MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮೆಟಾ ಸ್ಫೋಟಕ ಸಮೀಕ್ಷಾ ವರದಿ

ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮೆಟಾ ಸ್ಫೋಟಕ ಸಮೀಕ್ಷಾ ವರದಿ

ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮಟಾ ಸಮೀಕ್ಷಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶೇ.19ರಷ್ಟು ಮಂದಿ ಈ ಕುರಿತು ರಿಪೋರ್ಟ್ ಮಾಡಿದ್ದಾರೆ. 

1 Min read
Author : Chethan Kumar
Published : Feb 24 2026, 04:15 PM IST
Share this Photo Gallery
  • FB
  • TW
  • Linkdin
  • Whatsapp
15
ಸೋಶಿಯಲ್ ಮೀಡಿಯಾ ಆಪತ್ತು
Image Credit : Getty

ಸೋಶಿಯಲ್ ಮೀಡಿಯಾ ಆಪತ್ತು

ಭಾರತದಲ್ಲಿ ಸೋಶಿಯಲ್ ಮೀಡಿಯಾ ಬಳಕೆಗೆ ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ. ಹೀಗಾಗಿ ಮಕ್ಕಳಿಂದ ಹಿಡಿದು ಬಹುತೇಕ ಎಲ್ಲರು ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಆ್ಯಪ್ ಬಳಸುತ್ತಿದ್ದಾರೆ. ಆದರೆ ಮೆಟಾ ನಡೆಸಿದ ಆಂತರಿಕ ಸಮೀಕ್ಷೆಯೊಂದು ಹೊರಬಿದ್ದಿದೆ. ಇದು ಪೋಷಕರ ಚಿಂತೆ ಹೆಚ್ಚಿಸಿದೆ. ಈ ವರದಿ ಪ್ರಕಾರ ಇನ್‌ಸ್ಟಾಗ್ರಾಂ ಮಕ್ಕಳು ಹಾಗೂ ಹದಿಹರೆಯದ ಮಂದಿಗೆ ಆಪತ್ತು ತರುತ್ತಿದೆ ಎನ್ನುತ್ತಿದೆ.

25
ಅಶ್ಲೀಲ ಚಿತ್ರ ಪ್ರತ್ಯಕ್ಷ
Image Credit : Getty

ಅಶ್ಲೀಲ ಚಿತ್ರ ಪ್ರತ್ಯಕ್ಷ

13 ರಿಂದ 15 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಂ ಬಳಕೆ ಮಾಡುವಾಗ ಅಶ್ಲೀಲ ಫೋಟೋಗಳು ಪ್ರದರ್ಶನವಾಗುತ್ತದೆ. ನಾವು ಕ್ಲಿಕ್ ಮಾಡಿದ್ದರೂ, ಸರ್ಚ್ ಮಾಡದಿದ್ದರೂ ಅಶ್ಲೀಲ ಫೋಟೋಗಳು ಕಾಣುತ್ತದೆ. ಶೇಕಡಾ 19 ರಷ್ಟು ಹದಿಹರೆಯದ ಮಂದಿ ಅಶ್ಲೀಲ ಫೋಟೋ ಪ್ರತ್ಯಕ್ಷವಾಗುತ್ತಿದೆ ಎಂದು ರಿಪೋರ್ಟ್ ಮಾಡಿದ್ದಾರೆ. ಇನ್ನು ಹಲವರು ಇನ್‌ಸ್ಟಾಗ್ರಾಂ ತೋರಿಸುವ ಅಶ್ಲೀಲ ಫೋಟೋಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

Related Articles

Related image1
Instagram ಸ್ನೇಹಕ್ಕೆ ಬಲಿಯಾದ ಅಪ್ರಾಪ್ತೆ: ಪೋಷಕರಿಲ್ಲದ ವೇಳೆ ಮನೆಗೆ ನುಗ್ಗಿದ ಕಾಮುಕ, ಮುಂದೆ ನಡೆದಿದ್ದೇನು ನೋಡಿ!
Related image2
Gen Z: ಪರ್ಫೆಕ್ಟ್ ಬಾಡಿಗಾಗಿ ಜಿಮ್ ಅಡಿಕ್ಷನ್! Instagram ಲೈಕ್ಸ್‌ಗಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ ಯುವಕರು!
35
ಹದಿಹರೆಯದವರ ಮೇಲೆ ಪರಿಣಾಮ
Image Credit : Getty

ಹದಿಹರೆಯದವರ ಮೇಲೆ ಪರಿಣಾಮ

ಕ್ಯಾಲಿಫೋರ್ನಿಯಾದಲ್ಲಿ ಈ ಕುರಿತು ದಾಖಲಾಗಿರುವ ದೂರಿನ ಕಾರಣದಿಂದ ಆಂತರಿಕ ಸಮೀಕ್ಷೆ ನಡೆಸಿ ಕ್ಯಾಲಿಫೋರ್ನಿಯಾ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈ ವದಿಯ ಸ್ಫೋಟಕ ಅಂಶಗಳು ಬಯಲಾಗಿದೆ. ಈ ರೀತಿಯ ಅಶ್ಲೀಲ ಚಿತ್ರಗಳು ಹದಿಹರೆಯದವರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.ಕ್ಯಾಲಿಫೋರ್ನಿಯಾ ಕೋರ್ಟ್ ಇನ್‌ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೊಸ್ಸೆರಿ ವಿಚಾರಣೆ ನಡೆಸಿದೆ.

