ಲೋಕಾಯುಕ್ತ ದಾಳಿ: ಆರು ಅಧಿಕಾರಿಗಳ ಬಳಿ ಭರ್ಜರಿ ಅಕ್ರಮ ಆಸ್ತಿ ಪತ್ತೆ
ರಾಜ್ಯದ ವಿವಿಧೆಡೆ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರು. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು(ಜ.10): ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರು. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳ ಆಸ್ತಿ ವಿವರ ಇಂತಿದೆ.
1. ಎಂ.ಎಲ್ ನಾಗರಾಜ್, ಮುಖ್ಯ ಪ್ರಧಾನ ವ್ಯವಸ್ಥಾಪಕ, ಬೆಸ್ಕಾಂ ಬೆಂಗಳೂರು
ಏಳು ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆಸ ಲಾಗಿದ್ದು, ಒಟ್ಟು 6.37 ಕೋಟಿರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 5.89 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 13 ನಿವೇಶನ, 2 2, 12.30 2 ಭೂಮಿ ಪತ್ತೆ, 47.90 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, 6.77 ಲಕ್ಷ ರು. ನಗದು, 16.44 28 3, 4, ವಾಹನಗಳು ಸೇರಿದಂತೆ ಇತರೆ ಸಾಮಗ್ರಿಗಳು ಪತ್ತೆಯಾಗಿದೆ.
2. ಡಿ.ಎಂ. ಪದ್ಮನಾಭ, ಪಿಡಿಒ, ದೇವನಹಳ್ಳಿ ಗ್ರಾಮ ಪಂಚಾಯ್ತಿ
ಆರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಒಟ್ಟು 5.98 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 5.35 ಕೋಟಿ ರು. ಮೌ ಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಂದು ಕೈಗಾರಿಕೆ ಶೆಡ್. ಎರಡು ಮನೆ, 8.18 ಎಕರೆ ಕೃಷಿ ಭೂಮಿ, ಒಂದು ಫಾರ್ಮ್ ಹೌಸ್ ಇರುವುದು ಗೊತ್ತಾಗಿದೆ. ಇನ್ನು, 63.66 ಲಕ್ಷರು. ಮೌಲ್ಯ ದ ಚರಾಸ್ತಿ ಇದ್ದು, 2.62 ಲಕ್ಷ ರು. ನಗದು, 17.24 06 . fare, 28 ಲಕ್ಷ ರು. ಮೌಲ್ಯದ ವಾಹನ, 15 ಲಕ್ಷ ರು. ಮೌಲ್ಯದ ವ ದ ಮನೆ ಸಾಮಗ್ರಿಗಳು ಪತ್ತೆಯಾಗಿವೆ.
ಲೋಕಾ ರೇಡ್: ಬೆಳ್ಳಂಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು
3 ಎನ್.ಸತೀಶ್ ಬಾಬು, ಅಧೀಕ್ಷಕ ಎಂಜಿನಿಯರ್, ಪಿಡಬ್ಲ್ಯುಡಿ, ಬೆಂಗಳೂರು
ಐದು ಸಳಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಒಟ್ಟು 4.52 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 3.70 ಕೋಟರು. ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ಒಂದು ನಿವೇಶನ, ಎರಡು ಮನೆ, 15 ಎಕರೆ ಕೃಷಿ ಭೂಮಿ ಲಭ್ಯವಾಗಿದೆ. 82.32 ಲಕ್ಷ ರು. ಮೌಲ್ಯ ಚರಾಸ್ತಿ ಪತ್ತೆಯಾಗಿದೆ. ಒಂಭತ್ತು ಲಕ್ಷ ರು. ನಗದು, 64.62 ಲಕ್ಷ ರು. ಮೌಲ್ಯದ ಚಿನ್ನಾಭರಣ, 8.70 ಲಕ್ಷ ರು. ವಾಹನಗಳಿರುವುದು ಗೊತ್ತಾಗಿದೆ. ಮೌಲ್ಯದ
4 ಸಯ್ಯದ್ ಮುನೀರ್ ಆಹ್ಮದ್, ಕಾರ್ಯನಿರ್ವಾಹಕ , ರಾಮನಗರ
ಆರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಒಟ್ಟು 5.48 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 4.10 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಲಭ್ಯವಾಗಿದ್ದು,2 ನಿವೇಶನ, 7 ಮನೆ, ಕೃಷಿ ಭೂಮಿ ಇರುವುದು ಗೊತ್ತಾಗಿದೆ. 1.38 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, 8.54 ಲಕ್ಷ ರು. ನಗದು, 73.47 ಲಕ್ಷ ರು. ಮೌಲ್ಯದ ಚಿನ್ನಾ ಭರಣ, 21 ಲಕ್ಷ ರು. ಮೌಲ್ಯದ ವಾಹನಗಳು ಮತ್ತು 35ಲಕ್ಷರು.ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳು ಪತ್ತೆಯಾಗಿದೆ.
ಚಿಕ್ಕಮಗಳೂರು: ಅನುಕಂಪದ ಆಧಾರದ ಕೆಲಸಕ್ಕೆ ಶಿಫಾರಸ್ಸು, ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ
5. ಎಚ್.ಎಸ್.ಸುರೇಶ್, ಚನ್ನೇನಹಳ್ಳಿ 5 ಎಸ್ಎಸ್ ಸಂದೇಶದ ಚ ಬೆಂಗಳೂರು ದಕ್ಷಿಣ ತಾಲೂಕು
ಆರು ಸ್ಥಳಗಳ ಮೇಲೆ ಕಾರ್ಯಾಚರಣೆ. ಒಟ್ಟು 25.58 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 21.27 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದ್ದು, 16 ನಿವೇಶನ, ಒಂದು ಮನೆ, 7.6 ಎಕರೆ ಕೃಷಿ ಭೂಮಿ ಗೊತ್ತಾಗಿದೆ. 4.30 ಕೋಟಿ ರು. ಮೌಲ್ಯದ ಚರಾಸ್ತಿ ಇದ್ದು, 11.97 ಲಕ್ಷ ರು. ನಗದು, 2.11 ಕೋಟಿ ರು. ಮೌಲ್ಯದ ಚಿನ್ನಾಭರಣ, 2.07 ಕೋಟಿ ರು. ಮೌಲ್ಯದ ವಾಹನಗಳು ಇರುವುದು ಪತ್ತೆಯಾಗಿದೆ.
6 ಬಿ.ಮಂಜೇಶ್, ಅನೇಕಲ್ ಯೋಜನಾ ಪ್ರಾಧಿಕಾರ ಜಂಟಿ ನಿರ್ದೇಶಕ
ಐದು ಸಳಗಳ ಮೇಲೆ ಶೋಧ ಕಾರ್ಯ ನಡೆಸಲಾಗಿದು, 3.18 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 1.20 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದ್ದು, ಬರೋಬ್ಬರಿ 11 ನಿವೇಶನಗಳು, ಒಂದು ಮನೆ ಇದೆ. 1.98 ಕೋಟಿ ರು. ಮೌಲ್ಯದ ಚರಾಸ್ತಿ ಇದ್ದು, 5.07ಲಕ್ಷರು. ನಗದು ಪತ್ತೆಯಾಗಿದೆ. ಇದೇ ವೇಳೆ, 35.97 ಲಕ್ಷ ರು. ಮೌಲ್ಯದ ಚಿನ್ನಾಭರಣ, 77.16 ಲಕ್ಷ ರು. ಮೌಲ್ಯದ ವಾಹನಗಳು ಇರುವುದು ದಾಳಿ ವೇಳೆ ತಿಳಿದು ಬಂದಿದೆ.