Viral Video: ಕಿತ್ಕೊಂಡು ಬಂದ ಭೇದಿ, ವಿಮಾನ ಪೂರ್ತಿ ಮಲವಿಸರ್ಜನೆ ಮಾಡಿದ ಪ್ರಯಾಣಿಕ!
ಫ್ಲೈಟ್ ಹತ್ತಿದ ಪ್ರಯಾಣಿಕನಿಗೆ ಟಾಯ್ಲೆಟ್‌ಗೆ ಹೋಗೋಕು ಮುಂಚೆ ಭೇದಿ ಕಿತ್ಕೊಂಡು ಬಂದಿದೆ. ಟಾಯ್ಲೆಟ್‌ಗೆ ಹೋಗೋ ದಾರಿಯಲ್ಲೇ ಆತ ಎಲ್ಲಾ ವಿಸರ್ಜನೆ ಮಾಡಿದ್ದಾನೆ. ಇದರಿಂದ ಗಬ್ಬೆದ್ದು ಹೋಗಿದ್ದ ವಿಮಾನವೊಂದು ಯುಟರ್ನ್ ಹೊಡೆದು ವಾಪಾಸಗಿರುವ ಘಟನೆ ನಡೆದಿದೆ.

ನವದೆಹಲಿ (ಸೆ.6): ಅಮೆರಿಕದ ಅಟ್ಲಾಂಟದಿಂದ ಸ್ಪೇನ್‌ನ ಬಾರ್ಸಿಲೋನಾಕ್ಕೆ ಹೋಗಬೇಕಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ, ತಾನು ಹೊರಟಿದ್ದ ಮೂಲ ಸ್ಥಳಕ್ಕೆ ವಾಪಾಸಗಿದೆ. ಅದಕ್ಕೆ ಕಾರಣ, ಫ್ಲೈಟ್ ಹತ್ತಿದ ಪ್ರಯಾಣಿಕನೋರ್ವನಿಗೆ ಭೇದಿ ಕಿತ್ಕೊಂಡು ಬಂದಿದ್ದು. ಭೇದಿ ಶುರುವಾಗುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಟಾಯ್ಲೆಟ್‌ಗೆ ಹೋಗುವ ಹಾದಿಯಲ್ಲಿದ್ದಾಗಲೇ ಎಲ್ಲವೂ ವಿಸರ್ಜನೆಯಾಗಿದೆ. ಪ್ರಯಾಣಿಕನಿಗೆ 'ಬಯೋಹಜಾರ್ಡ್ ಸಮಸ್ಯೆ' ಉಂಟಾದ ಕಾರಣದಿಂದ ವಿಮಾನ ವಾಪಾಸಾಗಿದೆ ಎಂದು ಪೈಲಟ್ ತಿಳಿಸಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಡೆಲ್ಟಾ ಏರ್‌ಲೈನ್ಸ್ ವಿಮಾನ 194 ಕಳೆದ ಶುಕ್ರವಾರ ತನ್ನ ಪ್ರಯಾಣದಲ್ಲಿ ಎರಡು ಗಂಟೆ ಕಳೆದಿತ್ತು. ಈ ವೇಳೆ ಪೈಲಟ್ ವಿಮಾನವನ್ನು ಯೂಟರ್ನ್ ಮಾಡಿ ಮೂಲಸ್ಥಳಕ್ಕೆ ಬಂದಿದ್ದಾರೆ. ಈ ಕುರಿತಾದ ಆಡಿಯೋವೊಂದು ಟ್ವಿಟರ್‌ನಲ್ಲಿ ಪೋಸ್ಟ್ ಆಗಿದ್ದು, ಪ್ರಯಾಣಿಕರಿಗೆ ಡೈಹೀರಿಯಾ (ಅತಿಸಾರ) ಉಂಟಾಗಿದ್ದು, ಇಡೀ ವಿಮಾನಪೂರ್ತಿ ಮಲ ವಿಸರ್ಜನೆ ಮಾಡಿದ್ದಾನೆ ಎಂದು ಪೈಲಟ್ ಹೇಳಿರುವುದು ದಾಖಲಾಗಿದೆ. ಇಡೀ ವಿಮಾನವನ್ನು ಅಂದಾಜು ಒಂದು ದಿನಗಳ ಕಾಲ ಸಂಪೂರ್ಣವಾಗಿ ಕ್ಲೀನ್ ಮಾಡಿದ ಬಳಿಕ ಶನಿವಾರ ಬಾರ್ಸಿಲೋನಾಕ್ಕೆ ಹೊರಟಿತ್ತು ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ಅತಿಸಾರದಿಂದ ಬಳಲುತ್ತಿದ್ದ ಪ್ರಯಾಣಿಕನನ್ನು