ಲಂಡನ್(ಏ.16):  ಕೊರೋನಾ ವೈರಸ್‌ಗೆ ನಲುಗಿದ ದೇಶಗಳ ಪೈಕಿ ಬ್ರಿಟನ್ ಕೂಡ ಒಂದು. ಭಾರತಕ್ಕಿಂತಲೂ ವೇಗವಾಗಿ ಬ್ರಿಟನ್‌ನಲ್ಲಿ ವೈರಸ್ ಹರಡುತ್ತಿದೆ. ಹೀಗಾಗಿ ಬ್ರಿಟನ್‌ನಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗುತ್ತಿದೆ. ಇದೀಗ ಲಾಕ್‌ಡೌನ್ ತೆರವು ಯಾವಾಗ ಅನ್ನೋ ಪ್ರಶ್ನೆ ಕೇಳಿ ಬರುತ್ತಿದೆ. ಅದರಲ್ಲೂ ಬ್ರಿಟನ್ ಮಾಧ್ಯಮಗಳು ಸರ್ಕಾರವನ್ನು ಪ್ರಶ್ನಿಸುತ್ತಿದೆ. ಲಾಕ್‌ಡೌನ್ ಎಲ್ಲಿಯವರೆಗೆ ಇರಲಿದೆ ಅನ್ನೋದನ್ನೇ ಹೇಳಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದೆ.

ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ, ಬದುಕೋದೆ ಇಲ್ಲ ಎಂಬತ್ತಿದ್ದ ಯುವಕ ಗುಣಮುಖ.

ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿದ ಬ್ರಿಟನ್ ಆರೋಗ್ಯ ಸಚಿವ ನ್ಯಾಡೈನ್ ಡೊರಿಸ್, ಲಾಕ್‌ಡೌನ್ ತೆರುವಿನ ಕುರಿತು ಪ್ರಶ್ನಿಸುವುದನ್ನು ಬಿಡಿ. ಮೊದಲು ಆರೋಗ್ಯ ಮುಖ್ಯ. ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯುವ ವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಡೊರಿಸ್ ಹೇಳಿದ್ದಾರೆ.  ಈ ಕುರಿತು ಡೊರಿಸ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಪತ್ರಕರ್ತರು ಲಾಕ್‌ಡೌನ್ ತೆರವು ಪ್ರಶ್ನೆಯಿಂದ ಹೊರಬನ್ನಿ. ಯಾವಾಗ ಲಸಿಕೆ ಕಂಡು ಹಿಡಿಯಲಾಗುತ್ತದೋ ಆವಾಗಲೇ ಲಾಕ್‌ಡೌನ್ ತೆರವು ಮಾಡಲಾಗುವುದು. ಅಲ್ಲಿಯವರೆಗೆ ನಾವು ದೇಶದ ನಾಗರೀಕರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡುವುದು ಹಾಗೂ ಆರ್ಥಿಕತೆ ಬಗ್ಗೆ ಯೋಚಿಸಿ ಎಂದು ಡೋರಿಸ್ ಟ್ವೀಟ್ ಮಾಡಿದ್ದಾರೆ.

ಬ್ರಿಟನ್ ಆರೋಗ್ಯ ಸಚಿವ ನ್ಯಾಡೈನ್ ಡೊರಿಸ್ ಕೊರೋನಾ ವೈರಸ್ ತಗುಲಿಸಿಕೊಂಡ ಬ್ರಿಟನ್‌ನ ಮೊದಲ ಸಚಿವ. ಸದ್ಯ ಚೇತರಿಸಿಕೊಂಡಿರುವ ಡೊರಿಸ್ ಇದೀಗ ಎಲ್ಲರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚೀನಾ ಕಳುಹಿಸಿದ PPE ಕಿಟ್ ಭಾರತದ ಸುರಕ್ಷತಾ ಪರೀಕ್ಷೆಯಲ್ಲಿ ಫೇಲ್!...

ಈಗಾಗಲೇ ಬ್ರಿಟನ್ ಸರ್ಕಾರ ಲಾಕ್‌ಡೌನ್ 3 ವಾರಗಳಿಗೆ ಮತ್ತೆ ವಿಸ್ತರಿಸಿದೆ. ಬ್ರಿಟನ್ ವಿರೋಧ ಪಕ್ಷದ ಸದಸ್ಯರಾದ ಸರ್ ಕೀರ್ ಸ್ಟಾರ್ಮರ್ ಲಾಕ್‌ಡೌನ್ ವಿಸ್ತರಣೆಯನ್ನು ಸ್ವಾಗತಿಸಿದ್ದಾರೆ. ಕೊರೋನಾ ವೈರಸ್ ತೊಲಗಿಸಲು ಲಾಕ್‌ಡೌನ್ ವಿಸ್ತರಣೆ ಅಗತ್ಯ. ನಾವೆಲ್ಲಾ ಸರ್ಕಾದ ಜೊತೆಗಿದ್ದೇವೆ ಎಂದಿದ್ದಾರೆ.