ವಿಶ್ವದ ಯಾವುದೇ ರಾಡಾರ್‌ ವ್ಯವಸ್ಥೆಗೆ ಮಂಕು ಬೂದಿ ಎರಚುವ ಅತ್ಯಾಧುನಿಕ, 6ಜಿ ಆಧರಿತ ವಿಶ್ವದ ಮೊದಲ ಎಲೆಕ್ಟ್ರಾನಿಕ್‌ ಯುದ್ಧಾಸ್ತ್ರವನ್ನು ಚೀನಾದ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ.

ಬೀಜಿಂಗ್‌: ವಿಶ್ವದ ಯಾವುದೇ ರಾಡಾರ್‌ ವ್ಯವಸ್ಥೆಗೆ ಮಂಕು ಬೂದಿ ಎರಚುವ ಅತ್ಯಾಧುನಿಕ, 6ಜಿ ಆಧರಿತ ವಿಶ್ವದ ಮೊದಲ ಎಲೆಕ್ಟ್ರಾನಿಕ್‌ ಯುದ್ಧಾಸ್ತ್ರವನ್ನು ಚೀನಾದ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ. ಇದರಲ್ಲಿರುವ ಹೊಸ ತಲೆಮಾರಿನ ಈ ಸಿಗ್ನಲ್‌ ನಿರ್ವಹಣೆ ವ್ಯವಸ್ಥೆಯು ವಿಶ್ವದ ಯಾವುದೇ ದೇಶದ ರಾಡಾರ್‌ ವ್ಯವಸ್ಥೆಗೆ ಸವಾಲೊಡ್ಡಬಲ್ಲದು ಎಂದು ಇದರ ನಿರ್ಮಾತೃಗಳು ಹೇಳಿದ್ದಾರೆ.

ಈ ವ್ಯವಸ್ಥೆಯು ಅತ್ಯಾಧುನಿಕ ವೇಗದ ಸ್ಪೆಕ್ಟ್ರಂ ಬಳಸುವ ಕಾರಣ ಶತ್ರು ದೇಶದ ಸಂದೇಶಗಳನ್ನು ತ್ವರಿತವಾಗಿ ಗ್ರಹಿಸಲು ಸಾಧ್ಯ. ಇದಕ್ಕೆ ಅನುಗುಣವಾಗಿ ಏಕಕಾಲಕ್ಕೆ 3600ಕ್ಕೂ ಹೆಚ್ಚು ಸುಳ್ಳು ಗುರಿಗಳನ್ನು ಸೃಷ್ಟಿಸಿ ಎದುರಾಳಿ ದೇಶದ ವಿಮಾನಗಳ ಪೈಲಟ್‌ಗಳನ್ನು ಇದು ದಿಕ್ಕುತಪ್ಪಿಸಬಲ್ಲದಾಗಿದೆ. ಇದರಿಂದಾಗಿ ಶತ್ರು ದೇಶದ ವಿಮಾನ ಪೈಲಟ್‌ಗೆ ಎಲ್ಲಿ ದಾಳಿ ನಡೆಸಬೇಕೆಂಬ ಅನುಮಾನ ಸೃಷ್ಟಿಯಾಗುತ್ತದೆ.

  • ಇನ್ನು ಭೂಮಿಯ ಮೇಲೆ ಇದು ಜಾಮರ್‌ ರೀತಿಯಲ್ಲೂ ಕಾರ್ಯನಿರ್ವಹಿಸಬಲ್ಲದು.
  • ಎಲೆಕ್ಟ್ರಾನಿಕ್‌ ಯುದ್ಧಾಸ್ತ್ರ ಜಗತ್ತಿನ ಬಹುತೇಕ ದೇಶಕ್ಕೆ ಸವಾಲ್‌
  • ಶತ್ರು ರಾಡಾರ್‌ಗೆ ಮಂಕು ಬೂದಿ ಎರಚುವ ಸಾಮರ್ಥ್ಯ ಇದಕ್ಕಿದೆ

ಇದೀಗ ಒಂದು ಸೊಳ್ಳೆಯಂಥ ಹಾರುವ ರೋಬೋಟ್ ಅನ್ನು ಸೃಷ್ಟಿಮಾಡಿದೆ ಚೀನಾ

ಖತರ್ನಾಕ್​ ಬುದ್ಧಿಯ ತಂತ್ರಜ್ಞಾನ ತಯಾರಿಸುವುದಲ್ಲಿ ಚೀನಾ ಸದಾ ಮುಂದು. ಆದರೆ ಹೇಳಿ-ಕೇಳಿ ಚೀನಾದ ಪ್ರಾಡಕ್ಟ್​ ಅದು. ಆಪರೇಷನ್​ ಸಿಂದೂರದ ಸಮಯದಲ್ಲಿಯೂ ಪಾಕಿಸ್ತಾನಕ್ಕೆ ಕ್ಷಿಪಣಿ ಕೊಟ್ಟು ಮಂಗಳಾರತಿ ಮಾಡಿಸಿಕೊಂಡಿತ್ತು ಚೀನಾ. ಹಾಗೆಂದು ಹೊಸ ಹೊಸ ಆವಿಷ್ಕಾರವನ್ನಂತೂ ನಿಲ್ಲಿಸುವುದೇ ಇಲ್ಲ ಈ ಡ್ರ್ಯಾಗನ್​ ದೇಶ. ಇದೀಗ ಒಂದು ಸೊಳ್ಳೆಯಂಥ ಹಾರುವ ರೋಬೋಟ್ ಅನ್ನು ಸೃಷ್ಟಿಮಾಡಿದೆ ಚೀನಾ. ಇದು ರಹಸ್ಯ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕಣ್ಗಾವಲು, ಸೈಬರ್ ಅಪರಾಧ ಮತ್ತು ಜೈವಿಕ ಯುದ್ಧದಲ್ಲಿಯೂ ಸಹ ಬಳಸುವಂಥದ್ದಾಗಿದೆ.

