ಯುವತಿಯ ಜೋಕಾಲಿ ಆಟಕ್ಕೆ 800 ಮನೆಗೆ ಪವರ್ ಕಟ್, ಸುಸ್ತಾದ ಪೊಲೀಸರಿಂದ ಶೂಟೌಟ್ ಆರ್ಡರ್!
ಯುವತಿ ಆಟವಾಡಿದರೂ ಇತರರಿಗೇನು ನಷ್ಟ ಅಂತೀರಾ? ಇಲ್ಲಿ ಯುವತಿ ಜೋಕಾಲಿ ಆಟವಾಡಿರುವುದು ಹೈಟೆನ್ಶನ್ ವಿದ್ಯುತ್ ವೈಯರ್ ಮೇಲೆ. ಹೀಗಾಗಿ 800 ಮನೆ ಕತ್ತಲಲ್ಲಿ ದಿನಕಳೆಯಬೇಕಾಯಿತು.
ಉಟ್ಹ(ನ.15) ಗಂಡ ಹೆಂಡತಿ ಜಗಳ ಬಳಿಕ ವಿದ್ಯುತ್ ಕಂಬ ಏರಿದ ಘಟನೆ, ಮಾನಸಿಕ ಅಸ್ವಸ್ಥ ವಿದ್ಯುತ್ ಕಂಬ ಹತ್ತಿ ಅವಾಂತರ ಘಟನೆ ಕೇಳಿರುತ್ತೀರಿ. ಇದೇ ರೀತಿಯ ಘಟನೆಯೊಂದು ನಡೆದಿದ. ಯುವತಿಯೊಬ್ಬಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ್ದಾಳೆ. ಬಳಿಕ ಹೈಟೆನ್ಶನ್ ವೈಯರ್ ಮೇಲೆ ಕಸರತ್ತು ಆರಂಭಿಸಿದ್ದಾಳೆ. ಯುವತಿ ಟ್ರಾನ್ಸ್‌ಫಾರ್ಮರ್ ಹತ್ತುವುದು ಗಮನಿಸಿದ ವಿದ್ಯುತ್ ಇಲಾಖೆ ಸಿಬ್ಬಂದಿಗಳು ತಕ್ಷಣವೇ ವಿದ್ಯುತ್ ಪ್ರಸರಣ ನಿಲ್ಲಿಸಿದ್ದಾರೆ. ಅತ್ತ ಅದೆಷ್ಟೇ ಮನವಿ ಮಾಡಿದರೂ ಯುವತಿ ಕೆಳಗಿಳಿಯಲಿಲ್ಲ. ಇತ್ತ 800ಕ್ಕೂ ಹೆಚ್ಚು ಮನೆಗಳು ಯುವತ ಕಾರಣದಿಂದ ಕತ್ತಲಲ್ಲಿ ಕಳೆಯಬೇಕಾಗಿ ಬಂದ ಪರಿಸ್ಥಿತಿ ಅಮೇರಿಕದ ಉಟ್ಹದಲ್ಲಿ ನಡೆದಿದೆ.
ಸಾಲ್ಟ್ ಲೇಕ್ ಸಿಟಿ ಸೇರಿದಂತೆ ಒಂದು ಸಂಪೂರ್ಣ ಭಾಗ ಕತ್ತಲಲ್ಲಿ ಮುಳುಗಿದ ಘಟನೆ ನಡೆದಿದೆ. ಕಾರಣ ಯುವತಿ ಟ್ರಾನ್ಸ್‌ಫಾರ್ಮರ್ ಬಾಕ್ಸ್ ಮೇಲಿನ ಮಕ್ಕಳಾಟ. ಗ್ಲಾಡೋಲಿಯಾ ಸ್ಟ್ರೀಟ್ ಬಳಿ ರುವ ವಿದ್ಯುತ್ ಘಟಕ ನಗರ ಹಾಗೂ ರೆಸಿಡೆನ್ಸಿ ವಲಯಕ್ಕೆ ವಿದ್ಯುತ್ ಪೂರೈಸುತ್ತಿದೆ. ಇದಕ್ಕಿದ್ದಂತೆ ವಿದ್ಯುತ್ ಘಟಕ್ಕೆ ಆಗಮಿಸಿದ ಯುವತಿ ನೇರವಾಗಿ ಟ್ರಾನ್ಸ್‌ಫಾರ್ಮ್ ಕಂಬದ ಬಳಿ ಬಂದಿದ್ದಾಳೆ. ಬಳಿಕ ಟ್ರಾನ್ಸ್‌ಫಾರ್ಮರ್ ಹತ್ತಿದ್ದಾಳೆ.
ರೀಲ್ಸ್‌ಗಾಗಿ ವಿದ್ಯುತ್ ಕಂಬ ಹತ್ತಿ ತುಂಬಿ ಹರಿಯುತ್ತಿರುವ ಗಂಗಾ ನದಿ ಹಾರಿದ ಯುವಕ!
