ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದು ಆತಂಕ ಸೃಷ್ಟಿಯಾಗಿತ್ತು. ಈ ಗೊಂದಲದ ನಡುವೆಯೂ, ಓರ್ವ ಮಹಿಳೆ ಎರಡು ವೈನ್ ಬಾಟಲ್‌ಗಳನ್ನು ಎತ್ತಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇದು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ಗುಂಡಿನ ಸದ್ದಿಗೂ ಜಗ್ಗದ ಅತಿಥಿಗಳು:ವೈನ್ ಬಾಟಲ್ ಎತ್ತಿಕೊಂಡು ಹೋದ ಮಹಿಳೆ

ಕಳೆದ ಶನಿವಾರ ಅಮೆರಿಕಾದ ಶ್ವೇತಭವನದಲ್ಲಿ ಗುಂಡಿನ ದಾಳಿ ನಡೆದಿರುವ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿತ್ತು. ಟ್ರಂಪ್ ಈ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ದೊಡ್ಡ ಸುದ್ದಿಯಾದರು. ಆದರೆ ಈ ದಾಳಿಯ ವೇಳೆಯ ಒಂದು ಸಿಸಿಟಿವಿ ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅನೇಕರ ಹಾಸ್ಯಮಯ ಕಾಮೆಂಟ್‌ಗೆ ಕಾರಣವಾಗಿದೆ. ಹಾಗಿದ್ದರೆ ವೀಡಿಯೋದಲ್ಲೇನಿದೆ?

Add Asianetnews Kannada as a Preferred SourcegooglePreferred

ಸಾವಿನ ಭಯದ ನಡುವೆಯೂ ಸಖತ್ ಚಿಲ್

ಮೊನ್ನೆ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಶನಿವಾರ ರಾತ್ರಿ ನಡೆದ ಈ ಉನ್ನತ ಮಟ್ಟದ ಅಧಿಕಾರಿಗಳ ಕಾರ್ಯಕ್ರಮದಲ್ಲಿ 2500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ದಾಲಿಯ ಬಳಿಕ ಜನ ಚೆಲ್ಲಾಪಿಲ್ಲಿಯಾಗಿ ಓಡಿದರೆ ಮತ್ತೆ ಕೆಲವರು ಟೇಬಲ್‌ಗಳ ಕೆಳಗೆ ಅಡಗಿ ಜೀವ ಉಳಿಸಿಕೊಂಡಿದ್ದರು. ಆದರೆ ಈ ಆತಂಕದ ಸಮಯದಲ್ಲಿಯೂ ಓರ್ವ ಮಹಿಳೆ ಅಲ್ಲಿದ್ದ ಎರಡು ವೈನ್ ಬಾಟಲ್‌ಗಳನ್ನು ಎತ್ತಿ ಕಂಕುಳಲ್ಲಿ ಇರಿಸಿಕೊಂಡಿರುವ ವೀಡಿಯೋವೊಂದು ಭಾರಿ ವೈರಲ್ ಆಗಿದೆ.

ಶ್ವೇತಭವನದ ದಾಳಿ ವೇಳೆ ಕ್ಯಾಮೆರಾದಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ

ವಾಷಿಂಗ್ಟನ್ ಹಿಲ್ಟನ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ, ಅಮೆರಿಕಾದ ಫಸ್ಟ್ ಲೇಡಿ, ಪತ್ರಕರ್ತರು ಹಾಗೂ ಸಾರ್ವಜನಿಕವಾಗಿ ಗುರುತಿಸಿಕೊಂಡ ಅನೇಕರು ಭಾಗಿಯಾಗಿದ್ದರು. ಅತ್ಯಂತ ಭದ್ರತೆ ಇದ್ದ ಈ ಕಾರ್ಯಕ್ರಮಕ್ಕೆ ನುಗ್ಗಿ ಟ್ರಂಪ್ ಹತ್ಯೆಗೆ ಯತ್ನಿಸಿ ಗುಂಡಿನ ದಾಳಿ ನಡೆಸಿದ ಈ ಘಟನೆಯಿಂದ ಭಾರಿ ಭದ್ರತಾ ಲೋಪ ಉಂಟಾಗಿತ್ತು.ಗುಂಡಿನ ದಾಳಿಯ ಸದ್ದು ಕೇಳುತ್ತಿದ್ದಂತೆ ಟ್ರಂಪ್ ಅವರನ್ನು ಭದ್ರತಾ ಸಿಬ್ಬಂದಿ ಕೂಡಲೇ ವೇದಿಕೆಯಿಂದ ಕೆಳಗಿಳಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು. ಇತ್ತ ಅತಿಥಿಗಳು ಟೇಬಲ್ ಕೆಳಗೆ ನುಗ್ಗಿ ಜೀವ ಉಳಿಸಿಕೊಳ್ಳಲು ಮುಂದಾಗಿದ್ದರು.

