ಪಾಕಿಸ್ತಾನ ಸೇರಿದಂತೆ ಕೆಲವೇ ಕೆಲ ರಾಷ್ಟ್ರಗಳು ಚೀನಾ ಪರವಾಗಿದೆ. ಆದರೆ ಬಹುತೇಕ ರಾಷ್ಟ್ರಗಳ ಚೀನಾ ವಿರುದ್ಧ ನಿಂತಿದೆ. ಇಷ್ಟೇ ಅಲ್ಲ, ಹಲವು ರಾಷ್ಟ್ರಗಳು ಭಾರತದ ಪರವಾಗಿದೆ. ಇದರಲ್ಲಿ ಫ್ರಾನ್ಸ್ ಕೂಡ ಸೇರಿದೆ. ಭಾರತದೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಫ್ರಾನ್ಸ್ ಇದೀಗ, ಮತ್ತೊಂದು ಅಭಯ ನೀಡಿದೆ.
ನವದೆಹಲಿ(ಜ.08): ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಹಾಗೂ ಚೀನಾ ಹಲವು ಭಾರಿ ವಿಶ್ವ ಸಂಸ್ಥೆ, ಅಮೆರಿಕದ ಕದ ತಟ್ಟಿದೆ. ದಶಕಗಳ ಹಿಂದೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಹೆಚ್ಚಿನ ದೇಶಗಳಿಂದ ಬೆಂಬಲ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಶ್ಮೀರ ವಿಚಾರದಲ್ಲಿ ಇದೀಗ ಭಾರತದ ನಿರ್ಧಾರವೇ ಸುಪ್ರೀಂ. ಅಷ್ಟರ ಮಟ್ಟಿಗೆ ಇತರ ದೇಶಗಳು ಭಾರತವನ್ನು ಬೆಂಬಲಿಸುತ್ತಿದೆ. ಇದೀಗ ಫ್ರಾನ್ಸ್ ಕಾಶ್ಮೀರ ವಿಚಾರದಲ್ಲಿ ಚೀನಾ ಕುತಂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತಕ್ಕೆ ಅಭಯ ನೀಡಿದೆ.
ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಫ್ರಾನ್ಸ್‌ಗೆ ಭಾರತದ ಸಾಥ್, ಮ್ಯಾಕ್ರನ್‌ಗೆ ಮೋದಿ ಭರವಸೆ!
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆಗಿನ ಭಾರತ-ಫ್ರಾನ್ಸ್ ಕಾರ್ಯತಂತ್ರ ಸಂವಾದಕ್ಕಾಗಿ ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕೋನ್ ಡಿಪ್ಲೋಮ್ಯಾಟಿಕ್ ಅಡ್ವೈಸರ್ ಇಮ್ಯಾನ್ಯುಯೆಲ್ ಬೊನ್ನೆ ಮಹತ್ವ ಹೇಳಿಕೆ ನೀಡಿದ್ದಾರೆ.
ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿರೋಧಿ ಕುತಂತ್ರಕ್ಕೆ ಚೀನಾಗೆ ಅವಕಾಶ ನೀಡುವುದಿಲ್ಲ. ಕಾಶ್ಮೀರ ವಿಚಾರದಲ್ಲಿ ನಮ್ಮ ಬೆಂಬಲ ಯಾವತ್ತಿಗೂ ಭಾರತಕ್ಕೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಕಾಶ್ಮೀರ ವಿರುದ್ಧ ಚೀನಾ ಆಟ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆಯಲು ಬಿಡುವುದಿಲ್ಲ ಎಂದು ಇಮ್ಯಾನ್ಯುಯೆಲ್ ಬೊನ್ನೆ ಹೇಳಿದ್ದಾರೆ.
ಇಸ್ಲಾಂ ಉಗ್ರವಾದ ವಿರುದ್ಧ ನಮ್ಮ ಹೋರಾಟ, ಇಸ್ಲಾಂ ವಿರುದ್ಧ ಅಲ್ಲ: ಫ್ರಾನ್ಸ್ ಅಧ್ಯಕ್ಷ!
ಹಿಮಾಲಯ ವಿಚಾರ ಬಂದಾಗ ನಾವು ಸಾರ್ವಜನಿಕವಾಗಿ ಹಾಗೂ ಚೀನಾಗೆ ವಿಶೇಷವಾಗಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಹಿಮಾಲಯ ವಿಚಾರದಲ್ಲಿ ನಮ್ಮ ಬೆಂಬಲ ಭಾರತದ ಪರವಾಗಿದೆ. ಇದರಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ ಎಂದು ಅಜಿತ್ ದೋವಲ್ ಜೊತೆಗಿನ ಸಭೆಯಲ್ಲಿ ಬೊನ್ನೆ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 8, 2021, 6:57 PM IST