ಚೀನಾಗೆ ಸದಾ ಭಾರತದ ಮೇಲೆ ಕಣ್ಣು. ಆದ್ದರಿಂದ ಇಲ್ಲಿಯ ರಕ್ಷಣಾ ವಿಷಯಗಳನ್ನು ತಿಳಿದುಕೊಳ್ಳಲು ಈ ಸೊಳ್ಳೆಯನ್ನು ಬಿಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯ (NUDT) ಅಭಿವೃದ್ಧಿಪಡಿಸಿದ, ಕೀಟ ಗಾತ್ರದ 0.6 ಸೆಂಟಿ ಮೀಟರ್​ ಇರುವ ಡ್ರೋನ್ ಇತ್ತೀಚೆಗೆ ದೇಶದ ಅಧಿಕೃತ ಮಿಲಿಟರಿ ಚಾನೆಲ್ CCTV 7 ನಲ್ಲಿ ಕಾಣಿಸಿಕೊಂಡಿದೆ. ಇದನ್ನು ನೋಡಿದರೆ, ಮೊದಲ ನೋಟದಲ್ಲಿ, ಕಪ್ಪು ಕೋಲಿನಂತಹ ದೇಹ, ಎಲೆಗಳ ಆಕಾರದಲ್ಲಿರುವ ಸೂಕ್ಷ್ಮ ಹಳದಿ ರೆಕ್ಕೆಗಳು ಮತ್ತು ಮೂರು ತಂತಿಯ ಕಾಲುಗಳನ್ನು ಹೊಂದಿರುವ ನಿರುಪದ್ರವ ಕೀಟದಂತೆ ಕಾಣುತ್ತದೆ. ಆದಾಗ್ಯೂ, ಅದರ ಸಣ್ಣ ಚೌಕಟ್ಟಿನ ಹಿಂದೆ ಗುಪ್ತಚರ ಸಂಗ್ರಹಣೆ ಮತ್ತು ರಹಸ್ಯ ಯುದ್ಧಭೂಮಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಮಿಲಿಟರಿ ಎಂಜಿನಿಯರಿಂಗ್ ಇರುವುದು ಮಾತ್ರ ನಂಬಲಸಾಧ್ಯವಾದಂಥದ್ದು.

ಇಲ್ಲಿಯ ಟಿವಿಯಲ್ಲಿ ನಡೆದ ಪ್ರದರ್ಶನದಲ್ಲಿ, NUDT ವಿದ್ಯಾರ್ಥಿ ಲಿಯಾಂಗ್ ಹೆಕ್ಸಿಯಾಂಗ್ ರೋಬೋಟ್ ಅನ್ನು ಎತ್ತಿ ಹಿಡಿದು, "ಇಲ್ಲಿ ನನ್ನ ಕೈಯಲ್ಲಿ ಸೊಳ್ಳೆಯಂತಹ ರೀತಿಯ ರೋಬೋಟ್ ಇದೆ. ಈ ರೀತಿಯ ಮಿನಿಯೇಚರ್ ಬಯೋನಿಕ್ ರೋಬೋಟ್‌ಗಳು ಯುದ್ಧಭೂಮಿಯಲ್ಲಿ ಮಾಹಿತಿ ವಿಚಕ್ಷಣ ಮತ್ತು ವಿಶೇಷ ಕಾರ್ಯಾಚರಣೆಗಳಿಗೆ ವಿಶೇಷವಾಗಿ ಸೂಕ್ತವಾಗಿವೆ ಎಂದು ಹೇಳಿದ್ದಾನೆ. ಇದನ್ನು ನೆರೆಯ ದೇಶಗಳ ವಿಷಯ ಸಂಗ್ರಹಕ್ಕೂ ತಕ್ಕನಾಗಿದೆ ಎಂದೂ ಹೇಳಿರುವುದು ತಿಳಿದಿದೆ. ಇದನ್ನು ರಾಡಾರ್ ಅಡಿಯಲ್ಲಿ ಹಾರುವಂತೆ ನಿರ್ಮಿಸಲಾಗಿದೆ. ಈ ಸಾಧನವನ್ನು ರಹಸ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೈಸರ್ಗಿಕ ಪರಿಸರದಲ್ಲಿ ಬೆರೆಯುವಷ್ಟು ಚಿಕ್ಕದಾಗಿದೆ ಮತ್ತು ಸಾಂಪ್ರದಾಯಿಕ ಭದ್ರತಾ ವ್ಯವಸ್ಥೆಗಳಿಂದ ಪತ್ತೆಹಚ್ಚಲು ಕಷ್ಟ.