ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್
ಬಸ್ ಮಿಸ್ ಆಯ್ತು ಅಂತ ರೈಲು ಮಿಸ್ ಆಯ್ತು ಅಂತ ಅವುಗಳ ಹಿಂದೆ ಜನ ಓಡುವುದನ್ನು ನೀವು ನೋಡಿರಬಹುದು. ಆದರೆ ವಿಮಾನ ಮಿಸ್ ಆಯ್ತು ಅಂತ ಯಾರಾದರೂ ಓಡುವುದನ್ನು ನೋಡಿದ್ದೀರಾ? ಆ ಘಟನೆಯೂ ಈಗ ನಡೆದು ಹೋಗಿದೆ.

ಬಸ್ ಮಿಸ್ ಆಯ್ತು ಅಂತ ರೈಲು ಮಿಸ್ ಆಯ್ತು ಅಂತ ಅವುಗಳ ಹಿಂದೆ ಜನ ಓಡುವುದನ್ನು ನೀವು ನೋಡಿರಬಹುದು. ಆದರೆ ವಿಮಾನ ಮಿಸ್ ಆಯ್ತು ಅಂತ ಯಾರಾದರೂ ಓಡುವುದನ್ನು ನೋಡಿದ್ದೀರಾ? ಆ ಘಟನೆಯೂ ಈಗ ನಡೆದು ಹೋಗಿದೆ. ಆಸ್ಟ್ರೇಲಿಯಾದಲ್ಲಿ (Australia) ಈ ಘಟನೆ ನಡೆದಿದ್ದು ಭದ್ರತಾ ಲೋಪ ಎದುರಾಗಿದೆ. ಅದರ ವೀಡಿಯೋ ಈಗ ವೈರಲ್ ಆಗಿದೆ.
ವಿಮಾನದಲ್ಲಿ ಹೋಗುವುದು ಎಂದಾದರೆ ಕನಿಷ್ಟ ಒಂದು ಗಂಟೆಯಾದರೂ ವಿಮಾನ ನಿಲ್ದಾಣಕ್ಕೆ ಮೊದಲೇ ತಲುಪಿರಬೇಕು. ಆದರೆ ಇಲ್ಲೊಬ್ಬಳು ಮಹಿಳೆ ವಿಮಾನ ಇನ್ನೇನು ಟೇಕಾಫ್ ಆಗಬೇಕು ಅನ್ನುವಷ್ಟರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಬಳಿಕ ವಿಮಾನದ ಕೆಳೆಗೆ ರನ್‌ವೇಯಲ್ಲಿ ಓಡುವ ಮೂಲಕ ಈಗ ಕಂಬಿ ಎಣಿಸುತ್ತಿದ್ದಾಳೆ.
ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್
ಆಸ್ಟ್ರೇಲಿಯಾದ ಕ್ಯಾನ್‌ಬೆರ್ರಾದಲ್ಲಿ (Canberra Airport) ಮಹಿಳೆಯೊಬ್ಬರು ವಿಮಾನ ನಿಲ್ದಾಣಕ್ಕೆ (Airport) ವಿಳಂಬವಾಗಿ ಬಂದಿದ್ದಾರೆ. ಮಹಿಳೆ ವಿಮಾನ ಇರುವ ಜಾಗ ತಲುಪುವಷ್ಟರಲ್ಲಿ ವಿಮಾನದ ಡೋರ್‌ಗಳು ಬಂದ್ ಆಗಿದ್ದು, ಹಾರಲು ಸಿದ್ಧವಾಗಿವೆ. ಈ ವೇಳೆ ಮಹಿಳೆ ವಿಮಾನ ನಿಂತ ಜಾಗದತ್ತ ಡಾಂಬರು ಹಾಕಿದ ರನ್‌ವೇಯಲ್ಲಿ ಅಸಹಾಯಕತೆಯಿಂದ ಓಡುವ ದೃಶ್ಯ ವೈರಲ್ ಆಗಿದೆ.
ಟ್ರಾಫಿಕ್‌ನಲ್ಲಿ ಸಿಲುಕಿದವರಿಗೆ ಸಂಗೀತಾ ರಸದೌತಣ ನೀಡಿದ ಆಟೋ ಚಾಲಕ: ವೈರಲ್ ವೀಡಿಯೋ
ರನ್‌ವೇಯಲ್ಲಿ ಓಡಿದ ಆಕೆ ಜನ ಬಸ್ ನಿಲ್ಲಿಸಲು ಕೈ ತೋರಿಸುವಂತೆ ವಿಮಾನಕ್ಕೆ ಕೈ ತೋರಿಸಿದ್ದಾಳೆ. ಆದರೆ ವಿಮಾನ ಇನ್ನು ಟೇಕಾಫ್ ಆಗದಿದ್ದರೂ ಆಕೆಯನ್ನು ವಿಮಾನದೊಳಗೆ ಸೇರಿಸಿಕೊಂಡಿಲ್ಲ. ಈ ವಿಚಾರವೀಗ ಭದ್ರತಾ ಲೋಪದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕ್ವಾಂಟಾಸ್ಲಿಂಕ್ ಎಂಬ ಈ ವಿಮಾನ ಕ್ಯಾನ್‌ಬೆರ್ರಾದಿಂದ ಆಡಿಲೇಡ್‌ಗೆ (Adelaide) ಹೊರಟಿತ್ತು. ಆದರೆ ಈಕೆ ವಿಮಾನ ನಿಲ್ದಾಣಕ್ಕೆ ವಿಳಂಬವಾಗಿ ಆಗಮಿಸಿದ ಕಾರಣ ಈ ಅವಾಂತರ ನಡೆದಿದೆ.
ವೀಡಿಯೋದಲ್ಲಿ ಮಹಿಳೆಯು ವಿಮಾನ ನಿಲ್ದಾಣದ ಭದ್ರತೆಯನ್ನು ದಾಟಿ, ರನ್‌ವೇಯಲ್ಲಿ ಸಾಗಿ ಬಂದು ಟೇಕಾಫ್ ಆಗಲು ಸಿದ್ಧವಾದ ವಿಮಾನವನ್ನು ಹತ್ತುವುದಕ್ಕಾಗಿ ಪೈಲಟ್‌ಗೆ ಸನ್ನೆ ಮಾಡುವುದನ್ನು ಕಾಣಬಹುದಾಗಿದೆ. ಆದರೆ ಈ ಘಟನೆಯ ಬಳಿಕ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೇ ಆಕೆಗೆ ನ್ಯಾಯಾಲಯ ಜಾಮೀನು ನಿರಾಕರಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ಮಹಿಳೆ ವಿಮಾನದ ಕೆಳಗೆ ಓಡುವ ಮೂಲಕ ಭದ್ರತಾ ಲೋಪವೆಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.