ಭಾರತ ಶಕ್ತಿಶಾಲಿ ದೇಶವಾಗಿದೆ; ಮೋದಿ ನಾಯಕತ್ವದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ: ನಮೋ ಹಾಡಿ ಹೊಗಳಿದ ಪುಟಿನ್

ಭಾರತ, 1.5 ಶತಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿದೆ, ಶೇಕಡಾ 7 ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ ಕಾಣುತ್ತಿದೆ.. ಅದು ಶಕ್ತಿಯುತ ದೇಶ, ಪ್ರಬಲ ದೇಶ. ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಅದು ಬಲಿಷ್ಠವಾಗಿ ಬೆಳೆಯುತ್ತಿದೆ’’ ಎಂದು ವ್ಲಾಡಿಮಿರ್‌ ಪುಟಿನ್ ಹೇಳಿದ್ದಾರೆ.

india is a powerful country growing stronger under pm modi ash

ಮಾಸ್ಕೋ (ಅಕ್ಟೋಬರ್ 6, 2023): ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತದ ಆರ್ಥಿಕ ಬೆಳವಣಿಗೆಯನ್ನು ಹಾಗೂ ಪ್ರಧಾನಿ ಮೋದಿ ಅವಧಿಯಲ್ಲಿ ಭಾರತ ಬದಲಾಗುತ್ತಿರುವುದನ್ನು ಹೇಳಿದ್ದು, ಹಾಡಿ ಹೊಗಳಿದ್ದಾರೆ. "ಭಾರತವನ್ನು "ಪ್ರಬಲ ದೇಶ" ಎಂದು ಕರೆದಿರುವ ವ್ಲಾಡಿಮಿರ್‌ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಬಲಿಷ್ಠವಾಗಿ ಬೆಳೆಯುತ್ತಿದೆ ಎಂದು ಹೇಳಿರೋದಾಗಿ ರಷ್ಯಾ ಮೂಲದ ಆರ್‌ಟಿ ನ್ಯೂಸ್ ವರದಿ ಮಾಡಿದೆ. 

"...ಭಾರತ, 1.5 ಶತಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿದೆ, ಶೇಕಡಾ 7 ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ ಕಾಣುತ್ತಿದೆ.. ಅದು ಶಕ್ತಿಯುತ ದೇಶ, ಪ್ರಬಲ ದೇಶ. ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಅದು ಬಲಿಷ್ಠವಾಗಿ ಬೆಳೆಯುತ್ತಿದೆ’’ ಎಂದು ಆರ್‌ಟಿ ನ್ಯೂಸ್ ಹಂಚಿಕೊಂಡ ವಿಡಿಯೋ ಪ್ರಕಾರ ವ್ಲಾಡಿಮಿರ್ ಪುಟಿನ್ ಹೇಳಿದರು.

ಇದನ್ನು ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ ವಿರುದ್ಧ ದಂಗೆ ಎದ್ದಿದ್ದ ಪ್ರಿಗೋಜಿನ್‌ ವಿಮಾನ ಅಪಘಾತದಲ್ಲಿ ಬಲಿ: ಸಾವಿನ ರಹಸ್ಯ ಬಹಿರಂಗ!

ರಷ್ಯಾದ ಸೋಚಿಯಲ್ಲಿ ತಮ್ಮ ವಾರ್ಷಿಕ ಮುಖ್ಯ ಭಾಷಣದಲ್ಲಿ ಮಾತನಾಡಿದ ಪುಟಿನ್ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಹೊಗಳಿದರು. ಮೋದಿ  ನಾಯಕತ್ವವು "ಸ್ವಯಂ ನಿರ್ದೇಶನ" ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಂದ ಮುನ್ನಡೆಸಲ್ಪಟ್ಟಿದೆ ಎಂದೂ ಅವರು ಹೇಳಿದರು.

ಭಾರತದ ನಾಯಕತ್ವವು "ಸ್ವಯಂ ನಿರ್ದೇಶನ" ಮತ್ತು ದೇಶದ ರಾಷ್ಟ್ರೀಯ ಹಿತಾಸಕ್ತಿಗಳಿಂದ ನೇತೃತ್ವ ವಹಿಸುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ಪಾಶ್ಚಿಮಾತ್ಯ ದೇಶಗಳು ಆ ದೇಶಗಳ ಗಣ್ಯರನ್ನು ಕುರುಡಾಗಿ ಅನುಸರಿಸಲು ಸಿದ್ಧರಿಲ್ಲದ ಎಲ್ಲರನ್ನೂ ದ್ವೇಷಿಗಳಂತೆ ನೋಡುತ್ತದೆ ಎಂದು ಆರೋಪಿಸಿದರು.

ಇದನ್ನೂ ಓದಿ: ರಷ್ಯಾದ ಈ ಕ್ಷಿಪಣಿ ಎದುರಿಸಲು ಪರದಾಡ್ತಿದೆ ಉಕ್ರೇನ್ ವಾಯು ರಕ್ಷಣಾ ಪಡೆ: ಪುಟಿನ್‌ ಮೇಲುಗೈ ಸಾಧಿಸೋಕೆ ಇದೇ ಕಾರಣ..!

ಒಂದು ನಿರ್ದಿಷ್ಟ ಸಮಯದಲ್ಲಿ, ಅವರು ಭಾರತದೊಂದಿಗೆ ಅದೇ ರೀತಿ ಮಾಡಲು ಪ್ರಯತ್ನಿಸಿದರು. ಈಗ ಅವರು ಭಾರತದೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದಾರೆ. ಇನ್ನು, ನಾವು ಏಷ್ಯಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇವೆ. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ ಅರ್ಹವಾಗಿವೆ. ವಿಶ್ವಸಂಸ್ಥೆಯನ್ನು ಕ್ರಮೇಣವಾಗಿ ಸುಧಾರಿಸಬೇಕು ಎಂದೂ ವ್ಲಾಡಿಮಿರ್ ಪುಟಿನ್ ಹೇಳಿದರು. 

ಬುಧವಾರ ಸಹ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ಮೋದಿಯನ್ನು "ಅತ್ಯಂತ ಬುದ್ಧಿವಂತ ವ್ಯಕ್ತಿ" ಎಂದು ಕರೆದಿದ್ದರು, ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ ಎಂದೂ ಹೇಳಿದ್ದರು.  ಕಳೆದ ತಿಂಗಳು, ಅವರು ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ "ಸರಿಯಾದ ಕೆಲಸ" ಮಾಡುತ್ತಿದ್ದಾರೆ ಎಂದು ಹೇಳಿ ಪ್ರಧಾನಿ ಮೋದಿಯನ್ನು ಹೊಗಳಿದ್ದರು.

ಇದನ್ನೂ ಓದಿ: ಈ ದೇಶದಲ್ಲಿ ಇನ್ಮುಂದೆ ಸೆಕ್ಸ್‌ ಚೇಂಜ್‌ ಬ್ಯಾನ್‌: ಟ್ರಾನ್ಸ್‌ಜೆಂಡರ್‌ ಮದುವೆಗೂ ಇಲ್ಲ ಅನುಮತಿ!

Latest Videos
Follow Us:
Download App:
  • android
  • ios