ಮರಳಿ ಹಳಿಗೆ ಅದಾನಿ ಗ್ರೂಪ್‌: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್‌ ಜಿಗಿದ ಗೌತಮ್‌ ಅದಾನಿ ಆಸ್ತಿ

ಹಿಂಡೆನ್‌ಬರ್ಗ್ ವರದಿ ನಂತರ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು  31 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಅದು ಈಗ ನಿಧಾನವಾಗಿ ಏರಲು ಪ್ರಾರಂಭಿಸುತ್ತಿದೆ.

gautam adani net worth jumped 5 billion dollar in just 2 hours ash

ಹೊಸದಿಲ್ಲಿ (ಮಾರ್ಚ್‌ 4, 2023) : ಅದಾನಿ ಗ್ರೂಪ್‌ ಬಗ್ಗೆ ಕಳೆದ ಕೆಲ ತಿಂಗಳಿಂದ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಜಾಗತಿಕ ಮಟ್ಟದ ಶ್ರೀಮಂತರಲ್ಲಿ ಟಾಪ್‌ 3 ಶ್ರೀಮಂತ ಎನಿಸಿಕೊಂಡಿದ್ದ ಗೌತಮ್ ಅದಾನಿ, ನಂತರ ಕೆಲವೇ ದಿನಗಳಲ್ಲಿ 12 ಲಕ್ಷ ಕೋಟಿ ರೂ. ಆಸ್ತಿ ಕಳೆದುಕೊಂಡರು. ಇದಕ್ಕೆ ಕಾರಣ ಹಿಂಡೆನ್‌ಬರ್ಗ್‌ ರೀಸರ್ಚ್‌ ವರದಿ. ಆದರೆ, ಆ ಕೆಟ್ಟ ಹಂತವನ್ನು ದಾಟಿದ ಅದಾನಿ ಗ್ರೂಪ್‌ ಇದೀಗ ಚೇತರಿಸಿಕೊಳ್ಳುತ್ತಿದೆ. ಅದಾನಿ ಸಮೂಹದ ಕಂಪನಿಗಳ ಷೇರುಗಳು ವೇಗವಾಗಿ ಮರಳುತ್ತಿವೆ. ಈ ವಾರ ಬಹುತೇಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಷೇರುಗಳು ಮತ್ತೆ ಭಾರಿ ಏರಿಕೆ ಕಂಡಿದೆ. 

ಷೇರುಗಳ ಚೇತರಿಕೆಯ ನಂತರ ಗೌತಮ್‌ ಅದಾನಿ (Gautam Adani) ಮಾರುಕಟ್ಟೆ ಮೌಲ್ಯವು 1 ಲಕ್ಷ ಕೋಟಿಗೆ ಏರಿದೆ. ಅದೇ ಸಮಯದಲ್ಲಿ ಗೌತಮ್ ಅದಾನಿ ಸಂಪತ್ತು ಕೂಡ ವೇಗವಾಗಿ ಓಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಗೌತಮ್ ಅದಾನಿ ಅವರ ಸಂಪತ್ತು 11 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಹಿಂಡೆನ್‌ಬರ್ಗ್ ವರದಿ ನಂತರ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು  31 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಅದು ಈಗ ನಿಧಾನವಾಗಿ ಏರಲು ಪ್ರಾರಂಭಿಸುತ್ತಿದೆ. ಕಳೆದ ಎರಡು ದಿನಗಳಿಂದ, ಫೋರ್ಬ್ಸ್‌ನ (Forbes) ನೈಜ-ಸಮಯದ ಬಿಲಿಯನೇರ್‌ಗಳ ಪಟ್ಟಿಯಲ್ಲಿ (Real Time Billionaires List) ಗೌತಮ್ ಅದಾನಿ ಇಂದಿನ ವಿಜೇತರು ಮತ್ತು ಸೋತವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ (Top Ranking) ಉಳಿದಿದ್ದಾರೆ.

ಇದನ್ನು ಓದಿ: ಸಂಕಷ್ಟದಲ್ಲೂ ಲಖನೌ ಏರ್‌ಪೋರ್ಟ್‌ ನವೀಕರಣಕ್ಕೆ 5 ಸಾವಿರ ಕೋಟಿ ಹೂಡಿಕೆ ಮಾಡಲಿರೋ ಅದಾನಿ ಸಮೂಹ..!

