Asianet Suvarna News Asianet Suvarna News

43 ಲಕ್ಷ ರೂ ಕೋವಿಡ್ ಪರಿಹಾರ ಸಾಲದಿಂದ ಪೋಕ್ಮನ್ ಗೇಮ್ ಕಾರ್ಡ್ ಖರೀದಿ; ಜೈಲು ಶಿಕ್ಷೆ ಭೀತಿಯಲ್ಲಿ ಉದ್ಯಮಿ!

  • ಕಂಪನಿ ನಷ್ಟದಲ್ಲಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಪಡೆದ ಉದ್ಯಮಿ
  • ಕೋವಿಡ್ ಪರಿಹಾರ ಸಾಲ ಪಡೆದು ಗೇಮಿಂಗ್ ಕಾರ್ಡ್ ಖರೀದಿ
  • ಜೈಲು ಶಿಕ್ಷೆ ಅಥವಾ 1.87 ಕೋಟಿ ರೂ ದಂಡದ ಭೀತಿಯಲ್ಲಿ ಉದ್ಯಮಿ
US Business man use Rs 43 lakh Covid 19 relief loan to buy Pokemon gaming card ckm
Author
Bengaluru, First Published Oct 27, 2021, 8:38 PM IST
  • Facebook
  • Twitter
  • Whatsapp

ವಾಶಿಂಗ್ಟನ್(ಅ.27): ಕೊರೋನಾಗೆ ತತ್ತರಿಸಿದ ರಾಷ್ಟ್ರಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಹೀಗಾಗಿ ಅಮೆರಿಕದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಹೆಚ್ಚಿನ ಅನುದಾನ ನೀಡಲಾಗಿದೆ. ಇನ್ನು ಕೊರೋನಾ ಕಾರಣ ನಷ್ಟದಲ್ಲಿರುವ ಕಂಪನಿಗಳ ಚೇತರಿಕೆಗೆ ಕೋವಿಡ್ ಪರಿಹಾರ ಸಾಲ ನೀಡಲಾಗುತ್ತಿದೆ. ಸುಳ್ಳು ದಾಖಲೆ ಸೃಷ್ಟಿಸಿ ಕೋವಿಡ್ ಪರಿಹಾರ ಸಾಲ ಪಡೆದ ಡಬ್ಲಿನ್‌ ಉದ್ಯಮಿ ಇದೀಗ ಜೈಲು ಶಿಕ್ಷೆ ಭೀತಿಯಲ್ಲಿದ್ದಾರೆ.

ಕೊರೋನಾ ಪರಿಹಾರ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ; ಉದ್ಯಮಿ ಅರಸ್ಟ್!

ಉದ್ಯಮಿ ವಿನಥ್ ಒಡಮ್ಸೈನ್ ತನ್ನ ಸಿಬ್ಬಂಧಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೋವಿಡ್ ಕಾರಣ ಕಂಪನಿ ನಷ್ಟದಲ್ಲಿದೆ. ಹೀಗಾಗಿ ಕೋವಿಡ್ ಪರಿಹಾರ ಸಾಲ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾನೆ. ಸುಳ್ಳು ದಾಖಲೆ ಸೃಷ್ಟಿ ಅರ್ಜಿ ಹಾಕಿದ ಒಡಮ್ಸೈನ್‌ಗೆ 57,000 ಅಮೆರಿಕನ್ ಡಾಲರ್(43 ಲಕ್ಷ ರೂಪಾಯಿ) ಸಾಲ ಮಂಜೂರಾಗಿದೆ.

ಮನೆಯಲ್ಲಿ ನಕಲಿ ಚೆಕ್ ಪ್ರಿಂಟ್ ಮಾಡಿ 4 ಕೋಟಿ ರೂ. ಪೊರ್ಶೆ ಕಾರು ಖರೀದಿಸಿದ ಖದೀಮ!

ಖಾತೆಗೆ ಹಣ ಜಮೆ ಆದ ಬೆನ್ನಲ್ಲೇ ಉದ್ಯಮಿ ನೇರವಾಗಿ ಅಪರೂಪದ ಪೋಕ್ಮನ್ ಗೇಮಿಂಗ್ ಕಾರ್ಡ್ ಖರೀದಿಸಿದ್ದಾನೆ. 43 ಲಕ್ಷ ರೂಪಾಯಿ ನೀಡಿ ಗೇಮಿಂಗ್ ಕಾರ್ಡ್ ಖರೀದಿಸಿದ ಒಡಮ್ಸೈನ್‌ಗೆ ಸಂಕಷ್ಟ ಶುರುವಾಗಿದೆ. ಕೋವಿಡ್ ಪರಿಹಾರ ಸಾಲವನ್ನು ದುರ್ಬಳಕೆ ಮಾಡಿದ ಕಾರಣ ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಭಾರತ ಮಾತ್ರವಲ್ಲ, ವಿದೇಶದಲ್ಲೂ ಇದೇ ಗೋಳು; ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ!

