ಗೋಲ್ಡ್ ಫಿಶ್ ಅಂದ್ರೆ ನಮಗೆ ನಿಮಗೆ ಅಕ್ವೇರಿಯಂನಲ್ಲಿರುವ ಪುಟಾಣಿ ಮೀನುಗಳ ಬಗ್ಗೆ ನೆನಪಾಗಬಹುದು. ಆದರೆ ಇಲ್ಲೊಂದು ಕಡೆ ಭಾರಿ ಗಾತ್ರದ ಗೋಲ್ಡ್‌ಫಿಶ್‌ ಮೀನುಗಾರನ ಬಲೆಗೆ ಬಿದ್ದಿದ್ದು, ಮೀನುಗಾರನನ್ನು ಅದೃಷ್ಟಶಾಲಿಯನ್ನಾಗಿಸಿದೆ.

ಗೋಲ್ಡ್ ಫಿಶ್ ಅಂದ್ರೆ ನಮಗೆ ನಿಮಗೆ ಅಕ್ವೇರಿಯಂನಲ್ಲಿರುವ ಪುಟಾಣಿ ಮೀನುಗಳ ಬಗ್ಗೆ ನೆನಪಾಗಬಹುದು. ಆದರೆ ಇಲ್ಲೊಂದು ಕಡೆ ಭಾರಿ ಗಾತ್ರದ ಗೋಲ್ಡ್‌ಫಿಶ್‌ ಮೀನುಗಾರನ ಬಲೆಗೆ ಬಿದ್ದಿದ್ದು, ಮೀನುಗಾರನನ್ನು ಅದೃಷ್ಟಶಾಲಿಯನ್ನಾಗಿಸಿದೆ. ಹೀಗೆ ಬಲೆಗೆ ಬಿದ್ದ ಮೀನಿಗೆ ಕ್ಯಾರೋಟ್ ಎಂದು ಹೆಸರಿಡಲಾಗಿದೆ. ಇದು ತನ್ನ ಸೊಗಸಾದ ಬಣ್ಣ ಹಾಗೂ ಗಾತ್ರದಿಂದ ಎಲ್ಲರ ಗಮನ ಸೆಳೆಯುತ್ತಿದ್ದು, ಬರೋಬ್ಬರಿ 30 ಕೆಜಿ ತೂಗುತ್ತಿದೆ. ಈ ಬಗ್ಗೆ ಮೀನುಗಾರ ತನ್ನ ಫೇಸ್‌ಬುಕ್‌ನಲ್ಲಿ ಈ ಬೃಹತ್ ಮೀನಿನ ಫೋಟೋದೊಂದಿಗೆ ಹಂಚಿಕೊಂಡಿದ್ದಾನೆ. ಈ ಅಪರೂಪದ ಮೀನುಗಳು ಲೆದರ್ ಕಾರ್ಪ್ ಮತ್ತು ಕೋಯಿ ಕಾರ್ಪ್ ಜಾತಿಯ ಮೀನುಗಳ ಹೈಬ್ರಿಡ್ ತಳಿ ಎಂದು ಡೈಲಿಮೇಲ್ ವರದಿ ಮಾಡಿದೆ. ಅಲ್ಲದೇ ಈ ಮೀನು ಸುಮಾರು 20 ವರ್ಷ ಪ್ರಾಯದ್ದು ಎಂದು ಅಂದಾಜಿಸಲಾಗಿದೆ. 

ಬ್ರಿಟ್ ಜೇಸನ್ ಕೌಲರ್ ಎಂಬುವವರ ಒಡೆತನದ ಫ್ರಾನ್ಸ್‌ನ ಮೀನುಗಾರಿಕೆಯ ಸರೋವರದಲ್ಲಿ ಈ ಮೀನನ್ನು ಹಾಕಲಾಗಿದ್ದು, ಈ ಅಪರೂಪದ ಮೀನು ಆಗಾಗ ನೀರಿನಿಂದ ಹೊರಗೆ ಬಂದು ನೋಡುಗರಿಗೆ ದರ್ಶನ ನೀಡ್ತಿದೆ. ಅಂಗ್ಲರ್ ಆಂಡಿ ಹ್ಯಾಕೆಟ್ (Angler Andy Hackett) ಎಂಬುವವರು ಈ ಮೀನಿನ ಜೊತೆ ರೀಲ್ಸ್ ಮಾಡಲು ಸುಮಾರು 25 ನಿಮಿಷ ಕಾದಿದ್ದರಂತೆ. ಅಲ್ಲದೇ ಇದು ಅಂತಿಮವಾಗಿ ಕೈಗೆ ಸಿಗುವ ವೇಳೆ ನಾನು ಬಹಳ ಖುಷಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸರೋವರದೊಳಗೆ ಅಪರೂಪದ ಮೀನು ಇದೆ ಎಂದು ತನಗೆ ತಿಳಿದಿತ್ತು. ಆದರೆ ಅದನ್ನು ಹಿಡಿಯುವುದು ಸುಲಭ ಎಂದು ನಾನೆಂದು ಭಾವಿಸಿರಲಿಲ್ಲ ಎಂದು 42 ವರ್ಷದ ವ್ಯಕ್ತಿ ಹೇಳಿಕೊಂಡಿದ್ದಾರೆ. 