ಹೊಂದಿದ್ದೆವು. ಆತ ಇಡೀ ವಿಮಾನದಲ್ಲಿ ತಾನು ಹೋದ ಸ್ಥಳದಲ್ಲೆಲ್ಲಾ ಮಲ ವಿಸರ್ಜನೆ ಮಾಡಿದ್ದ. ಹಾಗಾಗಿ ಅವರೆಲ್ಲರೂ ಅಟ್ಲಾಂಟಾಕ್ಕೆ ವಾಪಾಸಾಗಬೇಕು ಎಂದು ಬಯಸಿದ್ದಾರೆ ಎಂದು ಏರ್ ಟ್ರಾಫಿಕ್ ಕಂಟ್ರೋಲ್ ಅವರ ಹೇಳಿಕೆಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಇನ್‌ಸೈಡರ್ ವೆಬ್‌ಸೈಟ್ ಈ ಕುರಿತಾದ ಅಧಿಕೃತ ಹೇಳಿಕೆಯನ್ನೂ ಪೋಸ್ಟ್ ಮಾಡಿದೆ. ವಿಮಾನದಲ್ಲಿ ವೈದ್ಯಕೀಯ ಸಮಸ್ಯೆ ಉಂಟಾಗಿರುವುದನ್ನು ಡೆಲ್ಟಾ ಬೋರ್ಡ್ ಖಚಿತಪಡಿಸಿದೆ. ವಿಮಾನ ಪೂರ್ತಿ ಗಬ್ಬೆದ್ದು ಹೋಗಿದ್ದ ಕಾರಣದಿಂದ ಸಂಪೂರ್ಣ ಶುಚಿ ಮಾಡುವ ಸಲುವಾಗಿ ಅಟ್ಲಾಂಟಕ್ಕೆ ಹಿಂತಿರುಗಿತು. ಅಟ್ಲಾಂಟಾದಿಂದ ಬಾರ್ಸಿಲೋನಾಗೆ ಹೋಗಬೇಕಿದ್ದ ಡೆಲ್ಟಾ ಫ್ಲೈಟ್ 194 ಆನ್‌ಬೋರ್ಡ್ ವೈದ್ಯಕೀಯ ಸಮಸ್ಯೆಯ ನಂತರ ಅಟ್ಲಾಂಟಾಕ್ಕೆ ಮರಳಿತು ಎನ್ನಲಾಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು!
ನಮ್ಮ ಇಡೀ ತಂಡ ಅತ್ಯಂತ ಕ್ವಿಕ್ ಆಗಿ ಕೆಲಸ ಮಾಡಿ ವಿಮಾನವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದೆ. ನಮ್ಮ ಗ್ರಾಹಕರನ್ನು ಅವರ ಅಂತಿಮ ಗಮ್ಯಸ್ಥಾನಕ್ಕೆ ತಲುಪಿಸಲು ಸಾಧ್ಯವಾದಷ್ಟು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಕೆಲಸ ಮಾಡಿದೆ. ನಮ್ಮ ಗ್ರಾಹಕರ ಪ್ರಯಾಣದ ಯೋಜನೆಗಳ ವಿಳಂಬ ಮತ್ತು ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಡೆಲ್ಟಾ ಏರ್‌ಲೈನ್ಸ್ ಹೇಳಿದೆ.
Air India ವಿಮಾನದಲ್ಲಿ ಮುರಿದ ಸೀಟು, ಜಿರಳೆಗಳ ಹಾವಳಿ..! ಟ್ವಿಟ್ಟರ್‌ನಲ್ಲಿ ವಿಶ್ವಸಂಸ್ಥೆ ಅಧಿಕಾರಿ ಕಿಡಿ
ಕಳೆದ ವಾರ ಮಿಲನ್‌ನಿಂದ ಅಟ್ಲಾಂಟಾ ಹೋಗುತ್ತಿದ್ದ ವಿಮಾನದಲ್ಲಿ ಸಮಸ್ಯೆ ಉಂಟಾದ ಬಳಿಕ ಸುಮಾರು 11 ಪ್ರಯಾಣಿಕರು ಮತ್ತು ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದರ ಎಂದು ಯುಎಸ್ ಮೂಲದ ವಿಮಾನಯಾನ ಸಂಸ್ಥೆ ತಿಳಿಸಿದೆ.