Asianet Suvarna News Asianet Suvarna News

ಮನೆಯಲ್ಲಿ ನಕಲಿ ಚೆಕ್ ಪ್ರಿಂಟ್ ಮಾಡಿ 4 ಕೋಟಿ ರೂ. ಪೊರ್ಶೆ ಕಾರು ಖರೀದಿಸಿದ ಖದೀಮ!

ಕಾರು, ಐಷಾರಾಮಿ ಜೀವನಕ್ಕಾಗಿ ಹಲವರು ಕಳ್ಳತನ ಸೇರಿದಂತೆ ಅಡ್ಡ ದಾರಿ ಹಿಡಿದ ಘಟನೆಗಳು ಸಾಕಷ್ಟಿವೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ, ವಿಜ್ಞಾನಿಯೇ ತಲೆ ತಿರುಗುವ ಐಡಿಯಾ, ಪೊಲೀಸರ ದಿಕ್ಕನ್ನೇ ತಿರುಗಿಸುವ ಆಲೋಚನೆ ಮೂಲಕ ಕಳ್ಳತನ, ಮೋಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸಿಂಪಲ್ ಐಡಿಯಾ, ಅಷ್ಟೇ ಉತ್ತಮ ನಟನೆ ಮೂಲಕ ಜೇಬಲ್ಲಿ ಒಂದೂ ರೂಪಾಯಿ ಇಲ್ಲದೆ 4 ಕೋಟಿ ರೂಪಾಯಿ ಪೋರ್ಶೆ ಕಾರನ್ನು ಖರೀದಿಸಿದ್ದಾನೆ.

Man purchase Porsche 911 Turbo car with home made fake cheque in florida
Author
Bengaluru, First Published Aug 6, 2020, 1:19 PM IST

ಫ್ಲೋರಿಡ(ಆ.06): ತಂತ್ರಜ್ಞಾನ, ಯಾರೂ ಆಲೋಚಿಸದ ರೀತಿಯಲ್ಲಿ ಚಿಂತನೆ ಮಾಡುವುದರಲ್ಲಿ ಕಳ್ಳರು, ಅಡ್ಡದಾರಿ ಹಿಡಿಯುವವರು ಮುಂದಿದ್ದಾರೆ. ಆದರೆ ಫ್ಲೋರಿಡಾದ 42 ವರ್ಷದ ವಿಲಿಯಂ ಕೆಲ್ಲಿ ಸರಳ ಐಡಿಯಾ ಮೂಲಕ 4 ಕೋಟಿ ರೂಪಾಯಿ ಮೌಲ್ಯದ ಪೋರ್ಶೆ ಕಾರು ಖರೀದಿಸಿ ಮನೆಗೆ ಮರಳಿದ ಘಟನೆ ನಡೆದಿದೆ. ಒಂದು ರೂಪಾಯಿ ಇಲ್ಲದೆ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸಿದ್ದಾನೆ. ಆದರೆ ಪೊರ್ಶೆ ಕಾರಿನಷ್ಟೇ ವೇಗದಲ್ಲಿ ವಿಲಿಯಂ ಕೆಲ್ಲಿ ಅರೆಸ್ಟ್ ಆಗಿದ್ದಾನೆ.

ಕೊರೋನಾ ಪರಿಹಾರ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ; ಉದ್ಯಮಿ ಅರಸ್ಟ್!

ವಿಲಿಯಂ ಕೆಲ್ಲಿ ಫ್ಲೋರಿಡಾದ ಪೊರ್ಶೆ ಕಾರು ಶೋ ರೂಂಗೆ ತೆರಳಿದ್ದಾನೆ. ಆಗರ್ಭ ಶ್ರೀಮಂತನ ಪೋಷಾಕಿನಲ್ಲಿ ಹೋದ ವಿಲಿಯಂ, ಎಲ್ಲೂ ಕೂಡ ತನ್ನಲ್ಲಿ ಒಂದು ರೂಪಾಯಿ ಇಲ್ಲ ಅನ್ನೋದನ್ನು ಮುಚ್ಚಿಡುವಲ್ಲಿ ಯಶಸ್ವಿಯಾಗಿದ್ದಾನೆ.  ಅಷ್ಟೇ ವೇಗದಲ್ಲಿ ಪೊರ್ಶನೆ 911 ಟರ್ಬೋ ಕಾರಿನ  ವಿವರ ಪಡೆದುಕೊಂಡು ಖರೀದಿದೆ ಮುಂದಾಗಿದ್ದಾನೆ. 

ವಿಲಿಯಂ ಕೆಲ್ಲಿ ಮನೆಯಲ್ಲಿ ಪ್ರಿಂಟ್ ಮಾಡಿದ ನಕಲಿ ಚೆಕ್ ಮೂಲಕ ಶೋ ರೂಂಗೆ ತೆರಳಿದ್ದ. ಇದರ ಜೊತೆಗೆ ದಾಖಲೆ ಪತ್ರಗಳನ್ನು ನಕಲಿ ಮಾಡಿದ್ದ. ಶೋಂಗೆ ತನ್ನ ನಕಲಿ ದಾಖಲೆ ನೀಡಿದ ಬಳಿಕ ನಕಲಿ ಚೆಕ್ ನೀಡಿದ್ದಾರೆ. ಇತ್ತ ಶೋ ರೂಂ ಸಿಬ್ಬಂದಿಗಳು ಚೆಕ್ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. 3.08 ಕೋಟಿ(ಎಕ್ಸ್ ಶೋ ರೂಂ) ಪೊರ್ಶೆ 911 ಟರ್ಬೋ ಕಾರಿನ ಕೀ ನೀಡಿದ್ದಾರೆ.

ಶ್ರೀಮಂತನ ಗೆಟಪ್‌ನಲ್ಲಿ ಕಾರು ಹತ್ತಿದ ವಿಲಿಯಂ ಕೆಲ್ಲಿ, ವೇಗವಾಗಿ ತೆರಳಿದ್ದಾನೆ. ಕೆಲ ಹೊತ್ತಲ್ಲೇ ವಿಲಿಯಂ ನೀಡಿದ ಎಲ್ಲಾ ದಾಖಲೆಗಳು, ಚೆಕ್ ನಕಲಿ ಅನ್ನೋದು ಸ್ಪಷ್ಟವಾಗಿದೆ. ತಕ್ಷಣವೇ ವಾಲ್ಟನ್ ಕೌಂಟಿ ಶೆರಿಫ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕಾರು ಕಳ್ಳತನವಾಗಿದೆ ಎಂದಿದ್ದಾರೆ. 

ನೂತನ ಪೊರ್ಶೆ ಕಾರಿನಲ್ಲಿ ರೊಲೆಕ್ಸ್ ದುಬಾರಿ ವಾಚ್ ಶೋ ರೂಂಗಂ ಆಗಮಿಸಿದ ಕೆಲ್ಲಿ 46 ಲಕ್ಷ ರೂಪಾಯಿ ಚೆಕ್ ನೀಡಿ ರೊಲೆಕ್ಸ್ ವಾಚ್ ಖರೀದಿಗೆ ಮುಂದಾಗಿದ್ದಾನೆ. ಆದರೆ ವಾಚ್ ಶೋ ರೂಂ ಸಿಬ್ಬಂದಿಗಳು ಚೆಕ್ ಡ್ರಾ ಆದ ಬಳಿಕ ತಮಗೆ ವಾಚ್ ಸಿಗಲಿದೆ. ಹೀಗಾಗಿ ಕಾಯಬೇಕು ಅಥವಾ ನಿಮ್ಮ ವಿಳಾಸಕ್ಕೆ ತಲುಪಿಸುತ್ತೇವೆ ಎಂದಿದ್ದಾರೆ. ಹೆಚ್ಚು ಹೊತ್ತು ಇಲ್ಲಿ ಇದ್ದರೆ ಅಪಾಯ ಎಂದರಿತ ಕೆಲ್ಲಿ ಮುಂದೆ ಸಾಗಿದ್ದಾನೆ.

ವಾಚ್ ಶೋ ರೂಂ ಚೆಕನ್ನು ಬ್ಯಾಂಕ್‌ಗೆ ನೀಡಿದ್ದಾರೆ. ಎರಡು ದಿನಗಳ ಬಳಿಕ ಚೆಕ್ ನಕಲಿ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ರೊಲೆಕ್ಸ್  ವಾಚ್ ಶೋ ರೂಂ ಸಿಬ್ಬಂದಿಗಳು ಪೊಲೀಸರಿಗೆ ನೀಡಿದ್ದಾರೆ. ಎರಡು ದೂರು ಪಡೆದ ಪೊಲೀಸರು ಕಾರ್ಯಚರಣೆ ಚುರುಕುಗೊಳಿಸಿದ್ದಾರೆ.  ಪೊಲೀಸರ ಯಶಸ್ವಿ ಕಾರ್ಯಚರಣೆಯಿಂದ ವಿಲಿಯಂ ಕೆಲ್ಲಿ ಸಿಕ್ಕಿ ಬಿದ್ದಿದ್ದಾನೆ. ಈ ರೀತಿ ಹಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದರ ಹಿಂದೆ ವಿಲಿಯಂ ಕೆಲ್ಲಿ ಕೈವಾಡ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.  ಇದೀಗ ವಾಲ್ಟನ್ ಕೌಂಟಿ ಜೈಲಿನಲ್ಲಿರುವ ಕೆಲ್ಲಿ  ಮತ್ತೊಂದು ಸರಳ ಐಡಿಯಾ ಮೂಲಕ ಹೊರಬರುವ ಪ್ಲಾನ್ ಮಾಡುತ್ತಿದ್ದಾನೆ.

Follow Us:
Download App:
  • android
  • ios