Asianet Suvarna News Asianet Suvarna News

ವಿಶ್ವದಲ್ಲೇ ಅತಿ ಹೆಚ್ಚು ಭ್ರಷ್ಟ ದೇಶಗಳು ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್  ಎಂಬ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ. ಇದರ ಪ್ರಕಾರ ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಹೆಚ್ಚಿನ ರಾಷ್ಟ್ರಗಳು ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದು ತಿಳಿದು ಬಂದಿದೆ.  

Which is the most corrupt country in the world What is the position of India akb
Author
First Published Jan 31, 2024, 11:26 AM IST

ನವದೆಹಲಿ: ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್  ಎಂಬ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ. ಇದರ ಪ್ರಕಾರ ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಹೆಚ್ಚಿನ ರಾಷ್ಟ್ರಗಳು ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದು ತಿಳಿದು ಬಂದಿದೆ.  ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಬಿಡುಗಡೆ ಮಾಡಿದ 2023 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ಪ್ರಕಾರ, ಭ್ರಷ್ಟಾಚಾರದ ಜಾಗತಿಕ ಸರಾಸರಿಯು ಸತತವಾಗಿ ಹನ್ನೆರಡನೇ ವರ್ಷವೂ ಬದಲಾಗದೇ  43 ರ ಸ್ಥಾನದಲ್ಲಿಯೇ ಉಳಿದಿದೆ, ಮೂರನೇ ಎರಡರಷ್ಟು ದೇಶಗಳು 50 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವೂ 180 ದೇಶಗಳು ಮತ್ತು ಪ್ರಾಂತ್ಯಗಳನ್ನು ಆಧರಿಸಿ ವರದಿ ಮಾಡಿದ್ದು, ಇದರಲ್ಲಿ ಸಾರ್ವಜನಿಕ ವಲಯದ ಭ್ರಷ್ಟಾಚಾರದಲ್ಲಿ ಅತ್ಯಂತ ಭ್ರಷ್ಟ ಹಾಗೂ ಅತ್ಯಂತ ಸ್ವಚ್ಛ(ಶೂನ್ಯ ಭ್ರಷ್ಟಾಚಾರ) ದೇಶ ಎಂದು ವಿಂಗಡಿಸಿದೆ.

ರಾಯಚೂರು: ಫೋನ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಎಇಇ!

ಅತ್ಯಂತ ಕಡಿಮೆ ಭ್ರಷ್ಟಚಾರದ ದೇಶಗಳು

ಡೆನ್ಮಾರ್ಕ್‌ ದೇಶವೂ 90 ಅಂಕಗಳನ್ನು ಗಳಿಸುವುದರೊಂದಿಗೆ  ಅಲ್ಲಿನ ಉತ್ತಮವಾಗಿ ಕಾರ್ಯನಿರ್ವಹಿಸುವ ನ್ಯಾಯ ವ್ಯವಸ್ಥೆಗಳಿಂದಾಗಿ ಸತತ ಆರನೇ ವರ್ಷವೂ ವಿಶ್ವದ ಅತ್ಯಂತ ಕಡಿಮೆ ಭ್ರಷ್ಟಾಚಾರವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಫಿನ್‌ಲ್ಯಾಂಡ್ ಇದ್ದು, 87 ಅಂಕಗಳನ್ನು ಗಳಿಸಿದೆ, ನಂತರ ನ್ಯೂಜಿಲ್ಯಾಂಡ್ 85 ಅಂಕಗಳನ್ನು ಗಳಿಸಿದ್ದು, ಕ್ರಮವಾಗಿ 2 ಹಾಗೂ ಮೂರನೇ ಸ್ಥಾನ ಗಳಿಸಿವೆ. ನಂತರ ನಾರ್ವೆ 84 ಅಂಕಗಳನ್ನು ಗಳಿಸಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸಿಂಗಾಪುರ (83), ಸ್ವೀಡನ್ (82), ಸ್ವಿಟ್ಜರ್ಲೆಂಡ್ (82), ನೆದರ್ಲ್ಯಾಂಡ್ಸ್ (79), ಜರ್ಮನಿ (78), ಮತ್ತು ಲಕ್ಸೆಂಬರ್ಗ್ (78) ದೇಶಗಳಿವೆ. ಇವು 2023 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ ಪಟ್ಟಿಯಲ್ಲಿರುವ  ಇತರ ಕಡಿಮೆ ಭ್ರಷ್ಟತೆಯನ್ನು ಹೊಂದಿರುವ ದೇಶಗಳಾಗಿವೆ.

ಹಾಗೆಯೇ ಅತೀ ಹೆಚ್ಚು ಭ್ರಷ್ಟಾಚಾರವನ್ನು ಹೊಂದಿರುವ ದೇಶಗಳ ಪಟ್ಟಿಯೂ ಇದ್ದು,  11 ಅಂಕಗಳೊಂದಿಗೆ ಆಫ್ರಿಕಾ ದೇಶ ಸೋಮಾಲಿಯಾ ಅತೀ ಹೆಚ್ಚು ಭ್ರಷ್ಟಾಚಾರವನ್ನು ಹೊಂದಿರುವ ದೇಶವೆನಿಸಿದೆ. ಹಾಗೆಯೇ ಉಳಿದ ಸ್ಥಾನಗಳಲ್ಲಿ ಕ್ರಮವಾಗಿ ವೆನೆಜುವೆಲಾ (13), ಸಿರಿಯಾ (13), ದಕ್ಷಿಣ ಸುಡಾನ್ (13), ಮತ್ತು ಯೆಮೆನ್ (16) ದೇಶಗಳಿವೆ. 
ಈ ಎಲ್ಲಾ ದೇಶಗಳು ದೀರ್ಘಕಾಲದ ಬಿಕ್ಕಟ್ಟುಗಳಿಂದ ತೊಂದರೆಗೊಳಗಾಗಿದ್ದು, ಹೆಚ್ಚಾಗಿ ಅಂತರಿಕ ಸಶಸ್ತ್ರ ಸಂಘರ್ಷಗಳಿಂದ  ಈ ದೇಶಗಳು ಬಳಲುತ್ತಿವೆ ಎಂದು ವರದಿ ಹೇಳಿದೆ. ಉತ್ತರ ಕೊರಿಯಾವೂ ಕೂಡ ಭ್ರಷ್ಟ ದೇಶಗಳ ಪಟ್ಟಿಯಲ್ಲಿ 173 ಅಂಕಗಳೊಂದಿಗೆ ಕೊನೆ ಸ್ಥಾನದಲ್ಲಿದೆ. 

ಹೈಸೆಕ್ಯುರಿಟಿ ನಂಬರ್‌ ಪ್ಲೇಟಲ್ಲಿ 700 ಕೋಟಿ ಭ್ರಷ್ಟಾಚಾರ

ಹಾಗೆಯೇ ನಮ್ಮ ದೇಶ ಭಾರತ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ 2023 ರಲ್ಲಿ 39 ಅಂಕಗಳೊಂದಿಗೆ 93ನೇ ಸ್ಥಾನದಲ್ಲಿದೆ. ಹಾಗೆಯೆ ಇದರ ಒಟ್ಟಾರೆ ಸ್ಕೋರ್‌ನಲ್ಲಿ ಏನು ಬದಲಾಗದೇ ಯಥಾಸ್ಥಿತಿ  ಕಾಯ್ದುಕೊಂಡಿದೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವರದಿ ಹೇಳಿದೆ.   2022 ರಲ್ಲಿ ಭಾರತದ ಒಟ್ಟಾರೆ ಅಂಕ 40 ನ್ನು ಹೊಂದಿ 85 ನೇ ಸ್ಥಾನದಲ್ಲಿತ್ತು. ಈ ಪಟ್ಟಿಯಲ್ಲಿ ಪಾಕಿಸ್ತಾನ 29 ಅಂಕಗಳಿಸಿದ್ದರೆ, ಶ್ರೀಲಂಕಾ 34 ಅಂಕಗಳಿಸಿದೆ ಈ ಎರಡೂ ದೇಶಗಳು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿವೆ ಎಂದು ವರದಿ ಹೇಳಿದೆ.

ಲೋಕಾಯುಕ್ತ ದಾಳಿ: ಆರು ಅಧಿಕಾರಿಗಳ ಬಳಿ ಭರ್ಜರಿ ಅಕ್ರಮ ಆಸ್ತಿ ಪತ್ತೆ

Follow Us:
Download App:
  • android
  • ios