ಇದು ಅಚ್ಚರಿಯಾದರೂ ಸತ್ಯ, ವಿದ್ಯುತ್ ಕಂಬ ಹತ್ತಿದ ಮಹೀಂದ್ರ ಥಾರ್!
ಥಾರ್ ಜೀಪ್ ರಸ್ತೆಯಲ್ಲಿ, ಆಫ್ ರೋಡ್, ಬೆಟ್ಟ, ಗುಡ್ಡ ಹತ್ತುವುದನ್ನು ನೋಡಿರುತ್ತೀರಿ. ಈ ಥ್ರಿಲ್ಲಿಂಗ್ ಡ್ರೈವ್ ನೀವು ಮಾಡಿರುತ್ತೀರಿ. ಆದರೆ ಮಹೀಂದ್ರ ಥಾರ್ ವಿದ್ಯುತ್ ಕಂಬ ಹತ್ತಿದೆ ಎಂದರೆ ನಂಬೋದು ಕಷ್ಟ. ಆದರೆ ಇದು ಸತ್ಯ. ಇಲ್ಲಿದೆ ವಿಡಿಯೋ
ಹರ್ಯಾಣ(ಜು.9) ಹಾಟ್ ಕೇಕ್‌ನಂತೆ ಸೇಲಾಗುತ್ತಿರುವ ಮಹೀಂದ್ರ ಥಾರ್ ಯಾವುದೇ ರಸ್ತೆಗೂ ಸೈ. ಬೆಟ್ಟ ಗುಡ್ಡ, ಕಲ್ಲುಗಳ ತುಂಬಿದ ರಸ್ತೆಯಲ್ಲೂ ಥಾರ್ ಸಲೀಸಾಗಿ ಸಾಗುವಂತೆ ಕಂಪನಿ ಈ ಕಾರು ನಿರ್ಮಾಣ ಮಾಡಿದೆ. ಆದರೆ ಕಂಪನಿ ಯಾವತ್ತು ಇದೇ ಮಹೀಂದ್ರ ಥಾರ್ ವಿದ್ಯುತ್ ಕಂಬ ಏರಲಿದೆ ಅನ್ನೋದನ್ನು ಕಲ್ಪನೆ ಕೂಡ ಮಾಡಿರಲು ಸಾಧ್ಯವಿಲ್ಲ. ಹೌದು, ರಸ್ತೆಯಲ್ಲಿ ಸಾಗುತ್ತಿದ್ದ ಮಹೀಂದ್ರ ಥಾರ್ ನೇರವಾಗಿ ವಿದ್ಯುತ್ ಕಂಬ ಹತ್ತಿದ ಘಟನೆ ಹರ್ಯಾಣದ ಗುರುಗ್ರಾಂನಲ್ಲಿ ನಡೆದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಮಹೀಂದ್ರ ಥಾರ್ ಏಕಾಏಕಿ ವಿದ್ಯುತ್ ಕಂಬ ಹತ್ತಿದ್ದು ಹೇಗೆ ಅನ್ನೋ ಕುತೂಹಲ ಹಲವರಲ್ಲಿ ಮನೆ ಮಾಡಿದೆ. ಹೌದು ಅಂಚಲ್ ಗುಪ್ತಾ ಅನ್ನೋ ಮಹಿಳೆ ಈ ಥಾರ್ ಮಾಲಕಿ. ರಸ್ತೆಯಲ್ಲಿ ನಿಯಮಿತ ವೇಗದಲ್ಲಿ ಅಂಚಲ್ ಗುಪ್ತಾ ಥಾರ್ ಮೂಲಕ ಸಾಗುತ್ತಿದ್ದರು. ಈ ವೇಳೆ ಹೊಂಡಾ ಅಮೇಜ್ ಕಾರು ವೇಗವಾಗಿ ಬಂದು ಥಾರ್ ಜೀಪ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಅಂಚಲ್ ಗುಪ್ತ ಥಾರ್ ಜೀಪ್ ನಿಯಂತ್ರಣ ಕಳೆದುಕೊಂಡಿದ್ದಾರೆ.
