ಕಳೆದ ಒಂದು ತಿಂಗಳಿಂದ ಸಿದ್ಧ ಆಹಾರ ಅಥವಾ ಪ್ಯಾಕೇಜ್ ಮಾಡಿದ ಆಹಾರವನ್ನು ತಿಂದು ನಾವು ಅಸ್ವಸ್ಥರಾಗಿದ್ದೇವೆ ಎಂದು ರಷ್ಯಾದ ಸೈನಿಕರು ಹೇಳಿದ್ದು, ಇದರಿಂದಾಗಿ ನಾಯಿಗಳನ್ನು ತಿಂದು ಬದುಕುತ್ತಿದ್ದೇವೆ ಎಂದಿದ್ದಾರೆ. ರಷ್ಯಾ ಸೈನಿಕರ ಆಡಿಯೋ ಸಂಭಾಷಣೆಗಳನ್ನು ಉಕ್ರೇನ್ ನ ಸೆಕ್ಯುರಿಟಿ ಸರ್ವೀಸಸ್ ಬಿಡುಗಡೆ ಮಾಡಿದೆ.

ಲಂಡನ್ (ಏ.1): ರಷ್ಯಾ-ಉಕ್ರೇನ್ ಯುದ್ಧದ (Russia Ukraine war) ನಡುವೆ ಮಾನವರ ಸಂಕಷ್ಟಗಳಿಗೆ ಅಂತ್ಯವೇ ಇಲ್ಲ ಎಂದು ತೋರುತ್ತದೆ. ಯುದ್ಧ-ಹಾನಿಗೊಳಗಾದ ಉಕ್ರೇನ್‌ನಿಂದ ಪ್ರತಿದಿನವೂ ಭಯಾನಕ ವಿವರಗಳು ಹೊರಹೊಮ್ಮುತ್ತಿವೆ. ಇಂಗ್ಲೆಂಡ್ (England) ಮೂಲದ ಪತ್ರಿಕೆಯೊಂದರ ವರದಿಯ ಪ್ರಕಾರ, ಉಕ್ರೇನ್ ಸೆಕ್ಯುರಿಟಿ ಸರ್ವೀಸಸ್ (Ukrainian Security Services) (ಎಸ್ಎಸ್ ಯು) ರಷ್ಯಾದ ಸೈನಿಕರ (Russian soldiers) ಆಡಿಯೋವನ್ನು ಇಂಟರ್ ಸೆಪ್ಟ್ ಮಾಡಿ ಪಡೆದುಕೊಂಡಿದ್ದು, ಇದರಲ್ಲಿ ಭಯಾನಕ ವಿವರಗಳು ಪ್ರಕಟವಾಗಿದೆ.

ಉಕ್ರೇನ್ ನೆಲದಲ್ಲಿ, "ಹದಿಹರೆಯದ ಹುಡುಗಿಯರ ಮೇಲೆ ಅತ್ಯಾಚಾರ (Minor Girl Rape), ಹಾಗೂ ನಾಯಿಗಳನ್ನು (Dog Meat) ತಿಂದು ಬದುಕುತ್ತಿರುವ" ಬಗ್ಗೆ ಅವರು ಮಾತನಾಡಿದ್ದನ್ನು ಅಲ್ಲಿ ಕೇಳಬಹುದಾಗಿದೆ. ರೇಡಿಯೊ ಸಂವಹನದಲ್ಲಿ, ಒಬ್ಬ ವ್ಯಕ್ತಿ ಹೇಳುವ ಮಾತುಗಳಲು ದಾಖಲಾಗಿದ್ದು, "ನಮ್ಮಲ್ಲಿ ಮೂರು ಟ್ಯಾಂಕ್‌ಗಳ ಹುಡುಗರಿದ್ದಾರೆ ಮತ್ತು ಅವರು ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾರೆ." ಎಂದು ಹೇಳಿದ್ದಾರೆ. ನಂತರ, "ಯಾರು ಮಾಡಿದರು" ಎಂದು ಕೇಳುವ ಮಹಿಳೆಯ ಧ್ವನಿ ಹೊರಹೊಮ್ಮಿದೆ. ಅದಕ್ಕೆ ಪ್ರತಿಕ್ರಿಯೆ ನೀಡುವ ವ್ಯಕ್ತಿ, "ಮೂರು ಟ್ಯಾಂಕರ್ ನಲ್ಲಿರುವ ಹುಡುಗರು, ಆಕೆಗೆ 16 ವರ್ಷ." ಎಂದು ಹೇಳುತ್ತಾನೆ.

ಮಹಿಳೆ ನಂತರ "ನಮ್ಮ ಹುಡುಗರ" ಬಗ್ಗೆ ಮಾತನಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಆ ವ್ಯಕ್ತಿ 'ಹೌದು' ಎಂದು ಹೇಳುತ್ತಾನೆ. ನಂತರ ಮಹಿಳೆ ರಷ್ಯನ್ ಭಾಷೆಯಲ್ಲಿ ಪ್ರಮಾಣ ಮಾಡುವುದು ಅಲ್ಲಿ ದಾಖಲಾಗಿದೆ.

