Asianet Suvarna News Asianet Suvarna News

ಭಾರೀ ಹೊಡೆತ ಕಾದಿದೆ: ಇರಾನ್‌ಗೆ ಇಸ್ರೇಲ್ ಎಚ್ಚರಿಕೆಯ ಸಂದೇಶ!

ಇರಾನ್ VSಅಮೆರಿಕ ಆಯ್ತು ಇದೀಗ ಇರಾನ್ VSಇಸ್ರೇಲ್| ಅಮೆರಿಕದ ಬೆಂಬಲಕ್ಕೆ ನಿಂತ ಇಸ್ರೇಲ್ ಪ್ರಧಾನಿ| ಇರಾನ್‌ಗೆ ಕಠಿಣ ಸಂದೇಶ ರವಾನಿಸಿದ ಬೆಂಜಮಿನ್ ನೆತನ್ಯಾಹು| ನಮ್ಮನ್ನು ಕೆಣಕಿದರೆ ಕಂಡು ಕೇಳರಿಯದ ಹೊಡೆತ ನೀಡುವುದಾಗಿ ಎಚ್ಚರಿಸಿದ ನೆತನ್ಯಾಹು| ಇಸ್ರೇಲ್ ಪ್ರಾದೇಶಿಕ ಶಾಂತಿ ಬಯಸುವ ರಾಷ್ಟ್ರ ಎಂದ ಪ್ರಧಾನಿ ನೇತನ್ಯಾಹು|

Israel PM Benjamin Netanyahu Warns Iran of Resounding Blow
Author
Bengaluru, First Published Jan 8, 2020, 5:31 PM IST

ಜೆರುಸಲೇಂ(ಜ.08): ಅತ್ತ ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದ ತಾರಕಕ್ಕೇರಿದೆ. ಇತ್ತ ಅಮೆರಿಕ ಬೆಂಬಲಕ್ಕೆ ನಿಂತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇರಾನ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇರಾನ್ ಒಂದು ವೇಳೆ ಇಸ್ರೇಲ್ ಮೇಲೆ ದಂಡೆತ್ತಿ ಬಂದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ ಎಂದು ನೆತನ್ಯಾಹು ಇರಾನ್‌ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. 

ಮಧ್ಯಪ್ರಾಚ್ಯಕ್ಕೆ ಹೋದವರಿಗೆ, ಹೋಗುವವರಿಗೆ ವಿದೇಶಾಂಗ ಇಲಾಖೆ ಸಲಹೆ!

 ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ ಬೆನ್ನಲ್ಲೇ, ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್ ಮೇಲೂ ಇರಾನ್ ದಾಳಿ ಮಾಡಲಿದೆ ಎಂಬ ಗುಮಾನಿ ಎದ್ದಿದೆ. 

ಇದೇ ವಿಚಾರವಾಗಿ ಇರಾನ್ ವಿರುದ್ಧ ಕಿಡಿಕಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇಸ್ರೇಲ್ ಮೇಲೆ ದಂಡೆತ್ತಿದರೆ ಕಂಡುಕೇಳರಿಯದ ಹೊಡೆತ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಅವ್ರದ್ದು ಯುದ್ಧ ಆರಂಭಿಸುವ ಬಯಕೆ, ನಮ್ದು ಮುಗಿಸುವ ಬಯಕೆ: ಎಸ್ಪರ್!

ಇಸ್ರೇಲ್ ಪ್ರಾದೇಶಿಕ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಯಾವುದೇ ದೇಶ ಇಸ್ರೇಲ್ ಮೇಲೆ ದಾಳಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಕ್ರಮ ಅನಿವಾರ್ಯ ಎಂದು  ನೆತಾನ್ಯಾಹು ಸೂಚ್ಯವಾಗಿ ಹೇಳಿದ್ದಾರೆ.

Follow Us:
Download App:
  • android
  • ios