Asianet Suvarna News Asianet Suvarna News

ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್

* ಬಿಲ್ವಿದ್ಯೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸುರಪುರದ ವಿದ್ಯಾರ್ಥಿಗಳು
* ಸುರಪುರದ ಬಿಲ್ವಿದ್ಯೆ ಪಟುಗಳಿಗೆ ಆರ್ಥಿಕವಾಗಿ ನೆರವಾದ ಶಾಸಕ ರಾಜೂಗೌಡ
* RSS ಅಂಗಸಂಸ್ಥೆ ವನವಾಸಿ ಕಲ್ಯಾಣದಲ್ಲಿ ಬೆಳೆದ ಪ್ರತಿಭೆಗಳು

Surapura 10 village Students Shines in International level Archery Computation kvn
Author
Bengaluru, First Published Jul 23, 2022, 2:31 PM IST

ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ(ಜು.23): ರಕ್ತಗತವಾಗಿ ಬಂದ ಬಿಲ್ವಿದ್ಯೆಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಎಂಬ ಕುಗ್ರಾಮ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿದ್ದಾರೆ. ದೇವಾಪುರದ 10 ಜನ ಬಿಲ್ವಿದ್ಯೆಗಾರರು ಹಾಗೂ ಇಬ್ಬರೂ ಅಥ್ಲೀಟ್ ಪಟುಗಳು ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಬಿಲ್ವಿದ್ಯೆ ಮತ್ತು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಭಾರತ ದೇಶದ ಕೀರ್ತಿ ಪತಾಕೆಯನ್ನು ದೇವಾಪುರ ಎಂಬ ಕುಗ್ರಾಮದ ವಿದ್ಯಾರ್ಥಿಗಳು ಮಾಡಿದ್ದಾರೆ.

ಕೂಲಿ ಮಾಡಿ ಬಿಲ್ವಿದ್ಯೆ ಪ್ರಾಕ್ಟೀಸ್..!

ಬಿಲ್ಲು ಬಿಟ್ಟರೆ ಟಾರ್ಗೆಟ್ ಮಿಸ್ ಇಲ್ಲ. ರಕ್ತಗತವಾಗಿ ಬಂದ ವಿದ್ಯೆಗೆ ಇವರು ಕೊಟ್ಟಿರುವ ಗೌರವ ಮತ್ತು ತ್ಯಾಗ ಅಷ್ಟಿಷ್ಟಲ್ಲ. ಮೈಯಲ್ಲಿ ಬಿಲ್ಲು ಬಾಣ ಹಾಕಿಕೊಂಡು ಗುರಿಯತ್ತ ಬಾಣ ಬಿಡುವ ಈ ಯುವ ಮನಸ್ಸುಗಳು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದವರು. ಮೂಲತಃ ಬೇಡ ಜನಾಂಗದವರಾಗಿರುವ ಇವರೆಲ್ಲರಿಗೂ ಆ ಏಕಲವ್ಯನೆ ಸ್ಪೂರ್ತಿ. ಗುರುವಿಲ್ಲದೆ ಏಕಲವ್ಯ ಬಿಲ್ಲು ವಿದ್ಯೆ ಕಲಿತಂತೆ, ಈ ಆಧುನಿಕ ಕಾಲದಲ್ಲಿ ಅರ್ಚರಿ ವಿದ್ಯೆಯನ್ನು ಇವರು ಕಲಿತಿದ್ದಾರೆ. ಕಲಿಯೋದು ಮಾತ್ರವಲ್ಲದೆ ದೇಶದ ಪ್ರಮುಖ ರಾಜ್ಯಗಳ ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಬಿಲ್ಲುಗಾರಿಕೆಯಲ್ಲಿ ಈ ಯುವಕರು ಹಾಗೂ ಯುವತಿಯರು ಸಂಪೂರ್ಣ ಹಿಡಿತ ಹೊಂದಿದ್ದಾರೆ. ಈ ಯುವಕರು ಬಡತನದಲ್ಲಿ ಅರಳಿದ ಹೂವುಗಳಾಗಿವೆ. ಯಾಕಂದ್ರೆ ಇಲ್ಲಿರುವ ಎಲ್ಲರೂ ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದಲ್ಲಿ ಹುಟ್ಟಿದವರು. ಇಂತಹ ಅಗಾಧ ಪ್ರತಿಭೆಗಳು ತಮ್ಮ ಬಿಲ್ವಿದ್ಯೆ ಗಾಗಿ ಯಾರ ಬಳಿಯೂ ಕೈಚಾಚಿದವರಲ್ಲ. ರಜೆಯ ದಿನಗಳಲ್ಲಿ ಬೆಳಿಗ್ಗೆದ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದು ಅಭ್ಯಾಸ ಮಾಡಿದ್ದರು. ಇನ್ನು ಇಲ್ಲಿ ಕೇವಲ ಯುವಕರಲ್ಲದೇ, ಯುವತಿಯರು ಕೂಡ ಬಿಲ್ವಿದ್ಯೆಯಲ್ಲಿ ಎಕ್ಸ್ಪರ್ಟ್ ಹೊಂದಿದ್ದಾರೆ. ಕಿತ್ತು ತಿನ್ನುವ ಬಡನತದಲ್ಲಿವಿದ್ರೂ ಈ ದೇವಾಪುರ ಗ್ರಾಮದ ಯುವಕ-ಯುವತಿಯರು ದೇಶದ ಪರವಾಗಿ ಆಡಿ ನೇಪಾಳದ ಪೋಹಕದಲ್ಲಿ ಸಾಧನೆಯ ಮೆಟ್ಟಿಲು ಹತ್ತಿದ್ದಾರೆ.