2019 ರಲ್ಲಿ ಅಮೆರಿಕಾದ ಮಿನ್ನೇಸೋಟದ ನಿವಾಸಿ ಜೇಸನ್ ಫುಗೇಟ್‌ ಅವರು ಹಿಡಿದ ವಿಶ್ವದ ಅತಿದೊಡ್ಡ ಗೋಲ್ಡ್‌ ಫಿಶ್‌ಗೆ ಹೋಲಿಸಿದರೆ, ಈ ಚಿನ್ನದ ಬಣ್ಣದ ಮೀನು ಕ್ಯಾರೆಟ್ ಸುಮಾರು 30 ಪೌಂಡ್ ಅಂದರೆ ಅಂದಾಜು 13 ಕೆಜಿ ಹೆಚ್ಚು ತೂಕವಿದೆ ಎಂದು ಹೇಳಲಾಗುತ್ತದೆ. ಇದರ ಜೊತೆ 2010ರಲ್ಲಿ ದಕ್ಷಿಣ ಫ್ರಾನ್ಸ್‌ನಲ್ಲಿ ಸಿಕ್ಕಿದ ರಾಫೆಲ್ ಬಿಯಾಜಿನಿ(Raphael Biagini) ಹೆಸರಿನ ಗೋಲ್ಡ್ ಫಿಶ್‌ ಮೀನಿಗೆ ಹೋಲಿಸಿದರೆ ಅದರ ಗಾತ್ರಕ್ಕಿಂತ ಎರಡು ಪಟು ಗಾತ್ರವನ್ನು ಇದು ಹೊಂದಿದೆ ಎಂದು ಅಂದಾಜಿಸಲಾಗಿದೆ. 

Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಲಕ್ ನಿಮ್ಮದೇ!


ಈ ಭಾರಿ ಗಾತ್ರದ ಗೋಲ್ಡ್‌ಫಿಶ್ ಮೀನು ಹಿಡಿದ ಮೀನುಗಾರ ಅಂಗ್ಲರ್ ಆಂಡಿ ಹ್ಯಾಕೆಟ್, ವೋರ್ಸೆಸ್ಟರ್‌ಶೈರ್‌ನ (Worcestershire) ಕಿಡ್ಡರ್‌ಮಿನ್‌ಸ್ಟರ್ (Kidderminster) ನಿವಾಸಿಯಾಗಿದ್ದು, ಫ್ರಾನ್ಸ್‌ನ (France) ಶಾಂಪೇನ್‌ನಲ್ಲಿರುವ (Champagne) ಬ್ಲೂವಾಟರ್ ಲೇಕ್ಸ್‌ನಲ್ಲಿ ಈ ಅಪರೂಪದ ಮೀನನ್ನು ಬಲೆಗೆ ಬೀಳಿಸಿದ್ದರು. ಈ ಬಗ್ಗೆ ಮಾತನಾಡಿದ ಅವರು ಇದೊಂದು ನನ್ನ ಪಾಲಿನ ದೊಡ್ಡ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ. 

ಅದು ನಾ ನೀಡಿದ ಆಹಾರದ ತುಣಕನ್ನು ತೆಗೆದುಕೊಂಡು ಅಕ್ಕ ಪಕ್ಕ ಮೇಲೆ ಕೆಳಗೆ ಹೋದಾಗ ಅದೊಂದು ದೊಡ್ಡ ಗಾತ್ರದ ಮೀನು ಎಂಬುದು ನನ್ನ ಗಮನಕ್ಕೆ ಬಂತು. ನಂತರ ಸ್ವಲ್ಪ ಹೊತ್ತಿನಲ್ಲೇ ಅದು 30 ರಿಂದ 40 ಯಾರ್ಡ್ ವ್ಯಾಪ್ತಿಯಲ್ಲಿ ಬಂದಾಗ ನನಗೆ ಅದು ಕಿತ್ತಳೆ ಬಣ್ಣದಲ್ಲಿದೆ ಎಂಬುದು ಗೊತ್ತಾಯಿತು. ಅಂತಹ ಮೀನನ್ನು ಹಿಡಿದಿದ್ದು, ನನ್ನ ಅದೃಷ್ಟ ಎಂದು ಅವರು ಡೈಲಿ ಮೇಲ್‌ಗೆ ಹೇಳಿಕೊಂಡಿದ್ದಾರೆ. 

ಅಬ್ಬಬ್ಬಾ... ಕಡಲ ಕಿನಾರೆಯಲ್ಲಿ ರಾಶಿ ರಾಶಿ ಮೀನು!

ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ (Facebook post) 42 ವರ್ಷದ ಈ ಮೀನುಗಾರ ಈ ಭಾರಿ ಗಾತ್ರದ ಮೀನಿನೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಂತರ ಅದನ್ನು ಮತ್ತೆ ಮರಳಿ ಕೆರೆಗೆ ಬಿಟ್ಟಿದ್ದಾರೆ. ಈ ಮೀನು ಬಹಳ ಆರೋಗ್ಯವಾಗಿದೆ ಎಂದು ಈ ಮತ್ಯೋದ್ಯಮದ ಮ್ಯಾನೇಜರ್ (Fishery manager) ಜಾಸನ್ ಕೌಲರ್ (Jason Cowler) ಹೇಳಿದ್ದಾರೆ. 
Udupi; ಹೊಟ್ಟೆ ತುಂಬಾ ಬಂಗುಡೆ ಮೀನು, ನಾಡದೋಣಿಗಳಲ್ಲಿ ಮಿಲ್ಕ್ ತಾಟೆ ಮೀನಿನ ಸುಗ್ಗಿ