ಯುವತಿ ಟ್ರಾನ್ಸ್‌ಫಾರ್ಮರ್ ಕಂಬ ಹತ್ತುತ್ತಿದ್ದಂತೆ ವಿದ್ಯುತ್ ಘಟಕದ ಸಿಬ್ಬಂದಿಗಳು ವಿದ್ಯುತ್ ಪ್ರಸರಣ ನಿಲ್ಲಿಸಿದ್ದಾರೆ. ಯುವತಿಯ ಸುಟ್ಟು ಭಸ್ಮವಾಗುವ ಸಾಧ್ಯತೆಯಿಂದ ತಕ್ಷಣವೇ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪೂರ್ಣ ಆಫ್ ಮಾಡಿದ್ದಾರೆ. ಬಳಿಕ ಯುವತಿಯನ್ನು ಕಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ ಸಿಬ್ಬಂದಿಗಳ ಮಾತಿಗೆ ಯುವಕಿ ಕ್ಯಾರೇ ಎಂದಿಲ್ಲ. ಹೀಗಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣೇ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತನ್ನು ಯುವತಿ ಕೇಳಿಲ್ಲ. ಅದೆಷ್ಟು ಮನವಿ ಮಾಡಿದರೂ ಯುವತಿ ಮಾತ್ರ ಕೇಳಲೇ ಇಲ್ಲ. ಹೈಟೆನ್ಶನ್ ವೈಯರ್ ಹತ್ತಿ ನೇತಾಡಲು ಆರಂಭಿಸಿದ್ದಾಳೆ. ಒಂದು ಘಟಕದ ವಿದ್ಯುತ್ ಸಂಪೂರ್ಣ ನಿಲ್ಲಿಸಿದ್ದಾರೆ. ಯುವತಿ ಇದೇ ರೀತಿ ಮಾಡಿ ಪಕ್ಕದಲ್ಲಿರುವ ಮತ್ತೊಂದು ಟ್ರಾನ್ಸ್‌ಫಾರ್ಮರ್ ಬಾಕ್ಸ್ ಹತ್ತಿದರೆ ಅಪಾಯ ಖಚಿತ ಅನ್ನೋದು ಸಿಬ್ಬಂದಿಗಳು ಸೂಚಿಸಿದ್ದಾರೆ. ಹೀಗಾಗಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಲು ಮುಂದಾಗಿದ್ದಾರೆ.
ತಕ್ಷಣವೇ ಕೆಳಗಿಳಿಯದಿದ್ದರೆ ಶೂಟ್ ಮಾಡುವುದಾಗಿ ಪೊಲೀಸರು ಸಂದೇಶ ನೀಡಿದ್ದಾರೆ. ಆದರೆ ಯುವತಿ ಮಾತ್ರ ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇತ್ತ ಪೊಲೀಸರು ಏರ್ ಗನ್ ರೀತಿಯ ಲೀಥಲ್ ಗನ್ ಬಳಸಿ ಯುವತಿ ಕಾಲಿಗೆ ಶೂಟ್ ಮಾಡಿದ್ದಾರೆ. ಈ ಗನ್‌ನ ಗುಂಡು ತಗುಲಿದರೆ ಗಾಯವಾಗಲಿದೆ. ಆದರೆ ಹೆಚ್ಚಿನ ಅಪಾಯವೇನು ಇಲ್ಲ. ಪೊಲೀಸರ ಲೀಥಲ್ ಗನ್ ಶಾಟ್‌ನಿಂದ ಯುವತಿ ಕೆಳಕ್ಕೆ ಬಿದ್ದಿದ್ದಾಳೆ. ತಕ್ಷಣವೇ ಯುವತಿಯನ್ನು ರಕ್ಷಿಸಿದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ.
ಮೇಲಿಂದ ಬಿದ್ದ ಕಾರಣ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇತ್ತ ಲೀಥಲ್ ಗನ್ ಶಾಟ್ ಗಾಯವೂ ಆಗಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಯುವತಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ. ಹೀಗಾಗಿ ಅತೀರೇಖದ ಪ್ರಯತ್ನ ಮಾಡಿದ್ದಾಳೆ. ಸದ್ಯ ವೈದ್ಯರ ನಿಗಾದಲ್ಲಿರುವ ಯುವತಿಯನ್ನು ಶೀಘ್ರದಲ್ಲೇ ಆರೈಕೆ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದಿದ್ದಾರೆ. ಯುವತಿ ಕುಟುಂಬಸ್ಥರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ವೈದ್ಯರ ವರದಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಯುವತಿ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲಿದ್ದೇವೆ ಎಂದು ಅಮೆರಿಕ ಪೊಲೀಸರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದು ಅಚ್ಚರಿಯಾದರೂ ಸತ್ಯ, ವಿದ್ಯುತ್ ಕಂಬ ಹತ್ತಿದ ಮಹೀಂದ್ರ ಥಾರ್!