* ಬಡ ಕುಟುಂಬದ ಯುವತಿಯರ ಮದುವೆಗೆ ದುಬಾರಿ ಉಡುಪು* ಕೇರಳದಲ್ಲೊಂದು ಡ್ರೆಸ್  ಬ್ಯಾಂಕ್* ವಿಶಿಷ್ಟ ಮತ್ತು ವಿನೂತನ ಪ್ರಯೋಗ * ಮದುವೆ ಉಡುಪನ್ನು ದಾನ ಮಾಡಿ

ಕೊಚ್ಚಿ(ಸೆ. 20) ಕೇರಳದ ಮಲಪ್ಪುರಂ-ಪಾಲಕ್ಕಾಡ್ ಗಡಿಯಲ್ಲಿರುವ ಥೂಥಾ ಎಂಬ ಹಳ್ಳಿಯಲ್ಲಿ ವಾಸಿಸುವ 44 ವರ್ಷದ ವ್ಯಕ್ತಿ ಮಾದರಿ ಕೆಲಸವೊಂದನ್ನು ಮಾಡಿಕೊಂಡು ಬಂದಿದ್ದಾರೆ. ಇಲ್ಲೊಂದು ಡ್ರೆಸ್ ಬ್ಯಾಂಕ್ ಇದೆ. ಫುಡ್ ಬ್ಯಾಂಕ್, ಬ್ಲಡ್ ಬ್ಯಾಂಕ್, ಬುಕ್ ಬ್ಯಾಂಕ್ ಕೇಳಿದ್ದೇವೆ ಇದೇನು ಡ್ರೆಸ್ ಬ್ಯಾಂಕ್ ಅಂದ್ರಾ ಹೇಳ್ತಿವಿ ಕೇಳಿ.

ಇಲ್ಲಿ ಇರುವುದು ಸಾಮಾನ್ಯ ಬಟ್ಟೆಗಳು ಅಲ್ಲ. ಎಲ್ಲಾ ಮದುವೆಗೆ ಹಾಕಿಕೊಳ್ಳುವ ಉಡುಪುಗಳು. ಬಟ ಕುಟುಂಬದ ಯುವತಿರ ಮದುವೆಗೆ ಎಂದು ಮೀಸಲಿಟ್ಟಿರುವ ಉಡುಪುಗಳು. ಬಟ ಕುಟುಂಬದವರಿಗೆ ಮದುವೆ ಸಂದರ್ಭ ಯಾವುದೆ ಶುಲ್ಕ ತೆಗೆದುಕೊಳ್ಳದೆ ನೀಡಲಾಗುತ್ತದೆ.

ಒಮ್ಮೆ ಮಾತ್ರ ಬಳಸಿದ ಮದುವೆ ಉಡುಪುಗಳನ್ನು ನಾಸರ್ ಎಂಬುವರು ಇಲ್ಲಿ ಬ್ಯಾಂಕ್ ರೂಪದಲ್ಲಿ ನೀಡುತ್ತ ಬಂದಿದ್ದಾರೆ. ರಾಜ್ಯದ ವಿವಿಧ ಕಡೆಯಿಂದ ಸಂಗ್ರಹಿಸಿದ ಡ್ರೆಸ್ ಗಳನ್ನು ಇಲ್ಲಿ ಇಟ್ಟಿದ್ದಾರೆ. 155 ಮಹಿಳೆಯರು ಡ್ರೆಸ್ ಬ್ಯಾಂಕ್ ನಿಂದ ಮದುವೆ ಬಟ್ಟೆಗಳನ್ನು ಪಡೆದುಕೊಂಡಿದ್ದಾರೆ ಎಂದು ನಾಸರ್ ಹೇಳುತ್ತಾರೆ. 

