ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್‌ರಿಂದ ಕೋವಿಡ್ ನಿಧಿ ಸಂಗ್ರಹ
* ಇಡೀ ದೇಶವೇ ಕೋವಿಡ್ ಎರಡನೇ ಅಲೆ ವಿರುದ್ದ ಹೋರಾಟ ನಡೆಸುತ್ತಿದೆ.
* ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್‌ರಿಂದ 10,000 ಅಮೆರಿಕನ್ ಡಾಲರ್ ಸಂಗ್ರಹಿಸುವ ಗುರಿ.
* ಆನಂದ್ ಜೊತೆ ಆಡಲು 150 ಅಮೆರಿಕನ್ ಡಾಲರ್ ಹಾಗೂ ಉಳಿದ ನಾಲ್ವರ ಜೊತೆ ಸ್ಪರ್ಧಿಸಲು 25 ಅಮೆರಿಕನ್ ಡಾಲರ್ ಹಣ ಕಟ್ಟಬೇಕು
ನವದೆಹಲಿ(ಮೇ.12): 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಭಾರತದ ಇತರ ನಾಲ್ವರು ಗ್ರಾಂಡ್‌ಮಾಸ್ಟರ್‌ಗಳು ಗುರುವಾರ ಆನ್‌ಲೈನ್‌ನಲ್ಲಿ ಪ್ರದರ್ಶನ ಚೆಸ್ ಪಂದ್ಯಗಳನ್ನು ಆಡಲಿದ್ದು, ಇದರಿಂದ ಬರುವ ಹಣವನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ನೀಡಲಿದ್ದಾರೆ.
ಚೆಸ್ ಡಾಟ್ ಕಾಮ್‌ನಲ್ಲಿ ಬ್ಲಿಟ್ಜ್ ಇಲ್ಲವೇ ಫೀಡೆಯಲ್ಲಿ 2000ಕ್ಕಿಂತ ಕಡಿಮೆ ರೇಟಿಂಗ್ ಇರುವ ಆಟಗಾರರು ಈ ಐವರೊಂದಿಗೆ ಸ್ಪರ್ಧಿಸಬಹುದಾಗಿದೆ. ವಿಶ್ವನಾಥನ್ ಆನಂದ್ ಜೊತೆ ಆಡಲು 150 ಅಮೆರಿಕನ್ ಡಾಲರ್ ಹಾಗೂ ಉಳಿದ ನಾಲ್ವರ ಜೊತೆ ಸ್ಪರ್ಧಿಸಲು 25 ಅಮೆರಿಕನ್ ಡಾಲರ್ ಹಣ ಕಟ್ಟಬೇಕು. ಒಟ್ಟು 10,000 ಅಮೆರಿಕನ್ ಡಾಲರ್ ಸಂಗ್ರಹಿಸಲು ಯೋಜಿಸಲಾಗಿದೆ.
ಕ್ರೊವೇಷಿಯಾದಲ್ಲಿ ಭಾರತ ಶೂಟಿಂಗ್ ತಂಡ ಅಭ್ಯಾಸ
ಕೋವಿಡ್ 19 ವಿರುದ್ದ ಹೋರಾಡಲು ಭಾರತ ಸಾಕಷ್ಟು ಶ್ರಮ ಪಡುತ್ತಿದೆ ಎಂದು ನಮಗೆಲ್ಲರಿಗೂ ಗೊತ್ತು. ಒಂದಲ್ಲಾ ಒಂದು ರೀತಿಯಲ್ಲಿ ನಾವೆಲ್ಲರೂ ಈ ಕೋವಿಡ್‌ಗೆ ಬಲಿಪಶುಗಳಾಗಿದ್ದೇವೆ. ಯಾರೋ ಒಬ್ಬ ಯುವಕನೋ ಅಥವಾ ವೃದ್ದನಿಗೆ ಕೋವಿಡ್ ಬಿಸಿ ತಟ್ಟಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ ಕೋವಿಡ್ ವಿರುದ್ದದ ಹೋರಾಟಕ್ಕೆ ನಾವು ದೇಣಿಗೆ ನೀಡುವ ಮೂಲಕ ದೇಶಕ್ಕೆ ಬಲ ತುಂಬೋಣ. ನೀವೂ ಸಹಾ ದೇಶದ ಪ್ರಮುಖ ಗ್ರ್ಯಾಂಡ್‌ಮಾಸ್ಟರ್ ಜತೆ ಚೆಸ್ ಆಡಬಹುದು. ಇಲ್ಲಿ ಸಂಗ್ರಹವಾದ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತೇವೆ ಎಂದು ಚೆಸ್.ಕಾಂ ನೀಡಿದ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಪ್ರದರ್ಶನ ಪಂದ್ಯಗಳಲ್ಲಿ ಭಾರತದ ಗ್ರಾಂಡ್ ಮಾಸ್ಟರ್‌ಗಳಾದ ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ನಿಹಾನ್ ಸರಿನ್ ಹಾಗೂ ಪ್ರಜ್ಞಾನಂದ ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನ ಪಂದ್ಯವು ಮೇ 13ರಂದು ನೇರ ಪ್ರಸಾರ ಚೆಸ್.ಕಾಂನಲ್ಲಿ 7.30ಕ್ಕೆ ಭಿತ್ತರವಾಗಲಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona