ಇವಳೇನು ಅರ್ಜುನನ ತಂಗಿಯೇ... ಬಿಲ್ಲಿನಂತೆ ಬಾಗಿ ಕಾಲಿನಲ್ಲೇ ಯುವತಿಯ ಬಿಲ್ಗಾರಿಕೆ
ಇಲ್ಲೊಬ್ಬಳು ನಾರಿ ದೂರದಲ್ಲಿರುವ ಬೆಲೂನಿಗೆ ತನ್ನ ದೇಹವನ್ನೇ ತಲೆಕೆಳಗಾಗಿಸಿ ನಿಂತುಕೊಂಡು ಕಾಲಿನಲ್ಲಿ ಬಾಣ ಬಿಟ್ಟು ಆ ಬೆಲೂನ್ ಅನ್ನು ಒಡೆಯುವ ಸಾಹಸ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾಭಾರತದಲ್ಲಿ ನೀವು ಪಾಂಡವ ಅರ್ಜುನ ಕೆಳಗಿರುವ ಎಣ್ಣೆಯಲ್ಲಿ ಪ್ರತಿಬಿಂಬ ನೋಡಿ ಮೇಲೆ ಇರುವ ಪಾರದರ್ಶಕ ಪಾತ್ರೆಯಲ್ಲಿರಿಸಿದ ನೀರಿನೊಳಗಿರುವ ಮೀನಿನ ಕಣ್ಣಿಗೆ ಬಾಣ ಬಿಟ್ಟ ಕತೆಯನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಬ್ಬಳು ನಾರಿ ದೂರದಲ್ಲಿರುವ ಬೆಲೂನಿಗೆ ತನ್ನ ದೇಹವನ್ನೇ ತಲೆಕೆಳಗಾಗಿಸಿ ನಿಂತುಕೊಂಡು ಕಾಲಿನಲ್ಲಿ ಬಾಣ ಬಿಟ್ಟು ಆ ಬೆಲೂನ್ ಅನ್ನು ಒಡೆಯುವ ಸಾಹಸ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಲ್ಗಾರಿಕೆ ಯಶಸ್ವಿಯಾಗಲು ಕಠಿಣ ಪರಿಶ್ರಮದ ಜೊತೆ ತಪ್ಪಸ್ಸಿನಂತಹ ಏಕಾಗ್ರತೆ ಮುಖ್ಯ . ಇದು ಎಲ್ಲರಿಗೂ ಒಲಿಯಲು ಸಾಧ್ಯವಿಲ್ಲ. ಆದರೆ ಇಲ್ಲಿ ಈ ಯುವತಿ ಸಲೀಸಾಗಿ ಈ ಸಾಧನೆ ಮಾಡಿದ್ದಾಳೆ. ಇದು ನೋಡುಗರನ್ನು ಕೆಲ ಕಾಲ ಸ್ತಬ್ಧರಾಗುವಂತೆ ಮಾಡಿದೆ.
Orissa Kelly ಎಂಬಾಕೆಯೇ ಈ ಬಿಲ್ವಿದ್ಯೆಯ ಸಾಧಕಿ. ಈಕೆಯ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಇಂತಹ ಬಿಲ್ವಿದ್ಯೆ ಸಾಹಸದ ಹಲವು ವಿಡಿಯೋಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾದ ವಿಡಿಯೋಗಳಾಗಿವೆ. ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಈಕೆ ಹೊಂದಿದ್ದಾಳೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಆಕೆ ಹಿಮದಿಂದ ಆವೃತವಾದ ಪ್ರದೇಶದಲ್ಲಿ ನಿಂತು ಮೊದಲಿಗೆ ತನ್ನ ಬಳಿ ಇರುವ ಬಾಣದ ತುದಿಗೆ ಬೆಂಕಿ ಹೊತ್ತಿಸುತ್ತಾಳೆ. ನಂತರ ಅಂಗಾಲಿನಲ್ಲಿ ಬಿಲ್ಲು ಹಾಗೂ ಬಾಣ ಎರಡನ್ನು ಹಿಡಿದುಕೊಂಡು ತಾನು ಮೊದಲೇ ಇರಿಸಿದ ಸ್ಟ್ಯಾಂಡ್ ಒಂದರ ಮೇಲೆ ತಲೆ ಕೆಳಗಾಗಿ ನಿಲ್ಲುವ ಆಕೆ ಕೇವಲ ತನ್ನ ಎರಡು ಕಾಲುಗಳನ್ನು ಬಳಸಿ ದೇಹವನ್ನು ಬಿಲ್ಲಿನಂತೆ ಬಾಗಿಸಿ ಸುಮಾರು ಅಂದಾಜು 10 ಮೀಟರ್ ದೂರದಲ್ಲಿ ನಿಲ್ಲಿಸಿರುವ ಬಲೂನ್ ಗೆ ಬಾಣ ಬಿಟ್ಟು ಅದನ್ನು ಒಡೆಯುತ್ತಾಳೆ.
ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್
ಕಾಲುಗಳನ್ನು ಬೆಚ್ಚಗಾಗಿಸಲು ಬಹಳ ಉಪಯುಕ್ತವಾದ ವಿಧಾನ ಎಂದು ಬರೆದುಕೊಂಡು ಒರಿಸ್ಸಾ ಕೆಲ್ಲಿ (Orissa Kelly) ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಈಕೆಗೆ ಇನ್ಸ್ಟಾಗ್ರಾಮ್‌ನಲ್ಲಿ ಸಾವಿರಾರು ಜನ ಅಭಿಮಾನಿಗಳಿದ್ದಾರೆ. ಮೂಲತಃ ಈಕೆ ಬಿಲ್ವಿದ್ಯೆ ಪಟುವಾಗಿದ್ದಾಳೆ. ಕಾಲಿನಿಂದ ಬಿಲ್ಗಾರಿಕೆ ಮಾಡಬಲ್ಲ ಅಂತಾರಾಷ್ಟ್ರೀಯ ಬಿಲ್ವಿದ್ಯೆ ಪಟುವಾಗಿರುವ ಈಕೆ ಬ್ರಿಟನ್‌ನ ಗಾಟ್ ಟಾಲೆಂಟ್ (Britain’s Got Talent) ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೇ ಹಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ವಂಡರ್ ವುಮನ್ ನಲ್ಲೂ (Wonder Woman) ಆಕೆ ನಟಿಸಿದ್ದಾರೆ. ಇದರ ಜೊತೆ ಅಮೆರಿಕಾದ ಟಿವಿ ಶೋ ಗೋ ಬಿಗ್ ನಲ್ಲೂ ಅವರು ಭಾಗವಹಿಸಿದ್ದರು.
ಕಳೆದ ವಾರ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 3.4 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಅದ್ಭುತವಾದ ಪ್ರತಿಭೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಾಮೂಲಿಯಾಗಿ ಬಿಲ್ವಿದ್ಯೆಯೇ ಒಂದು ಸಾಹಸ ಅದರಲ್ಲಿ ನೀವು ಕಾಲಿನಿಂದ ಪ್ರಯೋಗ ಮಾಡಿರುವುದು ಅದ್ಭುತವೇ ಸರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೆ ನನ್ನ ಕಣ್ಣುಗಳನ್ನು ನಂಬಲಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.