ಈ ಪಟ್ಟಿಯಲ್ಲಿ ನಂಬರ್ 1
ಶುಕ್ರವಾರ, ಮಾರ್ಚ್ 3 ರಂದು, ಗೌತಮ್ ಅದಾನಿ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ (Billionaires Index) ಅತಿ ಹೆಚ್ಚು ಸಂಪತ್ತು ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಹಿಂದೆ ಮಾರ್ಚ್ 2 ರಂದು ಕೂಡ ಅವರು ಟಾಪ್ ಗೇನರ್ ಆಗಿದ್ದರು. ಮಾರ್ಚ್ 2 ಮತ್ತು ಮಾರ್ಚ್ 3 ರಂತೆ, ಮಾರ್ಚ್‌ 4 ರಂದು ಸಹ ಮಾರುಕಟ್ಟೆಯನ್ನು ತೆರೆದ 2 ಗಂಟೆಗಳಲ್ಲಿ, ಅವರು   4.8 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 3,94,76,40,00,000 ರೂ ಗಳಿಸಿದ್ದರು.

ಶ್ರೀಮಂತರ ಪಟ್ಟಿಯಲ್ಲಿ ಮೇಲೇರುತ್ತಿರುವ ಅದಾನಿ
ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಗೌತಮ್ ಅದಾನಿ ಮತ್ತೆ ನಿರಂತರವಾಗಿ ಜಿಗಿಯುತ್ತಿದ್ದಾರೆ. ಮೂರು ದಿನಗಳಲ್ಲಿ, ಅವರು 37 ರಿಂದ 26 ನೇ ಸ್ಥಾನಕ್ಕೆ ಏರಿದ್ದಾರೆ. ಅವರು ಮೂರು ವ್ಯಾಪಾರದ ದಿನಗಳಲ್ಲಿ ಸುಮಾರು 11 ಬಿಲಿಯನ್ ಡಾಲರ್‌ ಗಳಿಸಿದ್ದಾರೆ. ಆದರೂ, ಈ ಹಿಂದಿನಂತೆ ಟಾಪ್‌ 5 ಸ್ಥಾನ ಪಡೆಯಲು ಗೌತಮ್‌ ಅದಾನಿ ಸುದೀರ್ಘ ಹೋರಾಟವನ್ನು ಮಾಡಬೇಕಾಗಿದೆ. 

ಇದನ್ನೂ ಓದಿ: ತಿಂಗಳಲ್ಲಿ ಅದಾನಿ ಕಂಪನಿಗೆ 12 ಲಕ್ಷ ಕೋಟಿ ನಷ್ಟ; ಮಾಲೀಕ ಗೌತಮ್‌ ಅದಾನಿ ಆಸ್ತಿ 6.5 ಲಕ್ಷ ಕೋಟಿ ಇಳಿಕೆ

ಅದಾನಿ ಷೇರುಗಳ ಏರಿಕೆಯಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯವು ಒಂದು ದಿನದಲ್ಲಿ 1 ಲಕ್ಷ ಕೋಟಿಗಳಷ್ಟು ಜಿಗಿದಿದೆ. ಅಮೆರಿಕದ QGQ ಕಂಪನಿ ಅದಾನಿ ಗ್ರೂಪ್‌ನ 4 ಕಂಪನಿಗಳ 17 ಕೋಟಿಗೂ ಹೆಚ್ಚು ಷೇರುಗಳನ್ನು ಖರೀದಿಸಿದ್ದು, ಇದಕ್ಕಾಗಿ ಸಂಸ್ಥೆಯು 15449 ಕೋಟಿ ರೂ. ಹೂಡಿಕೆ ಮಾಡಿತ್ತು. ಬಳಿಕ ಅದಾನಿಗೆ ಜಾಕ್‌ಪಾಟ್‌ ಹೊಡೆದಂತಾಗಿದೆ. ಈ ಸುದ್ದಿಯ ನಂತರ, ಮಾರುಕಟ್ಟೆ ತೆರೆದ 30 ನಿಮಿಷಗಳಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಕ್ಯಾಪ್ ಸುಮಾರು 53 ಸಾವಿರ ಕೋಟಿ ರೂ. ಯಷ್ಟು ಹೆಚ್ಚಾಗಿತ್ತು. 

ಇದನ್ನೂ ಓದಿ: ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಸಮರಕ್ಕೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆ ನೇಮಿಸಿಕೊಂಡಿಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ

Latest Videos
Follow Us:
Download App:
  • android
  • ios