ವಾಶಿಂಗ್ಟನ್(ಜ.08): ಭಾರತೀಯ ಮೂಲದ ವನಿತಾ ಗುಪ್ತಾ ಅಮೆರಿಕ ಅತ್ಯಂತ ಗೌರವಾನ್ವಿತ ನಾಗರೀಕ ಹಕ್ಕುಗಳಲ್ಲಿ ಒಬ್ಬರಾಗಿದ್ದಾರೆ. ಅಮೆರಿದಲ್ಲಿ ಸಮಾನತೆಗೆ ಹೋರಾಡಿದ ಧೀಮಂತ ಮಹಿಳೆ. ಭಾರತದಿಂದ ವಲಸೆ ಬಂದ ಅಮೆರಿಕದ ಹೆಮ್ಮೆಯ ಮಗಳು ಎಂದು ಅಮೇರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಜೋ ಬೈಡನ್ ಹೇಳಿದ್ದಾರೆ.

ಇಂದು ಎಲೆಕ್ಟೋರಲ್‌ ಮತ ಎಣಿಕೆ: ಬೈಡೆನ್‌, ಹ್ಯಾರಿಸ್‌ ಆಯ್ಕೆ ಅಧಿಕೃತ ಘೋಷಣೆ!.

46 ವರ್ಷದ ವನಿತಾ ಗುಪ್ತಾರನ್ನು ತಮ್ಮ ಸಹಾಯಕಿ ಅಟಾರ್ನಿ ಜನರಲ್ ಆಗಿ ನಾಮ ನಿರ್ದೇಶನ ಮಾಡಿದ್ದಾರೆ. ಅಮೆರಿಕ ಸೆನೆಟ್ ಬೈಡೆನ್ ನಾಮನಿರ್ದೇಶನಕ್ಕೆ ಅಂಕಿತ ಹಾಕಿದರೆ, ಈ ಸ್ಥಾನ ಅಲಂಕರಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಅಮೆರಿಕದ ಸಂಸತ್‌ ಭವನದಲ್ಲಿ ಟ್ರಂಪ್ ಬೆಂಬಲಿಗರ ದಾಂಧಲೆ, ಮೋದಿಯಿಂದ ಖಂಡನೆ

ಅಟಾರ್ನಿ ಜನರಲ್ ಹುದ್ದೆಗೆ ವನಿತಾ ಗುಪ್ತಾ ಅವರನ್ನು ನಾಮ ನಿರ್ದೇಶನ ಮಾಡಿದ್ದೇನೆ. ನನಗೆ ವನಿತಾ ಗುಪ್ತಾ ಅವರ ಬಗ್ಗೆ ತಿಳಿದಿದೆ. ಅಮೆರಿಕದ ಅತ್ಯಂತ ಗೌರವಾನ್ವಿತ ವಕೀಲರಾಗಿದ್ದಾರೆ. ಪ್ರತಿ ಹಂತದಲ್ಲೂ, ಪ್ರತಿ ಪ್ರಕರಣದಲ್ಲೂ ನ್ಯಾಯಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ಎಂದು ಜೋ ಬೈಡನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವನಿತಾ ಗುಪ್ತಾ ತಮ್ಮ ವೃತ್ತಿ ಜೀವನವನ್ನು NAACP ಕಾನೂನು ರಕ್ಷಣಾ ನಿಧಿಯಲ್ಲಿ ಆರಂಭಿಸಿದ್ದರು. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ವೇಳೆ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗವನ್ನು ಮುನ್ನಡೆಸಿದ್ದರು. ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ವನಿತಾ ಜನರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.