ಕೋವಿಡ್ ಪರಿಹಾರ ಹಣ ದುರ್ಬಳಕೆ ಮಾಡಿರವುದು ಕೋರ್ಟ್‌ನಲ್ಲಿ ಸಾಬೀತಾದರೆ ಉದ್ಯಮಿಗೆ ಇದೀಗ 20 ವರ್ಷ ಜೈಲು ಶಿಕ್ಷೆ ಅಥವಾ 1.87 ಕೋಟಿ ರೂಪಾಯಿ ದಂಡದ ರೂಪದಲ್ಲಿ ಪಾತಿಸಬೇಕಿದೆ. ಪ್ರತಿ ದಿನ ಕೋರ್ಟ್ ಅಲೆದಾಡುತ್ತಿರುವ ಉದ್ಯಮಿ ಇತ್ತ, ಉದ್ಯಮವನ್ನು ನಡೆಸಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿದ ಈ ಹುಡುಗ ನಿಮಗೆ ಗೊತ್ತೆ?

ಕಳೆದ ವರ್ಷ ಫ್ಲೋರಿಡಾ ಉದ್ಯಮಿ 30 ಕೋಟಿ ರೂಪಾಯಿ ಕೋವಿಡ್ ಪರಿಹಾರ ಸಾಲ ಪಡೆದಿದ್ದಾನೆ. ಬಳಿಕ ಲ್ಯಾಂಬೋರ್ಗಿನಿ ಕಾರು ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದಾರೆ. ಮಿಯಾಮಿ ಬಳಿ ಐಷಾರಾಮಿ ರೆಸಾರ್ಟ್ ಖರೀದಿಸಿ ಪ್ರತಿ ದಿನ ಪಾರ್ಟಿ ಮಾಡುತ್ತಿದ್ದ ಉದ್ಯಮಿಗೆ ಸಂಕಷ್ಟ ಎದುರಾಗಿತ್ತು. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೋ ಫ್ಲೋರಿಡಾದ ಉದ್ಯಮಿಯನ್ನು ಬಂಧಿಸಲಾಗಿತ್ತು.

ಕೂಡಿಟ್ಟ ಹಣ ಕೊರೋನಾಕ್ಕೆ ನೀಡಿದ್ದ ಬಾಲಕನಿಗೆ ಹೊಸ ಬೈಸಿಕಲ್ ಕೊಡಿಸಿದ ಸಿಎಂ

ಅಮೆರಿಕದ ಹಲವು ಕಂಪನಿಗಳು ಕೋವಿಡ್ ಪರಿಹಾರ ಸಾಲ ಪಡೆದು ಉದ್ಯಮಕ್ಕೆ ಚೇತರಿಕೆ ನೀಡಿದೆ. ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಇತರ ಭತ್ಯೆಗಳನ್ನು ನೀಡಿದೆ. ಇದರಲ್ಲಿ ಕೆಲ ಉದ್ಯಮಿಗಳು ಸುಳ್ಳು ದಾಖಲೆ ಸೃಷ್ಟಿಸಿ ಕೋವಿಡ್ ಪರಿಹಾರ ಸಾಲ ಪಡೆದಿದ್ದಾರೆ. ಇದರಲ್ಲಿ ಕೆಲವೇ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದೆ.

ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್‌ರಿಂದ ಕೋವಿಡ್‌ ನಿಧಿ ಸಂಗ್ರಹ

ಕೋವಿಡ್ ನಿಯಂತ್ರಿಸಿರುವ ಅಮೆರಿಕ ಇದೀಗ ಮತ್ತೆ ಹೊಸ ತಳಿ ಭೀತಿ ಎದುರಿಸುತ್ತಿದೆ. ಚೀನಾ, ರಷ್ಯಾ, ಯುಕೆನಲ್ಲಿ ಕಾಣಿಸಿಕೊಂಡಿರುವ ಹೊಸ ಕೊರೋನಾ ತಳಿ ಭೀತಿ ಅಮೆರಿಕದಲ್ಲೂ ಕಾಣಿಸಿಕೊಂಡಿದೆ. ಹೀಗಾಗಿ ವಿಮಾನಯಾನಕ್ಕೆ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಅಮರಿಕದಲ್ಲಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ

ಒಂದೇ ದಿನದಲ್ಲಿ 3ವರೆ ಕೋಟಿಗೂ ಹೆಚ್ಚು ಸಂಗ್ರಹಿಸಿದ ವಿರುಷ್ಕಾ.


 

Follow Us:
Download App:
  • android
  • ios