ಇದನ್ನೂ ಓದಿ: ಮನು ಭಾಕರ್ ವರ್ಸಸ್ ವೈಭವ್ ಸೂರ್ಯವಂಶಿ: ಯುವ ಕ್ರಿಕೆಟರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?

ಆದರೆ ಈ ಗೊಂದಲದ ನಡುವೆ ಮಹಿಳೆಯೊಬ್ಬರು ಮೇಜಿನ ಮೇಲಿದ್ದ ಎರಡು ವೈನ್ ಬಾಟಲ್‌ಗಳನ್ನು ಕಂಕುಳಲ್ಲಿ ಇರಿಸಿಕೊಂಡಿದ್ದಾಳೆ. ಇದೇ ಸಮಯದಲ್ಲಿ ಈಕೆಯ ಹಿಂದೆ ಇದ್ದ ಕೆಲವು ಮಹಿಳೆಯರು ಕೂಡ ವೈನ್ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದು. ಆ ಕ್ಷಣದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿ ತೀವ್ರ ಟೀಕೆಗೆ ಗುರಿಯಾಯ್ತು. ಈ ಆತಂಕದ ಸಮಯದಲ್ಲೂ ಮಹಿಳೆಯರು ವೈನ್ ಬಾಟಲ್ ಎತ್ತಿಟ್ಟುಕೊಂಡಿದ್ದು ನೋಡಿ ಅನೇಕರು ಅಚ್ಚರಿ ಪಟ್ಟರು.

ವರದಿಗಳ ಪ್ರಕಾರ, ರಾತ್ರಿ 8.30 ರ ಸುಮಾರಿಗೆ ಬಂದೂಕು ಹಿಡಿದ ವ್ಯಕ್ತಿ ಅಮೆರಿಕಾ ಅಧ್ಯಕ್ಷರಿದ್ದ ಸ್ಥಳಕ್ಕೆ ತಲುಪಿ ಗುಂಡಿನ ದಾಳಿ ನಡೆಸಿದಾಗ ಅಲ್ಲಿ ಈ ಉದ್ವಿಘ್ನತೆ ಸೃಷ್ಟಿಯಾಗಿತ್ತು. ಕೂಡಲೇ ಸೀಕ್ರೇಟ್ ಸರ್ವೀಸ್ ಏಜೆಂಟ್‌ಗಳು ಸ್ಪಂದಿಸಿ ಆರೋಪಿಯನ್ನು ವಶಕ್ಕೆ ಪಡದರು. ಈ ಸುದ್ದಿಯೇ ಅಂತಾರಾಷ್ಟ್ರೀಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಬಲ್ಯತೆ ಸಾಧಿಸುತ್ತಿದ್ದ ಸಮಯದಲ್ಲೇ ಇದೇ ಸಂದರ್ಭದ ಮತ್ತೊಂದು ವೀಡಿಯೋ ವೈರಲ್ ಆಗಿತ್ತು. ಮೈಕೆಲ್ ಗ್ಲಾಂಟ್ಜ್ ಎಂದು ಗುರುತಿಸಲಾದ ಅತಿಥಿ ಶಾಂತವಾಗಿ ಕುಳಿತು ಊಟ ಮಾಡುವುದನ್ನು ಮುಂದುವರೆಸಿದ್ದರು. ಅವರ ನಿರಾತಂಕವಾದ ಪ್ರತಿಕ್ರಿಯೆಯು ಅಲ್ಲಿನ ಸ್ಥಿತಿಗೆ ಸಂಪೂರ್ಣವಾಗಿ ವಿರುದ್ಧವಾಗಿತ್ತು.ಹಾಗೂ ಆತಂಕದ ಪರಿಸ್ಥಿತಿಗೆ ಬೇರೆ ಬೇರೆ ವ್ಯಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯಿತು.

Scroll to load tweet…