Asianet Suvarna News Asianet Suvarna News

ಇರಾನ್‌ನಲ್ಲಿ ಮೀನಿನ ಮಳೆ, ಎದ್ದೂ ಬಿದ್ದು ಬುಟ್ಟಿಯಲ್ಲಿ ತುಂಬಿಕೊಂಡ ಜನ; ವೀಡಿಯೋ ವೈರಲ್‌

ಇರಾನ್‌ನಲ್ಲಿ ಮೀನಿನ ಮಳೆಯಾಗುತ್ತಿದೆ. ಜಲಚರಗಳು ಆಕಾಶದಿಂದ ಕೆಳಗೆ ಬೀಳುತ್ತಿವೆ. ಹಲವು ಮೀನುಗಳು ಆಕಾಶದಿಂದ ಬೀಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video Shows Many Fish Falling From Sky, People Catching Them With Bare Hands Vin
Author
First Published May 7, 2024, 11:38 AM IST

ಇರಾನ್: ಇರಾನ್‌ನಲ್ಲಿ ಮೀನಿನ ಮಳೆಯಾಗುತ್ತಿದೆ. ಜಲಚರಗಳು ಆಕಾಶದಿಂದ ಕೆಳಗೆ ಬೀಳುತ್ತಿವೆ. ಹಲವು ಮೀನುಗಳು ಆಕಾಶದಿಂದ ಬೀಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಮೇ 5ರಂದು ಇರಾನ್‌ನ ಯಸುಜ್ ಪ್ರದೇಶದಲ್ಲಿ ನಡೆದ ಅಪರೂಪದ ಘಟನೆಯೆಂದು ಹೇಳಲಾಗುತ್ತಿದೆ. ಭಾರೀ ಮಳೆಯ ಸಮಯದಲ್ಲಿ ಮೀನುಗಳು ಮಳೆಯಂತೆ ಆಕಾಶದಿಂದ ನೆಲಕ್ಕೆ ಬಿದ್ದವು ಎನ್ನಲಾಗುತ್ತಿದೆ. ಆದರೆ ಈ ವೀಡಿಯೋ ಸುಳ್ಳು ಅನ್ನಲಾಗ್ತಿದೆ.

ವೈರಲ್ ಆದ ಕ್ಲಿಪ್‌ನಲ್ಲಿ ಜನರು ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಹಿಡಿಯುವುದು, ಬುಟ್ಟಿಯಲ್ಲಿ ಸಂಗ್ರಹಿಸುವುದನ್ನು ನೋಡಬಹುದು. ಸ್ಥಳೀಯ ನಿವಾಸಿಗಳು ಬೀದಿಗಳಿಂದ ಸಿಕ್ಕ ಉಚಿತ ಮೀನುಗಳನ್ನು ಖುಷಿಯಿಂದ ತಮ್ಮ ಮನೆಗೆ ತೆಗೆದುಕೊಂಡು ಹೋದರು. ಆದರೆ ಇದು ಮೀನಿನ ಮಳೆಯಲ್ಲ. ಜಲಚರಗಳು ಸುಂಟರಗಾಳಿಗೆ ಸಮುದ್ರದಿಂದ ಬಂದು ರಸ್ತೆಗೆ ಬಿದ್ದಿವೆ ಎಂದು ವರದಿಯಾಗಿದೆ.

ಬೆಂಗ್ಳೂರಲ್ಲಿ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆ: ಧರೆಗುರುಳಿದ ಮರಗಳು, ವಾಹನ ಸಂಚಾರ ಆಸ್ತವ್ಯಸ್ತ

ವರದಿಗಳ ಪ್ರಕಾರ, ಅಪರೂಪದ ಘಟನೆಯು ತೀವ್ರವಾದ ಹವಾಮಾನ ಪರಿಸ್ಥಿತಿಯಿಂದಾಗಿ ಉಂಟಾಗದೆ ಎನ್ನಲಾಗ್ತಿದೆ. ವಿಶೇಷವಾಗಿ ತಾಪಮಾನ ಮತ್ತು ತೇವಾಂಶದಲ್ಲಿನ ಬದಲಾವಣೆಗಳಿಂದಾಗಿ ಈ ರೀತಿ ಸಂಭವಿಸಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಹವಾಮಾನದ ಪರಿಕಲ್ಪನೆಯು 'ಇಟ್ಸ್ ರೈನಿಂಗ್ ಫಿಶ್ ಅಂಡ್ ಸ್ಪೈಡರ್ಸ್' ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

