ಮಂಟಪಕ್ಕೆ ಬರಬೇಕಾದರೆ ಕಳಚಿದ ಅರ್ಧ ಗೌನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಂದರ್ಭ ನಿಭಾಯಿಸಿದ ರೀತಿಗೆ ವಧುವಿಗೆ ಎಲ್ಲರ ಮೆಚ್ಚುಗೆ

ಮದುವೆ ದಿನ ಮಧುಮಗಳು ಮನೆಯವರು ಎಲ್ಲರೂ ಗೊಂದಲದಲ್ಲೇ ಇರುತ್ತಾರೆ. ಈ ಗೊಂದಲದಿಂದಲೇ ಕೆಲವೊಮ್ಮೆ ಸಂಪ್ರದಾಯಗಳು ಕೂಡ ಮರೆತು ಹೋಗುತ್ತವೆ. ಆದರೆ ಇಲ್ಲೊಬ್ಬಳು ವಧು ಮದುವೆ ದಿನ ಧರಿಸಿಬೇಕಾದ ಗೌನ್‌ ಅನ್ನೇ ಅರ್ಧದಲ್ಲಿ ಬಿಟ್ಟು ಬಂದಿದ್ದಾಳೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಗೌನ್‌ ಮದುಮಗಳಿಗೆ ಬಹಳ ಮಹತ್ವದ ವಿಷಯ. ಪಾಶ್ಚಿಮಾತ್ಯ ಕ್ರಿಶ್ಚಿಯನ್‌ ಸಮುದಾಯದಲ್ಲಿ ಮದುವೆಯಾಗಲು ಗೌನ್‌ ಧರಿಸಲೇಬೇಕು. ಇದುವೇ ಮದುವೆ ಹೆಣ್ಣಿನ ಉಡುಗೆ. ವಧು ಗೌನ್‌ ಧರಿಸಿ ತಲೆಗೆ ಕಿರೀಟವಿಟ್ಟುಕೊಂಡರೆ ವರ ಸೂಟು ಬೂಟುಗಳಲ್ಲಿ ರೆಡಿಯಾಗುತ್ತಾನೆ.

ಹೀಗೆ ಗೌನ್‌ ಮರೆತು ಬಂದ ಆಕೆಗೆ ವರ ಮದುವೆಯ ಪ್ರಮಾಣ ಮಾಡುತ್ತಿದ್ದ ವೇಳೆ ತನ್ನ ಗೌನ್‌ ಇಲ್ಲದಿರುವುದರ ಅರಿವಾಗಿದೆ. ಕೂಡಲೇ ಆಕೆ ಮದುವೆಯನ್ನು ಕೆಲ ಕಾಲ ನಿಲ್ಲಿಸಿ ತನ್ನ ಸಹಾಯಕರಿಗೆ ಹೇಳಿ ಗೌನ್ ತರಿಸಿದ್ದಾಳೆ. ಗೌನ್‌ ಧರಿಸದೇ ಅಲ್ಲಿವರೆಗೆ ಹೇಗೆ ಬಂದಳು ಬೆತ್ತಲೆಯೇ ಎಂದು ನೀವು ಭಾವಿಸಬಹುದು ಖಂಡಿತ ಇಲ್ಲ. ಆಕೆ ಸಾಮಾನ್ಯ ಉದ್ದ ಗೌನ್ ಧರಿಸಿದ್ದಳು. ಆದರೆ ಮದುವಣಗಿತ್ತಿಯಂತೆ ನೆಲದಲ್ಲಿ ಎಳೆದುಕೊಂಡು ಹೋಗಬಲ್ಲಂತಹ ಗೌನ್‌ ಆಕೆ ನಡೆದು ಬರುತ್ತಿರಬೇಕಾದರೆ ಎಲ್ಲೋ ಜಾರಿ ಬಿದ್ದಿದೆ. ಮದುವೆ ಮಂಟಪಕ್ಕೆ ಏರಿ ನಿಂತು ವಧು ವರರು ಪ್ರತಿಜ್ಞೆ ತೆಗೆದುಕೊಳ್ಳಬೇಕಾದ ವೇಳೆ ಅವಳಿಗೆ ಇದರ ಅರಿವಾಗಿದೆ.