ಮದುವೆಯಲ್ಲಿ ನರ್ತನ ಮಾಡೋದಕ್ಕೆ ಬಾಲಿವುಡ್ ತಾರೆಗಳು ಎಷ್ಟು ಚಾರ್ಜ್ ಮಾಡ್ತಾರೆ

ಒಂದೂವರೆ ವರ್ಷಗಳ ಹಿಂದೆ ಸೌದಿ ಅರೇಬಿಯಾದಿಮದ ಹಿಂದಿರುಗಿದ ನಾಸರ್ ಈ ಹೊಸ ಐಡಿಯಾವನ್ನು ಪ್ರಚುರ ಮಾಡಿದರು. ಕಡಿಮೆ ಆದಾಯ ಇರುವ ಕುಟುಂಬಗಳ ಮದುವೆ ಅದ್ದೂರಿಯಾಗಿರಲಿ ಎಂದು ನೆರವಾದರು. "ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ, ನಾನು ಮೊದಲಿ ನಿರಾಶ್ರಿತರಿಗೆ ಆಶ್ರಯವನ್ನು ಒದಗಿಸುವ ಮೂಲಕ ಪುನರ್ವಸತಿಗೆ ತೊಡಗಿದೆ. ಆ ಅವಧಿಯಲ್ಲಿ, ನಾನು ಈ ಪ್ರದೇಶದ ಅನೇಕ ಕುಟುಂಬಗಳೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಹೆಣ್ಣು ಹೆತ್ತವರು ಮದುವೆಯ ಡ್ರೆಸ್ ವ್ಯವಸ್ಥೆ ಮಾಡಲು ಹೆಣಗಾಡುತ್ತಿರುವುದನ್ನು ಗಮನಿಸಿದೆ. ಮದುವೆ ದಿನ ಮಾತ್ರ ತೊಡುವುದಕ್ಕೆ ದುಬಾರಿ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದೆಲ್ಲವನ್ನು ಗಮನಿಸಿ ಇಂಥ ಯೋಚನೆ ಮಾಡಿದೆ ಎಂದು ನಾಸರ್ ತಿಳಿಸುತ್ತಾರೆ.

ಸ್ನೇಹಿತರ ಸಹಕಾರದಿಂದ ನಾಸರ್ ಏಪ್ರಿಲ್ 2020 ರಲ್ಲಿ ಪ್ರಾಯೋಗಿಕವಾಗಿ ಡ್ರೆಸ್ ಬ್ಯಾಂಕ್ ಅನ್ನು ಆರಂಭಿಸಿದರು. ತೂಥಾ ಬಳಿಯ ತನ್ನ ಮನೆಯ ಒಂದು ಕೋಣೆಯಲ್ಲಿ, ದಾನ ಮಾಡಿದ 100 ಮದುವೆಯ ಉಡುಪುಗಳನ್ನು ಮೊದಲಿಗೆ ಇರಿಸಿಕೊಂಡರು. ಈ ಕೆಲಸಕ್ಕೆ ನನ್ನ ಹೆಂಡತಿ, ನಾಲ್ಕು ಮಕ್ಕಳು ಮತ್ತು ನನ್ನ ಸಹೋದರಿ ಸೇರಿದಂತೆ ಇಡೀ ಕುಟುಂಬ ಬೆಂಲವಾಗಿ ನಿಂತಿತು ಎಂಬ ವಿಚಾರವನ್ನು ಸ್ಮರಿಸುತ್ತಾರೆ.

ಸೋಶಿಯಲ್ ಮೀಡಿಯಾ ಬಳಕೆ: ಫೆಸ್ ಬುಕ್ ಮತ್ತು ವಾಟ್ಸಪ್ ಬಳಸಿಕೊಂಡು ಪೋಸ್ಟರ್ ಶೇರ್ ಮಾಡಿದೆ. ಜನರಿಗೆ ಮಾಹಿತಿ ನೀಡಿದೆ. ಜನರಿಗೆ ಮದುವೆ ಡ್ರೆಸ್ ದಾನ ಮಾಡಲು ಮನವಿ ಮಾಡಿಕೊಂಡೆ ಎಂದು ನಾಸರ್ ಮುಂದುವರಿಸುತ್ತ ಹೋಗುತ್ತಾರೆ. ಜನ ಸಹ ಅಷ್ಟೆ ಉತ್ತಮ ಬೆಂಬಲ ನೀಡಿದರು. ಸಂಸ್ಥೆಗಳು ಬೆಂಬಲ ನೀಡಿದವು. ಬಟ್ಟೆಗಳನ್ನು ಡ್ರೈ ಕ್ಲೀನಿಂಗ್ ಮಾಡಿದ ನಂತರ ಬಡ ಕುಟುಂಬಗಳಿಗೆ ನೀಡಲು ಆರಂಭಿಸಿದವು.

ಆನ್ ಲೈನ್ ನಲ್ಲೇ ಮದುವೆ ನೋಂದಣಿ.. ಹೇಗೆ ಮಾಡಬೇಕು?

