಲಿದ್ದೀರಿ. ನೀವು ನಿಮ್ಮ ಮಗ ಖುಷಿಯಾಗಿರಬೇಕೆಂದು ಬಯಸುತ್ತೀರಾ ಅಥವಾ ನಿಮ್ಮ ಷರತ್ತಿನಂತೆ, ನಿಮ್ಮ ಇಷ್ಟದನುಸಾರ ಬದುಕಬೇಕೆಂದು ಬಯಸುತ್ತೀರಿ? ಕೆಲ ಹೆತ್ತವರು ತಮ್ಮ ಅಭಿಪ್ರಾಯದಿಂದ ನನ್ನನ್ನು ಅಚ್ಚರಿಗಿಡು ಮಾಡುತ್ತಾರೆ ಎಂದಿದ್ದಾರೆ.

Follow Us:
Download App:
  • android
  • ios