ನ್ಯೂಯಾರ್ಕ್(ಡಿ.27): ಅಮೆರಿಕದ ಮಾಡೆರ್ನಾ ಕಂಪನಿ ಉತ್ಪಾದಿಸಿರುವ ಕೋವಿಡ್‌ ಲಸಿಕೆಯನ್ನು ಪಡೆದ ಬಾಸ್ಟನ್‌ನ ವೈದ್ಯರೊಬ್ಬರಲ್ಲಿ ಅಲರ್ಜಿಯಂಥ ಅಡ್ಡಪರಿಣಾಮ ಕಂಡುಬಂದಿದೆ.

ಬಾಸ್ಟನ್‌ ಮೆಡಿಕಲ್‌ ಸೆಂಟರ್‌ನ ಜೆರಿಯಾಟ್ರಿಕ್‌ ಆಂಕಾಲಜಿ ವಿಭಾಗದ ವೈದ್ಯ ಹೊಸಿನ್‌ ಸಡ್‌್ರಜಾದೆಹ್‌ ಅವರಲ್ಲಿ ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ ತೀವ್ರ ಅಲರ್ಜಿ, ತಲೆಸುತ್ತು, ಎದೆಬಡಿತ ತೀವ್ರತೆಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

ಕೋವ್ಯಾಕ್ಸಿನ್ ಲಾಂಚ್‌ ಆಗಲು ಡೇಟ್ ಫಿಕ್ಸ್; ಗೆಟ್ ರೆಡಿ ಎಂದ ಕೇಂದ್ರ..!

ತಕ್ಷಣ ಹೊಸಿನ್‌ ಅವರಿಗೆ ಚಿಕಿತ್ಸೆ ನೀಡಿದ್ದು, ಸದ್ಯ ಅವರ ಆರೋಗ್ಯವೀಗ ಸುಧಾರಿಸಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಈ ಹಿಂದೆ ಫೈಝರ್‌ ಲಸಿಕೆಯೂ ಕೆಲವರಲ್ಲಿ ಅಲರ್ಜಿಯಂತಹ ಅಡ್ಡಪರಿಣಾಮಗಳನ್ನು ಉಂಟುಮಾಡಿತ್ತು. ಅಲರ್ಜಿ ಇರುವವರು ಲಸಿಕೆ ಪಡೆಯಬೇಡಿ ಎಂದು ಬ್ರಿಟನ್‌ ಸರ್ಕಾರ ಸೂಚಿಸಿತ್ತು.

ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಧಿಕಾರಿಯೊಬ್ಬರು ಕಳೆದ ವಾರ ಅಮೆರಿಕದಲ್ಲಿ ಫಿಜರ್ ಇಂಕ್ ಮತ್ತು ಬಯೋಟೆಕ್ ಎಸ್ಇಯ ಕೋವಿಡ್ -19 ಲಸಿಕೆಯನ್ನು ಜನರಿಗೆ ನೀಡಿದ ನಂತರ ಸಂಭವಿಸಿದ ಐದು ಅಲರ್ಜಿಯ ಪ್ರತಿಕ್ರಿಯೆಗಳ ಬಗ್ಗೆ ಎಫ್ಡಿಎ ತನಿಖೆ ನಡೆಸುತ್ತಿದೆ ಎಂದು ಹೇಳಿದರು.