ಫ್ಲೋರಿಡಾ ರ‍್ಯಾಲಿಯಲ್ಲಿ, ಡೊನಾಲ್ಡ್ ಟ್ರಂಪ್ ಇರಾನ್ ಹಡಗುಗಳನ್ನು ವಶಪಡಿಸಿಕೊಳ್ಳುವ ಅಮೆರಿಕದ ಕ್ರಮವನ್ನು 'ಕಡಲ್ಗಳ್ಳರ ಕೆಲಸ'ಕ್ಕೆ ಹೋಲಿಸಿದ್ದಾರೆ. ಹೋರ್ಮುಜ್ ಜಲಸಂಧಿಯಲ್ಲಿನ ಈ ಘಟನೆಗೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದನ್ನು 'ಸಶಸ್ತ್ರ ದರೋಡೆ' ಎಂದು ಕರೆದಿದೆ.
ಫ್ಲೋರಿಡಾ: ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಬಂದರುಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ಈ ವೇಳೆ, ಇರಾನ್ ಹಡಗುಗಳನ್ನು ವಶಪಡಿಸಿಕೊಳ್ಳುವ ಅಮೆರಿಕ ನೌಕಾಪಡೆಯ ಕ್ರಮವನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಕಡಲ್ಗಳ್ಳರ ಕೆಲಸ'ಕ್ಕೆ ಹೋಲಿಸಿಕೊಂಡಿದ್ದಾರೆ. ಫ್ಲೋರಿಡಾದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾವು ಕಡಲ್ಗಳ್ಳರ ಹಾಗೆ ಇದ್ದೀವಿ, ಆದ್ರೆ ತಮಾಷೆ ಮಾಡ್ತಿಲ್ಲ
ಇರಾನ್ ಬಂದರುಗಳ ಮೇಲಿನ ನಿರ್ಬಂಧದ ವೇಳೆ ಹಡಗುಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಟ್ರಂಪ್ ರ‍್ಯಾಲಿಯಲ್ಲಿ ವಿವರಿಸಿದರು. "ನಾವು ಹಡಗಿನ ಮೇಲೆ ಹೋಗ್ತೀವಿ, ಅದನ್ನ ನಮ್ಮ ಕಂಟ್ರೋಲ್‌ಗೆ ತಗೋತೀವಿ. ಹಡಗು, ಅದರಲ್ಲಿರೋ ಸರಕು, ತೈಲ ಎಲ್ಲವನ್ನೂ ನಾವೇ ವಶಪಡಿಸಿಕೊಂಡಿದ್ದೇವೆ. ಇದೊಂದು ದೊಡ್ಡ ಲಾಭದಾಯಕ ಬ್ಯುಸಿನೆಸ್" ಎಂದು ಟ್ರಂಪ್ ಹೇಳಿದರು. "ನಾವು ಕಡಲ್ಗಳ್ಳರ ಹಾಗೆ ಇದ್ದೀವಿ, ಆದ್ರೆ ತಮಾಷೆ ಮಾಡ್ತಿಲ್ಲ" ಎಂಬ ಮಾತನ್ನು ಸೇರಿಸಿದರು.
ಇದೇ ವೇಳೆ, ಇರಾನ್‌ನ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ಅಮೆರಿಕ ಸೇನೆ ತಡೆಹಿಡಿದಿದೆ. ಇದಕ್ಕೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕ ಮಾಡ್ತಿರೋದು ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ. ಇದು ಸಮುದ್ರದಲ್ಲಿ ನಡೆಯುತ್ತಿರುವ 'ಸಶಸ್ತ್ರ ದರೋಡೆ' ಅಂತಾ ಇರಾನ್ ಆರೋಪಿಸಿದೆ. "ಜಗತ್ತು ಮತ್ತೆ ಕಡಲ್ಗಳ್ಳರ ವಾಪಸಾತಿಯನ್ನು ನೋಡುತ್ತಿದೆ" ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಾಘಾಯ್ ಹೇಳಿದ್ದಾರೆ. "ಅಮೆರಿಕ ತನ್ನ ಕಾನೂನುಬಾಹಿರ ಕ್ರಮಗಳನ್ನು ಕಾನೂನಿನ ಸಮರ್ಥನೆಗಳ ಮೂಲಕ ಮುಚ್ಚಿಹಾಕುತ್ತಿದೆ" ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಇದನ್ನೂ ಓದಿ: ನಮ್ಮ ಚಿನ್ನ, ನಮ್ಮ ಮನೆಯಲ್ಲಿ! ಭಾರತದಿಂದ ಅತಿದೊಡ್ಡ ನಿರ್ಧಾರ, ಅಚ್ಚರಿಯಲ್ಲಿ ಜಗತ್ತು
45 ಹಡಗುಗಳನ್ನು ವಾಪಸ್ ಕಳುಹಿಸಿರುವ ಅಮೆರಿಕ
ಯುದ್ಧ ಶುರುವಾದಾಗಿನಿಂದ ಇರಾನ್, ಹೋರ್ಮುಜ್ ಜಲಸಂಧಿ ಮೂಲಕ ಹಡಗು ಸಂಚಾರವನ್ನು ತಡೆದಿದೆ. ಇದಕ್ಕೆ ಪ್ರತಿಯಾಗಿ ಟ್ರಂಪ್, ಇರಾನ್ ಬಂದರುಗಳ ಮೇಲೆ ನಿರ್ಬಂಧ ಹೇರಿದ್ದಾರೆ. ಶುಕ್ರವಾರದವರೆಗಿನ ಲೆಕ್ಕದ ಪ್ರಕಾರ, ನಿರ್ಬಂಧ ಉಲ್ಲಂಘಿಸಿದ 45 ಹಡಗುಗಳನ್ನು ಯುಎಸ್ ಸೆಂಟ್ರಲ್ ಕಮಾಂಡ್ ವಾಪಸ್ ಕಳುಹಿಸಿದೆ. ಇರಾನ್ ಬಂದರುಗಳಿಗೆ ಹೋಗುವ ಅಥವಾ ಅಲ್ಲಿಂದ ಬರುವ ಎಲ್ಲಾ ಹಡಗುಗಳಿಗೂ ಈ ನಿರ್ಬಂಧ ಅನ್ವಯಿಸುತ್ತದೆ ಎಂದು ಜನರಲ್ ಡಾನ್ ಕೇನ್ ಸ್ಪಷ್ಟಪಡಿಸಿದ್ದಾರೆ. ಎಷ್ಟು ಕಾಲ ಬೇಕಾದರೂ ಈ ನಿರ್ಬಂಧ ಮುಂದುವರಿಯಲಿದೆ ಎಂದು ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್‌ಸೆತ್ ತಿಳಿಸಿದ್ದಾರೆ. ವಾಷಿಂಗ್ಟನ್ ತನ್ನ ಬಂದರುಗಳ ಮೇಲಿನ ನಿರ್ಬಂಧ ಮುಂದುವರಿಸುವವರೆಗೂ ಹೋರ್ಮುಜ್ ಜಲಸಂಧಿಯಲ್ಲಿನ ನಿಯಂತ್ರಣವನ್ನು ಸಡಿಲಿಸುವುದಿಲ್ಲ ಎಂದು ಇರಾನ್ ಕೂಡ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಮತ್ತೆ ಯುದ್ಧ ಅನಿವಾರ್ಯ: ವಾಷಿಂಗ್ಟನ್ ನಂಬಿಕೆಗೆ ಅರ್ಹವಲ್ಲ ಎಂದು ಗುಡುಗಿದ ಇರಾನ್!