RSS ಅಂಗಸಂಸ್ಥೆ ವನವಾಸಿ ಕಲ್ಯಾಣದಲ್ಲಿ ಬೆಳೆದ ಪ್ರತಿಭೆಗಳು

ದೇವಾಪುರದ ಅರ್ಚರಿ ಪಟುಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ವನವಾಸಿ ಕಲ್ಯಾಣದಲ್ಲಿ ಬೆಳೆದ ಪ್ರತಿಭೆಗಳು. ಬುಡಗಟ್ಟು ಜನಾಂಗ, ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳ ಶ್ರೇಯಾಭಿವೃದ್ಧಿಗೆ ಶ್ರಮಿಸುವ ವನವಾಸಿ ಕಲ್ಯಾಣ ಸಂಸ್ಥೆಯ ಸಂಚಾಲಕ ಶ್ರೀನಿವಾಸ ದೇವಾಪುರ ಮಕ್ಕಳ ಪ್ರತಿಭೆ ಕಂಡು ಅವರಿಗೆ ಪ್ರೋತ್ಸಾಹ ನೀಡಿದ್ದರು. ದಶಕಗಳಿಂದ ಇವರಿಗೆ ಹೆಚ್ಚಿನ ಟ್ರೈನಿಂಗ್ ನ‌್ನು ಸಹ ನೀಡಲು ನೆರವಾರವರು. ಸುರಪುರ ತಾಲೂಕಿನಲ್ಲಿ ಹೆಚ್ಚಯ ಪರಿಶಿಷ್ಟ ಪಂಗಡದ ಸೇರಿದ ಜನರಿದ್ದಾರೆ. ಮೂಲತಃ ಬೇಟೆಗಾರಿಕೆಗೆ ಇವರ ವೃತ್ತಿಯಾಗಿದ್ದು, ಅದು ರಕ್ತಗತವಾಗಿಯೇ ಈ ಯವಕರ ಬಳಿ ಇದೆ. ಇದರಿಂದಾಗಿ ಬಿಲ್ವಿದ್ಯೆಯನ್ನು ಇವರು ಚಾಚು ತಪ್ಪದೇ ಏಕಲವ್ಯನ ನಿಷ್ಠೆಯಂತೆ ಅಭ್ಯಾಸ ಮಾಡಿದ್ದಾರೆ. 

ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌: ಕರ್ನಾಟಕ ಶುಭಾರಂಭ

ನೇಪಾಳದಲ್ಲಿ ದೇವಾಪುರ ಅರ್ಚರಿ ಪಟುಗಳ ಸಾಧನೆ

ಸುರಪುರ ತಾಲೂಕಿನ ದೇವಾಪುರ ಬಿಲ್ವಿದ್ಯೆ ಪಟುಗಳ ಸಾಧನೆ ಮೆಚ್ಚಲೆಬೇಕಾದದ್ದು. ಯಾಕಂದ್ರೆ ನೇಪಾಳಕ್ಕಿಂತ ಮುಂಚೆ ಭಾರತದ ನಾನಾ ಕಡೆ ಹೋಗಿ ಅರ್ಚರಿಯಲ್ಲಿ ಸಾಧನೆ ಮಾಡಿದ್ದಾರೆ. ಈ ಕ್ರೀಡಾಪಟುಗಳು ಮುಂಬೈನಲ್ಲಿ 2016 ರಲ್ಲಿ ನಡೆದ ಕ್ರೀಡಾಕೂಟ, 2017 ರಲ್ಲಿ ಕೊಡಗು, ಚಾಮರಾಜನಗರ, 2019 ರಲ್ಲಿ ದಸರಾ ಕ್ರೀಡಾಕೂಟ ಹೀಗೆ ಹಲವು ಕಡೆ ಭಾಗವಹಿಸಿದ್ದರು. ತರವಬೇತುದಾರ ಮೌನೇಶ ಚಿಕ್ಕನಳ್ಳಿ ಫೇಸ್ ಬುಕ್ ನಲ್ಲಿ ಖೇಲೋ ಇಂಡಿಯಾ ಪ್ರಾಯೋಜಿಕತ್ವದ ಸಂಸ್ಥೆ ದೆಹಲಿಯ ಸ್ಕೂಲ್ ಗೇಮ್ಸ್ ಎಕ್ಟಿವಿಟಿ ಡೆವಲಪ್ಮೆಂಟ್ ಪೌಂಡೇಶನ್ ಅಂತರಾಷ್ಟ್ರೀಯ ಅಥ್ಲೀಟ್ ಏರ್ಪಡಿಸಿರುವ ಮಾಹಿತಿ ಪಡೆದು ಮೇ 24, 25 ರಂದು ತಮ್ಮ ತಂಡದೊಂದಿಗೆ ಸ್ವಂತ ಖರ್ಚಿನಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉತ್ತಮ ಸಾಧನೆ ಮಾಡಿದ 10 ಜನ ಬಿಲ್ವಿದ್ಯೆ ಪಟುಗಳು ಹಾಗೂ ಇಬ್ಬರೂ ಓಟಗಾರರು ನೇಪಾಳದ ಪೋಹಕದಲ್ಲಿನ ಜುಲೈ 13, 14 ರಂದು ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದರು. ನೇಪಾಳದ ಪೋಹಕದಲ್ಲಿ ನಡೆದ ಸ್ಪರ್ಧೆಯಲ್ಲಿ ದೇವಾಪುರ ಬಿಲ್ವಿದ್ಯೆ ಪಟುಗಳಾದ ರೇಣುಕಾ,  ನಾಗಮ್ಮ, ಬಸಮ್ಮ, ವೆಂಕಟೇಶ, ರಘು, ಭೀಮರಾಯ, ಮೌನೇಶಕುಮಾರ್, ಪರಮಣ್ಣ, ಸುನೀಲ್, ಮೌನೇಶ ಅವರು ಬಿಲ್ಲುಗಾರಿಕೆಯಲ್ಲಿ 3 ಚಿನ್ನದ ಪದಕ, 5 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ ಹಾಗೂ ಇಬ್ಬರೂ ಓಟಗಾರರಾದ ಶರಣಬಸವ, ಬಸವರಾಜ 2 ಚಿನ್ನದ ಪದಕ, ಒಬ್ಬನೂ 4 ನೇ ಸ್ಥಾನ ಪಡೆದಿದ್ದಾನೆ. 