ಯುವಕರ ರೀಲ್ಸ್ ಹುಚ್ಚಿಗೆ ಎರಡು ಮಹೀಂದ್ರ ಥಾರ್ ಸಮುದ್ರ ಪಾಲು, ಭಯಾನಕ ವಿಡಿಯೋ!
ರಸ್ತೆ ಬದಿಯಲ್ಲಿನ ಕಲ್ಲು, ಸಿಮೆಂಟ್ ತಡೆಗೊಡೆಗಳನ್ನು ದಾಟಿದ ಥಾರ್ ಜೀಪು ನೇರವಾಗಿ ವಿದ್ಯುತ್ ಕಂಬದ ಮುಂಭಾಗದಲ್ಲಿದ್ದ ಕಲ್ಲಿನ ಆಕೃತಿಯ ತಡೆಗೊಡೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಥಾರ್ ಮುಂಭಾ ಮೇಲಕ್ಕೆ ಹಾರಿದೆ. ಮರುಕ್ಷಣದಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಒಂದೇ ಸಮನೆ ಕಂಬದ ಮೇಲಕ್ಕೆ ಚಲಿಸಿ ಸಿಲುಕಿ ಕೊಂಡಿದೆ.
Thats power of mahindra thar #haryananews #AnandMahindra #Gurugram . pic.twitter.com/lqOOyrFUJ5
— Manish kumar (@Manishk76744221) July 8, 2024
ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ರಭಸದಿಂದ ಡಿಕ್ಕಿಯಾಗಿಲ್ಲ. ಹೀಗಾಗಿ ವಿದ್ಯುತ್ ಕಂಬ ಧರೆಗುರಳದೆ ನಿಂತಿದೆ. ಈ ವೇಳೆ ಸ್ಥಳೀಯರು, ರಸ್ತೆಯಲ್ಲಿನ ಇತರ ವಾಹನಗಳ ಸವಾರರು ಓಡಿ ಬಂದಿದ್ದಾರೆ. ಅಂಚಲ್ ಗುಪ್ತಾ ಅವರನ್ನು ನಿಧಾನವಾಗಿ ಕಾರಿನಿಂದ ಇಳಿಸಿದ್ದಾರೆ. ಅಂಚಲ್ ಗುಪ್ತಾಗೆ ಯಾವುದೇ ಗಾಯಗಳಾಗಿಲ್ಲ. ರಸ್ತೆಯಲ್ಲಿ ಇತರ ವಾಹನಗಳಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಅಂಚಲ್ ಗುಪ್ತಾ ಪೆಟ್ರೋಲ್ ಪಂಪ್‌ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೋಂಡಾ ಅಮೇಜ್ ಕಾರು ವೇಗವಾಗಿ ಬಂದುು ಹಿಂಭದಿಯಿಂದ ಡಿಕ್ಕಿ ಹೊಡೆದಿದೆ. ಥಾರ್ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಇತ್ತ ಡಿಕ್ಕಿ ಹೊಡೆದ ಹೋಂಡಾ ಅಮೇಜ್ ಸವಾರರು ಪರಾರಿಯಾಗಿದ್ದಾರೆ.
ಮಹೀಂದ್ರ ಕಂಪನಿಯ ಥಾರ್ ಜೀಪ್ ಭಾರಿ ಬೇಡಿಕೆ ಹಾಗೂ ಜನಪ್ರಿಯತೆ ಪಡೆದುಕೊಂಡಿದೆ. ಎಲ್ಲೆಡೆ ಥಾರ್ ವಾಹನ ಕಾಣಸಿಗುತ್ತದೆ. ಥಾರ್ ಆಕರ್ಷಕ ವಿನ್ಯಾಸ, ವಾಹನದ ಸಾಮರ್ಥ್ಯ ಉತ್ತಮವಾಗಿದೆ. ಇದೀಗ ಥಾರ್ ವಿದ್ಯುತ್ ಕಂಬವನ್ನೂ ಹತ್ತಿದೆ ಎಂದು ಹಲವರು ವಿಡಿಯೋಗಳಿಗೆ ಕಮೆಂಟ್ ಮಾಡಿದ್ದಾರೆ.
ಸರ್ಫ್ರಾಜ್ ಖಾನ್ ತಂದೆಗೆ ಥಾರ್ ಕಾರ್ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