ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಪೈಲೆಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಆದರೆ ರನ್ ಬಳಿ ವಿಮಾನ ಪತನಗೊಂಡಿದೆ. ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನ ಹೊತ್ತಿ ಉರಿದಿದೆ. ದುರಂತ ಘಟನೆ ವಿಡಿಯೆ ಸೆರೆಯಾಗಿದೆ.

ಟೆಕ್ಸಾಸ್ (ಜೂ.08) ಆಗಸದಲ್ಲಿ ಪ್ರಯಾಣದಲ್ಲಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪೈಲೆಟ್ ತಕ್ಷಣವೇ ತುರ್ತು ಲ್ಯಾಂಡಿಂಗ್ ಮಾಡಲು ಸಂದೇಶ ರವಾನಿಸಿದ್ದಾರೆ. ಆದರೆ ವಿಮಾನ ಇನ್ನೇನು ಲ್ಯಾಂಡಿಂಗ್ ಆಗಬೇಕು ಅನ್ನುವಷ್ಟರಲ್ಲೇ ವಿಮಾನ ರನ್‌ವೇನಲ್ಲೆ ನೆಲಕ್ಕೆ ಅಪ್ಪಳಿಸಿದೆ. ತಕ್ಷಣವೇ ವಿಮಾನದಲ್ಲಿ ಬೆಂಕಿ ಜ್ವಾಲೆ ಆವರಿಸಿ ಸುಟ್ಟು ಭಸ್ಮವಾದ ಘಟನೆ ಡೊಮೈನಿಕನ್ ರಿಪಬ್ಲಿಕನ್‌‌ನ ಲಾ ರೊಮಾನಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಬ್ಬರು ಪೈಲೆಟ್ ಸಾವು

ಆಸ್ಟಿನ್‌ ಲಾ ರೊಮಾನಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಆಗಸದಲ್ಲಿ ಪ್ರಯಾಣ ಮಾಡುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಪೈಲೆಟ್ ತುರ್ತು ಸಂದೇಶ ಕಳುಹಿಸಿದ್ದಾರೆ. ಬಳಿಕ ಮರಳಿ ಲಾ ರೊಮಾನಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ಇದರಂತೆ ವಿಮಾನ ಲ್ಯಾಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ವಿಮಾನ ರನ್‌ವೇಗೆ ಅಪ್ಪಳಿಸಿದೆ. ಸೆಕೆಂಡ್‌ಗಳ ಅಂತರದಲ್ಲಿ ವಿಮಾನದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡ ಹೊತ್ತಿ ಉರಿದಿದೆ. ಘಟನೆಯಲ್ಲಿ ಇಬ್ಬರು ಪೈಲೆಟ್ ಸಾವು ಕಂಡಿದ್ದಾರೆ.

ಅದೃಷ್ಟವಶಾತ್ ಈ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಕೇವಲ ಇಬ್ಬರು ಪೈಲೆಟ್ ಮಾತ್ರ ಪ್ರಯಾಣ ಬೆಳೆಸಿದ್ದರು. ಖಾಸಗಿ ಜೆಟ್ ವಿಮಾನ ಇದಾಗಿತ್ತು. ಗಲ್ಫ್‌ಸ್ಟೀಮ್ G200 ವಿಮಾನ ಕೆಲವೆ ಸೆಕೆಂಡ್‌ಗಳಲ್ಲಿ ಸ್ಫೋಟಗೊಂಡು ಸುಟ್ಟು ಬೂದಿಯಾಗಿದೆ. ಇತ್ತ ಅಮೆರಿಕ ರಿಜಿಸ್ಟ್ರೇಶನ್ ವಿಮಾನ ಇದಾಗಿದೆ. ಇತ್ತ ಅಮೆರಿಕನ್ ಏವಿಯೇಶನ್ ಎಜೆನ್ಸಿ ತನಿಖೆದೆ ಆದೇಶಿಸಿದೆ.

ಘಟನೆ ವಿಡಿಯೋ ಸೆರೆ

ವಿಮಾನ ತುರ್ತು ಲ್ಯಾಂಡಿಂಗ್ ಮಾಡುತ್ತಿರುವ ಹಾಗೂ ಸ್ಫೋಟಗೊಂಡು ಸುಟ್ಟು ಬೂದಿಯಾದ ಘಟನೆ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ವಿಮಾನ ಲ್ಯಾಂಡಿಂಗ್‌ ಮಾಡುತ್ತಿರುವ ದೃಶ್ಯವಿದೆ. ರನ್‌ವೇನಲ್ಲಿ ಲ್ಯಾಂಡ್ ಆದ ವಿಮಾನ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಪೈಲೆಟ್ ಮತ್ತೆ ವಿಮಾನ ಟೇಕ್ ಆಫ್ ಮಾಡಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನ ಅರ್ಧಕ್ಕೆ ಕೈಕೊಟ್ಟಿದೆ. ಹೀಗಾಗಿ ವಿಮಾನ ಮತ್ತೆ ರನ್‌ವೇಗೆ ಅಪ್ಪಳಿಸಿದೆ. ಅಷ್ಟರಲ್ಲೇ ವಿಮಾನದ ಇಂಧನದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ.

Scroll to load tweet…

ಇತ್ತ ಪೈಲೆಟ್ ತುರ್ತು ಲ್ಯಾಂಡಿಂಗ್ ಸಂದೇಶ ನೀಡಿದ ಬೆನ್ನಲ್ಲೇ ರನ್ ವೇ ಸಜ್ಜುಮಾಡಲಾಗಿತ್ತು. ಆದರೆ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಲಿಲ್ಲ. ಸ್ಫೋಟದಲ್ಲಿ ಇಬ್ಬರು ಪೈಲೆಟ್ ಮೃತಪಟ್ಟಿದ್ದಾರೆ.