View post on Instagram

ಆದರೆ ಆ ಸಂದರ್ಭದವನ್ನು ಆಕೆ ನಿರ್ವಹಿಸಿದ ರೀತಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ನಾಲ್ಕು ಜನ ಸೇರಿದಾಗ ಏನಾದರೂ ನಮ್ಮ ಬಟ್ಟೆಯೇ ಆಗಲಿ ಇನ್ನಾವುದೇ ವಸ್ತುವಾಗಲಿ ಸ್ವಲ್ಪ ವ್ಯತ್ಯಾಸವಾದರು ಅದರಿಂದ ನಮ್ಮ ಮೂಡ್‌ ಪೂರ್ತಿ ಹಾಳಾಗುತ್ತದೆ. ಎಲ್ಲರೆದುರು ಏನು ಮಾಡಬೇಕು ಎಂದು ತಿಳಿಯದೇ ನಾವು ಚಡಪಡಿಸುತ್ತೇವೆ. ಆದರೆ ಈಕೆಯ ವಿಷಯದಲ್ಲಿ ಹಾಗಾಗಿಲ್ಲ. ಆಕೆ ತನಗೇನು ಆಗಿಯೇ ಇಲ್ಲ ಎಂಬಂತೆ ತನ್ನ ವರನ ಕೈಯಿಂದ ಮೈಕ್‌ ತೆಗೆದುಕೊಂಡ ಆಕೆ ಸ್ವಲ್ಪ ಕಾಲ ಮದುವೆಯನ್ನು ನಿಲ್ಲಿಸಲು ಕೇಳಿದ್ದಾಳೆ. ಅಲ್ಲದೇ ತನ್ನ ಗೌನ್‌ ಎಲ್ಲೋ ಬಾಕಿ ಆಗಿರುವುದಾಗಿ ಅದನ್ನು ತಂದು ಕೊಡುವಂತೆ ಕೇಳಿದ್ದಾಳೆ.

28 ಪತ್ನಿಯರು 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವ್ಯಕ್ತಿ
ಕೂಡಲೇ ಅವಳ ಬಂಧುಗಳು ಗೌನ್ ತಂದು ಆಕೆಗೆ ಅಲ್ಲೇ ಹಾಕಿಸಿ ಅವಳನ್ನು ಕ್ಷಣದಲ್ಲಿ ಸಿದ್ಧಪಡಿಸಿದ್ದಾರೆ. ದುಬೈ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌, ಬೆಕಿ ಜೆಫರೀಸ್ ಅವರು ಐದು ದಿನಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ 3.13 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. 'ಒಂದು ಬಾರಿ ನಾನು ಹಜಾರದಲ್ಲಿ ನಡೆದಾಗ ನನ್ನ ಮದುವೆಯ ಡ್ರೆಸ್‌ನ ಅರ್ಧವನ್ನು ಮರೆತುಬಿಟ್ಟೆ' ಎಂದು ವೀಡಿಯೊದಲ್ಲಿ ಬರೆಯಲಾಗಿದೆ.

ಬಡ ಹೆಣ್ಣು ಮಕ್ಕಳ ಮದುವೆಗೆ ಉಚಿತ ಉಡುಪು, ಕೇರಳದಲ್ಲೊಂದು ಡ್ರೆಸ್‌ ಬ್ಯಾಂಕ್!

ಈ ಘಟನೆ ನಡೆದಾಗ ವಧು ಮದುವೆಯ ಪ್ರತಿಜ್ಞೆ ಹೇಳಬೇಕಾದ ಸಂದರ್ಭವಾಗಿತ್ತು. ಕೂಡಲೇ ಆಕೆ ಮೈಕ್ ತೆಗೆದುಕೊಂಡು ನಾನು ಹಜಾರದ ತುದಿಗೆ ಬಂದಾಗ ನನ್ನ ಉಡುಪಿನ ಅರ್ಧದಷ್ಟು ಕಳೆದು ಹೋಗಿದೆ ಎಂದು ನಾನು ಅರಿತುಕೊಂಡೆ. ಬಹುಶಃ ನಾನು ಈಗ ಅದನ್ನು ಹಾಕಬಹುದು ಎಂದು ಆಕೆ ಹೇಳುತ್ತಾಳೆ. ವಿಡಿಯೋದ ಕೊನೆಯಲ್ಲಿ ಮದುವೆಗೆ ಬಂದವರು ಆಕೆಗೆ ಪ್ರೋತ್ಸಾಹಿಸುತ್ತಾರೆ. ಅದೊಂದು ಬಾರಿ ನಾನು ಮೈಕ್ ಹಿಡಿದು, ನನ್ನ ಮದುವೆ ಸಮಾರಂಭವನ್ನು ಕ್ಷಣಕಾಲ ನಿಲ್ಲಿಸಬೇಕಾಯಿತು. ಮದುವೆಯು ಹೀಗೆ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ, ಆದರೆ ನಮ್ಮಲ್ಲಿ ಯಾರೂ ಅದನ್ನು ಈ ರೀತಿ ಮರೆಯುವುದಿಲ್ಲ. ಆ ದಿನ ನನ್ನ ಜೊತೆ ನಕ್ಕು ನಗಿಸಿದ ನಿಮಗೆಲ್ಲರಿಗೂ ಧನ್ಯವಾದ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಹೇಳಲಾಗಿದೆ.