MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಜಪಾನ್ ಸೇರಿ ಹಲವು ದೇಶಕ್ಕಿಂತ ಕಡಿಮೆ

ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಜಪಾನ್ ಸೇರಿ ಹಲವು ದೇಶಕ್ಕಿಂತ ಕಡಿಮೆ

ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ;  ಹೌದು 2 ರೂಪಾಯಿ 19 ಪೈಸೆ ಮಾತ್ರ. ಜಪಾನ್, ಚೀನಾ, ಫ್ರಾನ್ಸ್ ಸೇರಿದಂತೆ ಹಲವು ದೇಶಕ್ಲೆಕಿಂತ ಅತೀ ಕಡಿಮೆ.  ಈ ಕುರಿತು ಸಚಿವರು ಉತ್ತರಿಸಿದ್ದಾರೆ. 

2 Min read
Author : Chethan Kumar
Published : Feb 11 2026, 08:13 PM IST
Share this Photo Gallery
  • FB
  • TW
  • Linkdin
  • Whatsapp
15
ವಂದೇ ಭಾರತ್ ಎಕ್ಸ್‌ಪ್ರೆಸ್ ಕ್ರಾಂತಿ
Image Credit : stockPhoto

ವಂದೇ ಭಾರತ್ ಎಕ್ಸ್‌ಪ್ರೆಸ್ ಕ್ರಾಂತಿ

ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಹೊಸ ರೈಲುಗಳು ಸೇವೆ ನೀಡುತ್ತಿದೆ. ಈ ಮೂಲಕ ಭಾರತದ ರೈಲು ಸಂಪರ್ಕ ಸೇವೆ ಮೇಲ್ದರ್ಜೆಗೆ ಏರಿಸಲಾಗಿದೆ. ದೇಶದ ಮೂಲೆ ಮೂಲೆಗೆ ವಂದೇ ಭಾರತ್ ಸೇರಿದಂತೆ ಹಲವು ರೈಲುಗಳು ಸೇವೆ ನೀಡುತ್ತಿದೆ. ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ರೈಲಿಗೂ ಚಾಲನೆ ಸಿಕ್ಕಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿ ಎಸಿ ಕೋಚ್ ಟಿಕೆಟ್ ದರ ಕುರಿತು ರೈಲ್ವೇ ಸಚಿವ ಅಶ್ವಿನಿ ವೈಷ್ಣನ್ ಲೋಕಸಭೆಗೆ ಉತ್ತರಿಸಿದ್ದಾರೆ.

25
ಅತೀ ಕಡಿಮೆ ದರ ಕೇವಲ 2.19 ರೂಪಾಯಿ ಮಾತ್ರ
Image Credit : our own

ಅತೀ ಕಡಿಮೆ ದರ ಕೇವಲ 2.19 ರೂಪಾಯಿ ಮಾತ್ರ

ವಂದೇ ಭಾರತ್ ರೈಲಿನಲ್ಲಿ ಎಸಿ ಚೇರ್ ಟಿಕೆಟ್ ದರ ಕೇವಲ 2.19 ರೂಪಾಯಿ ಮಾತ್ರ ಪ್ರತಿ ಕಿಲೋಮೀಟರ್‌ಗೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 300 ರಿಂದ 400 ಕಿಲೋಮೀಟರ್ ಪ್ರಯಾಣಿಸುವ ಪ್ರಯಾಣಿಕ ವಂದೇ ಭಾರತ್ ಎಸಿ ಚೇರ್ ರೈಲು ಟಿಕೆಟ್ ದರ ಪ್ರತಿ ಕಿಲೋಮೀಟರ್‌ಗೆ ಅತೀ ಕನಿಷ್ಠ 2.19 ರೂಪಾಯಿ ಮಾತ್ರ ನೀಡುತ್ತಾನೆ ಎಂದಿದ್ದಾರೆ.

Related Articles

Related image1
ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ
Related image2
ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
35
ಪ್ರಮುಖ ದೇಶಗಳಿಗಿಂತ ಅತೀ ಕಡಿಮೆ
Image Credit : ANI

ಪ್ರಮುಖ ದೇಶಗಳಿಗಿಂತ ಅತೀ ಕಡಿಮೆ

ಭಾರತದ ವಂದೇ ಭಾರತ್ ಎಸಿ ಚೇರ್ ಟಿಕೆಟ್ ದರವನ್ನು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ್, ಚೀನಾ, ಫ್ರಾನ್ಸ್‌ಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ವಂದೇ ಭಾರತ್ ಎಸಿ ಚೇರ್ ಟಿಕೆಟ್ ದರ ಅತೀ ಕಡಿಮೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ದೇಶದಲ್ಲಿ ಪ್ರತಿ ಕಿಲೋಮೀಟರ್‌ಗೆ 2 ರಿಂದ 20 ರೂಪಾಯಿ ಇದೆ ಎಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ.

