Asianet Suvarna News Asianet Suvarna News

ರೀಲ್ಸ್‌ಗಾಗಿ ವಿದ್ಯುತ್ ಕಂಬ ಹತ್ತಿ ತುಂಬಿ ಹರಿಯುತ್ತಿರುವ ಗಂಗಾ ನದಿ ಹಾರಿದ ಯುವಕ!

ಯುವಕನೊಬ್ಬ ರೀಲ್ಸ್‌ಗಾಗಿ ಅಪಾಯಾಕಾರಿ ಸ್ಟಂಟ್ ಮಾಡಿದ್ದಾನೆ. ವಿದ್ಯುತ್ ಕಂಬ ಹತ್ತಿದ ಯುವಕ ಗಂಗಾ ನದಿಗೆ ಹಾರಿ ರೀಲ್ಸ್ ಮಾಡಿದ್ದಾನೆ. ಈತನ ಹುಚ್ಚು ಸಾಹಸವನ್ನು ಹಲವರು ನಿಂತು ರೆಕಾರ್ಡ್ ಮಾಡಿದ್ದಾರೆ.
 

Man jump ganga river after climbing electric pole for reels in kanpur ckm
Author
First Published Aug 8, 2024, 9:38 AM IST | Last Updated Aug 8, 2024, 9:38 AM IST

ಕಾನ್ಪುರ(ಆ.8) ರೀಲ್ಸ್ ಹುಚ್ಚಾಟಕ್ಕೆ ಹಲವು ಜೀವಗಳು ಬಲಿಯಾಗಿದೆ. ಇದೀಗ ಯುವಕನೊಬ್ಬ ಅಪಾಯಾಕಾರಿಯಾಗಿ ಸ್ಟಂಟ್ ಮಾಡಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಯುವಕನೊಬ್ಬ ಗಂಗಾ ನದಿ ತಟದಲ್ಲಿನ ವಿದ್ಯುತ್ ಕಂಬಕ್ಕೆ ಹತ್ತಿ ನದಿಗೆ ಹಾರಿದ ಘಟನೆ ನಡೆದಿದೆ. ರೀಲ್ಸ್‌ಗಾಗಿ ಈತ ಹುಟ್ಟಾಟ ನಡೆಸಿದ್ದಾನೆ. ಕಾನ್ಪುರದ ಭೈರವ್ ಘಾಟ್ ಬಳಿ ಈ ಘಟನೆ ನಡೆದಿದೆ. ಭೈರವ್ ಘಾಟ್ ಅಂಚಿನಲ್ಲಿರುವ ವಿದ್ಯುತ್ ಕಂಬಕ್ಕೆ ಈತ ಹತ್ತಿ ತುಂಬಿ ಹರಿಯುತ್ತಿರುವ ನದಿಗೆ ಯುವಕ ಹಾರಿದ್ದಾನೆ. ಈ ವಿಡಿಯೋ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಭೈರವ್ ಘಾಟ್ ತಟದಲ್ಲಿ ವಿದ್ಯುತ್ ಕಂಬವಿದೆ. ಈ ಕಂಬಕ್ಕೆ ಸಪೋರ್ಟ್ ಆಗಿ ಮತ್ತೊಂದು ವಿದ್ಯುತ್ ಕಂಬವನ್ನು ಅಳವಡಿಸಲಾಗಿದೆ. ಈ ಕಂಬದ ಮೂಲಕ ವಿದ್ಯುತ್ ಕಂಬ ಹತ್ತಿದ್ದಾನೆ. ಬಳಿಕ ವಿದ್ಯುತ್ ಕಂಬದ ಮೇಲೆ ಕೆಲ ಹೊತ್ತು ನಿಂತಿದ್ದಾನೆ. ಅದೃಷ್ಠವಶಾತ್ ಈ ವೇಳೆ ವಿದ್ಯುತ್ ಪ್ರವಹಿಸುತ್ತಿರಲಿಲ್ಲ. ಹೀಗಾಗಿ ಈತ ಪ್ರಾಣಪಾಯದಿಂದ ಪಾರಾಗಿದ್ದಾನೆ. ಇನ್ನು ನದಿಗೆ ಹಾರಿದ ಈ ಯುವಕ ಬಳಿಕ ಈಜಿ ದಡ ಸೇರಿದ್ದಾರೆ.

ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಆಕ್ರೋಶಗಳು ಹೆಚ್ಚಾಗುತ್ತಿದೆ. ಈ ರೀತಿಯ ಹುಚ್ಚಾಟಕ್ಕೆ ಕಡಿಣವಾಣ ಹಾಕಬೇಕು. ಅಪಾಯಾಕಾರಿ ಸ್ಟಂಟ್ ಮೂಲಕ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಈ ರೀತಿಯ ಸಾಹಸಕ್ಕೆ ಅವಕಾಶ ನೀಡಬಾರದು. ಇದು ಉತ್ತಮ ಸಮಾಜಕ್ಕೆ ನೀಡುವ ಕೆಟ್ಟ ಸಂದೇಶವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ವಿದ್ಯುತ್ ಕಂಬಕ್ಕೆ ಹತ್ತಲು ಅಧಿಕಾರ ಕೊಟ್ಟಿದ್ದು ಯಾರು? ಸಿಬ್ಬಂದಿಗಳು ಎಲ್ಲಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.  

 

 

ಈ ರೀತಿಯ ಹಲವು ಘಟನೆಗಳು ವರದಿಯಾಗುತ್ತಿದೆ. ತುಂಬಿ ಹರಿಯುತ್ತಿರುವ ನದಿ ನೀರಿಗೆ ಹಾರಿ ಹುಟ್ಟಾಟ ಪ್ರದರ್ಶಿಸುವ ಘಟನೆಗಳು ಹೆಚ್ಚಾಗುತ್ತಿದೆ. ಜಲಪಾತಗಳ ಮೇಲಿಂದ ಹಾರಿ ಸಾಹಸ ಪ್ರದರ್ಶನ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಈ ರೀತಿಯ ಸ್ಟಂಟ್ ವೇಳೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ

ಇತ್ತೀಚೆಗೆ ರೈಲ್ವೇ ಪೊಲೀಸರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡುತ್ತಾ ವಿಡಿಯೋ ಮಾಡುತ್ತಿದ್ದ ಯವಕ ಹಲವು ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಈತನ ವಿಡಿಯೋಗಳು ಬಾರಿ ವೈರಲ್ ಆಗಿತ್ತು. ಆದರೆ ಇದೇ ರೀತಿಯ ಸ್ಟಂಟ್ ವೇಳೆ ಯುವಕ ಎಡಗೈ ಹಾಗೂ ಎಡ ಕಾಲನ್ನು ಕಳೆದುಕೊಂಡಿದ್ದಾನೆ. ಇದೀಗ ಬದುಕು ಸಾಗಿಸುವುದೇ ದುಸ್ತರವಾಗಿದೆ.

ಹಾಡ ಹಗಲೇ ಮಹಿಳೆ ಹತ್ಯೆಗೈದು ಮೃತದೇಹ ಗಂಗಾ ನದಿಗೆ ಎಸೆದ ದೃಶ್ಯ ಸೆರೆ, ಪೊಲೀಸರು ಅಲರ್ಟ್!
 

Latest Videos
Follow Us:
Download App:
  • android
  • ios