ಬಿಲ್ವಿದ್ಯೆ ಪಟುಗಳಿಗೆ ನೆರವಾದ ಶಾಸಕ ರಾಜೂಗೌಡ

Surapura 10 village Students Shines in International level Archery Computation kvn

ದೇವಾಪುರ ಕ್ರೀಡಾಪಟುಗಳು ನೇಪಾಳದ ಪೋಹಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಬೇಕಾದ್ರೆ ಅಷ್ಟು ಸುಲಭದ ಮಾತು ಆಗಿರಲಿಲ್ಲ. ಪ್ರತಿಯೊಬ್ಬ ಕ್ರೀಡಾಪಟುಗಳು ದೆಹಲಿಯ ಸಂಸ್ಥೆಗೆ ತಲಾ 15 ಸಾವಿರ ರೂ. ಕಟ್ಟಬೇಕಿತ್ತು. ಕ್ರೀಡಾಪಟುಗಳು ಎಲ್ಲರೂ ಬಡವರು ಎಂದು ತರಬೇತುದಾರ ಮೌನೇಶಕುಮಾರ ಸುರಪುರ ಶಾಸಕ ರಾಜೂಗೌಡರ ಬಳಿ ಮನವಿ ಮಾಡಿದಾಗ ಶಾಸಕ ರಾಜೂಗೌಡ ಕ್ರೀಡಾಪಟುಗಳಿಗೆ ನೆರವಾದರು. 12 ಕ್ರೀಡಾಪಟುಗಳ ಖರ್ಚಿಗಾಗಿ 2 ಲಕ್ಷ 50 ಸಾವಿರ ರೂ. ನಗದು ಹಾಗೂ ಸಮವಸ್ತ್ರ ನೀಡಿ ಜೊತೆಗೆ ಎಲ್ಲಾ ರೀತಿಯ ಸಹಾಯ ಮಾಡಿ ನೇಪಾಳಕ್ಕೆ ಕಳುಹಿಸಿಕೊಟ್ಟರು. ಈಗ ಅದೇ ಕ್ರೀಡಾಪಟುಗಳ ಸಾಧನೆ ಮಾಡಿ ಮರಳಿ ಬಂದಿದ್ದು, ಶಾಸಕ ರಾಜೂಗೌಡ ಕ್ರೀಡಾಪಟುಗಳ ಸಾಧನೆ ಕೊಂಡಾಡಿದ್ದಾರೆ. ತನ್ನ ಕ್ಷೇತ್ರದ ಕ್ರೀಡಾಪಟುಗಳ ಸಾಧನೆ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದೆ. ಇವರ ಸಾಧನೆ ಹಲವಾರು ಕ್ರೀಡಾಪಟುಗಳಿಗೆ ಸ್ಪೂರ್ತಿ. ಕ್ರೀಡಾಪಟುಗಳ ಬಳಿ ಪ್ರತಿಭೆ ಇತ್ತು, ಅದರ ಅನಾವರಣಕ್ಕೆ ಬಡತನ ಅಡ್ಡವಾಗಿತ್ತು, ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೈಯುಕ್ತಿಕ ಸಹಾಯ ಮಾಡಿದ್ದೇನೆ ಎಂದು ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Follow Us:
Download App:
  • android
  • ios