ಇನ್ನೊಂದು ಆಡಿಯೋ ಕ್ಲಿಪ್ ನಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ಪುರುಷನಿಗೆ ಪ್ರಶ್ನೆ ಮಾಡುತ್ತಿರುವುದು ದಾಖಲಾಗಿದ್ದು, "ನೀವು ಕನಿಷ್ಟ ಪಕ್ಷ ತಿನ್ನುತ್ತಿದ್ದೀರಾ?" ಎಂದು ಪ್ರಶ್ನೆ ಮಾಡುತ್ತಾರೆ. ಇನ್ನೊಂದು ಪುರುಷ ಧ್ವನಿಯು "ತುಂಬಾ ಕೆಟ್ಟದನ್ನು ತಿನ್ನುತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದೆ. "ನಾವು ನಿನ್ನೆ ಅಲಬಾಯ್ (ನಾಯಿ) ತಿಂದಿದ್ದೇವೆ" ಎಂದು ಎರಡನೆಯ ಧ್ವನಿ ಹೇಳಿದಾಗ, ಪ್ರಶ್ನಿಸುವ ವ್ಯಕ್ತಿ "ಯಾರು? ಅಥವಾ ಏನು" ಎಂದು ಕೇಳುತ್ತಾರೆ."ಅಲಬಾಯ್," ಎರಡನೇ ಧ್ವನಿ ಸ್ಪಷ್ಟಪಡಿಸುತ್ತದೆ.

ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಪ್ರಯೋಗ: ರಷ್ಯಾ

ನೀವು ಏನು ಮಾಡುತ್ತಿದ್ದೀರಿ ಅಥವಾ ಏನು ತಿನ್ನುತ್ತಿದ್ದೀರಿ ಎಂದು ಮತ್ತೆ ಕೇಳಿದಾಗ, ಎರಡನೆಯವನು ಪ್ರತಿಕ್ರಿಯಿಸುತ್ತಾ "ನಮಗೆ ಬೇಕಾದಷ್ಟು ಮಾಂಸವನ್ನು ನಾವು ಹೊಂದಿದ್ದೇವೆ" ಎಂದು ಹೇಳುತ್ತಾನೆ. ನಂತರ ಮೊದಲ ವ್ಯಕ್ತಿ "ಯಾಕೆ, ನಿಮಗೆ ತಿನ್ನಲು ಏನೂ ಇಲ್ಲವೇ?" ಎಂದು ಕೇಳುತ್ತಾರೆ. ತಿನ್ನಲು ಸಿದ್ಧವಾದ ಊಟವನ್ನು ಹೊಂದಿದ್ದರೂ, ಬಹುತೇಕ ಸೈನಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸಹ ಸೈನಿಕ ವಿವರಿಸಿದರು. ಮಾಸ್ಕೋದ ಶಾಂತಿ ಮಾತುಕತೆಗಳ ಬಗ್ಗೆ ಅನುಮಾನದ ನಡುವೆ ಉಕ್ರೇನ್ ಸೇನೆಯು ಆಡಿಯೋ ಸಂಭಾಷಣೆಗಳನ್ನು ಪ್ರಕಟಿಸಿದೆ.

ರಷ್ಯಾ-ಉಕ್ರೇನ್ ಯುದ್ಧಕ್ಕೆ ಮೋದಿಯೇ ಕಾರಣ ಎಂದ ದೀದೀ, ನಟ್ಟಿಗರು ಗರಂ!
ಇನ್ನೊಂದೆಡೆ ಯುದ್ಧ ಕೊನೆಗೊಳಿಸಲು ಉಕ್ರೇನ್‌ ಇಟ್ಟಿದ್ದ ಷರತ್ತುಗಳನ್ನು ಕಂಡು ಕೆಂಡಾಮಂಡಲವಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಉಕ್ರೇನ್‌ನನ್ನು ಚಚ್ಚಿ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ರಷ್ಯಾದ ತೈಲ ಉದ್ಯಮಿ ಮತ್ತು ಚೆಲ್ಸಿ ಫುಟ್ಬಾಲ್‌ ತಂಡದ ಮಾಲೀಕ ರೋಮನ್‌ ಅಬ್ರಮೋವಿಚ್‌, ಉಕ್ರೇನ್‌ ಕೋರಿಕೆಯಂತೆ ಉಭಯ ದೇಶಗಳ ನಡುವೆ ಹಿಂಬಾಗಿಲ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ. ಇಂಥದ್ದೊಂದು ಸಂಧಾನದ ಮಾತುಕತೆಯ ಭಾಗವಾಗಿ ಯುದ್ಧ ಕೊನೆಗೊಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವೊಂದು ಷರತ್ತುಗಳುಳ್ಳ ಪತ್ರವೊಂದನ್ನು ಸ್ವತಃ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಬರೆದು, ಅದನ್ನು ಅಬ್ರಮೋವಿಚ್‌ಗೆ ಹಸ್ತಾಂತರ ಮಾಡಿದ್ದರು. ಇದನ್ನು ನೋಡಿ ಆಕ್ರೋಶಗೊಂಡ ಪುಟಿನ್‌, ‘ಚಚ್ಚಿ ಹಾಕ್ತೀನಿ ಎಂದು ಅವರಿಗೆ ತಿಳಿಸು’ ಎಂದು ಅಬ್ಬರಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್‌ನ ದ ಟೈಮ್ಸ್‌ ದಿನಪತ್ರಿಕೆ ವರದಿ ಮಾಡಿದೆ.