28 ಪತ್ನಿಯರು 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವ್ಯಕ್ತಿ
- ಮಕ್ಕಳು ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಮದುವೆಯಾದ ವೃದ್ಧ
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
- ಭಲೇ ಧೈರ್ಯವಂತ ಎಂದ ನೆಟ್ಟಿಗರು
ಅಯ್ಯೋ ಇರೋ ಒಬ್ಬ ಹೆಂಡ್ತಿನೇ ನಮಗೆ ಮೆಂಟೇನ್ ಮಾಡಕ್ಕಾಗ್ತಿಲ್ಲ. ಯಾಕಾದ್ರು ಮದ್ವೆ ಆದ್ನೋ ಎಂದು ಕೊರಗುವ ಕೆಲ ಗಂಡಸರನ್ನು ನೀವು ನೋಡಿರಬಹುದು. ಇದರೊಂದಿಗೆ ಒಂದು ಮದುವೆಯಾಗುವುದಕ್ಕೆ ಸಾಕಷ್ಟು ಕಷ್ಟ ಪಡುವ ಜನರನ್ನು ನಾವು ನೋಡಿದ್ದೇವೆ. ಅಂತಹದ್ದರಲ್ಲಿ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೋಬರಿ 37 ಮದುವೆಯಾಗಿದ್ದಾನೆ. ಅದೂ ತನ್ನ 28 ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ. ಹೀಗಾಗಿ ಒಬ್ಬರನೇ ಮೆಂಟೇನ್ ಮಾಡೋದು ಕಷ್ಟ ಎನ್ನುವವರು ಈ ಸ್ಟೋರಿ ನೋಡಲೇಬೇಕು. ಈತ ತನ್ನ ಹಲವು ಪತ್ನಿಯರು ಮಕ್ಕಳು ಮೊಮ್ಮಕ್ಕಳ ಎದುರು ವಿವಾಹವಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜರು ಹತ್ತಾರು ರಾಣಿಯರನ್ನು ಮದುವೆಯಾಗುವುದನ್ನು ನಾವು ಕತೆಗಳಲ್ಲಿ ಕೇಳಿದ್ದೆವು ಆದರೆ ನಿಜವಾಗಿಯೂ ಹೀಗೆ ಹತ್ತಾರು ಮದುವೆಯಾದವರನ್ನು ನೋಡಿರಲಿಲ್ಲ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವೇಷ ಭೂಷಣಗಳನ್ನು ನೋಡಿದರೆ ಇದು ಮುಸ್ಲಿಂ ಸಮುದಾಯದಂತೆ ಕಾಣಿಸುತ್ತಿದೆ. ವೃದ್ಧನೊಬ್ಬ ತನ್ನ 28 ಪತ್ನಿಯರು, 35 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯನ್ನು ವಿವಾಹವಾಗಿದ್ದಾನೆ. ಆದರೆ ಇದು ಯಾವ ದೇಶದಲ್ಲಿ ನಡೆದಿದೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. ವೃದ್ಧನೋರ್ವ ಆಗ ತಾನೆ ಹರೆಯಕ್ಕೆ ಕಾಲಿರಿಸಿದ ಹೆಣ್ಣನ್ನು ಮದುವೆಯಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಜೀವಂತವಿರುವ ಅತ್ಯಂತ ಧೈರ್ಯವಂತ ವ್ಯಕ್ತಿ, 28 ಹೆಂಡತಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ 37ನೇ ಮದುವೆ' ಎಂದು ಅವರು ಈ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
Udupi ತಲಾಕ್ ನಂತೆ ಬಹುಪತಿತ್ವವನ್ನೂ ನಿಷೇಧಿಸಲು ಮೋದಿಗೆ ಮುಸ್ಲಿಂ ಕುಟುಂಬದ ಮನವಿ
ಈ ವಿಡಿಯೋ ಕಳೆದ ವರ್ಷ ಜೂನ್‌ನಲ್ಲಿಯೇ ವೈರಲ್ ಆಗಿದ್ದು, ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ನಮಗೆ ಇಲ್ಲಿ ಒಬ್ಬರನ್ನು ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಇದುವರೆಗೆ ನನಗೆ ಒಂದೂ ಮದುವೆಯಾಗಿಲ್ಲ. ಈತ ನೋಡಿದರೆ 37ನೇ ಮದುವೆಯಾಗುತ್ತಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಯಾರಾದರೂ ಇನ್ನು ಮದುವೆಯಾಗದೇ ಏಕಾಂಗಿಯಾಗಿರುವವರು ಎಲ್ಲಾದರು ಈತನ ವಿಡಿಯೋ ನೋಡಿದರೆ ಸತ್ತೇ ಹೋಗುವರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಫೆಬ್ರವರಿಯಲ್ಲಿ ಥೈಲ್ಯಾಂಡ್ ವ್ಯಕ್ತಿಯೊಬ್ಬ ಎಂಟು ಯುವತಿಯರನ್ನು ಮದುವೆಯಾಗಿದ್ದು, ಈತನ ಪತ್ನಿಯರೆಲ್ಲರೂ ಒಂದೇ ಮನೆಯಲ್ಲಿ ಯಾವುದೇ ಜಗಳವಿಲ್ಲದೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುತ್ತಿದ್ದಾರಂತೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಥೈಲ್ಯಾಂಡ್‌ನ ಈ ವ್ಯಕ್ತಿ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.
ಅಯ್ಯೋ ಇರೋ ಒಬ್ಳನ್ನೇ ಮೇಂಟೇನ್ ಮಾಡಕ್ಕಾಗ್ತಿಲ್ಲ ಅನ್ನೋರು ಇಲ್ ಕೇಳಿ
ಮೂಲತಃ ಟ್ಯಾಟೂ ಆರ್ಟಿಸ್ಟ್ ಆಗಿರುವ ಓಂಗ್ ಡ್ಯಾಮ್ ಸೊರೊಟ್ (Ong Dam Sorot) ಎಂಬಾತನೇ ಹೀಗೆ ಎಂಟು ಮದುವೆಯಾಗಿ ಎಲ್ಲರೊಂದಿಗೂ ಸುಖವಾಗಿ ಜೀವನ ನಡೆಸುತ್ತಿರುವ ವ್ಯಕ್ತಿ. ಇತ್ತೀಚೆಗೆ ಥಾಯ್ಲೆಂಡ್‌ನ ಜನಪ್ರಿಯ ಹಾಸ್ಯನಟರೊಬ್ಬರು ಇವರ ಸಂದರ್ಶನ ಮಾಡಿದ್ದರು. ಈ ಸಂದರ್ಶನದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಮೂರು ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದರು. ಈ ಸಂದರ್ಶನದಲ್ಲಿ ಓಂಗ್ ಡ್ಯಾಮ್ ಸೊರೊಟ್ ತನ್ನ ಪ್ರತಿಯೊಬ್ಬ ಹೆಂಡತಿಯನ್ನು ಪರಿಚಯಿಸಿದರು ಮತ್ತು ಅವರನ್ನು ತಾನು ಹೇಗೆ ಭೇಟಿಯಾದೆ ಎಂಬುದರ ಕುರಿತು ವಿವರಿಸಿದರು.