2022ರಲ್ಲಿ, ಟೆಕ್ಸಾಸ್‌ನ ಟೆಕ್ಸಾಕಾನಾದಲ್ಲಿ ಇದೇ ರೀತಿಯ ಅಪರೂಪದ ವಿದ್ಯಮಾನವು ನಡೆದಿತ್ತು. ಅಲ್ಲಿನ ನಿವಾಸಿಗಳು ಆಕಾಶದಿಂದ ಬೀಳುತ್ತಿರುವ ಮೀನುಗಳನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಟೆಕ್ಸಾಸ್‌ನ  ಟೆಕ್ಸರ್ಕಾನಾದಲ್ಲಿ ಮೀನಿನ ಮಳೆ ಸುರಿದಿದ್ದು, ಅನೇಕ ಟೆಕ್ಸರ್ಕಾನಾ ನಿವಾಸಿಗಳು ಮಳೆಯೊಂದಿಗೆ ಆಕಾಶದಿಂದ ಬೀಳುವ ಮೀನುಗಳನ್ನು ನೋಡಿ ಆಶ್ಚರ್ಯಚಕಿತರಾದರು. ಈ ವಿಲಕ್ಷಣ ಪ್ರಾಕೃತಿಕ ವಿದ್ಯಮಾನದ ಬಗ್ಗೆ ಟೆಕ್ಸಾಸ್‌ನ ದಿ ಸಿಟಿ ಆಫ್ ಟೆಕ್ಸರ್ಕಾನಾದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್‌  ಮಾಡಿತ್ತು.

ಇಂದಿನಿಂದ 5 ದಿನ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ..!

ಮೀನು ಅಥವಾ ಇತರ ಜಲಚರಗಳ ಮಳೆಯು ಒಂದು ವಿರಳ ವಿದ್ಯಮಾನವಾಗಿದ್ದು, ಸಣ್ಣ ನೀರಿನ ಪ್ರಾಣಿಗಳಾದ ಕಪ್ಪೆಗಳು, ಏಡಿಗಳು ಮತ್ತು ಸಣ್ಣ ಮೀನುಗಳು ಭೂಮಿಯ ಮೇಲ್ಮೈಯಲ್ಲಿ ಸಂಭವಿಸುವ ಪ್ರವಾಹದಿಂದ ದೂಡಲ್ಪಟ್ಟಾಗ ಸಂಭವಿಸುವ ಒಂದು ವಿದ್ಯಮಾನವಾಗಿದೆ. ನಂತರ ಅವುಗಳು ಮಳೆಯ ಸಮಯದಲ್ಲಿ ಮಳೆಯೊಂದಿಗೆ ಸುರಿಯಲು ಪ್ರಾರಂಭವಾಗುತ್ತವೆ. ಇದು ಕೇಳಲು ವಿಚಿತ್ರವೆನಿಸಿದರು. ಇದು ಸಂಭವಿಸುತ್ತದೆ.

ಮೀನು ಮತ್ತು ಕಪ್ಪೆಗಳ ಮಳೆ ಇದು ಕ್ರಿ.ಶ 200 ರ ಹಿಂದಿನಿಂದಲೂ ಕಂಡು ಬಂದಿದ್ದಂತಹ ಒಂದು ವಿದ್ಯಮಾನವಾಗಿದೆ. ಇದು ಹೇಗೆ ಏಕೆ ಸಂಭವಿಸುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ನ್ಯಾಷನಲ್​ ಜಿಯೋಗ್ರಫಿಯ ಪ್ರಕಾರ ಭಾರೀ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ. ನಂತರ  ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದು ಹೇಳಲಾಗಿದೆ. 

ಮೀನುಗಳ ಮಳೆ ಬೀಳುತ್ತಿರುವುದು ಇದೇ ಮೊದಲೇನಲ್ಲ 2017ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ  ಪ್ರಾಥಮಿಕ ಶಾಲೆಯೊಂದರ  ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು.  ಅಲ್ಲದೆ ಕಪ್ಪೆಗಳ ಮಳೆ ಬಿದ್ದಿದ್ದರ ಬಗ್ಗೆಯೂ ಈ ಹಿಂದೆ ವರದಿಯಾಗಿತ್ತು. 

Follow Us:
Download App:
  • android
  • ios