Asianet Suvarna News Asianet Suvarna News

ಹೊಡಿತಿವಿ ಅಂತಾ ಹೇಳಿ ಹೊಡೆದರು: ಇರಾನ್ ದಾಳಿಗೆ ಇರಾಕ್ ಪ್ರತಿಕ್ರಿಯೆ!

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಹಿನ್ನೆಲೆ| ಇರಾನ್ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆ ನೀಡಿದ ಇರಾಕ್| ಇರಾನ್‌ನಿಂದ ಕೇವಲ ಮೌಖಿಕ ಸಂದೇಶವನ್ನಷ್ಟೇ ಸ್ವೀಕರಿಸಿದ್ದಾಗಿ ಸ್ಪಷ್ಟಪಡಿಸಿದ ಇರಾಕ್| ತನ್ನ ಸಾರ್ವಭೌಮ ನೆಲದ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಇರಾಕ್| ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿ ಕಚೇರಿಯ ವಕ್ತಾರ ಪ್ರತಿಕ್ರಿಯೆ|

We Receive Only Verbal Message From Iran React Iraq on Missile Attack
Author
Bengaluru, First Published Jan 8, 2020, 6:14 PM IST

ಬಾಗ್ದಾದ್(ಜ.08): ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಗೆ ಇರಾಕ್ ಪ್ರತಿಕ್ರಿಯೆ ನೀಡಿದೆ. ದಾಳಿಯ ಕುರಿತು ಇರನ್ ಯಾವುದೇ ಅಧಿಕೃತ ಸಂದೇಶ ಕಳುಹಿಸಿರಲಿಲ್ಲ ಎಂದು ಇರಾಕ್ ಸ್ಪಷ್ಟಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿ ಕಚೇರಿಯ ವಕ್ತಾರ, ಇರಾನ್ ಕೇವಲ ದಾಳಿಯ ಕುರಿತು ಮೌಖಿಕ ಸಂದೇಶ ಕಳುಹಿಸಿತ್ತು ಎಂದು ಹೇಳಿದ್ದಾರೆ.

ಭಾರೀ ಹೊಡೆತ ಕಾದಿದೆ: ಇರಾನ್‌ಗೆ ಇಸ್ರೇಲ್ ಎಚ್ಚರಿಕೆಯ ಸಂದೇಶ!

ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಕೇವಲ ಮೌಖಿಕ ಸಂದೇಶ ಕಳುಹಿಸಿತ್ತು. ಆದರೆ ಅಧಿಕೃತ ಸಂದೇಶ ಕಳುಹಿಸಿರಲಿಲ್ಲ ಎಂದು ಇರಾಕ್ ಸ್ಪಷ್ಟಪಡಿಸಿದೆ.

ಇದೇ ವೇಳೆ ಇರಾನ್ ದಾಳಿಯನ್ನು ಖಂಡಿಸಿರುವ ಇರಾಕ್, ತನ್ನ ಸಾರ್ವಭೌಮ ನೆಲದ ಮೇಲೆ ನಡೆಯುವ ಯಾವುದೇ ವಿದೇಶಿ ದಾಳಿಯನ್ನು ಖಂಡಿಸುವುದಾಗಿ ಹೇಳಿದೆ.

ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!

ಇರಾನ್‌ ಸೇನೆಯ ಉನ್ನತ ಸೇನಾಧಿಕಾರಿ ಖಾಸೀಂ ಸುಲೈಮನಿ ಹತ್ಯೆಗೆ ಪ್ರತಿಕಾರವಾಗಿ ಇರಾಕ್‌ನ ಐನ್-ಅಲ್-ಅಸದ್‌ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಇರಾನ್ ದಾಳಿ ಮಾಡಿತ್ತು.

ಇರಾನ್ ಕ್ಷಿಪಣಿ ದಾಳಿಯನ್ನು ಅಮೆರಿಕ, ಇಂಗ್ಲೆಂಡ್, ಜರ್ಮನಿ ಹಾಗೂ ಇಸ್ರೇಲ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದ್ದು, ಈ ಕೂಡಲೇ ದಾಳಿಗಳನ್ನು ನಿಲ್ಲಿಸುವಂತೆ ಎಚ್ಚರಿಕೆಯ ಸಂದೇಶ ನೀಡಿವೆ.

Follow Us:
Download App:
  • android
  • ios