ನಾಸರ್ ಇತ್ತೀಚೆಗೆ ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಯ ಗಡಿಯಲ್ಲಿರುವ ಥೂಥಾ ಪಟ್ಟಣದ ಬಾಡಿಗೆ ಅಂಗಡಿಯೊಮದರ ಜಾಗಕ್ಕೆ ಡ್ರೆಸ್ ಬ್ಯಾಂಕ್ ವರ್ಗಾವಣೆ ಮಾಡಿದೆವು. ಯಾವುದೇ ಪೋಷಕರು ತಮ್ಮ ಮಗಳಿಗೆ ಮದುವೆಯ ಡ್ರೆಸ್ ಬಯಸಿದರೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ನಮ್ಮಲ್ಲಿ ಈಗ 600 ಕ್ಕಿಂತಲೂ ಹೆಚ್ಚು ವಿಧದ ಮದುವೆ ಉಡುಪುಗಳಿವೆ. ಈ ಬಟ್ಟೆಗಳ ಬೆಲೆ ಮೂಲತಃ 3,000 ರಿಂದ 60,000 ರೂ.

, ಮಹಿಳೆಯ ವಧು ಮತ್ತು ಪೋಷಕರು ನೇರವಾಗಿ ಡ್ರೆಸ್ ಬ್ಯಾಂಕ್‌ಗೆ ಭೇಟಿ ನೀಡಬಹುದು ಮತ್ತು ಆ ವಸ್ತುವಿನ ಬೆಲೆಯ ಹೊರತಾಗಿಯೂ ತನಗೆ ಬೇಕಾದ ಡ್ರೆಸ್ ಐಟಂ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಬಳಸಿದ ನಂತರ ಉಡುಗೆಯನ್ನು ಹಿಂದಿರುಗಿಸುವಂತೆ ನಾವು ಎಂದಿಗೂ ಅವರನ್ನು ಕೇಳುವುದಿಲ್ಲ ಎಂದು ನಾಸರ್ ತಿಳಿಸುತ್ತಾರೆ. ಅಲ್ಲೇ ಇಲ್ಲಿ ವಿವಿಧ ಧರ್ಮಗಳು ಮತ್ತು ಜಾತಿಗಳ ಎಲ್ಲಾ ವಿವಾಹ ಪದ್ಧತಿಗಳಿಗೆ ಉಡುಪುಗಳು ಇವೆ ಎಂದು ತಿಳಿಸುತ್ತಾರೆ.

 ಅಲಿಪರಂಬ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿಟಿ ನೌಶಾದ್ ಅಲಿ ಹೇಳುವಂತೆ, ಈ ಯೋಜನೆ ನಮ್ಮ ಪಂಚಾಯತ್ ಮತ್ತು ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನೆರೆಯ ಪಂಚಾಯತ್‌ಗಳ ಕುಟುಂಬಗಳಿಗೆ ಪ್ರಯೋಜನಕಾರಿಯಾಗಿದೆ. ಈಗ, ರಾಜ್ಯದ ವಿವಿಧ ಭಾಗಗಳಿಂದ ಅನೇಕ ಕುಟುಂಬಗಳು ಈ ಉಡುಪುಗಳನ್ನು ಪಡೆಯಲು ಬರುತ್ತಿವೆ ಎನ್ನುತ್ತಾರೆ. 

ಪೆರಿಂತಲ್ಮಣ್ಣ ಶಾಸಕ ನಜೀಬ್ ಕಾಂತಪುರಂ ಮಾತನಾಡುತ್ತಾ, ಈ ರೀತಿಯ ಕೆಲಸ ಮಾಡುತ್ತ ನಾಸರ್ ಎಲ್ಲ ಕುಟುಂಬಗಳ ಆಶೀರ್ವಾದಕ್ಕೆ ಪಾತ್ರವಾಗಿದ್ದಾರೆ ಎನ್ನುತ್ತಾರೆ. ಒಮ್ಮೆ ಧರಿಸಿದ ಮದುವೆ ವಸ್ತ್ರವನ್ನು ಜೀವನದಲ್ಲಿ ಮತ್ತೆ ಧರಿಸುವುದಿ ಇಲ್ಲ. ಅದು ಕಪಾಟಿನ ಮೂಲೆ ಸೇರುವ ಬದಲು ಈ ರೀತಿ ದಾನ ಮಾಡಿದರೆ ಬಡ ಕುಟುಂಬಗಳಿಗೆ ನೆರವಾಗುತ್ತದೆ ಎನ್ನುತ್ತಾರೆ.