ಪಾಕಿಸ್ತಾನದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದ ವಿಡಿಯೋ ಬಹಿರಂಗವಾಗಿದೆ. ಘಟನೆಗೂ ಕೆಲವೇ ಕ್ಷಣಗಳ ಮೊದಲಿನ ವಿಡಿಯೋ ಇದಾಗಿದ್ದು, ಭಾಷಣ, ಜಯಘೋಷದ ನಡುವೆ ಬಾಂಬ್ ಸ್ಫೋಟಗೊಂಡಿದೆ. ರಾಜಕೀಯ ಸಮಾವೇಶದಲ್ಲಿ ನಡೆದ ಈ ಸ್ಫೋಟದಲ್ಲಿ 39ಕ್ಕೂ ಹಚ್ಚು ಮಂದಿ ಬಲಿಯಾಗಿದ್ದಾರೆ. 

ಇಸ್ಲಾಮಾಬಾದ್(ಜು.30): ಪಾಕಿಸ್ತಾನದ ರಾಜಕೀಯ ಸಮಾವೇಶದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 39ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೆ, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದ ಖಾರ್‌ ಪ್ರದೇಶದಲ್ಲಿ ಆಯೋಯಿಸಿದ್ದ ಜಮೀಯತ್‌ ಉಲೇಮಾ-ಎ-ಇಸ್ಲಾಂ-ಫಜಲ್‌ ಪಕ್ಷದ ಸಮಾವೇಶದಲ್ಲಿ ಉಗ್ರರು ಬಾಂಬ್ ಸ್ಪೋಟಿಸಿದ್ದಾರೆ. ಅಮಾಯಕರು ಕುಳಿತು ಜಯಘೋಷೆಗಳನ್ನು ಕೂಗುತ್ತಿದ್ದರೂ,ವೇದಿಕೆಯಲ್ಲಿ ನಾಯಕರ ಭಾಷಣಕ್ಕೂ ಮುನ್ನ ನಿರೂಪಕರು ಅತಿಥಿಗಳಿಗೆ ಸ್ವಾಗತಕೋರುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ. ಈ ಬಾಂಬ್ ಸ್ಫೋಟದ ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ ಆಗಿದೆ.

ರಾಜಕೀಯ ಸಮಾವೇಶದಲ್ಲಿ ಜಮೀಯತ್‌ ಉಲೇಮಾ-ಎ-ಇಸ್ಲಾಂ-ಫಜಲ್‌ ಪಕ್ಷದ ಹಿರಿಯ ಮುಖಂಡ ಕೆಲವೇ ಕ್ಷಣಗಳಲ್ಲಿ ವೇದಿಕೆಗೆ ಆಗಮಿಸಿ ಭಾಷಣ ಮಾಡಬೇಕಿತ್ತು. ಇದಕ್ಕೂ ಮುನ್ನ ನಿರೂಪಕ, ಸಮಾವೇಶದಲ್ಲಿ ಸೇರಿದ್ದ ಇತರ ಗಣ್ಯರನ್ನು ಸ್ವಾಗತಿಸಿದ್ದಾರೆ. ಪ್ರತಿ ನಾಯಕನ ಹೆಸರು ಹೇಳುತ್ತಿದ್ದಂತೆ ಕಾರ್ಯಕರ್ತರು, ಸಮಾವೇಶಕ್ಕೆ ಹಾಜರಾದ ಜನರು ಚಪ್ಪಾಳೆ, ಘೋಷಣೆ ಮೊಳಗಿಸಿದ್ದಾರೆ. ಈ ಜಯಘೋಷ, ಚಪ್ಪಾಳೆ ನಡುವೆ ಭೀಕರವಾಗಿ ಬಾಂಬ್ ಸ್ಫೋಟಗೊಂಡಿದೆ. ವೇದಿಕೆಯ ಮುಂಭಾಗದಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ.

Scroll to load tweet…

ಜಿಲ್ಲೆಯ ಖಾರ್‌ ಪ್ರದೇಶದಲ್ಲಿ ಜಮೀಯತ್‌ ಉಲೇಮಾ-ಎ-ಇಸ್ಲಾಂ-ಫಜಲ್‌ (ಜೆಯುಐ-ಎಫ್‌) ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನಡೆದ ಸ್ಫೋಟದಲ್ಲಿ 80 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯಾ ಬಾಂಬ್‌ ದಾಳಿ ಎಂಬುದು ತಿಳಿದು ಬಂದಿದೆ ಎನ್ನಲಾಗಿದೆ.

ಬೃಹತ್ ರ‍್ಯಾಲಿ ಮೇಲೆ ಉಗ್ರರ ದಾಳಿ, ಪಾಕಿಸ್ತಾನ ಬಾಂಬ್ ಸ್ಫೋಟಕ್ಕೆ ಸಾವಿನ ಸಂಖ್ಯೆ 39ಕ್ಕೆ ಏರಿಕೆ!

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರನ್ನು ಒತ್ತಾಯಿಸಿರುವ ಪಕ್ಷದ ಮುಖ್ಯಸ್ಥ ಮೌಲಾನಾ ಫಜ್ಲುರ್‌ ರೆಹಮಾನ್‌, ಆಸ್ಪತ್ರೆಗೆ ಬಂದು ಗಾಯಾಳುಗಳಿಗೆ ರಕ್ತದಾನ ಮಾಡುವಂತೆ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.