45
ಮಕ್ಕಳೇ ಟಾರ್ಗೆಟ್
Image Credit : Asianet News

ಮಕ್ಕಳೇ ಟಾರ್ಗೆಟ್

ಈ ವರದಿಯಲ್ಲಿ ಹಲವು ಸ್ಫೋಟಕ ಮಾಹಿತಿಗಳಿವೆ. ಇನ್‌ಸ್ಟಾಗ್ರಾಂ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದೆ ಎಂದಿದೆ. ಹದಿ ಹರೆಯದ ಮಕ್ಕಳನ್ನು ಇನ್‌ಸ್ಟಾಗ್ರಾಂ ಸೆಳೆಯುವಂತೆ ಮಾಡುತ್ತಿದೆ. ಇದರಿಂದ ಮಕ್ಕಳು, ಆವರ ಆಪ್ತರು, ಗೆಳೆಯರು, ಪೋಷಕರು ಬಳಸುವಂತೆ ಮಾಡುವುದು ಇನ್‌ಸ್ಟಾಗ್ರಾಂ ಉದ್ದೇಶವಾಗಿದೆ. ಇದರ ನಡುವೆ ಹದಿಹರೆಯದ ಮಕ್ಕಳನ್ನು ಇನ್‌ಸ್ಟಾದಲ್ಲಿ ಅಡಿಕ್ಟ್ ಮಾಡುವಂತೆ ಮಾಡಲು ಅಶ್ಲೀಲ ಫೋಟೋ, ಅನಗತ್ಯ ಫೋಟೋಗಳನ್ನು ಕಾಣುವಂತೆ ಮಾಡಲಾಗುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

55
ಇನ್‌ಸ್ಟಾಗ್ರಾಂಗೆ ಕಾನೂನು ಸಂಕಷ್ಟ
Image Credit : Getty

ಇನ್‌ಸ್ಟಾಗ್ರಾಂಗೆ ಕಾನೂನು ಸಂಕಷ್ಟ

ಇನ್‌ಸ್ಟಾಗ್ರಾಂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಅಶ್ಲೀಲ ಫೋಟೋಗಳನ್ನು ನೋಡಬೇಕಾಗಿ ಬಂದಿದೆ. ಹಲವರಲ್ಲಿ ಇನ್‌ಸ್ಟಾಗ್ರಾಂ ಹುಚ್ಚು ಹಿಡಿಸಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಅನ್ನೋ ಆರೋಪದ ಜೊತೆಗೆ ಕಾನೂನು ಸಂಕಷ್ಟ ಎದುರಿಸುತ್ತಿದೆ.

ಇನ್‌ಸ್ಟಾಗ್ರಾಂಗೆ ಕಾನೂನು ಸಂಕಷ್ಟ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಇನ್‌ಸ್ಟಾಗ್ರಾಂ
ಸಾಮಾಜಿಕ ಮಾಧ್ಯಮ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಶತಮಾನದ ಸುದೀರ್ಘ ಸೂರ್ಯ ಗ್ರಹಣ: ಹಗಲು ಸಂಪೂರ್ಣ ಕತ್ತಲು- ಯಾವಾಗ, ಎಲ್ಲಿ? ಏನಿದರ ಮಹತ್ವ?
Recommended image2
ಸಿಕ್ಕ ವಾಹನ ಏರಿಇರಾನ್‌ ದೇಶಬಿಡಿ : ಭಾರತೀಯರಿಗೆಸರ್ಕಾರ ಸೂಚನೆ
Recommended image3
ಕುಖ್ಯಾತ ಡ್ರಗ್ಸ್‌ ದೊರೆ ಹತ್ಯೆ : ಯಾರು ಮಂಚೋ? ಡ್ರಗ್‌ ಲಾರ್ಡ್‌ ಆಗಿದ್ದು ಹೇಗೆ?
Related Stories
Recommended image1
Instagram ಸ್ನೇಹಕ್ಕೆ ಬಲಿಯಾದ ಅಪ್ರಾಪ್ತೆ: ಪೋಷಕರಿಲ್ಲದ ವೇಳೆ ಮನೆಗೆ ನುಗ್ಗಿದ ಕಾಮುಕ, ಮುಂದೆ ನಡೆದಿದ್ದೇನು ನೋಡಿ!
Recommended image2
Gen Z: ಪರ್ಫೆಕ್ಟ್ ಬಾಡಿಗಾಗಿ ಜಿಮ್ ಅಡಿಕ್ಷನ್! Instagram ಲೈಕ್ಸ್‌ಗಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ ಯುವಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved