ಇಸ್ಲಾಮಾಬಾದ್: ಇತ್ತ ಭಾರತ, ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದರೆ, ಅತ್ತ ರಾತ್ರಿ ಎನ್ನುವ ಕಾರಣಕ್ಕಾಗಿ ನಾವು ದಾಳಿ ನಡೆಸಲಾಗಲಿಲ್ಲ ಎಂದು ಪಾಕ್ ಸೇನೆ ಸ್ಪಷ್ಟನೆ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಭಾರತದ 12 ಮಿರಾಜ್ ವಿಮಾನಗಳು ದಾಳಿ ನಡೆಸಿದಾಗ, ತಿರುಗೇಟು ನೀಡಲು ನಾವು ಸಜ್ಜಾಗಿದ್ದೆವು. ಆದರೆ ಅವರ ದಾಳಿಯಿಂದಾದ ಹಾನಿ ಅಂದಾಜಿಸುವುದು ನಮಗೆ ಸಾಧ್ಯವಾಗಲಿಲ್ಲ. 

ವಿಶ್ವದೆದುರು ಪಾಕ್ ಕಳ್ಳಾಟಗಳು ಬಯಲು; ಅಂಗಲಾಚಿದ್ರೂ ಸಹಾಯಕ್ಕೆ ಬಾರದ ರಾಷ್ಟ್ರಗಳು

ಜೊತೆಗೆ ದಾಳಿ ನಡೆದಿದ್ದು ರಾತ್ರಿ ವೇಳೆಯಾದ ಕಾರಣ ನಮ್ಮ ವಾಯುಪಡೆ ಸಿದ್ಧವಾಗಿದ್ದರೂ ನಮಗೆ ತಿರುಗೇಟು ನೀಡಲಾಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮುಂದಿನ ಬಾರಿ ಇಂಥ ಘಟನೆ ನಡೆದರೆ ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ.

ಭಾರತೀಯ ಸಿನಿಮಾಗಳಿಗೆ ಪಾಕ್ ನಿಷೇಧ : ಜಾಹೀರಾತಿಗೂ ಬ್ರೇಕ್