45
ಆರ್ಡಿನರಿ ರೈಲಿನ ಸರಾಸರಿ ಬೆಲೆ
Image Credit : stockPhoto

ಆರ್ಡಿನರಿ ರೈಲಿನ ಸರಾಸರಿ ಬೆಲೆ

ಆರ್ಡನರಿ ಅಥವಾ ಸಾಮಾನ್ಯ ರೈಲು ಬೆಲೆಯೆನ್ನು ಭಾರತದ ನೆರೆ ರಾಷ್ಟ್ರಗಳೊಂದಿಗೆ ಅಥವಾ ಯಾವುದೇ ದೇಶಕ್ಕೆ ಹೋಲಿಸಿದರೂ ಅತೀ ಕಡಿಮೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ಆರ್ಡಿನರಿ ರೈಲಿನ ಪ್ರತಿ ಕಿಲೋಮೀಟರ್ ಸರಾಸರಿ ಬೆಲೆ ಕೇವಲ 20 ಪೈಸೆ ಮಾತ್ರ. ಇದೇ ಬೆಲೆ ಪಾಕಿಸ್ತಾನದಲ್ಲಿ 54 ಪೈಸೆ, ಬಾಂಗ್ಲಾದೇಶದಲ್ಲಿ 37 ಪೈಸೆ, ಶ್ರೀಲಂಕಾದದಲ್ಲಿ 51 ಪೈಸೆಯಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

55
164 ವಂದೇ ಭಾರತ್ ರೈಲು ಸೇವೆ
Image Credit : X

164 ವಂದೇ ಭಾರತ್ ರೈಲು ಸೇವೆ

ಭಾರತದಲ್ಲಿ 164 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆ ನೀಡುತ್ತಿದೆ. 84 ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ನೀಡಲಾಗುತ್ತಿದೆ. ಹಂತ ಹಂತವಾಗಿ ವಂದೇ ಭಾರತ್ ರೈಲು ಸೇವೆಗಳು ವರ್ಧಿಸುತ್ತಿದೆ. ಸಂಪರ್ಕ ವಿಸ್ತಾರಗೊಳ್ಳುತ್ತಿದೆ. 2019ರಲ್ಲಿ ಆರಂಭಗೊಂಡ ವಂದೇ ಭಾರತ್ ರೈಲು ಇದೀಗ ಅತ್ಯಂತ ಯಶಸ್ವಿ ರೈಲು ಸಂಪರ್ಕ ಸೇವೆಯಾಗಿದೆ ಎಂದು ಅಶ್ವಿನಿ ವೈಷ್ಣನವ್ ಲೋಕಸಭೆಯಲ್ಲಿ ಹೇಳಿದ್ದಾರೆ.

164 ವಂದೇ ಭಾರತ್ ರೈಲು ಸೇವೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತ ಸುದ್ದಿ
ಭಾರತೀಯ ರೈಲ್ವೆ

Latest Videos
Recommended Stories
Recommended image1
ಪಿಕ್‌ಬಾಲ್ ಮೈದಾನದಲ್ಲಿ ಸಮಂತಾ ರೌದ್ರಾವತಾರ! ಪತಿ ರಾಜ್ ನಿಡಿಮೋರು ಜೊತೆ ನಟಿ ಮಾಡಿದ್ದೇನು?
Recommended image2
ಇನ್ಮುಂದೆ 'ಜನಗಣಮನ'ಕ್ಕೂ ಮುನ್ನ 'ವಂದೇ ಮಾತರಂ' ಕಡ್ಡಾಯ; ಕೇಂದ್ರ ಸರ್ಕಾರದಿಂದ ಹೊಸ ಪ್ರೋಟೋಕಾಲ್ ಜಾರಿ!
Recommended image3
ಯುವತಿಯ ರೀಲ್ಸ್ ಹುಚ್ಚಿಗೆ ಬಲಿಯಾದ ದೀಪಕ್; 21 ದಿನಗಳ ಬಳಿಕ ಆರೋಪಿ ಶಿಮ್ಜಿತಾಗೆ ಜಾಮೀನು ಕೊಟ್ಟ ಕೋರ್ಟ್!
Related Stories
Recommended image1
ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ
Recommended image2
ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved