ನವದೆಹಲಿ (ಜೂ. 26): ಮೇಲ್ನೋಟಕ್ಕೆ ಭಾರತ-ಚೀನಾ ಸಂಬಂಧಗಳ ಸ್ಥಿತ್ಯಂತರಕ್ಕೆ ಗಡಿ ತಂಟೆ ಕಾರಣ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳುತ್ತಿದ್ದರೂ ಚೀನಾ ಏನು ಯೋಚಿಸುತ್ತದೆ ಎಂಬುದನ್ನು ತಿಳಿಯಪಡಿಸುವ ಗ್ಲೋಬಲ್‌ ಟೈಮ್ಸ್‌ ಪ್ರಕಾರ, ಹೆಚ್ಚುತ್ತಿರುವ ಇಂಡೋ-ಅಮೆರಿಕನ್‌ ಸಾಮೀಪ್ಯ ಚೀನಾದ ನಿದ್ದೆಗೆಡಿಸಿದೆ.

ಚೀನಾಕ್ಕೂ ಯುದ್ಧ ಬೇಕಾಗಿಲ್ಲ, ಆದರೆ ಏಷ್ಯಾದಲ್ಲಿ ಯಾವುದೇ ಕಾರಣಕ್ಕೂ ತನ್ನದೇ ಏಕಚಕ್ರಾಧಿಪತ್ಯ ಎಂದು ತೋರಿಸಲು ಚೀನಾ ಆಗಾಗ ಇಂಥ ಕ್ಯಾತೆ ತೆಗೆಯುತ್ತಿದೆ. ಹಾಗೆಂದು ಭಾರತದ ಮಿತ್ರತ್ವವನ್ನು ಪೂರ್ತಿಯಾಗಿ ಕಳೆದುಕೊಳ್ಳಲೂ ಚೀನಾ ತಯಾರಿಲ್ಲ. ಆದರೆ ವಿಶ್ವದ ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, ಚೀನಾದ ಸರಣಿ ತಗಾದೆಗಳಿಂದ ಭಾರತ ಇನ್ನೂ ಹೆಚ್ಚುಹೆಚ್ಚು ಅಮೆರಿಕದತ್ತ ವಾಲಬಹುದು.

ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್‌; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!

ಅಂದಹಾಗೆ, ಚೀನಾದ ಯುದ್ಧಶಾಸ್ತ್ರ ತಜ್ಞ ಸೂನ್‌ ತ್ಸು ಹೇಳುವ ಪ್ರಕಾರ, ‘ತನ್ನ ಮತ್ತು ಶತ್ರುವಿನ ಸಾಮರ್ಥ್ಯ, ದೌರ್ಬಲ್ಯ ಅರಿಯದವನು ಯುದ್ಧ ಗೆಲ್ಲಲಾರ. ತನ್ನ ಬಗ್ಗೆ ಅರಿತು ಶತ್ರುವಿನ ಬಗ್ಗೆ ಪೂರ್ತಿ ಅರಿಯದವ ಕೆಲವು ಯುದ್ಧ ಗೆಲ್ಲಬಹುದು, ಬಹಳ ಯುದ್ಧಗಳನ್ನು ಸೋಲಬೇಕಾಗುತ್ತದೆ. ಆದರೆ ತನ್ನ ಮತ್ತು ಶತ್ರುವಿನ ಸಾಮರ್ಥ್ಯ-ದೌರ್ಬಲ್ಯದ ಬಗ್ಗೆ ಪೂರ್ತಿ ಅರಿತವನು ಯಾವತ್ತೂ ಅಂಜುವ ಅಗತ್ಯ ಇರುವುದಿಲ್ಲ.’

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