ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಚೌಕಟ್ಟು ಘೋಷಿಸುವ ವೇಳೆ, ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಚೀನಾದ ವಶದಲ್ಲಿರುವ ಅಕ್ಸಾಯ್‌ ಚಿನ್‌ ಪ್ರದೇಶ ಒಳಗೊಂಡ ಭಾರತದ ನಕ್ಷೆಯನ್ನು ಪೋಸ್ಟ್‌ ಮಾಡಿದ್ದ ಅಮೆರಿಕ, ಇದೀಗ ಅದನ್ನು ತೆಗೆದುಹಾಕಿದೆ.

ನವದೆಹಲಿ: ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಚೌಕಟ್ಟು ಘೋಷಿಸುವ ವೇಳೆ, ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಚೀನಾದ ವಶದಲ್ಲಿರುವ ಅಕ್ಸಾಯ್‌ ಚಿನ್‌ ಪ್ರದೇಶ ಒಳಗೊಂಡ ಭಾರತದ ನಕ್ಷೆಯನ್ನು ಪೋಸ್ಟ್‌ ಮಾಡಿದ್ದ ಅಮೆರಿಕ, ಇದೀಗ ಅದನ್ನು ತೆಗೆದುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಒಪ್ಪಂದ ಪರಿಷ್ಕೃತ ಫ್ಯಾಕ್ಟ್‌ಶೀಟ್ ಅನ್ನು ಅದು ಬಿಡುಗಡೆ ಮಾಡಿದ್ದು, ಅದರಲ್ಲಿ ನಕ್ಷೆ ಮಾಯವಾಗಿದೆ.ಪಿಒಕೆ ಮತ್ತು ಅಕ್ಸಾಯ್‌ ಚಿನ್‌ ಪ್ರದೇಶವನ್ನು ಅಮೆರಿಕ ಮೊದಲಿಂದಲೂ ವಿವಾದಿತ ಪ್ರದೇಶ ಎಂದು ಗುರುತಿಸುತ್ತಾ ಬಂದಿತ್ತು. ಆದರೆ ಫೆ.7ರಂದು ಅವುಗಳನ್ನು ಭಾರತದ ಭಾಗವೆಂದು ಅದು ಬಿಂಬಿಸಿತ್ತು. ಹಲವು ಜಾಗತಿಕ ಲೆಕ್ಕಾಚಾರಗಳಿಗೆ ಕಾರಣವಾಗಿತ್ತು.

ಪಾಕಿಸ್ತಾನವು ಚೀನಾದತ್ತ ವಾಲುತ್ತಿರುವುದರಿಂದ ಹಾಗೂ ಭಾರತದ ಗೆಳೆತನವನ್ನು ಬಲಗೊಳಿಸಿಕೊಳ್ಳುವ ಉದ್ದೇಶದಿಂದ ಅಮೆರಿಕ ಹಾಗೆ ಮಾಡಿತ್ತು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಯಾವುದೇ ಕಾರಣ ನೀಡದೇ ಅಮೆರಿಕ ಆ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದೆ.

ಭಾರತ-ಪಾಕ್‌ ಯುದ್ಧ ವೇಳೆ 10 ವಿಮಾನ ನಾಶ: ಟ್ರಂಪ್‌

ನ್ಯೂಯಾರ್ಕ್‌/ ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಈಗಾಗಲೇ 80ಕ್ಕೂ ಹೆಚ್ಚು ಸಲ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಯುದ್ಧದ ವೇಳೆ 10 ವಿಮಾನಗಳನ್ನು ಹೊಡೆದುರುಳಿಸಲಾಯಿತು’ ಎಂದಿದ್ದಾರೆ.ಈವರೆಗೆ ಅವರು 5-6 ವಿಮಾನ ನಾಶ ಎನ್ನುತ್ತಿದ್ದರು. ಈಗ ಅದನ್ನು 10ಕ್ಕೆ ಹೆಚ್ಚಿಸಿದ್ದು ಗಮನಾರ್ಹ. ಆದರೆ ಯಾರ ವಿಮಾನ ಎಂಬುದನ್ನು ಅವರು ಹೇಳಿಲ್ಲ.

ಪರಮಾಣು ಯುದ್ಧವಾಗಿ ಬದಲಾಗುವ ಸಾಧ್ಯತೆ

ಇದಲ್ಲದೆ, ‘ನಾನು ಯುದ್ಧ ನಿಲ್ಲಿಸದಿದ್ದರೆ ಅದು ಪರಮಾಣು ಯುದ್ಧವಾಗಿ ಬದಲಾಗುವ ಸಾಧ್ಯತೆಯಿತ್ತು’ ಎಂದೂ ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಟ್ರಂಪ್‌, ‘ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಜನರು ಸಾಯುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ತೆರಿಗೆ ಕಾರಣ ನೀಡಿಯೇ 6 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಒಂದು ವೇಳೆ ಆ ರೀತಿ ಮಾಡಿರದೇ ಇದ್ದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧವಾಗುವ ಸಂಭವವಿತ್ತು. ಅವರು ನಿಜವಾಗಿಯೂ ಅದನ್ನು ಮಾಡಲು ಯತ್ನಿಸುತ್ತಿದ್ದರು. 10 ವಿಮಾನಗಳನ್ನು ಹೊಡೆದುರುಳಿಸಿದ್ದರು’ ಎಂದಿದ್ದಾರೆ.ಇದೇ ವೇಳೆ ಟ್ರಂಪ್‌, ‘ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಪ್‌ ಅವರು ಯುದ್ಧ ನಿಲ್ಲಿಸಿದ್ದರಿಂದ 1 ಕೋಟಿ ಮಂದಿ ಜೀವ ಉಳಿಯಿತು ಎಂದು ನನ್ನಲ್ಲಿ ಹೇಳಿದ್ದರು’ ಎಂದಿದ್ದಾರೆ.